![9-ullala](https://www.udayavani.com/wp-content/uploads/2024/12/9-ullala-415x249.jpg)
ರೈತರು ಕೃಷಿ ಇಲಾಖೆ ನಿಯಮ ಪಾಲಿಸಿ: ಪ್ರಸನ್ನಕುಮಾರ್
ಈ ವರ್ಷ ಉತ್ತಮ ಮಳೆಯಾಗುವ ನಿರೀಕ್ಷೆ ಇರುವುದರಿಂದ ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕ ಪೂರೈಕೆಗೆ ಕ್ರಮ
Team Udayavani, May 25, 2019, 5:35 PM IST
![25-May-30](https://www.udayavani.com/wp-content/uploads/2019/05/25-May-30-620x320.jpg)
ಹೊಸದುರ್ಗ: ಕೃಷಿ ಪರಿಕರ ಮಾರಾಟಗಾರರ ಜಾಗೃತಿ ಸಭೆಯನ್ನು ಎಂ.ಸಿ.ಎಫ್ ಸಂಸ್ಥೆಯ ಪ್ರತಿನಿಧಿ ಹೇಮಂತ್‌ಕುಮಾರ್ ಉದ್ಘಾಟಿಸಿದರು.
ಹೊಸದುರ್ಗ: ಕೃಷಿ ಪರಿಕರಗಳ ಮಾರಾಟಗಾರರು ಇಲಾಖೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಚಿತ್ರದುರ್ಗತಾಲೂಕು ಸಹಾಯಕ ಕೃಷಿ ನಿರ್ದೇಶಕ (ಜಾರಿ ದಳ) ಡಾ| ಕೆ.ಸಿ. ಪ್ರಸನ್ನಕುಮಾರ್ ಎಚ್ಚರಿಸಿದರು.
ಪಟ್ಟಣದ ಕೃಷಿ ಇಲಾಖೆ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ 2019-20ನೇ ಸಾಲಿನ ಕೃಷಿ ಪರಿಕರ ಮಾರಾಟಗಾರರ ಜಾಗೃತಿ ಸಭೆ ಹಾಗೂ ಸುರಕ್ಷಿತ ಕೀಟನಾಶಕ ಬಳಕೆ ಬಗ್ಗೆ ನಡೆದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ನಾಲ್ಕು ವರ್ಷಗಳಿಂದ ಬರಗಾಲದಿಂದ ನೋವು ಅನುಭವಿಸಿದ್ದ ರೈತ ಸಮುದಾಯಕ್ಕೆ ಈ ವರ್ಷಉತ್ತಮ ಮಳೆಯಾಗುತ್ತದೆ ಎಂಬ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ರೈತರ ಬೇಡಿಕೆಗಳು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಫೆಡರೇಶನ್, ಖಾಸಗಿ, ಸರಕಾರಿ ಸಂಘಗಳ ಮೂಲಕ ರಸಗೊಬ್ಬರ ವಿತರಣೆ ಮಾಡಲಾಗುವುದು. ಕೃಷಿ ಇಲಾಖೆ ಹಾಗೂ ಕೃಷಿ ಪರಿಕರ ಮಾರಾಟಗಾರರು ರೈತರಿಗೆ ಅಗತ್ಯವಿರುವ ರಸಗೊಬ್ಬರವನ್ನು ನಿಗದಿತ ಸಮಯದಲ್ಲಿ ವಿತರಿಸಬೇಕು. ಪ್ರತಿ ಮಳಿಗೆ ಮುಂಭಾಗದಲ್ಲಿ ಕೃಷಿ ಪರಿಕರಗಳ ದರ, ಸಹಾಯಧನ, ರೈತರ
ವಂತಿಗೆ ಇತ್ಯಾದಿ ಮಾಹಿತಿಯುಳ್ಳ ದರಪಟ್ಟಿಯ ನಾಮಫಲಕವನ್ನು ಕಡ್ಡಾಯವಾಗಿ ಹಾಕಬೇಕು. ಅವಧಿಯೊಳಗೆ ಪರವಾನಗಿ ನವೀಕರಣ ಮಾಡಿಸಿಕೊಳ್ಳಬೇಕು. ನಿಗದಿತ ಬೆಲೆ ಹಾಗೂ ಗುಣಮಟ್ಟದ ಕೃಷಿ ಪರಿಕರಗಳನ್ನು ಮಾರಾಟ ಮಾಡಬೇಕು ಎಂದು ಸೂಚಿಸಿದರು.
ತಾಂತ್ರಿಕ ಅಧಿಕಾರಿ ವೆಂಕಟೇಶ್ ಮಾತನಾಡಿ, ಎಲ್ಲಾ ಕೃಷಿ ಪರಿಕರ ಮಾರಾಟಗಾರರು ಪಿಒಎಸ್ ಮಷಿನ್ ಮೂಲಕವೇ ರಸಗೊಬ್ಬರ ವಿತರಣೆ ಮಾಡಬೇಕು. ರಸಗೊಬ್ಬರ ಖರೀದಿಗೆ
ಆಧಾರ್ ಸಂಖ್ಯೆ ಮಾಹಿತಿ ನೀಡದ ರೈತರಿಗೆ ರಸಗೊಬ್ಬರ ಮಾರಾಟ ಮಾಡುವುದು ಕಾನೂನು ಬಾಹಿರ. ಈ ರೀತಿ ಮಾರಾಟ ಮಾಡುವ ಮಾರಾಟಗಾರರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದರು.
ಎಂ.ಸಿ.ಎಫ್ ಸಂಸ್ಥೆಯ ಪ್ರತಿನಿಧಿ ಹೇಮಂತ್‌ಕುಮಾರ್ ಉದ್ಘಾಟಿಸಿದರು. ಕೃಷಿ ಅಧಿಕಾರಿಗಳಾದ ಉಲತ್‌ಜೈಬಾ, ಪವಿತ್ರಾ, ಆತ್ಮ ಯೋಜನೆಯ ಸಿಬ್ಬಂದಿ ಹಾಗೂ ತಾಲೂಕಿನ ಕೃಷಿ ಪರಿಕರ ಮಾರಾಟಗಾರರು ಇದ್ದರು.
46 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ
ಹೊಸದುರ್ಗ ತಾಲೂಕಿನಲ್ಲಿ ಒಟ್ಟು 46,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ವರ್ಷದಲ್ಲಿ ಮುನ್ನ ಮುಂಗಾರು ಕ್ಷೀಣಿಸಿದ್ದು ಹೆಸರು ಹಾಗೂ ಎಳ್ಳು ಬೆಳೆಗಳ ಬಿತ್ತನೆ ಕುಂಠಿತವಾಗಿದೆ. ಮುಂದಿನ ಮಾಹೆಯಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದ್ದು ಎಲ್ಲಾ ಪರಿಕರ ಮಾರಾಟಗಾರರು ಉತ್ತಮ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರಗಳನ್ನು ರೈತರಿಗೆ ನಿಯಮಾನುಸಾರ ವಿತರಿಸಬೇಕು ಎಂದು ಶ್ರೀರಾಂಪುರ ಕೃಷಿ ಅಧಿಕಾರಿ ಸಿ.ಎಸ್. ಈಶ ತಿಳಿಸಿದರು.
ಟಾಪ್ ನ್ಯೂಸ್
![9-ullala](https://www.udayavani.com/wp-content/uploads/2024/12/9-ullala-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![9-ullala](https://www.udayavani.com/wp-content/uploads/2024/12/9-ullala-150x90.jpg)
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
![6](https://www.udayavani.com/wp-content/uploads/2024/12/6-36-150x80.jpg)
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
![8-belthangady](https://www.udayavani.com/wp-content/uploads/2024/12/8-belthangady-150x90.jpg)
Belthangady: ಕ್ರಿಸ್ಮಸ್ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು
![5(1](https://www.udayavani.com/wp-content/uploads/2024/12/51-2-150x80.jpg)
Kota: ಕಸ ಎಸೆಯುವ ಜಾಗದಲ್ಲಿ ನಿರ್ಮಾಣವಾಯಿತು ಪೌರ ಕಾರ್ಮಿಕನ ಪಾರ್ಕ್!
![Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು](https://www.udayavani.com/wp-content/uploads/2024/12/moodigere-150x87.jpg)
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
MUST WATCH
ಹೊಸ ಸೇರ್ಪಡೆ
![9-ullala](https://www.udayavani.com/wp-content/uploads/2024/12/9-ullala-150x90.jpg)
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
![BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ](https://www.udayavani.com/wp-content/uploads/2024/12/virat-150x87.jpg)
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
![6](https://www.udayavani.com/wp-content/uploads/2024/12/6-36-150x80.jpg)
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
![8-belthangady](https://www.udayavani.com/wp-content/uploads/2024/12/8-belthangady-150x90.jpg)
Belthangady: ಕ್ರಿಸ್ಮಸ್ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು
![5(1](https://www.udayavani.com/wp-content/uploads/2024/12/51-2-150x80.jpg)
Kota: ಕಸ ಎಸೆಯುವ ಜಾಗದಲ್ಲಿ ನಿರ್ಮಾಣವಾಯಿತು ಪೌರ ಕಾರ್ಮಿಕನ ಪಾರ್ಕ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.