ಎಂಇಎಸ್ 48 ಅಭ್ಯರ್ಥಿಗಳ ಠೇವಣಿ ಜಪ್ತಿ
Team Udayavani, May 25, 2019, 11:40 AM IST
ಬೆಳಗಾವಿ: ಗಡಿ ವಿಷಯ ಮುಂದಿಟ್ಟುಕೊಂಡು ರಾಜಕಾರಣ ಮಾಡುವ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಗೆ ಈ ಸಲದ ಲೋಕಸಭೆ ಚುನಾವಣೆಯಲ್ಲೂ ಭಾರೀ ಮುಖಭಂಗವಾಗಿದೆ. ಕಣದಲ್ಲಿದ್ದ ಎಂಇಎಸ್ ಬೆಂಬಲಿತ ಎಲ್ಲ 48 ಅಭ್ಯರ್ಥಿಗಳ ಠೇವಣಿ ಜಪ್ತಿ ಆಗಿದೆ.
ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ 101 ಅಭ್ಯರ್ಥಿಗಳನ್ನು ನಿಲ್ಲಿಸಿ ದೇಶದಲ್ಲಿಯೇ ಇತಿಹಾಸ ಸೃಷ್ಟಿಸಲು ಮುಂದಾಗಿದ್ದ ಎಂಇಎಸ್ ಕೊನೆಯ ಕ್ಷಣದಲ್ಲಿ ಕೇವಲ 48 ಜನರನ್ನು ಕಣಕ್ಕಿಳಿಸಿತ್ತು. ಆದರೆ ಈ ಎಲ್ಲರ ಠೇವಣಿ ಜಪ್ತಿ ಆಗಿದೆ. ಅತಿ ಹೆಚ್ಚು ಮತಗಳನ್ನು ಪಡೆದು ದೇಶದಲ್ಲಿ ಮರಾಠಿ ಭಾಷಿಕರ ಒಗ್ಗಟ್ಟು ಪ್ರದರ್ಶನದ ಬಗ್ಗೆ ಕನಸು ಕಾಣುತ್ತಿದ್ದ ಎಂಇಎಸ್ ಈಗ ಸೋತು ಸುಣ್ಣಗಾಗಿದೆ. ಮತ್ತೂಮ್ಮೆ ಇಂಥ ಸಾಹಸಕ್ಕೆ ಮುಂದಾಗದಿರಲು ನಿರ್ಧರಿಸಿದೆ.
ಮರಾಠಿ ಪ್ರದೇಶದಲ್ಲೂ ಅಪಮಾನ: ದೇಶದಲ್ಲಿ ಬೀಸಿದ ನರೇಂದ್ರ ಮೋದಿ ಅಲೆಗೆ ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ನೆಲಕ್ಕಚ್ಚಿವೆ. ಇಂಥದರಲ್ಲಿ ಎಂಇಎಸ್ ಕೂಡ ಧೂಳಿಪಟವಾಗಿದೆ. ಕೇವಲ ಬೆರಳೆಣಿಕೆಯಷ್ಟು ಮತಗಳನ್ನು ಪಡೆದಿರುವ ಈ ಅಭ್ಯರ್ಥಿಗಳು ಬಿಜೆಪಿಯ ಸುರೇಶ ಅಂಗಡಿ ಎದುರು ಮಕಾಡೆ ಮಲಗಿದ್ದಾರೆ. ಮರಾಠಿ ಭಾಷಿಕ ಪ್ರದೇಶಗಳಲ್ಲೂ ಎಂಇಎಸ್‌ನ ಅಭ್ಯರ್ಥಿಗಳು ಎರಡಂಕಿಗಿಂತಲೂ ಹೆಚ್ಚು ಮತಗಳನ್ನು ಗಳಿಸಲು ಸಾಧ್ಯವಾಗಲಿಲ್ಲ.
ಎಂಇಎಸ್ ತನ್ನ ಭದ್ರಕೋಟೆ ಎಂದೇ ಗುರುತಿಸಿಕೊಂಡಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿಯೂ ಬಿಜೆಪಿ ಹೆಚ್ಚಿನ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಗೆದ್ದಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಎಂಇಎಸ್‌ಗಿಂತಲೂ ಹೆಚ್ಚಿನ ಮತಗಳನ್ನು ಬಿಜೆಪಿ ಪಡೆದಿದೆ. ಸುರೇಶ ಅಂಗಡಿ ಬಗ್ಗೆ ಅಸಮಾಧಾನವಿದ್ದರೂ ಮತದಾರರು ಮಾತ್ರ ಪ್ರತಿ ಚುನಾವಣೆಯಂತೆ ರಾಷ್ಟ್ರ ಮಟ್ಟದ ಬೆಳವಣಿಗೆಗಳನ್ನು ನೋಡಿ ಬಿಜೆಪಿ ಬೆಂಬಲಿಸುವುದು ಇಲ್ಲಿಯ ರೂಢಿ.
ತಲೆ ಕೆಳಗಾದ ಲೆಕ್ಕಾಚಾರ: ಈ ಬಾರಿ ಕಣದಲ್ಲಿದ್ದ 48 ಎಂಇಎಸ್ ಅಭ್ಯರ್ಥಿಗಳು ಗಡಿ ವಿಷಯವನ್ನು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ತರುವ ಉದ್ದೇಶ ಹೊಂದಿದ್ದರು. ಜತೆಗೆ ಅತಿ ಹೆಚ್ಚು ಮತಗಳನ್ನು ಪಡೆದು ಒಗ್ಗಟ್ಟು ಪ್ರದರ್ಶಿಸುವ ಹಗಲು ಕನಸು ಎಂಇಎಸ್ ಕಾಣುತ್ತಿತ್ತು. ಆದರೆ ಇವರ ಲೆಕ್ಕಾಚಾರ ಎಲ್ಲವೂ ತಲೆಕೆಳಗಾಗಿದ್ದು, ಮೋದಿ ಎದುರು ಕೊಚ್ಚಿ ಹೋಗಿದ್ದಾರೆ. ಒಬ್ಬ ಅಭ್ಯರ್ಥಿಯೂ ಸಾವಿರಕ್ಕಿಂತ ಹೆಚ್ಚು ಮತಗಳನ್ನು ಪಡೆಯಲು ಸಾಧ್ಯವಾಗಲಿಲ್ಲ.
ಒಟ್ಟಾರೆ ಕಣದಲ್ಲಿದ್ದ 57 ಅಭ್ಯರ್ಥಿಗಳ ಪೈಕಿ 19 ಜನ ಮಾತ್ರ ನಾಲ್ಕಂಕಿ ದಾಟಿದ್ದು, ಇನ್ನುಳಿದವರೆಲ್ಲ ಮೂರಂಕಿಗೇ ತೃಪ್ತಿ ಪಡಬೇಕಾಗಿದೆ. ಇದರಲ್ಲಿ 48 ಜನ ಎಂಇಎಸ್ ಬೆಂಬಲಿತರಾಗಿದ್ದರು. ನೋಟಾ ಮತಗಳಷ್ಟೂ ಈ ಅಭ್ಯರ್ಥಿಗಳು ಪಡೆಯದಿರುವುದೇ ದುರಂತ. ಬೆಳಗಾವಿಯಲ್ಲಿ ಒಟ್ಟು 3233 ನೋಟಾ ಮತಗಳು ಚಲಾವಣೆಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.