ಇಂಡಿಯಾ ಓಪನ್ ಬಾಕ್ಸಿಂಗ್: ಭಾರತಕ್ಕೆ 12 ಬಂಗಾರ ಪದಕ
Team Udayavani, May 25, 2019, 6:00 AM IST
ಚಿನ್ನ ಗೆದ್ದ ಮೇರಿ ಕೋಮ್.
ಹೊಸದಿಲ್ಲಿ: ಶುಕ್ರವಾರ ಮುಗಿದ ದ್ವಿತೀಯ “ಇಂಡಿಯನ್ ಓಪನ್ ಬಾಕ್ಸಿಂಗ್’ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಮೇರಿ ಕೋಮ್, ಎಲ್. ಸರಿತಾದೇವಿ, ಅಮಿತ್ ಪಂಘಲ್, ಶಿವ ಥಾಪ ಬಂಗಾರದ ಪದಕ ತಂದಿತ್ತರು. ಕೂಟದ ಒಟ್ಟು 18 ಬಂಗಾರದ ಪದಕಗಳಲ್ಲಿ 12 ಪದಕ ಭಾರತದ ಪಾಲಾಯಿತು. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಇಮ್ಮಡಿ ಸಾಧನೆಯಾಗಿದೆ. 2018ರಲ್ಲಿ ಭಾರತ 6 ಚಿನ್ನ ಗೆದ್ದಿತ್ತು.
ವಿಶ್ವ ಚಾಂಪಿಯನ್ಶಿಪ್ ಪದಕ ವಿಜೇತೆ ಸರಿತಾದೇವಿ 3 ವರ್ಷಗಳ ಬಳಿಕ ಮೊದಲ ಬಂಗಾರವನ್ನು ತಮ್ಮದಾಗಿಸಿಕೊಂಡರು. ಇದೇ ಮೊದಲ ಸಲ 60 ಕೆಜಿ ಸ್ಪರ್ಧೆಗಿಳಿದ ಅವರು ಸಿಮ್ರನ್ಜಿತ್ ಕೌರ್ ವಿರುದ್ಧ 3-2 ಅಂತರದ ಜಯ ಸಾಧಿಸಿದರು. ಒಲಿಂಪಿಕ್ ಕಂಚಿನ ಪದಕ ವಿಜೇತೆ ಮೇರಿ ಕೋಮ್ ಮಾಜಿ ರಾಷ್ಟ್ರೀಯ ಚಾಂಪಿಯನ್ ಮಿಜೋರಂನ ವನಾಲ್ ದೌತಿ ವಿರುದ್ಧ ಗೆಲುವು ಒಲಿಸಿಕೊಂಡರು.
ಸೇಡು ತೀರಿಸಿದ ಥಾಪ
ಪುರುಷರ 52 ಕೆಜಿ ವಿಭಾಗದಲ್ಲಿ ಅಮಿತ್ ಪಂಘಲ್ ಭಾರೀ ಹೋರಾಟ ನೀಡಿದ ಜೈಂಟ್ ಕಿಲ್ಲರ್ ಸಚಿನ್ ಸಿವಾಕ್ ಅವರನ್ನು 4-1ರಿಂದ ಮಣಿಸುವಲ್ಲಿ ಯಶಸ್ವಿಯಾದರು. ಶಿವ ಥಾಪ ಕಳೆದ ವರ್ಷದ ಸೆಮಿಫೈನಲ್ನಲ್ಲಿ ತನ್ನನ್ನು ಮಣಿಸಿದ ಮನೀಷ್ ಕೌಶಿಕ್ ಅವರನ್ನು ಕೆಡವಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್ಇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.