ಬಿಜೆಪಿ ವಿಜಯ ಯಾತ್ರೆ: ಕೇಸರಿ ಪಡೆ ಹರ್ಷೋದ್ಗಾರ
Team Udayavani, May 25, 2019, 6:10 AM IST
ಗಂಗೊಳ್ಳಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ ಹಿನ್ನೆಲೆಯಲ್ಲಿ ಗಂಗೊಳ್ಳಿ ಗ್ರಾ. ಪಂ. ಕಚೇರಿ ಎದುರು ಹಾಗೂ ಮ್ಯಾಂಗನೀಸ್ ರಸ್ತೆ ವಠಾರದಲ್ಲಿ ಗುರುವಾರ ಸಂಜೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ತಾಲೂಕು ಪಂಚಾಯತ್ ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ ಗ್ರಾ. ಪಂ. ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಪೂಜಾರಿ, ಗಂಗೊಳ್ಳಿ ಗ್ರಾ.ಪಂ. ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಗಂಗೊಳ್ಳಿ ಗ್ರಾಮ ಪಂಚಾಯತ್ ಕಚೇರಿ ಬಳಿ ಮತ್ತು ಮ್ಯಾಂಗನೀಸ್ ರಸ್ತೆ ವಠಾರದಲ್ಲಿ ಪಟಾಕಿ ಸಿಡಿಸಿ ಸಿಹಿ ತಿಂಡಿ ಹಂಚಿ ಪಕ್ಷದ ಗೆಲುವನ್ನು ಸಂಭ್ರಮಿಸಿದ ಕಾರ್ಯಕರ್ತರು ಗಂಗೊಳ್ಳಿಯ ಪ್ರಮುಖ ಬೀದಿಯಲ್ಲಿ ಬೈಕ್ ರ್ಯಾಲಿ ನಡೆಸಿ ಸಂಭ್ರಮಿಸಿದರು.
ಹೆಬ್ರಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮ
ಹೆಬ್ರಿ: ಪ್ರಧಾನಿ ನರೇಂದ್ರ ಮೋದಿ ಎಬ್ಬಿಸಿದ ಭೀಕರ ಚಂಡ ಮಾರುತ ದಿಂದಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಧೂಳಿಪಟವಾಗಿದೆ. ಇದಕ್ಕೆ ಕಾರಣ ಮೋದಿ ಅವರ ಜನಪರ ಆಡಳಿತ ಹಾಗೂ ಗ್ರಾಮೀಣ ಭಾಗದ ಜನತೆಗೆ ಆಯುಷ್ಮಾನ್ ಭಾರತದಂತಹ ನೂರಾರು ಯೋಜನೆಗಳಿಂದ ಜನ ಮೋದಿಯನ್ನು ಬೆಂಬಲಿಸಿದ್ದಾರೆ ಎಂದು ಹೆಬ್ರಿ ಬಿಜೆಪಿ ಮುಖಂಡ ಮೋಹನ್ ದಾಸ್ ನಾಯಕ್ ಹೇಳಿದರು.
ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ವಿಜಯ ಸಾಧಿಸಿದ ಹಿನ್ನಲೆಯಲ್ಲಿ ಮೇ 23ರಂದು ಹೆಬ್ರಿ ಬಸ್ಸು ತಂಗುದಾಣ ವಠಾರದಲ್ಲಿ ಹೆಬ್ರಿ ಬಿಜೆಪಿ ಶಕ್ತಿಕೇಂದ್ರ ಹಾಗೂ ಬಜರಂಗ ದಳದ ನೇತೃತ್ವದಲ್ಲಿ ನಡೆದ ವಿಜಯೋತ್ಸವದಲ್ಲಿ ಅವರು ಮಾತನಾಡಿದರು.
ಹೆಬ್ರಿ ಗ್ರಾ.ಪಂ. ಅಧ್ಯಕ್ಷ ಎಚ್.ಕೆ. ಸುಧಾಕರ, ತಾ.ಪಂ. ಸದಸ್ಯ ಅಮೃತಕುಮಾರ್ ಶೆಟ್ಟಿ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಶೆಟ್ಟಿ ಹುಣ್ಸೆಅಡಿ, ಬಿಜೆಪಿ ಪ್ರಮುಖರಾದ ಸುಧಾಕರ ಹೆಗ್ಡೆ, ಆನಂದ ಹೆಗ್ಡೆ, ಗಣೇಶ್ ಕುಮಾರ್, ದಿನೇಶ್ ಶೆಟ್ಟಿ, ಮಾದವ ಮುದ್ರಾಡಿ ಉಪಸ್ಥಿತರಿದ್ದರು. ಬಿಜೆಪಿ ಮುಖಂಡರು, ಕಾರ್ಯಕರ್ತರು ಬಿಜೆಪಿ ಶಕ್ತಿಕೇಂದ್ರದಿಂದ ಮೆರವಣಿಗೆಯ ಮೂಲಕ ಬಸ್ಸು ತಂಗುದಾಣಕ್ಕೆ ಆಗಮಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಇಂದು ಕುಂದಾಪುರಕ್ಕೆ ಶೋಭಾ
ಕುಂದಾಪುರ: ಎರಡನೆ ಅವಧಿಗೆ ಲೋಕಸಭಾ ಸದಸ್ಯೆಯಾಗಿ ಆಯ್ಕೆಯಾದ ಶೋಭಾ ಕರಂದ್ಲಾಜೆ ಅವರು ಮೇ 25ರಂದು ಕುಂದಾಪುರ ಬಿಜೆಪಿ ಕಚೇರಿಗೆ ಆಗಮಿಸಲಿದ್ದಾರೆ. ಈ ಸಂದರ್ಭ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜನಪ್ರತಿನಿಧಿಗಳು ಹಾಜರಿರಲಿದ್ದಾರೆ. ಪಕ್ಷದ ಕಾರ್ಯಕರ್ತರು ಭಾಗವಹಿಸಬೇಕೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಕಾರ್ಕಳ ಬಿಜೆಪಿ ವಿಜಯೋತ್ಸವ
ಕಾರ್ಕಳ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವನ್ನು ದಾಖಲಿಸಿದ ಹಿನ್ನೆಲೆಯಲ್ಲಿ ಕಾರ್ಕಳದಲ್ಲಿ ಮೇ 25ರಂದು ವಿಜಯೋತ್ಸವ ನಡೆಯಲಿದೆ. ಸಂಜೆ 4ರ ವೇಳೆ ನಗರದ ಅನಂತ ಶಯನದಿಂದ ಮೆರವಣಿಗೆ ಹೊರಡಲಿದೆ. ಬಂಡೀಮಠ ಬಸ್ ನಿಲ್ದಾಣದ ಬಳಿಯ ವಠಾರದಲ್ಲಿ ಕಾರ್ಯಕರ್ತರ ಮತ್ತು ಮತದಾರರ ವಿಜಯೋತ್ಸವ ಸಮಾವೇಶ ಅದ್ಧೂರಿಯಾಗಿ ನಡೆಯಲಿದೆ. ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ ಎಂದು ಕಾರ್ಕಳ ಬಿಜೆಪಿ ಪ್ರಕಟನೆಯಲ್ಲಿ ತಿಳಿಸಿದೆ.
ಬೈಂದೂರು: 230 ಮತಗಟ್ಟೆಗಳಲ್ಲಿ ಬಿಜೆಪಿಗೆ ಮುನ್ನಡೆ!
ಕುಂದಾಪುರ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಇರುವ 246 ಮತಗಟ್ಟೆಗಳ ಪೈಕಿ ಕೇವಲ 16 ಮತಗಟ್ಟೆಗಳಲ್ಲಿ ಮಾತ್ರ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಕೂಟಕ್ಕೆ ಮುನ್ನಡೆ ಸಿಕ್ಕರೆ, ಬರೋಬ್ಬರಿ 230 ಮತಗಟ್ಟೆಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುವ ಮೂಲಕ ಪ್ರಾಬಲ್ಯ ಮೆರೆದಿದೆ.
ಬೈಂದೂರಿನ ಸರಕಾರಿ ಹಿಂದುಸ್ತಾನಿ ಹಿ. ಪ್ರಾ. ಶಾಲೆಯ ದಕ್ಷಿಣ ಭಾಗದ ಮತಗಟ್ಟೆಯಲ್ಲಿ ಉಭಯ ಪಕ್ಷಗಳ ಅಭ್ಯರ್ಥಿಗಳಾದ ಬಿ.ವೈ. ರಾಘವೇಂದ್ರ ಹಾಗೂ ಮಧು ಬಂಗಾರಪ್ಪ ಅವರ ಮಧ್ಯೆ ನಿಕಟ ಪೈಪೋಟಿ ಏರ್ಪಟ್ಟಿತ್ತು. ಇಲ್ಲಿ ಒಟ್ಟು 563 ಮತದಾರರಿದ್ದು, ಈ ಪೈಕಿ ಜೆಡಿಎಸ್‌ಗೆ 274 ಹಾಗೂ ಬಿಜೆಪಿಗೆ 273 ಮತಗಳು ಸಿಕ್ಕಿವೆ. ಅಂದರೆ ಬಿ.ವೈ. ಆರ್. ಅವರಿಗಿಂತ ಮಧು ಬಂಗಾರಪ್ಪ ಅವರು 1 ಹೆಚ್ಚಿನ ಮತ ಪಡೆದರು. ಇದು ಮತಗಟ್ಟೆವಾರು ಇಬ್ಬರು ಪ್ರಮುಖ ಅಭ್ಯರ್ಥಿಗಳು ಪಡೆದ ಮತಗಳ ಕನಿಷ್ಠ ಅಂತರವಾಗಿದೆ.
ಇನ್ನು ಮರವಂತೆಯ ಮತಗಟ್ಟೆಯೊಂದರಲ್ಲಿ 1000 ಮತದಾರರ ಪೈಕಿ 935 ಮತಗಳು ಬಿಜೆಪಿಗೆ ಹಾಗೂ 29 ಮತಗಳು ಜೆಡಿಎಸ್‌ಗೆ ಸಿಕ್ಕಿವೆ. ಆ ಮೂಲಕ 906 ಮತಗಳ ಮುನ್ನಡೆಯನ್ನು ಬಿಜೆಪಿ ಪಡೆದಿದೆ. ಇದು ಗರಿಷ್ಠ ಅಂತರವಾಗಿದೆ. ಶಿರೂರು ಹಡವಿನಕೋಣೆಯ ಸರಕಾರಿ ಹಿ. ಪ್ರಾ. ಶಾಲೆಯ ಮತಗಟ್ಟೆಯೊಂದರಲ್ಲಿ 774 ಮತದಾರರ ಪೈಕಿ ಜೆಡಿಎಸ್ 618 ಮತ ಹಾಗೂ ಬಿಜೆಪಿಗೆ 119 ಮತಗಳು ಸಿಕ್ಕಿವೆ. ಆ ಮೂಲಕ ಜೆಡಿಎಸ್ ಗರಿಷ್ಠ 499 ಮತಗಳ ಅಂತರದ ಮುನ್ನಡೆ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.