ಮಂಡ್ಯಾ ಟು ಇಂಡಿಯಾ ಮೋದಿ ಮೇನಿಯಾ ಕೈ ಸೈತ ಅದರ್ಸ್‌ ವಾಶ್ಡ್ ಔಟ್…


Team Udayavani, May 26, 2019, 6:00 AM IST

ank

ಚೇರ್ಮನ್ರು: ಏನ್ಲಾ ಆಮಾಸೆ ಆಳೆ ಕಾಣೆ

ಅಮಾಸೆ: ಶ್ಯಾನೆ ಬೇಸ್ರ ಆಗೈತೆ ಬುಡಿ ಸಾ

ಚೇರ್ಮನ್ರು: ಯಾಕ್ಲಾ ಏನಾಯ್ತಲಾ

ಅಮಾಸೆ: ಎಂಪಿ ಎಲೆಕ್ಸನ್‌ ರಿಸಲ್ಟಾ ಬಂದ್‌ಮ್ಯಾಕೆ ಅತ್ಲಾಗೆ ಖರ್ಗೆ ಸಾಹೇಬ್ರು ಗೆಲ್ಲಿಲ್ಲ, ಇತ್ಲಾಗೆ ದ್ಯಾವೇಗೌಡ್ರು ಗೆಲ್ಲಿಲ್ಲ. ಎಲ್ಲಾ ಉಲಾr -ಪಲಾr ಆಗೋಯ್ತು

ಚೇರ್ಮನ್ರು: ಕೈ -ತೆನೆ ಕೂಡ್ಕೆ ಆದ್ರೆ ಟ್ವೆಂಟಿ ಗ್ಯಾರಂಟಿ ಅಂತ ಹೇಳ್ತಿದ್ರಲ್ಲಾ

ಅಮಾಸೆ: ಅಯ್ಯೋ ಅಂಗೇಳ್‌ದೇಟ್‌ಗೆ ಎಲ್ಲಾ ಕಡ್ಕೆ ಬಗ್ನಿ ಗೂಟ ಇಟ್ಟಿದ್ರಂತೆ

ಚೇರ್ಮನ್ರು: ಯಾರ್ಗೆ ಯಾರ್‌ ಬಗ್ನಿ ಗೂಟ ಇಟ್ಟಿದ್ರ್ಲಾ

ಅಮಾಸೆ: ಕೈ ಪಕ್ಸ ಕ್ಯಾಂಡೇಟ್ ಇರೋ ಕಡೆ ತೆನೆ ಪಕ್ಸ್‌ ದೋರು, ತೆನೆ ಪಕ್ಸ ಕ್ಯಾಂಡೇಟ್ ಇರೋ ಕಡೆ ಕೈ ಪಕ್ಸ್‌ದೋರು ಮಾಂಜಾ ಕೊಟ್ಟವ್ರೆ. ಅಂದರ್‌ಕಿ ಬಾತ್‌ ಬೇರೇನೇ ಐತೆ ಬುಡಿ

ಚೇರ್ಮನ್ರು: ಅಂಗಿದ್ರೆ ಕೂಡ್ಕೆ ಯಾಕ್ಲಾ ಮಾಡ್ಕೋಬೇಕಿತ್ತು

ಅಮಾಸೆ: ಸಿದ್ರಾಮಣ್ಣೋರು ಫ್ರೆಂಡ್ಲಿ ಫೈಟ್ ಮಾಡೋಣಾ ಅಂತ ಹೇಳಿದ್ರಂತೆ, ಆದ್ರೆ ರಾಹುಲ್ ಸಾಹೇಬ್ರು ದ್ಯಾವೇಗೌಡ್ರು ಹೇಳವ್ರೆ ನಾವಿಬ್ರೂ ಸೇರಿದ್ರೆ ಕಮ್ಲ ಪಕ್ಸ ಟೆನ್‌ ದಾಟಲ್ಲ ಅಂತ. ಸಿದ್ದಾರಮಯ್ನಾಜಿ ಪ್ಲೀಸ್‌ ಕೋ ಆಪರೇಟ್ ಅಂದ್ರಂತೆ. ಅದ್ಕೆ ಆಯ್ತು ಬುಡಿ, ನಮ್‌ ದೇವ್ರ ಸತ್ಯ ನಂಗೊತ್ತಿಲ್ವಾ, ನಿಮ್ಕೂ ರಿಸಲ್r ಬಂದ್‌ಮ್ಯಾಗೆ ಗೊತ್ತಾಯ್ತದೆ ಅಂತ ಒಪ್ಪಿದ್ರಂತೆ

ಚೇರ್ಮನ್ರು: ಒಪ್ಪಿದ್‌ಮ್ಯಾಕೆ ಉಲಾr ಮಾಡ್‌ಬಾರ್ದಲ್ವೆ

ಅಮಾಸೆ: ಒಪ್‌ಕೊಂಡಿದ್‌ ಇವ್ರಲ್ವೇ ಅದ್ಕೆ ಲೋಕಲ್ನ್ಯಾಗೆ ಲೀಡ್ರುಗ್ಳು ಕೈ ಕೊಟ್ರಂತೆ

ಚೇರ್ಮನ್ರು:ಮೈಸೂರ್‌ನ್ಯಾಗೆ, ಮಂಡ್ಯದಾಗೆ, ಕೋಲಾರ್‌ -ಚಿಕ್‌ಬಳ್ಳಾಪುರ್‌ದಾಗೆ, ತುಮ್‌ಕೂರ್‌ದಾಗೆ ಕೈ-ತೆನೆ ಎಂಎಲ್ಎಗ್ಳು ಇದ್ರೂ ಉಲಾr ಆಗೈತೆ

ಅಮಾಸೆ: ತುಮ್ಕೂರ್‌ನ್ಯಾಗೆ ರಾಜಣ್ಣ ಗುನ್ನಾ, ಮಂಡ್ಯಾದಾಗೆ ಚೆಲುವಣ್ಣಾ, ನರೇಂದ್ರಸಾಮ್‌ಗ್ಳು ಗುನ್ನ, ಕೋಲಾರ್‌ನ್ಯಾಗೆ ಕೈ-ತೆನೆ ಎಂಎಲ್ಎಗ್ಳು ಹೋಲ್ಸೇಲ್ ಬಾಯ್‌ಕಾಟ್,ಕಲ್ಬುರ್ಗಿನಾಗೆ ಮಾಲೀಕಯ್ಯ, ಚಿಂಚನ್‌ಸೂರ್‌ ಸೇರಿ ಪ್ರಿಯಾಂಕ್‌ ಮ್ಯಾಗೆ ಇದ್ದ ಕ್ವಾಪಾನಾ ಖರ್ಗೆ ಸಾಹೇಬ್ರ ಮ್ಯಾಲೆ ತೋರ್ಸಿದ್ರಂತೆ

ಚೇರ್ಮನ್ರು: ಸಿದ್ರಾಮಣ್ಣೋರ್‌ ನೇಟಿವ್‌ ಮೈಸೂರ್‌ನಾಗೆ ಯಾಕ್ಲಾ ಕೂಡ್ಕೆ ಸಕ್ಸಸ್‌ ಆಗ್ಲಿಲ್ಲ

ಅಮಾಸೆ: ಅಯ್ಯೋ, ಓಟಿಂಗ್‌ ಆಯ್ತ್ಲೇ ಜಿಟಿ ಸಾಹೇಬ್ರು ಹೇಳಿಲ್ವೆ, ನಮ್‌ ಕಡೆ ತೆನೆ ಲೀಡ್ರುಗ್ಳು ಕಮ್ಲ ಹಿಡಿದ್‌ಬಿಟ್ರಾ ನಾವೇನೂ ಮಾಡಾಕಾಗಿಲ್ಲಾ ಅಂತ

ಚೇರ್ಮನ್ರು: ಹಾಸ್ನದಾಗೆ ಮಾತ್ರ ಸರಿಹೋಯ್ತು ಅನ್ನು

ಅಮಾಸೆ: ರೇವಣ್ಣೋರು ನಿಂಬೆಹಣ್‌ ಹಿಡ್ಕಂಡು ಕೈ ಲೀಡ್ರುಗ್ಳ ಮನೆಗಂಟಾ ಹೋಗಿ ಏನೇ ಇದ್ರು ಹೊಟ್ಟೆಗಾಕ್ಕೊಳಿ, ನಿಮ್‌ ಹುಡ್ಗ ಅಂತ ಆಸೀರ್ವಾದ ಮಾಡಿ ಅಂತ ಕಾಲಿಗ್‌ ಬೀಳ್ಸಿದ್ರಂತೆ ಅದ್ಕೆ ಪಿಲಾನು ವರ್ಕ್‌ಔಟ್ ಆಯ್ತು

ಚೇರ್ಮನ್ರು: ಮಂಡ್ಯದಾಗೂ ಅಂಗೇ ಮಾಡ್ಬೇಕಿತ್ತಲ್ವಾ

ಅಮಾಸೆ: ತಮ್ಮಣೋರು, ಪುಟ್ಟರಾಜಣ್ಣೋರು, ಸಾ.ರಾ.ಮಹೇಸಣ್ಣೋರು ಡೋಂಟ್ ವರಿ ಅಂತ ಹಾಮಿ ಕೊಟ್ಟಿದ್ರಂತೆ ಅದ್ಕೆ ಕುಮಾರಣ್ಣೋರು ಯಾಮಾರೋದ್ರಂತೆ

ಚೇರ್ಮನ್ರು: ತುಮ್ಕೂರ್‌ನ್ಯಾಗೆ ರಾಜಣ್ಣೋರ್ಗೆ ತಂಡಾ ಮಾಡ್‌ಬೇಕಿತ್ತಲ್ವೇ

ಅಮಾಸೆ: ಅಲ್ಲಿ ಪರಮೇಸ್ವರಣ್ಣೋರು ನೀವೇನ್‌ ಟೆನ್ಸನ್‌ ಮಾಡ್ಕೋಬೇಡಿ ಗೌಡ್ರೆ ನಾನಿದ್ದೀನಿ, ರಾಜಣ್ಣ ಕೈ ಕೊಟ್ರಾ ನಮ್ದೇ ಕಪ್ಪು ಅಂತ ಹಲ್ವಾ ಕೊಟ್ಟಿದ್ರಂತೆ. ಗೌಡ್ರು ಗೆದ್ರೆ ನಾನ್‌ ಸಿಎಂ ಆಯ್ತೀನಿ ಅಂತಾನೂ ಎಲ್ರುಕೂ ಹೇಳಿದ್ರಂತೆ

ಚೇರ್ಮನ್ರು: ಓ ಅದ್ಕೆ ಅಲ್ಲೇನೋ ಕಮಾಲ್ ಆಗೈತೆ ಬುಡು, ಪರಮೇಸ್ವರಣ್ಣೋರು ಚಿಂಚೋಳಿಗೂ ಇನ್‌ಚಾರ್ಜ್‌ ಆಗಿದ್ರಂತೆ, ಅಲ್ಲೂ ಹೊಗೆ ಪ್ರೋಗ್ರಾಂ ಆಗೈತೆ

ಅಮಾಸೆ: ತುಮ್ಕೂರ್‌ನ್ಯಾಗೆ ಓವರ್‌ ಕಾನ್ಫಿಡೆನ್ಸ್‌, ಚಿಂಚೋಳಿನಾಗೂ ಓವರ್‌ ಕಾನ್ಫಿಡೆನ್ಸ್‌ ಎಲ್ಡೂ ಕಡೆ ಗೆದಿತೀವಿ ಅಂತ ಪರಮೇಸ್ವರಣ್ಣೋರು ಹೇಳಿದ್ರು ಆದ್ರೆ ದ‌ಬ್ಟಾಕೊಂಡ್ರು

ಚೇರ್ಮನ್ರು: ಒಟ್ನ್ಯಾಗೆ ಎಂಪಿ ಎಲೆಕ್ಸನ್‌ನ್ಯಾಗೆ ಕೈ-ತೆನೆ ಓನ್ಲಿ ಒನ್‌ ಆಗೋತಲ್ಲೋ

ಅಮಾಸೆ: ಹೌದೇಳಿ, ಮಂಡ್ಯ ಟು ಇಂಡಿಯಾ ಮೋದಿ ಮೆನಿಯಾ, ಕೈ ಸೈತ ಆದರ್ಸ್‌ ವಾಶ್ಡ್ ಔಟ್ ಆಗೋದ್ರು

ಚೇರ್ಮನ್ರು: ಮಂಡ್ಯದಾಗೆ ಸುಮಲತಾ ಮೇಡಂಗೆ ಆ ಪಾಟಿ ಲೀಡ್‌ ಸಿಕ್ಕೋಯ್ತಲ್ಲಾ

ಅಮಾಸೆ: ಎಲ್ಲಾ ಸಿವ್‌ರಾಮೇಗೌಡ್ರು ಪ್ರಸಾದಾ. ಆವಪ್ಪಾ ಸುಮ್ಕೆ ಇದ್ದಿದ್ರೆ ಸರ್‌ ಹೋಗ್‌ತಿತ್ತೂ, ಗೌಡ್ತಿ ಅಲ್ಲ, ಮಾಯಾಂಗ್ನೆ ಅಂತೆಲ್ಲಾ ಮಾತಾಡಿದ್ರಲ್ಲಾ ಅದ್ಕೆ ಉಲಾr ಐತಂತೆ. ಮೋದಿ ಮೈಸೂರ್‌ನ್ಯಾಗೆ ಮಿತ್ರೋ ಸುಮಲತಾ ಅಂಬರೀಷ್‌ಕೋ ಜಿತಾದೋ ಅಂತಾನೂ ಫ‌ರ್ಮಾನ್‌ ಕೊಟ್ರಲ್ವೆ

ಚೇರ್ಮನ್ರು: ಅದ್ಯಾಕ್ಲಾ ಪ್ರಜ್ವಲ್ಲು ರಾಜೀನಾಮೆ ಕೊಡ್ತೀನಿ ಅಂದವ್ರಂತೆ

ಅಮಾಸೆ: ಗೌಡ್ರು ಜತೆ ಪಾರ್ಲಿಮೆಂಟ್ಗೆ ಹೋಗ್ಬೇಕು ಅಂತ ಇದ್ರು, ಗೌಡ್ರು ಸೋತ್ರೆ ಇನ್ಯಾರ ಜತೆ ಹೋಗೋದು ಅಂತ, ರಾಜಿನಾಮೆ ಕೊಡ್ತೀನಿ, ಗೌಡ್ರು ಹಾಸ್ನದಿಂದ್ಲೇ ಎಲೆಕ್ಸನ್‌ ನಿಂತು ಗೆಲ್ಲಿ ಅಂದ್ರಂತೆ, ಆದ್ರೆ ದೇವೇಗೌಡ್ರು ಅಂಗೆಲ್ಲಾ ಹೇಳ್‌ಬೇಡ ಹೋಗಪ್ಪಾ ಅಂತ ಹೇಳಿದ್ರಂತೆ

ಚೇರ್ಮನ್ರು: ಎಂಪಿ ರಿಸಲ್ಟಾ ನೋಡಿ ಕಮ್ಲ ಪಕ್ಸ್‌ದೋರು ಸಮ್ಮಿಸ್ರ ಸರ್ಕಾರ್ಕೆ ಗುನ್ನಾ ಇಡ್ತಾರಂತೆ ಹೌದೇನ್ಲಾ

ಅಮಾಸೆ: ಆಪರೇಸನ್‌ ಮಾಡ್ತೀವಿ ಅಂದ್ರಂತೆ, ಅದ್ಕೆ ಅಮಿತ್‌ ಸಾ ಅಣ್ಣೋರು, ಚುಪ್‌ ಬೈಟೋ, ಮೈ ಜಬ್‌ ಬೋಲ್ತಾ ಹೂಂ ತಬ್‌ ಆಪರೇಸನ್‌ ಕರೋ, ಪೇಸೆಂಟ್ಸ್‌ ಕಿತನೇ ಹೈ ಮುಜೆ ದಿಕಾವ್‌ ಅಂದ್ರಂತೆ

ಚೇರ್ಮನ್ರು: ಆಪರೇಸನ್‌ ಆಗ್‌ತೈತಾ

ಅಮಾಸೆ: ಟೆನ್‌ ಪೇಶೆಂಟ್ಸ್‌ ಸಿಕ್ರೆ ಆಯ್ತದಂತೆ

ಚೇರ್ಮನ್ರು: ಸಮ್ಮಿಸ್ರ ಸರ್ಕಾರ್‌ಕೆ ಹೊಗೆ ಪ್ರೋಗ್ರಾಮಾ?

ಅಮಾಸೆ: ಅಂಗೆಲ್ಲಾ ಆಗಲ್ವಂತೆ. ಕ್ಯಾಬಿನೆಟ್ ಕರ್ಧು ಎಲ್ರೂ ಕುಮಾರಣ್ಣೋರ್‌ ಮ್ಯಾಗೆ ಇಸ್ವಾಸ ಇಟ್ಕೊಂಡವ್ರೆ ಅಂತ ಪರಮೇಸ್ವರಣ್ಣೋರು ಹೇಳವ್ರೆ, ಜೆಡಿಎಲ್ಪಿನ್ಯಾಗೆ ಅಣ್ಣಾ ನೀವೇ ನಮ್‌ ಸಿಎಂ ಅಂತ ರೆಸ್ಯುಲೂಸನ್‌ ಮಾಡವ್ರೆ

ಚೇರ್ಮನ್ರು: ಸಿದ್ರಾಮಣ್ಣೋರು ಏನಂದ್ರಂತೆ

ಅಮಾಸೆ: ಅವ್ರು ನೋ ಪ್ರಾಬ್ಲಿಂ ಅಂತ ಹೇಳವ್ರಂತೆ. ಅದು ಯಾರ್ಕೆ ಅನ್ನೋದ್‌ ಕೈ ಪಕ್ಸ್‌ದೋರ್ಗೆ ಟೆನ್ಸನ್ನು

ಚೇರ್ಮನ್ರು: ಅಂಗಾದ್ರೆ ಏನಾಯ್ತದೆ

ಆಮಾಸೆ: ಕುಮಾರಣ್ಣೋರೇ ರಾಹುಲ್ಗೆ ಫೋನ್‌ ಮಾಡಿ, ಎಂಪಿ ರಿಸಲ್ನಿಂದ ನನ್ಗೆ ಫೀಲ್ ಆಗೈತೆ . ನನ್ಗೆ ಸಿಎಂ ಬ್ಯಾಡ, ಕೈಗೆ ಬಿಟ್ಕೊಡ್ತೀನಿ ಅಂತ ಮೊದ್ಲೇ ಹೇಳ್‌ಬಿಟ್ರಂತೆ. ಅದ್ಕೆ ರಾಹುಲ್ ಅಣ್ಣೋರು ಏನ್‌ ಹೇಳ್ಬೇಕು ಅಂತಾ ತೋಚ್ದೆ, ತುಮ್‌ ಫಿಕರ್‌ ನಹಿ ಕರೋ, ಮೈ ಸಿದ್ದಾರಾಮಯ್ನಾಜಿಸೇ ಬಾತ್‌ ಕರ್ತಾ ಹೂಂ ಅಂದ್ರತೆ

ಚೇರ್ಮನ್ರು: ಅಂಗಾರೆ ನೋ ಆಪ್‌ರೇಸನ್ನಾ

ಅಮಾಸೆ : ಅಂಗಂತಾ ಕುಮಾರಣ್ಣೋರು ಅಂದ್‌ಕಂಡವ್ರೆ. ಸಿದ್ರಾಮಣ್ಣೋರ್‌ ಏನ್‌ ಮಾಡ್ತಾರೋ , ಮೈಸೂರ್‌ನ್ಯಾಗೆ ಸೋತಿದ್ಕೆ ವಿಸ್ವನಾಥ್‌ನಾ – ಜಿಟಿಡಿನಾ ತೆಗ್ಧಾಕಿ, ತುಮ್ಕೂರ್‌ನ್ಯಾಗೆ ಸೋತಿದ್ಕೆ ನಾವ್‌ ಪರಮೇಸ್ವರ್‌ನಾ ತೆಗ್ಗ್ದಾಕ್ತೀವಿ ಅಂತ ಗೇಮ್‌ ಪಿಲಾನ್‌ ಮಾಡಿ ಇರೋದಿಗ್ಳನಾ ಮಕಾಡೆ ಮಲ್ಗಸಿದ್ರೆ ಏನ್‌ ಮಾಡ್ತೀರಿ. ಆದ್ರೂ, ಕಮ್ಲ ಪಕ್ಸ್‌ದೋರು ಬಾಗ್ಲು ತೆಗ್ದು ಕುಂತವ್ರೆ. ಕೈ-ತೆನೆ ಎಂಎಲ್ಎಗ್ಳು ಹೋದ್ರೆ ಆಪರೇಸನ್‌ ಆಯ್ತದೆ, ಇಲ್ಲಾಂದ್ರೆ ಇನ್ನೊಂದ್‌ ಸ್ವಲ್ಪ ದಿನಾ ಇಂಗೇ ತಳ್ಳಿ ಆಮ್ಯಾಗೆ ಅಸೆಂಬ್ಲಿ ಡಿಸಾಲ್ವ್ ಮಾಡಿ ಎಲೆಕ್ಸನ್‌ಗೆ ಹೋಗ್‌ಬೋದು ಅಂತಾನೂ ಹೇಳ್ತಾವ್ರೆ. ನೋಡುಮಾ ಏನ್‌ಆಯ್ತದೆ ನನ್‌ ಹೆಂಡ್ರು ಮಟನ್‌ ತತ್ತಾ ಅಂತಾ ಹೇಳವ್ರೆ ಬತ್ತೀನಿ ಸಾ….

-ಎಸ್‌.ಲಕ್ಷ್ಮಿನಾರಾಯಣ

ಟಾಪ್ ನ್ಯೂಸ್

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

1-ct

C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

23-mandya

Akhila Bharata Kannada Sahitya Sammelana: ಹಚ್ಚೇವು ಕನ್ನಡದ ದೀಪ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-cbl

Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Sullia: ಅಸೌಖ್ಯದಿಂದ ಮಹಿಳೆ ಸಾವು

Sullia: ಅಸೌಖ್ಯದಿಂದ ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.