2020ಕ್ಕೆ ಆನ್‌ಲೈನ್‌ನಲ್ಲೇ ಸಿಇಟಿ: ಜಿಟಿಡಿ


Team Udayavani, May 26, 2019, 3:09 AM IST

2020kke

ಬೆಂಗಳೂರು: 2020ಕ್ಕೆ ರಾಜ್ಯದಲ್ಲಿ ಆನ್‌ಲೈನ್‌ ಮೂಲಕವೇ ಸಿಇಟಿ ನಡೆಸಲಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿಇಟಿ ರ್‍ಯಾಂಕ್‌ ಪಟ್ಟಿ ಬಿಡುಗಡೆ ಮಾಡಿ ಅವರು ಮಾತನಾಡಿದರು. 2020ಕ್ಕೆ ರಾಜ್ಯದಲ್ಲಿ ಆನ್‌ಲೈನ್‌ ಮೂಲಕವೇ ಸಿಇಟಿ ನಡೆಸಲಿದ್ದೇವೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಅಲ್ಲದೆ, ಮೂಲಸೌಕರ್ಯವನ್ನು ಒದಗಿಸುವ ಪ್ರಯತ್ನ ಮಾಡುತ್ತಿದ್ದೇವೆ. ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದೊಂದಿಗೂ ನಿರಂತರ ಸಂಪರ್ಕದಲ್ಲಿದ್ದೇವೆ.

ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪರೀಕ್ಷೆ ಸಂಬಂಧ ನಿರಂತರ ತರಬೇತಿ ನೀಡುತ್ತೇವೆ. ಜತೆಗೆ, ಅಣಕು ಪರೀಕ್ಷೆಗಳನ್ನು ವಿದ್ಯಾರ್ಥಿಗಳು ತೆಗೆದುಕೊಳ್ಳಬಹುದಾದ ವ್ಯವಸ್ಥೆ ಮಾಡಲಿದ್ದೇವೆ. ಪ್ರತಿ ಪಿಯು ಕಾಲೇಜಿನಲ್ಲೂ ತರಬೇತಿಗೆ ಬೇಕಾದ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ತಿಳಿಸಿದರು.

ಜಿಲ್ಲಾ ಕೇಂದ್ರದಲ್ಲೇ ದಾಖಲಾತಿ ಪರಿಶೀಲನೆ: ಸಿಇಟಿ ರ್‍ಯಾಂಕ್‌ ಆಧಾರದಲ್ಲಿ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಬೆಂಗಳೂರಿನ ಕೇಂದ್ರ ಕಚೇರಿ ಸೇರಿದಂತೆ ರಾಜ್ಯದ 28 ಕೇಂದ್ರಗಳಲ್ಲಿ ನಡೆಯಲಿದೆ. ದಾವಣಗೆರೆ, ಬಳ್ಳಾರಿ, ರಾಯಚೂರು, ಕಲಬುರಗಿ, ವಿಜಯಪುರ, ಬೆಳಗಾವಿ, ಧಾರವಾಡ, ಕಾರವಾರ, ಮಂಗಳೂರು, ಶಿವಮೊಗ್ಗ, ಹಾಸನ,

-ಮೈಸೂರು, ತುಮಕೂರು, ಬೀದರ್‌, ಕೊಪ್ಪಳ, ಚಿತ್ರದುರ್ಗ, ಹಾವೇರಿ, ಗದಗ, ಯಾದಗಿರಿ, ಬಾಗಲಕೋಟೆ, ಉಡುಪಿ, ಚಿಕ್ಕಬಳ್ಳಾಪುರ, ಮಡಿಕೇರಿ, ಚಾಮರಾಜನಗರ, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಸಹಾಯ ಕೇಂದ್ರಗಳಿದ್ದು, ಅರ್ಹ ಅಭ್ಯರ್ಥಿಗಳು ಅಲ್ಲಿಯೇ ದಾಖಲಾತಿ ಪರಿಶೀಲನೆ ಮಾಡಿಕೊಳ್ಳಬಹುದು ಎಂದರು.

ಶುಲ್ಕ ನಿಗದಿ: ಎಂಜಿನಿಯರಿಂಗ್‌ ಶುಲ್ಕ ನಿಗದಿಯಾಗಿದೆ. ಶೇ.10ರಷ್ಟು ಏರಿಕೆ ಮಾಡಿದ್ದೇವೆ. ಇದಾಗಿಯೂ ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ದುಬಾರಿ ಶುಲ್ಕ ವಸೂಲಿ ಮಾಡದಂತೆ ಎಚ್ಚರಿಕೆಯ ಸಂದೇಶ ರವಾನಿಸಲಾಗುತ್ತದೆ.

ಶುಲ್ಕ ನಿಯಂತ್ರಣ ಸಮಿತಿ ರಚನೆಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ನ್ಯಾಯಾಲಯದ ತೀರ್ಪಿನ ನಂತರವೇ ಮುಂದಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಹೆಚ್ಚುವರಿ ಶುಲ್ಕ ವಸೂಲಿ ನಿಯಂತ್ರಣ ಸಂಬಂಧ ಉನ್ನತ ಮಟ್ಟದ ಸಮಿತಿ ರಚಿಸಲಿದ್ದೇವೆ ಎಂದು ಸಚಿವ ಜಿ.ಟಿ.ದೇವೇಗೌಡ ವಿವರ ನೀಡಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಸುಮಾರು 260 ಕೋಟಿ ರೂ.ಗಳಿದ್ದು, ಅದರ ಸದುಪಯೋಗಕ್ಕಾಗಿ ಬೈಲಾದಲ್ಲಿ ಸಣ್ಣ ಬದಲಾವಣೆಯ ಅಗತ್ಯವಿದೆ. ಬೈಲಾ ಬದಲಾವಣೆಯನ್ನು ಆದಷ್ಟು ಬೇಗ ಮಾಡಿ, ಪ್ರಾಧಿಕಾರದಲ್ಲಿರುವ ಅನುದಾನವನ್ನು ರಾಜ್ಯದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಅಭಿವೃದ್ಧಿಗೆ ಬಳಸಲಾಗುತ್ತದೆ.
-ಜಿ.ಟಿ.ದೇವೇಗೌಡ, ಉನ್ನತ ಶಿಕ್ಷಣ ಸಚಿವ.

ಸಿಇಟಿಯಲ್ಲಿ ಅತಿ ಹೆಚ್ಚು ಅಂಕ ಪಡೆದವರ ವಿವರ
ಅಂಕ ಭೌತಶಾಸ್ತ್ರ ರಸಾಯಶಾಸ್ತ್ರ ಗಣಿತ ಜೀವಶಾಸ್ತ್ರ
60 0 1 1 38
59 1 4 1 166
58 3 10 7 310
57 8 21 6 547
56 8 25 5 842
55 16 27 5 1086

ರ್‍ಯಾಂಕ್‌ ವಿಜೇತರು
ಎಂಜಿನಿಯರಿಂಗ್‌
1. ಜೆಫಿನ್‌ ಬಿಜು-ಶ್ರೀ ಚೈತನ್ಯ ಟೆಕ್ನೊ ಕಾಲೇಜು ಮಾರತ್ತಹಳ್ಳಿ
2. ಆರ್‌. ಚಿನ್ಮಯ-ಎಕ್ಸ್‌ಫ‌ರ್ಟ್‌ ಪಿಯು ಕಾಲೇಜು ಮಂಗಳೂರು
3. ಸಾಯಿ ಸಾಕೇತಿಕ ಚಕುರಿ-ಶ್ರೀ ಚೈತನ್ಯ ಟೆಕ್ನೊ ಕಾಲೇಜು ರಾಮಮೂರ್ತಿ ನಗರ
4. ನಕುಲ ನಿರಾಜೆ-ನೆಹರು ಸ್ಮಾರಕ ವಿದ್ಯಾಲಯ ಬೆಂಗಳೂರು
5 ಸಮರ್ಥ ಮಯ್ಯ-ಎಕ್ಸ್‌ಫ‌ರ್ಟ್‌ ಪಿಯು ಕಾಲೇಜು ಮಂಗಳೂರು

ಯೋಗ ಮತ್ತು ನ್ಯಾಚುರೋಪಥಿ
1. ಪಿ.ಮಹೇಶ್‌ ಆನಂದ್‌-ಶ್ರೀ ಚೈತನ್ಯ ಟೆಕ್ನೊ ಕಾಲೇಜು, ಮಾರತ್ತಹಳ್ಳಿ
2. ವಿ.ವಾಸುದೇವ್‌-ಬೆಸ್‌ ಪಿಯು ಕಾಲೇಜು, ಮೈಸೂರು
3. ಉದಿತ್‌ ಮೋಹನ್‌-ನಾರಾಯಣ ಇ-ಟೆಕ್ನೊ ಸ್ಕೂಲ್‌, ಬೆಂಗಳೂರು
4. ಸುನಿಲ್‌ ಎಸ್‌.ಪಾಟೀಲ್‌- ವಿಷನ್‌ ಪಿಯು ಕಾಲೇಜು, ಬೆಂಗಳೂರು
5. ವರುಣ್‌ ರಾಘವೇಂದ್ರ ಐತಾಳ್‌-ಶ್ರೀ ಚೈತನ್ಯ ಟೆಕ್ನೊ ಕಾಲೇಜು, ನಾಗರಬಾವಿ, ಬೆಂಗ ಳೂ ರು

ಕೃಷಿ ವಿಜ್ಞಾನ
1. ಕೀರ್ತನಾ ಎಂ.ಅರುಣ್‌- ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌, ರಾಜಾಜಿನಗರ, ಬೆಂಗ ಳೂ ರು
2. ಭುವನ್‌ ವಿ.ಬಿ-ಎಕ್ಸ್‌ಫ‌ರ್ಟ್‌ ಪಿಯು ಕಾಲೇಜು, ಮಂಗಳೂರು
3. ಶ್ರೀಕಾಂತ್‌ ಎಂ.ಎಲ್‌-ಮಾಸ್ಟರ್ ಪಿಯು ಕಾಲೇಜು, ಹಾಸನ
4. ಆರ್‌.ಶರಶ್ಚಂದ್ರ- ಶ್ರೀ ಅರವಿಂದೋ ಪಿಯು ಕಾಲೇಜು, ಶಿವಮೊಗ್ಗ
5. ಶ್ರೀಧರ್‌ ಎಂ- ಸೌಂದರ್ಯ ಪಿಯು ಕಾಲೇಜು, ಬೆಂಗಳೂರು

ಪಶುವೈದ್ಯಕೀಯ
1. ಪಿ.ಮಹೇಶ್‌ ಆನಂದ್‌-ಶ್ರೀ ಚೈತನ್ಯ ಟೆಕ್ನೊ ಕಾಲೇಜು, ಮಾರತ್ತಹಳ್ಳಿ, ಬೆಂಗಳೂರು
2. ಉದಿತ್‌ ಮೋಹನ್‌-ನಾರಾಯಣ ಇ-ಟೆಕ್ನೊ ಸ್ಕೂಲ್‌, ಬೆಂಗಳೂರು
3. ಬಿ.ವಿ.ಎಸ್‌.ಎನ್‌.ಸಾಯಿರಾಮ್‌-ಶ್ರೀ ಚೈತನ್ಯ ಟೆಕ್ನೊ ಕಾಲೇಜು, ಮಾರತ್ತಹಳ್ಳಿ,ಬೆಂಗಳೂರು
4. ವಿ.ವಾಸುದೇವ್‌-ಬೆಸ್‌ ಪಿಯು ಕಾಲೇಜು, ಮೈಸೂರು
5. ಲಿಖೀತಾ ಎಸ್‌- ನಾರಾಯಣ ಪಿಯು ಕಾಲೇಜು, ಬೆಂಗಳೂರು

ಫಾರ್ಮಸಿ
1. ಸಾಯಿ ಸಾಕೇತಿಕ ಚಕುರಿ-ಶ್ರೀ ಚೈತನ್ಯ ಟೆಕ್ನೊ ಕಾಲೇಜು, ರಾಮಮೂರ್ತಿ ನಗರ. ಬೆಂಗಳೂರು
2. ಜೆಫಿನ್‌ ಬಿಜು-ಶ್ರೀ ಚೈತನ್ಯ ಟೆಕ್ನೊ ಕಾಲೇಜು, ಮಾರತ್ತಹಳ್ಳಿ
3. ಆರ್‌. ಚಿನ್ಮಯ-ಎಕ್ಸ್‌ಫ‌ರ್ಟ್‌ ಪಿಯು ಕಾಲೇಜು, ಮಂಗಳೂರು
4. ನಕುಲ ನಿರಾಜೆ-ನೆಹರು ಸ್ಮಾರಕ ವಿದ್ಯಾಲಯ, ಬೆಂಗಳೂರು
5. ಪಿ.ಮಹೇಶ್‌ ಆನಂದ್‌-ಶ್ರೀ ಚೈತನ್ಯ ಟೆಕ್ನೊ ಕಾಲೇಜು, ಮಾರತ್ತಹಳ್ಳಿ

ಟಾಪ್ ನ್ಯೂಸ್

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

8-belthangady

Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು

ಟ್ರಕ್ ಡಿಕ್ಕಿ ಹೊಡೆದು ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ… ಓರ್ವ ಸಾ*ವು

Tragedy: ಬೆಳ್ಳಂಬೆಳಗ್ಗೆ ಭೀಕರ ಅಪಘಾತ… ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ

7-icc

ICC Champions Trophy: ಹೈಬ್ರಿಡ್‌ ಮಾದರಿಯೇ ಅಂತಿಮ

6-mandya

Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ  87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ

5-dinesh

Dinesh Gundu Rao; ಬಾಣಂತಿಯರ ಸಾ*ವು ಪ್ರಕರಣ ನ್ಯಾಯಾಂಗ ತನಿಖೆಗೆ

4-train

Train; ಮಂಗಳೂರು-ಪುತ್ತೂರು ಪ್ಯಾಸೆಂಜರ್‌ ರೈಲು ಸುಬ್ರಹ್ಮಣ್ಯಕ್ಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-mandya

Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ  87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ

5-dinesh

Dinesh Gundu Rao; ಬಾಣಂತಿಯರ ಸಾ*ವು ಪ್ರಕರಣ ನ್ಯಾಯಾಂಗ ತನಿಖೆಗೆ

3-ct-ravi

ರಾತ್ರಿಯಿಡೀ ಸಿ.ಟಿ. ರವಿಯನ್ನು ಸುತ್ತಾಡಿಸಿದ ಪೊಲೀಸರು: ಮಧ್ಯರಾತ್ರಿ ರಸ್ತೆಯಲ್ಲೇ ಪ್ರತಿಭಟನೆ

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

9-ind-pak

Kho Kho ವಿಶ್ವಕಪ್‌: ಭಾರತ- ಪಾಕಿಸ್ಥಾನ ಉದ್ಘಾಟನ ಪಂದ್ಯ

8-belthangady

Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು

ಟ್ರಕ್ ಡಿಕ್ಕಿ ಹೊಡೆದು ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ… ಓರ್ವ ಸಾ*ವು

Tragedy: ಬೆಳ್ಳಂಬೆಳಗ್ಗೆ ಭೀಕರ ಅಪಘಾತ… ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ

7-icc

ICC Champions Trophy: ಹೈಬ್ರಿಡ್‌ ಮಾದರಿಯೇ ಅಂತಿಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.