ನರ್ಸಿಂಗ್ ಸೇವೆಗೆ ಪೂರಕವಾದ ಶಿಕ್ಷಣ: ಶಶಿಧರ್
ನರ್ಸಿಂಗ್ ಸೇವೆಗೆ ಪೂರಕವಾದ ಶಿಕ್ಷಣ: ಶಶಿಧರ್
Team Udayavani, May 26, 2019, 3:00 AM IST
ಚನ್ನರಾಯಪಟ್ಟಣ: ಸೇವೆಗೆ ಪೂರಕವಾಗಿರುವ ನರ್ಸಿಂಗ್ ಶಿಕ್ಷಣವನ್ನು ತಮ್ಮ ಮಕ್ಕಳಿಗೆ ಕೊಡಿಸಲು ಮುಂದಾಗಿರುವ ಪೋಷಕರಿಗೆ ಅನಂತ ಧನ್ಯವಾದಗಳು ಎಂದು ಪುರಸಭೆ ಸದಸ್ಯ ಸಿ.ಎನ್.ಶಶಿಧರ್ ತಿಳಿಸಿದರು.
ಪಟ್ಟಣದಲ್ಲಿನ ವೈದ್ಯ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ 15ನೇ ವರ್ಷದ ವಾಷಿಕೋತ್ಸವ ಸಮಾರಂಭ, ದೀಪ ಪ್ರಜ್ವಲನ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಾದರಿ ಪೋಷಕರು: ಇತ್ತೀಚಿನ ದಿನಗಳಲ್ಲಿ ತಮ್ಮ ಮಕ್ಕಳಿಗೆ ಎಂಜಿನಿಯರ್ ಹಾಗೂ ವೈದ್ಯಕೀಯ ಶಿಕ್ಷಣ ಕೊಡಿಸಲು ಮುಂದಾಗುವ ಯುಗದಲ್ಲಿ ನರ್ಸಿಂಗ್ ಶಿಕ್ಷಣವನ್ನು ಮಕ್ಕಳಿಗೆ ಕೊಡಿಸುವ ಮೂಲಕ ಹಲವು ಮಂದಿ ಪೋಷಕರು ಸಮಾಜಕ್ಕೆ ಆದರ್ಶವಾಗುತ್ತಿದ್ದಾರೆ ಎಂದರು.
ಶ್ರಮ: ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗಿಂತ ಮೊದಲು ರೋಗಿಗಳ ಶುಶ್ರೂಷೆ ಮಾಡುವುದು ನರ್ಸ್‌ಗಳು, ಯಾವುದೇ ರೋಗಿ ಆಸ್ಪತ್ರೆಗೆ ಆಗಮಿಸಿದಾಗ ಪ್ರಾಥಮಿಕ ಚಿಕಿತ್ಸೆ ನೀಡಿ ಆರೈಕೆ ಮಾಡುವುದಲ್ಲದೇ ರೋಗಿಗಳ ಪಾಲಿಗೆ ತಂದೆ, ತಾಯಿಯಾಗಿ ಅವರನ್ನು ಸಂಪೂರ್ಣ ಗುಣಮುಖ ಮಾಡುವಲ್ಲಿ ನರ್ಸ್‌ಗಳು ಶ್ರಮಿಸುತ್ತಾರೆ. ಹಾಗಾಗಿ ಇದೊಂದು ಪವಿತ್ರ ಶಿಕ್ಷಣ ಹಾಗಾಗಿ ವಿದ್ಯಾರ್ಥಿಗಳ ಬದುಕು ನಂದಾದೀಪವಾಗಿರಲಿ ಎಂದು ಶುಭಹಾರೈಸಿದರು.
ಪರಿಸರ ಕಾಳಜಿ ಅಗತ್ಯ: ವಿದ್ಯಾರ್ಥಿಗಳು ಓದಿನ ಜೊತೆಯಲ್ಲಿ ಪರಿಸರ ಕಾಳಜಿ ಹೊಂದಬೇಕು. ಗಿಡ, ಮರ ಬೆಳೆಸುವುದಲ್ಲದೆ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಭೂಮಿಯನ್ನು ಹಾಳು ಮಾಡುವವರ ಸಂಖ್ಯೆ ಹೆಚ್ಚುತ್ತಿದೆ ಮಳೆ ಕಡಿಮೆಯಾಗಿ ಎಲ್ಲೆಡೆ ನೀರಿನ ಸಮಸ್ಯೆ ತಾಂಡವಾಸುತ್ತಿದೆ ಮಿತನೀರು ಬಳಕೆಗೆ ಮುಂದಾಗಬೇಕು. ಪುರಸಭೆ ವ್ಯಾಪ್ತಿಯ ವಾರ್ಡ್‌ನಲ್ಲಿ ನೀರು ಬಳಕೆ ಬಗ್ಗೆ ಜಾಗೃತಿ ಜಾಥಾ ನಡೆಸುವಂತೆ ಸಲಹೆ ನೀಡಿದರು.
ಬೆಳ್ಳೂರು ಕ್ರಾಸಿನಲ್ಲಿರುವ ಆದಿಚುಂಚನಗಿರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ಜೆ.ವಿಜಯಕುಮಾರ್ ಮಾತನಾಡಿ, ವೃತ್ತಿನಿರತ ಶುಶ್ರೂಷಕರು ಜಾಗರೂಕತೆಯಿಂದ ಸೇವೆ ಸಲ್ಲಿಸಬೇಕು. ವಿಜ್ಞಾನದ ಹೃದಯವಾಗಿರುವ ನರ್ಸಿಂಗ್ ಶಿಕ್ಷಣ ಪಡೆಯುವ ವೇಳೆ ಪುಸ್ತಕಕ್ಕೆ ಸೀಮಿತವಾಗಿದ್ದರೆ ಸಾಲದು ರೋಗಿಗಳ ಸೇವೆ ಮಾಡುವ ಮೂಲಕ ಉತ್ತನ ಶುಶ್ರೂಷಕರಾಗಿ ಹೊರಬನ್ನಿ ಎಂದು ಕಾಲೇಜಿಗೆ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳಿಗೆ ಹಾರೈಸಿದರು.
ಶುಶ್ರೂಷಕರು ಮೊದಲು ಸ್ಥಳೀಯ ಭಾಷೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು, ಸಂವಹನ ಮುಖ್ಯವಾಗಿರುತ್ತದೆ, ರೋಗಿಯು ಯಾವ ಭಾಷೆಯಲ್ಲಿ ಮಾತನಾಡುತ್ತಾರೆ ಅದರ ಅರಿವು ಮುಖ್ಯವಾಗಿರುತ್ತದೆ, ಹೊರ ರಾಜ್ಯ ಹಾಗೂ ದೇಶದಲ್ಲಿ ಸೇವೆ ಸಲ್ಲಿಸುವ ನರ್ಸ್‌ಗಳಿಗೆ ಆಂಗ್ಲಭಾಷೆ ತಿಳುವಳಿಕೆ ಅಗತ್ಯವಿದೆ ಎಂದು ಹೇಳಿದರು.
ಭಾರತದಲ್ಲಿ ಇಂದಿಗೂ ಸಾಂಕ್ರಾಮಿಕ ರೋಗ ಮುಕ್ತವಾಗಿಲ್ಲ ಆದರೆ ಹಲವು ದೇಶಗಳಲ್ಲಿ ಕ್ಷಯಾ, ಮಲೇರಿಯಾದಂತಹ ರೋಗಗಳು ಕಾಣುವುದಿಲ್ಲ ಅಲ್ಲಿನ ಜೀವನ ಶೈಲಿಯಿಂದ ಸಾಂಕ್ರಾಮಿಕ ರೋಗ ಮುಕ್ತ ದೇಶವಾಗಿದೆ ಭಾರತ ಇದರ ಕಡೆಗೆ ಹೆಜ್ಜೆ ಇಡಬೇಕಿದೆ ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆ ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ, ವೈದ್ಯ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಅರಣಕುಮಾರ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ
Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
UV Fusion: ಕರ್ನಾಟಕ: ನಮ್ಮೆಲ್ಲರ ಉಸಿರಾಗಲಿ ಕನ್ನಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.