![Ambedkar row: Amit Shah gone mad, he should leave politics says Lalu Prasad Yadav](https://www.udayavani.com/wp-content/uploads/2024/12/lalu-415x241.jpg)
ಛತ್ರದಲ್ಲಿ ಮದುವೆ ಎಂದರೆ ಹಾರಿಗೆ ಗ್ರಾಮಸ್ಥರಿಗೆ ಭಯ!
Team Udayavani, May 25, 2019, 5:48 PM IST
![25-May-32](https://www.udayavani.com/wp-content/uploads/2019/05/25-May-32-557x465.jpg)
ಸಾಗರ: ಹಾರಿಗೆಯ ಸಮುದಾಯ ಭವನದಲ್ಲಿ ಸಮಾರಂಭಗಳ ನಂತರದ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯದಿರುವುದು
ಸಾಗರ: ತಾಲೂಕಿನ ಕುದರೂರು ಗ್ರಾಪಂ ವ್ಯಾಪ್ತಿಯ ಹಾರಿಗೆ ಗ್ರಾಮದಲ್ಲಿರುವ ಸಭಾಭವನದಲ್ಲಿ ಸಭೆ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು ನಡೆದರೆ ಆಸುಪಾಸಿನ ನಿವಾಸಿಗಳು ಭಯಭೀತರಾಗುವ ಸ್ಥಿತಿ ನಿರ್ಮಾಣವಾಗಿದೆ. ಸಮಾರಂಭ ಮುಗಿದ ಎರಡು ಮೂರು ದಿನ ಈ ಭಾಗದ ಜನ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ. ಪ್ಲಾಸ್ಟಿಕ್, ಕಸ, ಬಿಸಾಕಿದ ಆಹಾರ ಮುಂತಾದವುಗಳನ್ನು ತಿಂದು, ಸ್ಥಳೀಯರು ಸಾಕಿದ ಜಾನುವಾರುಗಳ ಆರೋಗ್ಯ ಹಾಳಾಗುತ್ತಲಿದ್ದು, ಅಂತಹ ತ್ಯಾಜ್ಯ ಸೇವಿಸಿದ ಆಕಳೊಂದು ಗುರುವಾರ ಮೃತಪಟ್ಟಿದೆ.
ಗ್ರಾಮದ ನೇಮಿನಾಥ ದಿಗಂಬರ ಜೈನ ಬಸದಿಯ ಪಕ್ಕದಲ್ಲಿ ಖಾಸಗಿ ಆಡಳಿತಕ್ಕೆ ಸೇರಿದ ಸಭಾಭವನ ಸುಲಭ ಲಭ್ಯ, ಸಾಕಷ್ಟು ಸೌಲಭ್ಯಗಳಿರುವ ವ್ಯವಸ್ಥೆ. ಸೀಸನ್‌ನಲ್ಲಿ 10-15 ಮದುವೆ ಕಾರ್ಯಗಳು ಇಲ್ಲಿ ನಡೆಯುತ್ತವೆ. ಆದರೆ ತ್ಯಾಜ್ಯ ವಿಲೇವಾರಿಗೆ ಯಾವುದೇ ಸೂಕ್ತ ವ್ಯವಸ್ಥೆಗಳಿಲ್ಲದ ಹಿನ್ನೆಲೆಯಲ್ಲಿ ಸಮುದಾಯ ಭವನದ ಸಮೀಪದ ಖಾಲಿ ಜಾಗದಲ್ಲಿ ಕಸ, ಪ್ಲಾಸ್ಟಿಕ್, ಹೆಚ್ಚುವರಿ ಆಹಾರ ಮುಂತಾದವುಗಳನ್ನು ಬಿಸಾಕಲಾಗುತ್ತದೆ. ಇವು ವಾರ ಕಳೆದರೂ ವಿಲೇವಾರಿಯಾಗದೆ ಆತಂಕದ ಸ್ಥಿತಿ ಉಂಟು ಮಾಡುತ್ತವೆ. ಆಸುಪಾಸಿನ ಸುಮಾರು ಹತ್ತಿಪ್ಪತ್ತು ಮನೆಗಳ ಜಾನುವಾರುಗಳು ಈ ತ್ಯಾಜ್ಯವನ್ನು ಸೇವಿಸಿ, ಅನಾರೋಗ್ಯ ಪೀಡಿತರಾಗುತ್ತಿರುವ ಘಟನೆ ಪದೇ ಪದೇ ನಡೆಯುತ್ತಿದೆ. ಸಾವಿರಾರು ರೂ. ವರೆಗೆ ಜಾನುವಾರುಗಳ ಔಷಧಕ್ಕೆ ಸ್ಥಳೀಯರು ವೆಚ್ಚ ಮಾಡುವ ಸ್ಥಿತಿ ಇದೆ. ಸೂಕ್ತ ಚಿಕಿತ್ಸೆ ನೀಡಿದರೂ ಫಲಿಸದೆ ಜಾನುವಾರುಗಳು ಸಾಯುತ್ತಿವೆ. ತ್ಯಾಜ್ಯ ವಿಲೇವಾರಿ ಸಮಸ್ಯೆ ಕುರಿತು ಸ್ಥಳೀಯ ಗ್ರಾಪಂಗೆ ಗ್ರಾಮವಾಸಿಗಳು ದೂರು ನೀಡಿದ್ದಾರೆ.
ಸಭಾಭವನದ ಸುತ್ತಲೂ ರಾಶಿ ಬಿದ್ದಿರುವ ತ್ಯಾಜ್ಯ ಗಬ್ಬು ವಾಸನೆಗೆ ಕಾರಣವಾಗುತ್ತದೆ. ಅಲ್ಲದೇ ಜಾನುವಾರುಗಳ ಸಾವಿಗೂ ಕಾರಣವಾಗುತ್ತಿದೆ. ನನ್ನ ಆಕಳೊಂದು ಗುರುವಾರ ಕಸ, ತ್ಯಾಜ್ಯ ತಿಂದು ಸತ್ತುಹೋಗಿದೆ. ಗ್ರಾಪಂಗೆ ದೂರು ನೀಡಿದ್ದೇನೆ.
•ಬಸವರಾಜ, ಹಾರಿಗೆ
ತ್ಯಾಜ್ಯದ ರಾಶಿಯಿಂದ ಸ್ಥಳೀಯರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಹಾಗೂ ಜಾನುವಾರುಗಳು ಸಾಯುತ್ತಿರುವ ಬಗ್ಗೆ ಮಾಹಿತಿ ಇದೆ. ತ್ಯಾಜ್ಯ ವಿಲೇವಾರಿ ಸಕಾಲದಲ್ಲಿ ಆಗುವಂತೆ ಸೂಕ್ತ ಕ್ರಮ ತೆಗೆದುಕೊಳ್ಳಲು ಸಭಾಭವನದ ಆಡಳಿತ ಮಂಡಳಿಗೆ ಸೂಚನೆ ನೀಡಲಾಗುವುದು.
•ವಿಶ್ವನಾಥ ಫಟಗಾರ,
ಪಿಡಿಒ, ಕುದರೂರು ಗ್ರಾಪಂ
ಟಾಪ್ ನ್ಯೂಸ್
![Ambedkar row: Amit Shah gone mad, he should leave politics says Lalu Prasad Yadav](https://www.udayavani.com/wp-content/uploads/2024/12/lalu-415x241.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ](https://www.udayavani.com/wp-content/uploads/2024/12/6-35-150x90.jpg)
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
![5](https://www.udayavani.com/wp-content/uploads/2024/12/5-36-150x90.jpg)
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
![Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ](https://www.udayavani.com/wp-content/uploads/2024/12/4-36-150x90.jpg)
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
![Krantiveer Brigade launched by worshipping the feet of 1008 saints: KS Eshwarappa](https://www.udayavani.com/wp-content/uploads/2024/12/kse-150x87.jpg)
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
![BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ](https://www.udayavani.com/wp-content/uploads/2024/12/3-34-150x90.jpg)
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
MUST WATCH
ಹೊಸ ಸೇರ್ಪಡೆ
![Ambedkar row: Amit Shah gone mad, he should leave politics says Lalu Prasad Yadav](https://www.udayavani.com/wp-content/uploads/2024/12/lalu-150x87.jpg)
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
![New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು](https://www.udayavani.com/wp-content/uploads/2024/12/new-year-150x87.jpg)
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ, ಏನು ಮಾರ್ಗಸೂಚಿ ಇಳಿದೆ ಮಾಹಿತಿ
![Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ](https://www.udayavani.com/wp-content/uploads/2024/12/6-35-150x90.jpg)
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
![5](https://www.udayavani.com/wp-content/uploads/2024/12/5-36-150x90.jpg)
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
![Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ](https://www.udayavani.com/wp-content/uploads/2024/12/4-36-150x90.jpg)
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.