ಮತಾಂತರ ಧರ್ಮ ಒಡೆಯುವ ಕೆಲಸವೇ?
Team Udayavani, May 26, 2019, 3:04 AM IST
ಬೆಂಗಳೂರು: ಬುದ್ಧ ಹಾಗೂ ಮಹಾವೀರರು ಕೂಡ ಮೊದಲು ಹಿಂದೂ ಧರ್ಮದಲ್ಲಿದ್ದು, ಆನಂತರ ಪ್ರತ್ಯೇಕ ಧರ್ಮ ರಚಿಸಿಕೊಂಡವರು. ಅಂದ ಮಾತ್ರಕ್ಕೆ ಅದು ಧರ್ಮ ಒಡೆಯುವ ಕೆಲಸವೇ? ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಪ್ರಶ್ನಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶನಿವಾರ ನಡೆದ “ಸಾಧಕರೊಡನೆ ಸಂವಾದ’ ಕಾರ್ಯಕ್ರಮದಲ್ಲಿ ವೀರಶೈವ-ಲಿಂಗಾಯತ ಧರ್ಮದ ಪ್ರತ್ಯೇಕತೆಗೆ ನ್ಯಾಯಾಂಗ ಸಹಮತ ನೀಡಿತ್ತು ಎಂಬ ಸಭಿಕರೊಬ್ಬರು ಕೇಳಿದ ಪ್ರಶ್ನೆಗೆ ಕುರಿತು ಮಾತನಾಡಿ ಅವರು, ಶತಮಾನಗಳಿಂದ ಹಲವು ಹಿಂದೂಗಳು ಮುಸಲ್ಮಾನರು, ಪಾರ್ಸಿ, ಕ್ರೈಸ್ತ ಧರ್ಮಗಳಿಗೆ ಮತಾಂತರಗೊಂಡಿದ್ದಾರೆ. ಸಿಖ್ಖರೂ ಕೂಡಾ ಹಿಂದೂಗಳೇ ಆಗಿದ್ದರು ಎಂದು ಹೇಳಿದರು.
ಈ ಹಿಂದೆ ಮತಾಂತರವಾಗುವಾಗ ಏಕೆ ಧರ್ಮ ಒಡೆದ ಮಾತು ಕೇಳಿ ಬರಲಿಲ್ಲ. ಈಗ ವೀರಶೈವ – ಲಿಂಗಾಯತ ಪ್ರತ್ಯೇಕತೆ ಕುರಿತು ಮಾತ್ರ ಪ್ರಶ್ನಿಸುತ್ತಾರೆ. ಪ್ರತ್ಯೇಕ ಧರ್ಮ ಕುರಿತು ಸರ್ಕಾರ ನೀಡಿದ ವರದಿಯನ್ನು ಯಾರೂ ಓದಿಯೇ ಇಲ್ಲ. ಇದಕ್ಕೆ ಕಾರಣ ನ್ಯಾಯಾಲಯ ನೀಡಿದ ವರದಿ ಸರ್ಕಾರದ ಕೈ ಸೇರಿದ ಕೂಡಲೇ ಅದರ ನಕಲು ಯಾರಿಗೂ ಸಿಗಲಿಲ್ಲ. ಹೀಗಾಗಿ, ಮಾಧ್ಯಮಗಳಲ್ಲಿ ಬಂದ ಸುದ್ದಿ ಆಧರಿಸಿ ಮಾತನಾಡುತ್ತಿದ್ದಾರೆ ಇದು ಸರಿಯಲ್ಲ ಎಂದರು.
ವರದಿಯನ್ನು ರಾಜಕಾರಣ ಬಿಟ್ಟು ವಸ್ತು ನಿಷ್ಠತೆಯಿಂದ ನೋಡಬೇಕು. ಯಾರು ಬಸವಣ್ಣನವರನ್ನು ಗುರು ಎಂದು ಒಪ್ಪಿ ಅವರ ವಚನಗಳನ್ನು ಅನುಸರಿಸುತ್ತಾರೋ ಅವರೆಲ್ಲರೂ ಬಸವಾದಿ ಶರಣರೇ ಆಗಿದ್ದಾರೆ. ಲಿಂಗಾಯಿತರು ಧಾರ್ಮಿಕ ಅಲ್ಪಸಂಖ್ಯಾತರು ಎಂದು ವರದಿ ನೀಡಲಾಗಿದೆ.
ಅನ್ಯ ಧರ್ಮವನ್ನು ಗೌರವಿಸುವುದರೊಂದಿಗೆ ಸಹನೆ, ತಾಳ್ಮೆಯಿಂದ ಜೀವಿಸಿದರೆ ಬಹುತ್ವದ ರಕ್ಷಣೆಯಾಗಲಿದೆ. ಯಾವುದೇ ರಾಜಕೀಯ ಪಕ್ಷಗಳು ಅ ಕಾರಕ್ಕೆ ಬಂದರೂ ಸಂವಿಧಾನದ ಪ್ರಕಾರ ನೆಡೆದುಕೊಳ್ಳುತ್ತಿಲ್ಲ. ಹೀಗಾಗಿ, ಜನರ ಸಮಸ್ಯೆಗಳು ಬಗೆಹರಿಯುತ್ತಿಲ್ಲ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
ನಮ್ಮಲ್ಲಿಗೆ ಬಂದರೆ ಇಸ್ರೇಲ್ ಪ್ರಧಾನಿ ಬಂಧನ: ಬ್ರಿಟನ್!
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.