ಸವಾಲುಗಳ ಮಧ್ಯೆ ಚುನಾವಣೆ ಕಾರ್ಯ ಯಶಸ್ವಿ
Team Udayavani, May 26, 2019, 6:00 AM IST
ಲೋಕಸಭಾ ಚುನಾವಣೆಯಲ್ಲಿ ಮತದಾನ-ಮತ ಎಣಿಕೆ ಸಹಿತ ಎಲ್ಲ ಹಂತಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳ ತಂಡ ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದೆ. ಈ ಬಾರಿಯ ಚುನಾವಣೆಯನ್ನು ಯಶಸ್ವಿಯಾಗಿ ನಡೆಸುವಲ್ಲಿ ಮುಖ್ಯ ನೆಲೆಯಲ್ಲಿ ಕೆಲಸ ಮಾಡಿದವರು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್. ಈ ಕುರಿತಂತೆ ಉದಯವಾಣಿ ಸುದಿನ ಜತೆಗೆ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.
ಲೋಕಸಭಾ ಚುನಾವಣೆಯ ಯಶಸ್ವಿ ನಿರ್ವಹಣೆ ಬಗ್ಗೆ ತಮ್ಮ ಅಭಿಪ್ರಾಯವೇನು?
ಬಿಎಲ್ಒಗಳಿಂದ ಆರಂಭವಾಗಿ ಎಲ್ಲ ಹಂತದ ಅಧಿಕಾರಿಗಳ ತಂಡದ ಉತ್ತಮ ಕಾರ್ಯರಚನೆಯ ಮೂಲಕವಾಗಿ ಚುನಾವಣೆ ಯಶಸ್ವಿಯಾಗಿದೆ. ಮತ ದಾರರು ಹಾಗೂ ಪಕ್ಷಗಳ ನಾಯಕರು ಕೂಡ ಚುನಾವಣೆಯ ಯಶಸ್ವಿಯಲ್ಲಿ ಕೈಜೋಡಿಸಿದ್ದಾರೆ. ಪ್ರಜಾಪ್ರಭುತ್ವದ ಹಬ್ಬವಾಗಿ ಚುನಾವಣೆ ನಡೆದಿರುವುದರಿಂದ ತುಂಬ ಸಂತೋಷವಾಗುತ್ತಿದೆ.
ಚುನಾವಣೆಯ ಮಧ್ಯೆ ನಗರದಲ್ಲಿ ವಿವಿಧ ಸಮಸ್ಯೆಗಳು ಎದುರಾಗಿರುವುದನ್ನು ಹೇಗೆ ನಿಭಾಯಿಸಿದಿರಿ ?
ಚುನಾವಣೆ ಎದುರಾದಾಗ ಹೊಸ ಯೋಜನೆಗೆ ಅವಕಾಶವಿರದಿದ್ದರೂ, ಜಾರಿಗೆಗೊಂಡಿದ್ದ ಕಾಮಗಾರಿ ಮುಂದುವರಿಸಲು ತೊಂದರೆ ಇರಲಿಲ್ಲ. ಆದರೆ, ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ದೊಡ್ಡ ಸವಾಲಾಗಿರುವುದರಿಂದ ವಿಶೇಷ ಒತ್ತು ನೀಡಬೇಕಾಯಿತು. ಜತೆಗೆ, ಮಳೆಗಾಲ ಎದುರಿಸಲು ರಾಜಕಾಲುವೆಯ ಹೂಳು ತೆಗೆಯುವ ಕಾರ್ಯ ಕೂಡ ನಡೆಸಲಾಗಿದೆ. ಸಮರ್ಥ ಅಧಿಕಾರಿಗಳ ತಂಡವಿದ್ದಾಗ ಇದು ಸಾಧ್ಯವಾಗುತ್ತದೆ.
ಈ ಬಾರಿಯ ಚುನಾವಣೆ ಎದುರಿ ಸುವ ಸಂದರ್ಭ ಎದುರಾಗಿದ್ದ ಸವಾಲುಗಳು, ಉಲ್ಲೇಖನೀಯ ಸಂಗತಿ ಯಾವುದು?
ಬೇರೆ ಬೇರೆ ರೀತಿಯಲ್ಲಿ ಸವಾಲು ಇದ್ದರೂ ಅದನ್ನು ಹೇಳುವಂತಿಲ್ಲ. ಆಯಾ ಸಂದರ್ಭಕ್ಕೆ ಅನುಗುಣವಾಗಿ ಸವಾಲನ್ನು ನಿಭಾಯಿಸಲಾಗಿದೆ. ಸವಾಲುಗಳ ಮಧ್ಯೆಯೇ ಚುನಾವಣೆ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ.
ಉಳಿದಂತೆ ಮತಗಟ್ಟೆಯಲ್ಲಿ ಅಧಿಕಾರಿಗಳಿಗೆ ಊಟ-ತಿಂಡಿ ಸಹಿತ ಸೂಕ್ತ ವ್ಯವಸ್ಥೆ ಮಾಡಿದ ಕಾರಣದಿಂದ ಮತದಾನವಾದ ಬಳಿಕ ಕೆಲವು ಅಧಿಕಾರಿಗಳು ನನ್ನ ಬಳಿಗೆ ಬಂದು ಶುಭ ಕೋರಿದ್ದಾರೆ. ಅದು ಖುಷಿಯಾಗಿದೆ. ಜತೆಗೆ ವಿವಿಧ ಶ್ರೇಣಿಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ರಾತ್ರಿಯೆಲ್ಲ ಮನೆಗೆ ಹೋಗದೆ ಚುನಾವಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇದು ಉಲ್ಲೇಖನೀಯ ಸಂಗತಿ.
ಜಿಲ್ಲೆಯಲ್ಲಿ ಈ ಬಾರಿ ಮತದಾನದ ಪ್ರಮಾಣದಲ್ಲಿಯೂ ಏರಿಕೆಯಾಗಿ ರು ವುದಕ್ಕೆ ಏನನ್ನಿಸುತ್ತದೆ?
ಜಿಲ್ಲೆಯ ಮತದಾರರು ವಿಶೇಷ ಆದ್ಯತೆ ನೆಲೆಯಲ್ಲಿ ಮತದಾನದಿಂದ ಪ್ರಮಾಣದಲ್ಲಿ ಏರಿಕೆಯಾಗಿದೆ. ಮತದಾರರು ಜಿಲ್ಲಾಡಳಿತದ ಜತೆಗೆ ಕೈಜೋಡಿಸಿದ ಕಾರಣಕ್ಕಾಗಿ ಉತ್ತಮ ಮತದಾನವಾಗಿದೆ. ಮತದಾನ ಜಾಗೃತಿ ನಡೆಸಿದವರು, ಮಾಧ್ಯಮದವರ ಕಾರ್ಯ ಶ್ಲಾಘನೀಯ.
ಲೋಕಸಭಾ ಚುನಾವಣೆ ಮುಗಿದ ಕೆಲವೇ ತಿಂಗಳಿನಲ್ಲಿ ಮತ್ತೆ ಮಂಗಳೂರು ಪಾಲಿಕೆಗೆ ಚುನಾವಣೆ ಎದುರಾಗಲಿರುವ ಕಾರಣದಿಂದ ಸಿದ್ಧತೆ ಯಾವಾಗಿನಿಂದ ಆರಂಭವಾಗುತ್ತದೆ?
ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಮಹತ್ವದ ಕಾರ್ಯ. ಹೀಗಾಗಿ ಎಲ್ಲ ಶ್ರೇಣಿಯ ಚುನಾವಣೆ ಕೂಡ ಸಮಯದ ಗಡಿಯಲ್ಲಿ ಎದುರಾಗುತ್ತದೆ. ಸದ್ಯ ಪಾಲಿಕೆಯಲ್ಲಿ ಆಡಳಿತಾಧಿಕಾರಿ ಅಧಿಕಾರದಲ್ಲಿದ್ದಾರೆ. ಹೀಗಾಗಿ ಅವರು ಈ ಕುರಿತ ಜವಾಬ್ದಾರಿ ನಿಭಾಯಿಸಲಿದ್ದು, ಚುನಾವಣೆ ಆಯೋಗದ ಸೂಚನೆಯ ಪ್ರಕಾರ ಮುಂದಿನ ಹೆಜ್ಜೆಯಿಡಲಾಗುವುದು.
“ಎಲ್ಲ ಪಕ್ಷಗಳ ಶಿಸ್ತಿನ ಪ್ರಚಾರವೇ ವಿಶೇಷ’
ನಿಮ್ಮ ಪ್ರಕಾರ ದ.ಕ. ಜಿಲ್ಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಶಾಂತಿಯುತ ಚುನಾವಣೆಗೆ ಯಾವ ರೀತಿಯಲ್ಲಿ ಸ್ಪಂದಿಸಿವೆೆ?
ಜಿಲ್ಲೆಯ ವಿಶೇಷವೆಂಬಂತೆ ಎಲ್ಲ ಪಕ್ಷಗಳು ಅತ್ಯಂತ ಶಿಸ್ತಿನಿಂದ ಅವರವರ ಪಕ್ಷದ ಪ್ರಚಾರದಲ್ಲಿ ಭಾಗವಹಿಸುತ್ತಾರೆ. ಇದು ಬೇರೆ ಕಡೆಗಳಿಗೆ ಹೋಲಿಸಿದಾಗ ಅತ್ಯಂತ ಗಮನಾರ್ಹ ಸಂಗತಿ. ಚುನಾವಣೆ ಘೋಷಣೆಯಾದ ತತ್‌ಕ್ಷಣದಿಂದ ಇಲ್ಲಿನ ಎಲ್ಲ ರಾಜಕೀಯ ಪಕ್ಷದವರು ಜಿಲ್ಲಾಡಳಿತದ ಎಲ್ಲ ಕಾರ್ಯಯೋಜನೆಗಳಿಗೆ ಸೂಕ್ತ ಸ್ಪಂದನೆಯನ್ನು ನೀಡುತ್ತಾ ಬಂದಿದ್ದಾರೆ. ಹೀಗಾಗಿ ವಿಶೇಷ ಅಭಿಯಾನ ಕಾರ್ಯಕ್ರಮವನ್ನು ಮುಕ್ತವಾಗಿ ಮಾಡಲು ಸಾಧ್ಯವಾಗಿದೆ. ಬೇರೆ ಜಿಲ್ಲೆಯಲ್ಲಾದರೆ, ಆ ಪಕ್ಷದವರು ಜಿಲ್ಲಾಡಳಿತದ ಜತೆಗೆ ನಾವಿದ್ದೇವೆ ಎಂದು ಹೇಳುತ್ತ ಅವರು ಭಾಗವಹಿಸುವುದಿಲ್ಲ. ಆದರೆ, ದ.ಕ. ಜಿಲ್ಲೆ ಇದಕ್ಕೆ ಅಪವಾದ. ಜಿಲ್ಲಾಡಳಿತ ಹೇಳಿದ ಎಲ್ಲ ಸಂದರ್ಭದಲ್ಲಿ ಪಕ್ಷಗಳು ಪಾಲ್ಗೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.