ಚಿತ್ತವಿಕಲತೆಗೆ ಉಚಿತ ಚಿಕಿತ್ಸೆ
Team Udayavani, May 26, 2019, 3:00 AM IST
ದೊಡ್ಡಬಳ್ಳಾಪುರ: ಚಿತ್ತವಿಕಲತೆ ಮಾನಸಿಕ ರೋಗವಾಗಿದ್ದು, ಮೂಢನಂಬಿಕೆಗಳಿಗೆ ಮರುಳಾಗದೇ, ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ರೋಗ ತಡೆಗಟ್ಟಬಹುದು. ಸರ್ಕಾರ ಇದಕ್ಕೆ ಉಚಿತ ಚಿಕಿತ್ಸಾ ಸೌಲಭ್ಯ ನೀಡುತ್ತಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ಚಿಕಿತ್ಸೆ ಪಡೆಯಬಹುದು ಎಂದು ಜಿಲ್ಲಾ ಮಾನಸಿಕ ಆರೋಗ್ಯ ತಜ್ಞ ಡಾ.ಗಿರೀಶ್ ತಿಳಿಸಿದರು.
ನಗರದ ತಾಲೂಕು ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸ್ಕಿಜೋಫ್ರೀನಿಯಾ(ಚಿತ್ತ ವಿಕಲತೆ)ದಿನಾಚರಣೆಯಲ್ಲಿ ಅವರು ಮಾತನಾಡಿದರು.
ವೈದ್ಯರ ಸೇವೆ ಶ್ಲಾಘನೀಯ: ಮನೋ ವೈಕಲ್ಯ ಹೊಂದಿದವರ ಬಗ್ಗೆ ಅಸಡ್ಡೆ ತೋರದೆ ಸಾಮಾನ್ಯರಂತೆ ಕಾಣಬೇಕು. ಮನೋವಿಕಲತೆ ಹೊಂದಿದವರನ್ನು ಆರೋಗ್ಯವಂತರಾಗಿಸುವಲ್ಲಿ ವೈದ್ಯರು, ದಾದಿಯರಷ್ಟೇ ಕುಟುಂಬದವರ ಜವಾಬ್ದಾರಿಯೂ ಇದೆ. ಆರೋಗ್ಯ ಸೇವಾ ಸಿಬ್ಬಂದಿ, ವೈದ್ಯರು ವೈಯಕ್ತಿಕ ಜೀವನದ ಸಂತಸವನ್ನು ತ್ಯಾಗ ಮಾಡಿ ಸಹನೆ, ತಾಳ್ಮೆಯಿಂದ ರೋಗಿಗಳ ಸೇವೆ ಸಲ್ಲಿಸುತ್ತಿರುವುದು ಪ್ರಶಂಸನೀಯ ಎಂದರು.
ಆರಂಭಿಕ ಚಿಕಿತ್ಸೆ: ನನ್ನ ಮೇಲೆ ಬೇರೆಯವರು ಅನುಮಾನ ಬೀಳುತ್ತಿದ್ದಾರೆ. ನನ್ನ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಯಾರೋ ಏನೋ ಯೋಚನೆ ತುಂಬಿಸುತ್ತಿದ್ದಾರೆಂಬ ಭ್ರಮೆಯಲ್ಲಿರುವುದು ಸ್ಕಿಜೋಫ್ರೀನಿಯಾ(ಚಿತ್ತವಿಕಲತೆ)ಲಕ್ಷಣಗಳಾಗಿವೆ. ಇದಕ್ಕೆ ನಿಮ್ಹಾನ್ಸ್‌ಗೆ ತೆರಳಿ ಚಿಕಿತ್ಸೆ ನೀಡಬೇಕೆಂದೇನೂ ಇಲ್ಲ.
ಆರಂಭಿಕ ಹಂತದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ಚಿಕಿತ್ಸೆ ಕೊಡಿಸಬಹುದಾಗಿದೆ. ಆಶಾ ಕಾರ್ಯಕರ್ತೆಯರು ಅಂತಹವರನ್ನು ಗುರುತಿಸಿ ಮಾಹಿತಿ ನೀಡಬೇಕು. ತಿಂಗಳ 3ನೇ ಮಂಗಳವಾರ, 1ನೇ ಗುರುವಾರ ಸರ್ಕಾರಿ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ ಎಂದು ತಿಳಿಸಿದರು.
ಸರ್ಕಾರದ ಸೌಲಭ್ಯಗಳು: ಸರ್ಕಾರ ಇದಕ್ಕೆ ಉಚಿತ ಚಿಕಿತ್ಸೆಯ ಸೌಲಭ್ಯ ನೀಡುತ್ತಿದೆ. ರೋಗಿಗೆ ನೀಡುವ ಪ್ರಮಾಣ ಪತ್ರದಿಂದ ಅಂಗವಿಕಲರ ಮಾಸಾಶನ ಪಡೆಯಬಹುದಾಗಿದೆ. ಮಾನಸ ಧಾರಾ ಯೋಜನೆಯಡಿ ವಿವಿಧ ತರಬೇತಿ ಪಡದು ಸ್ವಂತ ಉದ್ಯೋಗ ಮಾಡಲು ಅವಕಾಶವಿದೆ ಎಂದು ತಿಳಿಸಿದರು.
ಮಾನಸಿಕ ಸ್ಥಿಮಿತ ಕಾಪಾಡಿಕೊಳ್ಳಿ: ತಾಲೂಕು ಆರೋಗ್ಯಾಧಿಕಾರಿ ಡಾ.ಶರ್ಮಿಳಾ ಹೆಡೆ ಮಾತನಾಡಿ, ಹಿಂದಿನ ದಿನಗಳಲ್ಲಿ ಮನೋ ವೈಕಲ್ಯ ಒಂದು ಶಾಪ ಎಂಬ ನಂಬಿಕೆಯಿತ್ತು. ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕ ಪ್ರಗತಿಯಿಂದ ಮನೋ ವೈಕಲ್ಯವನ್ನು ಗುಣಪಡಿಸಬಹುದಾಗಿದೆ. ಮನೋ ವೈಕಲ್ಯತೆ ಹೊಂದಿದವರನ್ನು ರೋಗಮುಕ್ತಗೊಳಿಸಿ ಮುಖ್ಯವಾಹಿನಿಗೆ ತರಬೇಕು.
ಈ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ದಾದಿಯರು ಕಾಯೊನ್ಮುಖರಾಗಬೇಕು. ಮಾನಸಿಕ ಆರೋಗ್ಯದೊಂದಿಗೆ ದೈಹಿಕ ಆರೋಗ್ಯವೂ ಉತ್ತಮವಾಗಿದ್ದರೆ ಮಾತ್ರ ಆರೋಗ್ಯವಂತ ಎಂದೆನಿಸಿಕೊಳ್ಳುತ್ತಾನೆ. ಈ ನಿಟ್ಟಿನಲ್ಲಿ ದೈಹಿಕ ಆರೋಗ್ಯವಂತರೂ ಸಹ ತಮ್ಮ ಮಾನಸಿಕ ಸ್ಥಿಮಿತವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಹೇಳಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಕ ಮಂಜುನಾಥ್, ಮನಃಶಾಸ್ತಜ್ಞ ಸದಾನಂದ, ಹಿರಿಯ ಆರೋಗ್ಯ ನಿರೀಕ್ಷಕ ಚಿಕ್ಕತಿಮ್ಮಯ್ಯ, ಗೌರಮ್ಮ, ರೇಖಾ, ಗಗನ್ ಮತ್ತಿತರು ಹಾಜರಿದ್ದರು.
ಮಾನಸಿಕ ತೊಂದರೆ ಇರುವವರನ್ನು ಶೇ.90ರಷ್ಟು ಗುಣಪಡಿಸಬಹದಾಗಿದ್ದು, ಚಿತ್ತವಿಕಲತೆಗೆ ವೈದ್ಯರು ಸೂಚಿಸಿದಂತೆ ನಿರಂತರ ಚಿಕಿತ್ಸೆ ನೀಡುತ್ತಿರಬೇಕು. ಕೆಲವು ವೇಳೆ ರೋಗಿ ಆತ್ಮಹತ್ಯೆಗೆ ಶರಣಾಗಬಹುದು ಅಥವಾ ಇನ್ನೊಬ್ಬರನ್ನು ಹತ್ಯೆ ಮಾಡಲು ಯತ್ನಿಸಬಹುದು. ಈ ಬಗ್ಗ ಎಚ್ಚರಿಕೆ ವಹಿಸಬೇಕು.
-ಡಾ.ಗಿರೀಶ್, ಜಿಲ್ಲಾ ಮಾನಸಿಕ ಆರೋಗ್ಯ ತಜ್ಞರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.