ಶಾಸಕರ ಖರೀದಿ ಯತ್ನದ ಸುಳಿವು

ಶಾಸಕ ರಮೇಶ್‌, ಬಿಜೆಪಿ ಸಂಸದ ಜಾಧವ್‌ ಭೇಟಿ ಆತಂಕವಿಲ್ಲ: ಸಚಿವ ಕೃಷ್ಣಬೈರೇಗೌಡ

Team Udayavani, May 26, 2019, 1:10 PM IST

kolar-tdy-1..

ಕೋಲಾರದಲ್ಲಿ ಸಚಿವ ಕೃಷ್ಣಬೈರೇಗೌಡ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೋಲಾರ: ರಾಜ್ಯದ ಸಮ್ಮಿಶ್ರ ಸರ್ಕಾರ ಮಾಡಿದ ಜನಪರ ಕೆಲಸಗಳನ್ನು ಜನರಿಗೆ ತಿಳಿಸುವಲ್ಲಿ ಆದ ವೈಫ‌‌ಲ್ಯವೇ ಲೋಕಸಭಾ ಚುನಾವಣೆಯ ಹಿನ್ನಡೆಗೆ ಕಾರಣವಾಯಿತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರದಿದ್ದರೂ ಬಿಜೆಪಿ ಕಳೆದ 12 ತಿಂಗಳಿನಿಂದ ಸರ್ಕಾರ ಉರುಳಿಸಲು ವಾಮಮಾರ್ಗದ ಮೂಲಕ ಪ್ರಯತ್ನ ಮುಂದುವರಿಸಿದೆ. ಬಿಜೆಪಿ ಆಪರೇಷನ್‌ ಕಮಲದ ನಿರಂತರ ಪ್ರಯತ್ನ ವಿಫಲಗೊಳಿಸಿದ್ದೇವೆ, ಶಾಸಕರನ್ನು ಹಣ ಕೊಟ್ಟು ಖರೀದಿಸಿ ಸರ್ಕಾರ ಕೆಡವಲು ನಡೆಸುವ ಪ್ರಯತ್ನ ಈಗಲೂ ಮುಂದುವರಿದಿರುವ ಸುಳಿವು ನಮಗೆ ಸಿಕ್ಕಿದೆ ಎಂದು ಹೇಳಿದರು.

ಜಾಧವ್‌ ಭೇಟಿ ಮಾಡಿದ್ದಕ್ಕೆ ಆತಂಕವಿಲ್ಲ: ಬಿಜೆಪಿ ನಡೆಸಿರುವ ಆಪರೇಷನ್‌ ಕಮಲದ ಎಲ್ಲಾ ಪ್ರಯೋಗಗಳನ್ನು ಕಳೆದ 12 ತಿಂಗಳಿಂದ ಮೆಟ್ಟಿ ನಿಂತಿದ್ದೇವೆ. ಶಾಸಕ ರಮೇಶ್‌ ಜಾರಕಿಹೊಳಿ ಬಿಜೆಪಿ ಸಂಸದ ಉಮೇಶ್‌ ಜಾಧವ್‌ ಅವರನ್ನು ಭೇಟಿ ಮಾಡಿದ್ದಕ್ಕೆ ನಮಗೆ ಆತಂಕವೇನೂ ಇಲ್ಲ.

ಅವರ ಎಲ್ಲಾ ಪ್ರಯತ್ನ ಮೆಟ್ಟಿ ನಿಲ್ಲುವ ಶಕ್ತಿ ನಮ್ಮಲ್ಲಿದೆ, ಎರಡೂ ಪಕ್ಷಗಳ ಶಾಸಕರು, ಸಚಿವರು, ಮುಖ್ಯಮಂತ್ರಿಗಳು, ಸಿದ್ದರಾಮಯ್ಯನವರು ಸುದೀರ್ಘ‌ ಚರ್ಚೆ ನಡೆಸಿ ಸರ್ಕಾರವನ್ನು ಸದೃಢವಾಗಿ ನಿಲ್ಲಿಸಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು.

ವಿಶ್ವಾಸ ಗಳಿಸುವಲ್ಲಿ ವಿಫಲ: ಸರ್ಕಾರ ಸದೃಢವಾಗಿ ಕೆಲಸ ಮಾಡಿ ಕಾಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಗಮನ ಹರಿಸಲು ಎರಡೂ ಪಕ್ಷದ ಸಚಿವರ ಸಭೆಯಲ್ಲಿ ನಿರ್ಧರಿಸಲಾಗಿದೆ. ಸವಾಲುಗಳನ್ನು ಎದುರಿಸಿ ನಿಲ್ಲುವ ಸಾಮರ್ಥ್ಯ ಇದೆ. ಜನರ ಭಾವನೆ ಅರ್ಥ ಮಾಡಿಕೊಂಡು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಸ್ಪಷ್ಟತೆ ಮೂಡಿದೆ: ಮೈತ್ರಿ ಸರ್ಕಾರ ಸಮನ್ವಯದಿಂದ ಕೆಲಸ ಮಾಡುತ್ತಿದೆ.

ನಮ್ಮ ಕೆಲವು ಸದಸ್ಯರು ಅಚಾತುರ್ಯದಿಂದ ಹೇಳಿದ ಮಾತುಗಳಿಗೆ ಅಪಾರ್ಥ ಕಲ್ಪಿಸಿ ಗೊಂದಲ ವಾತಾವರಣ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಗೊಂದಲಕ್ಕೆ ಎಡೆಮಾಡಿಕೊಟ್ಟಿರುವ ಹೇಳಿಕೆಗಳಿಗೆ ಇನ್ಮು ಮುಂದೆ ಅವಕಾಶ ನೀಡದಂತೆ ಎಚ್ಚೆತ್ತು ಸರ್ಕಾರವನ್ನು ಉಳಿಸಿ ಕೆಲಸ ಮಾಡುವ ಬಗ್ಗೆ ಸಚಿವರು, ಶಾಸಕರಲ್ಲಿ ಸ್ಪಷ್ಟತೆ ಮೂಡಿಸಲಾಗಿದೆ ಎಂದು ಹೇಳಿದರು.

ನಮ್ಮಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಹಿರಿಯರ ಸಮ್ಮುಖದಲ್ಲಿ ಚರ್ಚಿಸಿ ಗೊಂದಲ ಇದೆ ಎನ್ನುವಂತೆ ಕಾಣಲು ಬಿಡದಂತೆ ಎಚ್ಚೆತ್ತು ಕೆಲಸ ಮಾಡಬೇಕು. ಇನ್ನೂ ಸುಧಾರಣೆಗೆ ಅವಕಾಶ ಇದೆ. ಶುಕ್ರವಾರ ರಾತ್ರಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ 2 ಗಂಟೆಗಳ ಕಾಲ ಚರ್ಚೆ ನಡೆಸಿ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ತಿಳಿಸಿದರು.

ಜನರಲ್ಲಿ ನಂಬಿಕೆ ತನ್ನಿ: ಇವಿಎಂ ಕುರಿತು ರಾಷ್ಟ್ರ ಮಟ್ಟದ ನಾಯಕರು ಚರ್ಚೆ ನಡೆಸುತ್ತಿದ್ದಾರೆ. ಈ ಕುರಿತು ಜನರಲ್ಲಿ ಮತ್ತು ನಾಯಕರಲ್ಲಿ ವಿಶ್ವಾಸ, ನಂಬಿಕೆ ಮೂಡಿಸುವ ಕೆಲಸವನ್ನು ಚುನಾವಣಾ ಆಯೋಗ ಮಾಡಿಲ್ಲ. ಹೀಗಾಗಿ ಅನುಮಾನ ನಾನಾ ರೀತಿ ಮುಂದುವರಿಯುತ್ತಿದೆ. ಅನುಮಾನಕ್ಕೆ ಕೊನೆಯಾಡಲು ನ್ಯೂನ್ಯತೆ ಸರಿಮಾಡಿಕೊಂಡು ಜನರಲ್ಲಿ ನಂಬಿಕೆ ತರುವ ಕೆಲಸವನ್ನು ಯಾಕೆ ಮಾಡಲು ಆಗುತ್ತಿಲ್ಲ ಎಂಬುದಕ್ಕೆ ಆಯೋಗ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ದೂಷಿಸಲಿ: ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ನಾನು ಶಾಸಕನಾಗಿರುವ ಕ್ಷೇತ್ರದಲ್ಲೇ ನನಗೆ ಬಹುಮತ ಬಂದಿಲ್ಲ, ಆ ವಾತಾವರಣ ರಾಜ್ಯ ಮತ್ತು ರಾಷ್ಟ್ರದ ನಗರದಲ್ಲಷ್ಟೇ ಅಲ್ಲ, ಗ್ರಾಮೀಣ ಭಾಗದಲ್ಲೂ ಕಂಡುಬಂದಿದೆ. ಈ ರೀತಿ ಇರುವಾಗ ಹಿನ್ನಡೆಗೆ ಬೇರೆ ವ್ಯಕ್ತಿಗಳ ಮೇಲೆ ದೂಷಣೆ ಮಾಡಲು ಹೋದರೆ ಸ್ವಕ್ಷೇತ್ರದಲ್ಲೇ ನನ್ನ ಹಿನ್ನಡೆಗೆ ನಾನು ಯಾರನ್ನು ದೂಷಿಸಲಿ ಎಂದು ಪ್ರಶ್ನಿಸಿದರು.

ಸೋಲಿಗೆ ಕಾರಣವಾದ ಅಂಶಗಳನ್ನು ವಿಮರ್ಶಿಸಿ, ಮೂಲ ಕಾರಣವನ್ನು ಆತ್ಮವಿಮರ್ಶೆ ಮಾಡಿಕೊಂಡರೆ ಭವಿಷ್ಯದಲ್ಲಿ ಪಕ್ಷ ಕಟ್ಟಿ ಬೆಳೆಸಬಹುದು. ಸೋಲಿಗೆ ಮತ್ತೂಬ್ಬರ ಮೇಲೆ ಬೆರಳು ತೋರಿಸುವುದು ಕಾರ್ಯಸಾಧುವಲ್ಲ, ಸಮಸ್ಯೆಗೆ ಪರಿಹಾರವೂ ಅಲ್ಲ.

ಚುನಾವಣೆ ಸಂದರ್ಭದಲ್ಲಿ ನಡೆದಿರುವ ವಿದ್ಯಮಾನಗಳ ಬಗ್ಗೆ ಆತ್ಮಾವಲೋಕನ ನಡೆಸಿ ಪಕ್ಷ ಕಟ್ಟುವ ಕುರಿತು ಚರ್ಚೆಯಾಗುತ್ತಿದ್ದು, ಮೈತ್ರಿ ಧರ್ಮ ಕಾಪಾಡಲು ಎಲ್ಲರೂ ಬದ್ಧರಾಗಿದ್ದೇವೆ ಎಂದರು. ಸಚಿವ ಶಿವಶಂಕರರೆಡ್ಡಿ, ಶಾಸಕ ಕೆ.ವೈ.ನಂಜೇಗೌಡ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

BGT 2024-25: Virat Kohli returns to form in Aussies

BGT 2024-25: ಆಸೀಸ್‌ ನಲ್ಲಿ ಲಯಕ್ಕೆ ಮರಳಿದ ವಿರಾಟ್‌ ಕೊಹ್ಲಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರು ಪಾಲು

Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Youth assaulted near Belagavi airport compound

Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

4

BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

Kolar

Air Force Emergency: ಬಂಗಾರಪೇಟೆ ಬಳಿ ವಾಯುಪಡೆ ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ

0447

World Tourism Day: ಜಿಲ್ಲೆ ಪ್ರವಾಸೋದ್ಯಮ ಹೆಚ್ಚಳಕ್ಕೆ ಪ್ರಚಾರ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

BGT 2024-25: Virat Kohli returns to form in Aussies

BGT 2024-25: ಆಸೀಸ್‌ ನಲ್ಲಿ ಲಯಕ್ಕೆ ಮರಳಿದ ವಿರಾಟ್‌ ಕೊಹ್ಲಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರು ಪಾಲು

Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Youth assaulted near Belagavi airport compound

Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.