ಸುಸ್ತಿ ಸಾಲ ಬ್ರೇಕ್ ಕೇ ಬಾದ್
Team Udayavani, May 27, 2019, 6:00 AM IST
ಸಾಲ ಮರುಪಾವತಿಯಲ್ಲಿ ಒಂದೇ ಒಂದು ದಿನ ತಡವಾದರೂ, 2000 ಕೋಟಿ ಮತ್ತು ಅದಕ್ಕೂ ಹೆಚ್ಚಿನ ಸಾಲವನ್ನು ಸುಸ್ತಿ ಸಾಲ ಎಂದು ಪರಿಗಣಿಸಬೇಕು ಮತ್ತು 15 ದಿನಗಳೊಳಗಾಗಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯ ಮಂಡಳಿಗೆ ಒಪ್ಪಿಸಿ 180 ದಿನಗಳೊಳಗಾಗಿ ಪರಿಹಾರ ಪಡೆಯಬೇಕು ಎನ್ನುವ ಆರ್‌ಬಿಐ ಸುತ್ತೋಲೆ ಏನೇನೆಲ್ಲಾ ಪರಿಣಾಮ ಬೀರಿದೆ ಗೊತ್ತಾ?
ಒಂದು ಹೆಜ್ಜೆ ಮುಂದೆ ಹಾಕಿದರೆ ಎರಡು ಹೆಜ್ಜೆ ಹಿಂದೆ ಎನ್ನುವುದು ಹಳೆಯಗಾದೆ. ಬ್ಯಾಂಕುಗಳ ಸುಸ್ತಿ ಸಾಲದ ವಿಷಯದಲ್ಲಿ ಹೊಂದಾಣಿಕೆಯಾಗುತ್ತಿದೆ. ಸುಸ್ತಿ ಸಾಲ ಅಂದರೆ, ಸಾಲವನ್ನು ಮರುಪಾವತಿ ಮಾಡಲಾಗದ ಮೊತ್ತ. ಇದನ್ನು ಬ್ಯಾಂಕ್‌ಗಳು ಸುಸ್ತಿ ಅಕೌಂಟಿಗೆ ಹಾಕುತ್ತವೆ. ಈಗ ಬ್ಯಾಂಕ್‌ಗಳ ಮತ್ತು ಸರ್ಕಾರ ಸುಸ್ತಿ ಸಾಲದ ವಸೂಲಿಗೆ ತೆಗೆದುಕೊಳ್ಳುತ್ತಿರುವ ಪ್ರತಿಯೊಂದು ಹೆಜ್ಜೆಗೂ ಅಡೆತಡೆಗಳು ಬಂದು, ಸಾಲ ವಸೂಲಾತಿ ಪ್ರಕ್ರಿಯೆಗೆ ಹಿನ್ನಡೆ ಉಂಟಾಗುತ್ತಿದೆ. ಗ್ರಾಹಕರ ಮನಪರಿವರ್ತನೆ, ಗ್ರಾಹಕರಿಗೆ ಪತ್ರ, ಲಾಯರ್ ನೋಟಿಸ್, ನ್ಯಾಯಾಲಯದಲ್ಲಿ ಮೊಕದ್ದಮೆ, ಸಾಲ ವಸೂಲಾತಿ ನ್ಯಾಯ ಮಂಡಳಿ, ಇವೆಲ್ಲ ಇದ್ದರೂ, ನಿರೀಕ್ಷೆಯ ಮಟ್ಟದಲ್ಲಿ ಸುಸ್ತಿ ಸಾಲ ವಸೂಲಾಗದೇ ಬ್ಯಾಂಕರುಗಳು ಕಂಗಾಲಾಗಿದ್ದಾರೆ. ಹೀಗಿರುವಾಗ, ಸಾಲವನ್ನು ಸುಸ್ತಿ ಸಾಲಕ್ಕೆ ವರ್ಗಾಯಿಸುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಎಲ್ಲಾ
ಬ್ಯಾಂಕುಗಳಿಗೆ ನಿರ್ದೇಶಿಸಿ ಹೊರಡಿಸಿದ ಸುತ್ತೋಲೆ ಮತ್ತು ಸುಪ್ರೀಯಂ ಕೋರ್ಟ್ ನೀಡಿದ ತಡೆ ಆಜ್ಞೆ ಬ್ಯಾಂಕ್‌ಗಳು ಮತ್ತು ಸರ್ಕಾರವನ್ನು ಗೊಂದಲಕ್ಕೀಡು ಮಾಡಿದೆ.
ಬ್ಯಾಂಕ್‌ಗಳಲ್ಲಿ ಡಿಸೆಂಬರ್ 2018 ಕ್ಕೆ 10.40 ಲಕ್ಷ ಕೋಟಿ ಸುಸ್ತಿ ಸಾಲವಿದ್ದು, ಇದೂ ಒಟ್ಟೂ ಸಾಲದ ಶೇ.10.3ರಷ್ಟು ಎಂದು ಹೇಳಲಾಗುತ್ತಿದೆ. ಮಾರ್ಚ್ 31, 2019 ರ ಅಂಕಿ ಸಂಖ್ಯೆಗಳು ಇನ್ನೂ ಕ್ರೋಢೀಕರಣವಾಗಬೇಕಾಗಿದೆ. ಒಂದು ಲಕ್ಷ ಸುಸ್ತಿಸಾಲ ವಸೂಲಾಗುವ ಹೊತ್ತಿಗೆ ಸುಮಾರು ಅಷ್ಟೇ ಪ್ರಮಾಣದಲ್ಲಿ ಸುಸ್ತಿಗೆ ಸಾಲ ಸೇರ್ಪಡೆಯಾಗುತ್ತದೆ ಎಂದು ಬ್ಯಾಂಕ್‌ಗಳು ಅಭಿಪ್ರಾಯ ಪಡುತ್ತಿದ್ದಾರೆ.
ಏನಿದು ಸುತ್ತೋಲೆ?
ಸಾಲ ಮರುಪಾವತಿಯಲ್ಲಿ ಒಂದೇ ಒಂದು ದಿನ ತಡವಾದರೂ, 2000 ಕೋಟಿ ಮತ್ತು ಅದಕ್ಕೂ ಹೆಚ್ಚಿನ ಸಾಲವನ್ನು ಸುಸ್ತಿ ಸಾಲ ಎಂದು ಪರಿಗಣಿಸಬೇಕು ಮತ್ತು 15 ದಿನಗಳೊಳಗಾಗಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯ ಮಂಡಳಿಗೆ(NCLT) ಒಪ್ಪಿಸಿ 180 ದಿನಗಳೊಳಗಾಗಿ ಪರಿಹಾರ (Resolution)ಪಡೆಯಬೇಕು ಎನ್ನುವುದು ಆರ್‌ಬಿಐ ಸುತ್ತೋಲೆಯ ಸಾರಾಂಶ. ಈ ಮೊದಲು ಸಾಲನೀಡಿದ ಬ್ಯಾಂಕುಗಳು ಕಟ್ಟ ಬಾಕಿ ಅಥವಾ ಸುಸ್ತಿ ಯಾಗಿ 60 ದಿನಗಳ ನಂತರವಷ್ಟೇ ದಿವಾಳಿ ಪ್ರಕ್ರಿಯೆಯನ್ನು (Insolvency and Bankruptcy code) ಅರಂಭಿಸಬಹುದಿತ್ತು. ಬ್ಯಾಂಕ್‌ಗಳಲ್ಲಿ ಸುಮಾರು 75 ಕಂಪನಿಗಳು ಇಂಥ ನಾಲ್ಕು ಲಕ್ಷ ಕೋಟಿ ಸಾಲವನ್ನು ಬಾಕಿ ಇರಿಸಿಕೊಂಡಿವೆಯಂತೆ. ಪವರ್, ಜವಳಿ, ಸಕ್ಕರೆ, ಸಾರಿಗೆ , ಸ್ಟೀಲ್ ಮತ್ತು ಮೂಲಭೂತ ಸೌಲಭ್ಯ ಒದಗಿಸುವ ವಲಯಗಳಲ್ಲಿ ಸುಸ್ತಿ ಸಾಲ ಹೆಚ್ಚಿನ ಪ್ರಮಾಣದಲ್ಲಿ ಕಾಣುತ್ತಿದ್ದು, ಬ್ಯಾಂಕರ್‌ಗಳು, ಈ ಸುತ್ತೋಲೆಯ ಅಡಿಯಲ್ಲಿ ಶೀಘ್ರ ಸಾಲ ವಸೂಲಾತಿಗೆ ಕಾರ್ಯ ಸೂಚಿಯಲ್ಲಿದ್ದವು ಮತ್ತು ತುಂಬಾ ಆಶಾಭಾವನೆ ಕೂಡಾ ಹೊಂದಿದ್ದವು. ಬ್ಯಾಂಕರುಗಳು ಬ್ಯಾಲೆನ್ಸ್ ಶೀಟ್ ಸ್ವತ್ಛ ಗೊಳಿಸುವ ಹಿಂದಿನ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮನ್ ರಾಜನ್ ಕನಸು ನನಸಸಾಗಬಹುದು ಎನ್ನುವ ಉತ್ಸಾಹದಲ್ಲಿ ಇದ್ದರು. ಆದರೆ ಈಗ, ನ್ಯಾಯಾಲಯದ ನಿರ್ದೇಶನದಿಂದ ಬ್ಯಾಂಕುಗಳು ಗಲಿಬಿಲಿಗೊಂಡಿದ್ದು, ಗೊಂದಲದಿಂದ ಹೊರ ಬರುವ ಮಾರ್ಗ ಹುಡುಕುತ್ತಿವೆ.
ತಡೆಯಾಜ್ಞೆ
ಈ ಸುತ್ತೋಲೆ ಅಸಂವಿಧಾನಿಕ ಮತ್ತು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಉಲ್ಲಂಘನೆ. ಕೇಂದ್ರ ಸರ್ಕಾರದ ಒಪ್ಪಿಗೆ ಇಲ್ಲದೇ ನೀಡಲಾಗಿದ್ದು, ಇದು ರಿಸರ್ವ್ ಬ್ಯಾಂಕ್‌ನ ಅಧಿಕಾರದ ಹೊರತಾಗಿದೆ. ಅಂತೆಯೇ ಇದು ಅಲ್ಟ್ರಾ ವೈರಸ್(ultra virus).. ರಿಸರ್ವ್ ಬ್ಯಾಂಕ್ ತನಗಿಲ್ಲದ ಅಧಿಕಾರವನ್ನು ಚಲಾಯಿಸಿದೆ ಎಂದು ಕೆಲವು ಪವರ್ ಕಂಪನಿಗಳು ಈ ಸುತ್ತೋಲೆಯ ವಿರುದ್ಧ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಸುಪ್ರೀಂ ಕೋರ್ಟ್ , ಈ ಸುತ್ತೋಲೆಯನ್ನು ತಾಂತ್ರಿಕ ಕಾರಣದ ಮೇಲೆ ರದ್ದುಮಾಡುವಂತೆ ನಿರ್ದೇಶನ ನೀಡಿದೆ. ಇದು ಬ್ಯಾಂಕ್‌ಗಳಿಗೆ ಪೂರ್ಣ ಪ್ರಮಾಣದ ಹಿನ್ನಡೆಯಲ್ಲ (setback) . ಸುಪ್ರೀಮ್ ಕೋರ್ಟ್ ಎತ್ತಿ ತೋರಿಸಿದ ತಾಂತ್ರಿಕ ನ್ಯೂನತೆಯನ್ನು ಆರ್‌ಬಿಐ ಸರಿಪಡಿಸಬಹುದು.ನಿರ್ದಿಷ್ಟ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರ ಮಾತ್ರ ಈ ಅಧಿಕಾರವನ್ನು ಚಲಾಯಿಸಬಹುದು ಎಂದೂ ಕೋರ್ಟ್ ತೀರ್ಪಿನಲ್ಲಿ ಹೇಳಿದೆ.
ತಮಗೆ ಸಾಲ ಮರುಪಾವತಿಯ ಶಕ್ತಿ ಇದ್ದರೂ ತಮ್ಮನ್ನು ಉದ್ದೇಶ ಪೂರ್ವಕ (wilfull defaulter) ಬಾಕಿದಾರರೆಂದು ಬಿಂಬಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದರಂತೆ. ಸಾಲಗಾರರೆಲ್ಲ ಉದ್ದೇಶಪೂರ್ವಕ ಸುಸ್ತಿಯಾದವರಲ್ಲ . ಹಲವರು ಪರಿಸ್ಥಿತಿಯನ್ನು ನಿಭಾಯಿಸಲಾರದೇ ಮತ್ತು ನಿಯಂತ್ರಿಸಲಾರದೇ ಸುಸ್ತಿ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಎಲ್ಲಾ ಸಾಲಗಾರರನ್ನೂ ಒಂದೇ ತಕ್ಕಡಿಯಲ್ಲಿ ತೂಗದೇ, ಆಳವಾಗಿ ವಿಶ್ಲೇಷಿಸಿ ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಅರ್ಜಿದಾರರ ಅಹವಾಲು . ನ್ಯಾಯಾಲಯ ಕೂಡಾ ಇದನ್ನೇ ಪರೋಕ್ಷವಾ ಗಿ sಟಛಿcಜಿfಜಿc cಚsಛಿ ಎಂದು ಉಲ್ಲೇಖೀಸಿದೆ.
ಪರಿಣಾಮ ಏನಾಗಬಹುದು?
ಈಗಾಗಲೇ ದಾಖಲಾದ ಪ್ರಕರಣಗಳು ರಾಷ್ಟ್ರೀಯ ಕಂಪನಿ ನ್ಯಾಯ ಮಂಡಳಿಯಲ್ಲಿ ಉಳಿಯುತ್ತವೆ. ಆದರೆ, ಈ ಸುತ್ತೋಲೆಯ ಅಡಿಯಲ್ಲಿ ತೆಗೆದುಕೊಂಡ ಎಲ್ಲಾ ಕ್ರಮಗಳು ಅನೂರ್ಜಿತವಾಗಬಹುದು.
ಸಾಲಗಾರರಿಗೆ ಭಾರೀ ರಿಲೀಫ್ ದೊರಕುವುದು. ದಿವಾಳಿ ಕಾನೂನು ಮತ್ತು ರಾಷ್ಟ್ರೀಯ ಕಂಪನಿ ನ್ಯಾಯ ಮಂಡಲಿಯ ಕಠಿಣ ಕ್ರಮಗಳಿಂದ ಸದ್ಯಕ್ಕೆ ರಕ್ಷಣೆ . ಅದಿರು, ಜವಳಿ, ಮೂಲಭೂತ ಸೌಕರ್ಯಗಳು, ಗೊಬ್ಬರ, ಪವರ್, ಸಕ್ಕರೆ, ಸಾರಿಗೆ, ಸ್ಟೀಲ್ ಉದ್ಯಮಗಳು ಸ್ವಲ್ಪ ನಿರಾಳವಾಗಬಹುದು.
ಮುಂದಿನ ವಿಚಾರಣೆಯಲ್ಲಿ, ಈ ಸುತ್ತೋಲೆಯಡಿಯಲ್ಲಿ ತೆಗೆದುಕೊಂಡ ಕ್ರಮ ಎಂದು ಸಾಬೀತಾದರೆ, ಪ್ರಕರಣವನ್ನು ಹಿಂತೆಗೆದುಕೊಳ್ಳಲಾಗುತ್ತದೆ. ಇಲ್ಲದಿದ್ದರೆ ಪ್ರಕ್ರಿಯೆ ಮುಂದು ವರೆಯುತ್ತದೆ.
ಕಳೆದ ವರ್ಷ ಇಂಥ 94 ಪ್ರಕರಣಗಳಲ್ಲಿ ಬ್ಯಾಂಕ್‌ಗಳು 1,75,000 ಕೋಟಿ ಯಲ್ಲಿ ಶೇ.57ರವರೆಗೆ ಹೇರ್‌ಕಟ್ ಅನುಭವಿಸಿದ್ದು, 75000 ಕೋಟಿ (43%) ಸುಸ್ತಿ ಸಾಲ ವಸೂಲಾಗಿದೆ. ಈ ಬೆಳವಣಿಗೆಯಿಂದ ಪರಿಹಾರ ಸಮಯಮಿತಿ ಹೆಚ್ಚುತ್ತಿದ್ದು, ಈ ವರೆಗೆ ಉಳಿಸಿಕೊಂಡು ಬಂದ ಸಾಲದ ಶಿಸ್ತಿಗೆ (loan discipline)) ಮೋಡ ಕವಿಯುತ್ತದೆ. ದುರ್ಬಲ ಔಧ್ಯಮಿಕ ವಾತಾವರಣ ಮತ್ತು ಕುಗ್ಗುತ್ತಿರುವ ಬಿಡ್‌ಧಾರರ ಆಸಕ್ತಿಯಿಂದಾಗಿ ಸಾಲ ನೀಡಿದ ಬ್ಯಾಂಕ್‌ಗಳು ಹೆಚ್ಚಿನ ಹೇರ್‌ಕಟ್ ಅನುಭವಿಸಬೇಕಾಗುತ್ತದೆ. ಕಂಪನಿ ನ್ಯಾಯ ಮಂಡಳಿಯಲ್ಲಿ ಮುಂದುವರೆದ ( advanced) ಮತ್ತು ನಡೆಯುತ್ತಿರುವ ಪ್ರಕರಣಗಳಲ್ಲಿ ಗಡಿಯಾರವನ್ನು ಹಿಂದೆ ಮಾಡಬೇಕಾಗುತ್ತದೆ.
ವಿಚಾರಣಾ ಪ್ರಕ್ರಿಯೆಯನ್ನು ರೀವರ್ಕ್ ಮಾಡಬೇಕಾಗುತ್ತದೆ ಎನ್ನುವುದು ಬ್ಯಾಂಕರ್‌ಗಳ ಅಭಿಪ್ರಾಯ. ಸುಸ್ತಿ ಸಾಲದ ವಸೂಲಿ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಅಧಿಕಾರ ಮೊಟಕಾಗಿದೆ ಅಥವಾ ಕುಗ್ಗಿಸಲಾಗಿದೆ ಎನ್ನುವ ಚಿಂತನೆ ಬ್ಯಾಂಕಿಂಗ್ ವಲಯದಲ್ಲಿ ಕೇಳುತ್ತಿದೆ.ಸುಪ್ರೀಮ್ ಕೊರ್ಟ್ ನಿರ್ದೇಶನದಿಂದ ಹಲವು ಪ್ರಕರಣಗಳು ಸುಸ್ತಿ ಟ್ಯಾಗ್ ನಿಂದ ಕಳಚಿಕೊಳ್ಳುತ್ತಿದ್ದು, ಬ್ಯಾಂಕುಗಳಿಗೆ ಸುಸ್ತಿ ಸಾಲಕ್ಕೆ ನೀಡುವ provisioning ಪ್ರಮಾಣದಲ್ಲಿ ಕಡಿತವಾಗುತ್ತದೆ.
ಫೆಬ್ರವರಿ ಸುತ್ತೋಲೆಯಲ್ಲಿ ರಿಸರ್ವ್ ಬ್ಯಾಂಕ್ ತನ್ನ ಎಲ್ಲಾ restructuring Scheme ಗಳನ್ನು ಹಿಂತೆಗೆದುಕೊಂಡಿದ್ದು, ಈಗ ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ, ಅವೆಲ್ಲವೂ ಮರಳಿ ಬರಬಹುದು. ಹಾಗೆಯೇ, ಹೊಸ ರೀತಿಯ ಕಾನೂನು ಹೋರಾಟಕ್ಕೆ ವೇದಿಕೆ ಸಜ್ಜಾಗಬಹುದು ಎನ್ನುವ ಲೆಕ್ಕಾಚಾರ ನಡೆಯುತ್ತಿದೆ.
ಸುಸ್ತಿ ಸಾಲದ ವಸೂಲಿಯ ನಿಟ್ಟಿನಲ್ಲಿ ಬ್ಯಾಂಕುಗಳಿಗೆ ಆದ ಹಿನ್ನಡೆಯಿಂದಾಗಿ , ರಿಸರ್ವ್ ಬ್ಯಾಂಕ್ ತನ್ನಸುತ್ತೋಲೆಯನ್ನು ಮಾರ್ಪಾಡು ಮಾಡಿ ಹೊರಡಿಸಬಹುದು ಎಂಬ ಕೂಗೂ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯವು ಸರ್ಕಾರಕ್ಕೆ ಮತ್ತು ಬ್ಯಾಂಕುಗಳಿಗೆ ಸುಸ್ತಿ ಸಾಲದ ಶೀಘ್ರ ಮರು ಪಾವತಿ ಬಗೆಗೆ ತೆಗೆದು ಕೊಳ್ಳುವ ಕ್ರಮಗಳ ಬಗೆಗೆ ಸಲಹೆ-ಸೂಚನೆ ಮತ್ತು ಮಾರ್ಗ ದರ್ಶನ ನೀಡಬಹುದಿತ್ತು. ಆ ಕೆಲಸ ಆಗಿಲ್ಲ. ದಿವಾಳಿ ಕಾನೂನು ಮುಖ್ಯವಾಗಿ 2000 ಕೋಟಿಗಳಿಗಿಂತ ಹೆಚ್ಚು ಬಾಕಿ ಇರುವ ಕಾರ್ಪೋರೇಟ್ ಸಾಲಗಳಿಗೆ ಸಂಬಂಧಿಸಿದ್ದು ಹಾಗೂ ಬ್ಯಾಂಕುಗಳಿಗೆ ಈ ವಲಯದಿಂದ ಬಾಕಿ ಸುಮಾರು 3.78 ಲಕ್ಷ$ ಕೋಟಿ ಇರುವುದರಿಂದ, ತುರ್ತಾಗಿ ಈ ನಿಟ್ಟಿನಲ್ಲಿ ಬ್ಯಾಂಕ್‌ಗಳು ಕ್ರಮತೆಗೆದುಕೊಳ್ಳುವ ಬಗ್ಗೆ ಯೋಚಿಸಬೇಕಾಗಿದೆ.
-ರಮಾನಂದ ಶರ್ಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.