ಯಾರು ಸೇರ್ತಾರೆ ಮೋದಿ ಸಂಪುಟ?
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶಾ ಸೇರ್ಪಡೆ ಸಾಧ್ಯತೆ
Team Udayavani, May 25, 2019, 6:00 AM IST
ಭರ್ಜರಿ ಜಯಗಳಿಸಿದ ಬಳಿಕ ಶುಕ್ರವಾರ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ ಆಶೀರ್ವಾದ ಪಡೆದ ಪ್ರಧಾನಿ ಮೋದಿ.
ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿರುವ ಬಿಜೆಪಿ, ಸರ್ಕಾರ ರಚನೆಯ ಸಿದ್ಧತೆಗಳನ್ನು ಆರಂಭಿಸಿದೆ. ಹೊಸದಾಗಿ ರಚನೆಯಾಗಲಿರುವ ಮೋದಿ ಸಂಪುಟದಲ್ಲಿ ಸೇರುವವರು ಯಾರು, ಯಾರಿಗೆ ಸಚಿವ ಸ್ಥಾನ ಕೈತಪ್ಪಲಿದೆ ಎಂಬ ಬಗ್ಗೆಯೂ ಚರ್ಚೆಗಳು ಶುರುವಾಗಿದೆ. ಕೆಲವೊಂದು ಹೊಸ ಮುಖಗಳೂ ಸೇರ್ಪಡೆಯಾಗುವ ಸಾಧ್ಯತೆಗಳಿವೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸಂಪುಟ ಸೇರಲಿದ್ದಾರೆ ಎಂಬ ಬಗ್ಗೆ ಸುದ್ದಿಗಳು ಜೋರಾಗಿಯೇ ಓಡುತ್ತಿವೆ. ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಅವರು ಕ್ಯಾಬಿನೆಟ್‌ನ ಅಗ್ರ 4 ಸ್ಥಾನಗಳಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ನಿರ್ಮಲಾ ಸೀತಾರಾಮನ್ ಅವರಿಗೆ ವಿದೇಶಾಂಗ ಸ್ಥಾನ, ರಾಜನಾಥ್‌ಗೆ ರಕ್ಷಣೆ ಮತ್ತು ಅಮಿತ್ ಶಾ ಅವರಿಗೆ ರಕ್ಷಣಾ ಖಾತೆ ಸಿಗುವ ಸಂಭವವಿದೆ ಎನ್ನಲಾಗಿದೆ.
ಆದರೆ, ಪ್ರಮುಖ ಖಾತೆಗಳನ್ನು ಹೊತ್ತಿದ್ದ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಅವರು, ಆರೋಗ್ಯದ ಸಮಸ್ಯೆಯಿಂದ ಸಂಪುಟದಿಂದ ಹೊರಗುಳಿಯಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಈ ಎರಡರಲ್ಲಿ ಒಂದು ಸ್ಥಾನ ಅಮಿತ್ ಶಾ ಅವರಿಗೆ ಸಿಗಬಹುದು ಎನ್ನಲಾಗಿದ್ದು, ಮತ್ತೂಂದು ಸ್ಥಾನ ಸ್ಮತಿ ಇರಾನಿ ಅವರಿಗೆ ಸಿಗಬಹುದೇ ಎಂಬ ಮಾತುಗಳು ಕೇಳಿಬರುತ್ತಿವೆ. ಅಮೇಠಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸೋಲಿಸಿರುವ ಸ್ಮತಿ ಇರಾನಿ ಅವರಿಗೆ ಪ್ರಮುಖ ಖಾತೆಯನ್ನೇ ನೀಡಬಹುದು ಎಂದು ಮೂಲಗಳು ಹೇಳಿವೆ.
ಶಿವಸೇನೆ, ಜೆಡಿಯು ಮತ್ತು ಎಲ್ಜೆಪಿಯ ಸಂಸತ್ ಸದಸ್ಯರು ಸಂಪುಟ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಯಾರಿಗೆ ಸಿಗುತ್ತೆಸಚಿವ ಸ್ಥಾನ?
1. ರಾಜನಾಥ್ ಸಿಂಗ್ 2. ಅಮಿತ್ ಶಾ 3. ನಿರ್ಮಲಾ ಸೀತಾರಾಮನ್ 4. ನಿತಿನ್ ಗಡ್ಕರಿ 5. ಸ್ಮತಿ ಇರಾನಿ 6. ರವಿಶಂಕರ್ ಪ್ರಸಾದ್ 7. ಪಿಯೂಶ್ ಗೋಯಲ್ 8. ಸದಾನಂದಗೌಡ 9. ಪ್ರಹ್ಲಾದ್ ಜೋಶಿ 10. ಪ್ರಕಾಶ್ ಜಾವಡೇಕರ್
ಮೇ 30ಕ್ಕೆ ಪ್ರಮಾಣ ವಚನ; ಇಂದು ಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.