ಯುಡಿಎಫ್‌ಗೆ ಎಲ್‌ಡಿಎಫ್‌ಗಿಂತ 25 ಲಕ್ಷ ಹೆಚ್ಚು ಮತ
Team Udayavani, May 26, 2019, 6:10 AM IST
ಕಾಸರಗೋಡು: ಆಲಪ್ಪುಳ ಹೊರತುಪಡಿಸಿ ಉಳಿದೆಲ್ಲಾ 19 ಕ್ಷೇತ್ರಗಳನ್ನು ಗೆದ್ದುಕೊಂಡು ದಾಖಲೆ ನಿರ್ಮಿಸಿದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಎಲ್‌ಡಿಎಫ್‌ಗಿಂತ 25 ಲಕ್ಷದಷ್ಟು ಹೆಚ್ಚು ಮತಗಳನ್ನು ಪಡೆದುಕೊಂಡಿದೆ. ಇತ್ತೀಚೆಗಿನ ವರ್ಷಗಳಲ್ಲಿ ಈ ಎರಡು ಪಕ್ಷಗಳ ಮಧ್ಯೆ ಇಷ್ಟು ಮತಗಳ ಅಂತರ ಕಂಡು ಬಂದಿಲ್ಲ. ಈ ಎರಡೂ ಒಕ್ಕೂಟಗಳ ಮಧ್ಯೆ ಶೇ.12.16 ರಷ್ಟು ಅಂತರವಿದೆ.ಸಾಮಾನ್ಯವಾಗಿ ಕೇರಳದಲ್ಲಿ ಎಲ್‌ಡಿಎಫ್-ಯುಡಿಎಫ್ ಮಧ್ಯೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯುತ್ತಿದ್ದು,
ಒಟ್ಟು ಚಲಾಯಿಸಿದ ಮತಗಳು 2,03,34,386. ಯುಡಿಎಫ್‌ಗೆ 96, 29,030, ಎಲ್‌ಡಿಎಫ್‌ಗೆ 71,66, 387 ಮತಗಳು ಲಭಿಸಿದೆ. ಎನ್‌ಡಿಎಗೆ 31,71,792 ಮತಗಳು ಲಭಿಸಿವೆ. ಯುಡಿಎಫ್‌ಗೆ ಎಲ್‌ಡಿಎಫ್‌ಗಿಂತ 24,72,643 ಮತಗಳು ಹೆಚ್ಚು ಲಭಿಸಿದೆ. ಯುಡಿಎಫ್ ಶೇ.47.35 ಮತಗಳನ್ನು ಪಡೆದಿದ್ದರೆ, ಎಲ್‌ಡಿಎಫ್ ಶೇ.35.19 ಪಡೆದುಕೊಂಡಿದೆ. ಎನ್‌ಡಿಎ ಶೇ.15.60 ಗಳಿಸಿತು.
ಯುಡಿಎಫ್‌ಗೆ ಮತಗಳು ಹರಿದು ಬಂದಾಗ ರಾಜ್ಯದ 140 ವಿಧಾನಸಭಾ ಕ್ಷೇತ್ರಗಳ ಪೈಕಿ 123 ವಿಧಾನಸಭಾ ಕ್ಷೇತ್ರಗಳಲ್ಲಿ ಯುಡಿಎಫ್ ಮುನ್ನಡೆ ಸಾಧಿಸಿತು. 2016 ರಲ್ಲಿ ನಡೆದ ವಿಧಾನಸಭಾ ಚುನಾವಣೆ ಯಲ್ಲಿ 91 ಸೀಟು ಪಡೆದಿದ್ದ ಎಲ್‌ಡಿ ಎಫ್‌ಗೆ 16 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಳ್ಳಲು ಸಾಧ್ಯವಾ ಯಿತು. ಒಂದು ಕ್ಷೇತ್ರದಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿತು. ವಿಧಾನ ಸಭೆ ಚುನಾವಣೆಯಲ್ಲಿ ಎಲ್‌ಡಿಎಫ್ 91 ಸೀಟುಗಳನ್ನು ಪಡೆದು ಕೊಂಡಾಗಲುೆÂ ಮತಗಳ ಅಂತರ ಶೇ.4.67 ಆಗಿತ್ತು. 12 ಗೆದು ªಕೊಂಡಾ ಗಲು ಯುಡಿಎಫ್‌ಗೆ 2014 ರ ಚುನಾವಣೆಯಲ್ಲಿ ಎಲ್‌ಡಿಎಫ್‌ಗಿಂತ ಶೇ.1.87 ಮತಗಳಷ್ಟೇ ಅಧಿಕ ಲಭಿಸಿತ್ತು. 72 ಸೀಟುಗಳೊಂದಿಗೆ 2011ರಲ್ಲಿ ಯುಡಿಎಫ್ ಅಧಿಕಾರಕ್ಕೆ ಬಂದಾಗಲು ಶೇಕಡಾ ಮತಗಳ ಅಂತರ ಕೇವಲ ಶೇ. 0.89 ಆಗಿತ್ತು.
ತ್ರಿಕೋನ ಸ್ಪರ್ಧೆ: ಯುಡಿಎಫ್‌ಗೆ ಶೇ.47.35 ಮತ
ಈ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆ ನಡೆದಿದ್ದರೂ ಯುಡಿಎಫ್‌ಗೆ ಶೇ.47.35 ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಸಾಧ್ಯವಾಯಿತು.
12 ಸೀಟುಗಳನ್ನು ಗೆದ್ದುಕೊಂಡ 2014 ರ ಲೋಕಸಭಾ ಚುನಾವಣೆಯಲ್ಲಿ ಪಡೆದ ಮತಗಳಿಗಿಂತ ಯುಡಿಎಫ್ ಶೇ.5.39 ಮತ ಅಧಿಕ ಪಡೆದುಕೊಂಡಿದೆ. ಅದರೊಂದಿಗೆ ಕಳೆದ ಬಾರಿಗಿಂತ 7 ಸೀಟುಗಳು ಅಧಿಕ ಲಭಿಸಿತು. ಾರೀ ಹಿನ್ನೆಡೆ ಅನುಭವಿಸಿದ 2016 ರ ವಿಧಾನಸಭಾ ಚುನಾವಣೆಯಲ್ಲಿ ಪಡೆದ ಶೇಕಡಾ ಮತಗಳಿಗಿಂತ ಈ ಬಾರಿ ಶೇ.8.54 ಅಧಿಕ ಪಡೆದಿದೆ.
ಎಲ್‌ಡಿಎಫ್ 2014 ರಲ್ಲಿ ಪಡೆದುಕೊಂಡ ಶೇಕಡಾ ಮತಕ್ಕಿಂತ ಶೇ.4.90 ಮತ್ತು 2016 ರಲ್ಲಿ ಪಡೆದುಕೊಂಡ ಶೇ. ಮತಕ್ಕಿಂತ ಶೇ.8.29 ಮತಗಳನ್ನು ಕಡಿಮೆ ಪಡೆದಿ¨ವಯನಾಡಿನಲ್ಲಿ ರಾಹುಲ್‌ಗಾಂಧಿ (ಶೇ.64.81) ಮತ ಗಳಿಸಿದ್ದಾರೆ.
ಕಣ್ಣೂರಿನಲ್ಲಿ ಕೆ.ಸುಧಾಕರನ್(ಶೇ.50.22), ಮಲಪ್ಪುರದಲ್ಲಿ ಪಿ.ಕೆ.ಕುಂಞಾಲಿಕುಟ್ಟಿ(ಶೇ.57.14), ಪೊನ್ನಾನಿಯಲ್ಲಿ ಇ.ಟಿ.ಮುಹಮ್ಮದ್ ಬಶೀರ್(ಶೇ.51.32), ಆಲತ್ತೂರಿನಲ್ಲಿ ರಮ್ಯಾ ಹರಿದಾಸ್(ಶೇ.52.36), ಎರ್ನಾಕುಲಂನಲ್ಲಿ ಹೈಬಿ ಈಡನ್(ಶೇ.50.87), ಇಡುಕ್ಕಿಯಲ್ಲಿ ಡೀನ್ ಕುರ್ಯಾಕೋಸ್(ಶೇ.54.33), ಕೊಲ್ಲಂನಲ್ಲಿ ಎನ್.ಕೆ.ಪ್ರೇಮಚಂದ್ರನ್ (ಶೇ.51.95) ಚಲಾವಣೆಯಾದ ಒಟ್ಟು ಮತಗಳಿಗಿಂತ ಶೇ.50ಕ್ಕಿಂತ ಹೆಚ್ಚು ಮತಗಳನ್ನು ಪಡೆದಿದ್ದಾರೆ.
ಶೇಕಡಾ ಮತದಾನದಲ್ಲಿ ಬಹಳಷ್ಟು ಅಂತರ
ವಯನಾಡಿನಲ್ಲಿ ಪಿ.ಪಿ.ಸುನೀರ್(ಶೇ.25.19), ತಿರುವನಂತಪುರದಲ್ಲಿ ಸಿ.ದಿವಾಕರನ್(ಶೇ.25.76) ಶೇ.30 ಕ್ಕಿಂತ ಕಡಿಮೆ ಪಡೆದ ಎಡರಂಗದ ಅಭ್ಯರ್ಥಿಗಳಾಗಿದ್ದಾರೆ. ಇವರಲ್ಲಿ ಸಿ.ದಿವಾಕರನ್ ತೃತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಕಳೆದ ಬಾರಿಯೂ ತಿರುವನಂತಪುರ ಲೋಕಸಭಾ ಕ್ಷೇತ್ರದಲ್ಲಿ ಸಿಪಿಐ ಅಭ್ಯರ್ಥಿ ಬೆನ್ನಟ್ ಅಬ್ರಹಾಂ ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು ಈ ಹಿಂದಿನ ಎಲ್ಲಾ ಚುನಾವಣೆಗಳಲ್ಲಿ ಈ ಎರಡು ಒಕ್ಕೂಟಗಳ ಮಧ್ಯೆ ಮತ ಹಂಚಿಕೆಯಲ್ಲಿ ಕೇವಲ ವ್ಯತ್ಯಾಸ ಕಂಡು ಬಂದಿತ್ತು. ಆದರೆ ಈ ಬಾರಿ ಈ ಎರಡು ಒಕ್ಕೂಟಗಳ ಮಧ್ಯೆ ಶೇಕಡಾ ಮತದಾನ ಬಹಳಷ್ಟು ಅಂತರ ಕಂಡು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.