ಕರಗಿದ ಬದನವಾಳು ಕಾರ್ಮೋಡ: ಅರಳಿದ ಸೌಹಾರ್ದ
ಜಾತಿ ಸಂಘರ್ಷದ ಬದನವಾಳು ಉಮ್ಮತ್ತೂರು ಘಟನೆ • ಶ್ರೀನಿವಾಸಪ್ರಸಾದ್‌ರಿಗೆ ಶೇ.30-40 ದಲಿತ ಮತ
Team Udayavani, May 27, 2019, 7:48 AM IST
ಚಾಮರಾಜನಗರ: ಬದನವಾಳು ಉಮ್ಮತ್ತೂರು ಘಟನೆ ಸಂದರ್ಭದಲ್ಲಿ ಉಂಟಾದ ರಾಜಕೀಯ ಪರಿಸ್ಥಿತಿಗಳಿಂದಾಗಿ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರ ಬಗ್ಗೆ 25 ವರ್ಷಗಳಿಂದ ಇದ್ದ ಅಸಮಾಧಾನವೊಂದು ಚಾ.ನಗರ ಲೋಕಸಭಾ ಚುನಾವಣೆಯಲ್ಲಿ ಕರಗುವ ಮೂಲಕ ಲಿಂಗಾಯತ ಮತದಾರರು ಸೌಹಾರ್ದತೆ ಪ್ರದರ್ಶಿಸಿದ್ದಾರೆ.
ಅಸಮಾಧಾನವಿತ್ತು:ವರ್ಷಾನುಗಟ್ಟಲೆ ಈ ಘಟನೆ ಎರಡೂ ಸಮುದಾಯಗಳ ಮೇಲೆ ಕರಿನೆರಳಾಗಿತ್ತು. ದಶಕಗಳು ಕಳೆದಂತೆ ಘಟನೆ ಪರಿಣಾಮದ ತೀವ್ರತೆ ಕಡಿಮೆಯಾಯಿತು. ಆದರೂ ಎರಡೂ ಸಮುದಾಯಗಳಲ್ಲಿ ಪರಸ್ಪರ ನಾಯಕರ ಮೇಲೆ ತಣ್ಣನೆ ಅಸಮಾಧಾನ ಒಳಗೊಳಗೇ ಇತ್ತು.
ಶ್ರೀನಿವಾಸಪ್ರಸಾದ್ ಅವರು ಕಾಂಗ್ರೆಸ್‌ನಿಂದ ನಂಜನಗೂಡು ಶಾಸಕರಾಗಿ ಸಚಿವರಾದ ಬಳಿಕ ತಮ್ಮ ಕ್ಷೇತ್ರದಲ್ಲಿ ಒಂದೇ ಒಂದು ಜಾತಿ ಗಲಭೆಯಾಗದಂತೆ ಕಾಳಜಿ ವಹಿಸಿದ್ದರು. ಹಾಗೆಯೇ ಜಾತಿ ನಿಂದನೆ ಒಂದು ಪ್ರಕರಣವೂ ನಡೆಯದಂತೆ ಎಚ್ಚರ ವಹಿಸಿದರು. ಇದು ಲಿಂಗಾಯತ ಸಮುದಾಯದ ಮೆಚ್ಚುಗೆಗೆ ಪಾತ್ರವಾಯಿತು. ಇದು ಮೊದಲ ಹಂತ.
ಶ್ರೀನಿವಾಸಪ್ರಸಾದ್ ಅವರು ಬಿಜೆಪಿಗೆ ಸೇರ್ಪಡೆಯಾದಾಗಲೇ ವೀರಶೈವ ಲಿಂಗಾಯತ ಸಮಾಜಕ್ಕೆ ಅವರ ಮೇಲಿದ್ದ ಅಲ್ಪ ಸ್ವಲ್ಪ ಅಸಮಾಧಾನವೂ ಮರೆಯಾಗಿ ಹೋಯಿತು. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ ಅವರನ್ನು ಸೋಲಿಸಬಲ್ಲ ಛಾತಿ ಇರುವುದು ಶ್ರೀನಿವಾಸಪ್ರಸಾದ್‌ರಿಗೆ ಮಾತ್ರ ಎಂಬುದು ತಿಳಿದಿದ್ದ ಲಿಂಗಾಯತ ಸಮಾಜ ಅವರಿಗೆ ಚುನಾವಣೆಯಲ್ಲಿ ಸಾರಾ ಸಗಟು ಬೆಂಬಲ ನೀಡಿತು. ಚುನಾವಣೆ ವೇಳೆ ತಮ್ಮ ರಾಜಕೀಯ ಎದುರಾಳಿ ಎಂ.ರಾಜಶೇಖರಮೂರ್ತಿ ಅವರ ಸಮಾಧಿಗೂ ಪ್ರಸಾದ್ ಭೇಟಿ ನೀಡಿದರು. ಬದನವಾಳು ಉಮ್ಮತ್ತೂರು ಗಲಾಟೆಯನ್ನು ಸಂಪೂರ್ಣವಾಗಿ ಮರೆತ ಲಿಂಗಾಯತ ಸಮುದಾಯ ಬಿ.ಎಸ್.ಯಡಿಯೂರಪ್ಪ ಅವರ ಕೈಬಲಪಡಿಸಲು ಶ್ರೀನಿವಾಸಪ್ರಸಾದ್‌ರಿಗೆ ಮತ ನೀಡಿತು. ಹೀಗೆ ಚುನಾವಣೆಯೊಂದು ಹೀಗೆ ವೈಮನಸ್ಯ ಮರೆಸಿ ಸೌಹಾರ್ದತೆ ಮೂಡಿಸಿರುವುದೇ ಒಂದು ಅಚ್ಚರಿಯ ಸಂಗತಿ. ಚುನಾವಣೆಗಳಲ್ಲಿ ಜಾತಿ ಜಾತಿಗಳ ನಡುವೆ ದ್ವೇಷ ಮೂಡುವ ಸಂಗತಿಗಳು ನಡೆಯುತ್ತವೆ. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಾತಿ ಸಂಘರ್ಷವೊಂದು ಅಂತ್ಯಗೊಂಡು ಸೌಹಾರ್ದತೆ ಮೂಡಿಸಿದ್ದು ವಿಶೇಷ.
ಯಾವ ಉಮ್ಮತ್ತೂರು ಗ್ರಾಮದಲ್ಲಿ ಸವರ್ಣೀಯರು: ಅಸಮಾಧಾನಗೊಂಡಿದ್ದರೋ ಅದೇ ಗ್ರಾಮದಲ್ಲಿ ಶ್ರೀನಿವಾಸಪ್ರಸಾದ್ ಅವರು ಪ್ರಚಾರಕ್ಕೆ ಹೋದಾಗ ಭಾರೀ ಜನಬೆಂಬಲ ದೊರಕಿತು.! ಇದಕ್ಕೆ ವಿರುದ್ಧವೆಂಬಂತೆ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ ಅವರ ಭಾಷಣಕ್ಕೆ ಅಡ್ಡಿಯುಂಟುಮಾಡಿದ ಪ್ರಸಂಗವೂ ಅದೇ ಗ್ರಾಮದಲ್ಲಿ ನಡೆಯಿತು.
ಅಸಮಾಧಾನ ತೋರಿದ ಲಿಂಗಾಯತ ಸಮಾಜ: ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ ಅವರು ಲಿಂಗಾಯತ ಸಮುದಾಯದ ನಾಯಕರಾಗಿದ್ದ ದಿ.ಎಂ.ರಾಜಶೇಖರಮೂರ್ತಿ ಅವರ ಕಟ್ಟಾ ಶಿಷ್ಯ. ವಿಪ ರ್ಯಾಸದ ಸಂಗತಿಯೆಂದರೆ ಈ ಬಾರಿ ಲಿಂಗಾಯತ ಸಮುದಾಯ ಧ್ರುವನಾರಾಯಣ ಅವರ ವಿರುದ್ಧ ಮತ ನೀಡಿತು. ಧ್ರುವನಾರಾಯಣ 2 ಬಾರಿ ಸಂಸ ದರಾಗಿ ಲಿಂಗಾಯತ ಸಮಾಜವನ್ನು ಕಡೆಗಣಿಸಿದರು. ಚಾಮರಾಜನಗರದಲ್ಲಿ ನಿರ್ಮಾಣವಾಗಲಿರುವ ಬಸವ ಭವನಕ್ಕೆ ಸಹಾಯ ಮಾಡಲಿಲ್ಲ. ಈ ಅಸಮಾ ಧಾನ ಮತದಾನದಲ್ಲಿ ಪ್ರಕಟವಾಗಿದೆ ಎಂದು ಆ ಸಮುದಾಯದ ಮುಖಂಡರೊಬ್ಬರು ಹೇಳುತ್ತಾರೆ.
1993ರ ಮಾ.25ರಂದು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಬದನವಾಳಿ ನಲ್ಲಿ ಮೂವರು ದಲಿತರ ಕೊಲೆ ನಡೆದಿತ್ತು. ಅದಾದ ತಿಂಗಳ ಬಳಿಕ 1993ರ ಏ.26ರಂದು ಚಾಮ ರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಸವರ್ಣೀಯರ ಮನೆಗಳ ಮೇಲೆ ದಾಂಧಲೆ ನಡೆದಿತ್ತು. ಆ ಸಂದರ್ಭದಲ್ಲಿ ಉಂಟಾದ ಬೆಳವಣಿಗೆಗಳಲ್ಲಿ ಈ ಭಾಗದ ಪ್ರಬಲ ದಲಿತ ನಾಯಕರಾದ ಶ್ರೀನಿವಾಸಪ್ರಸಾದ್ ಹಾಗೂ ಲಿಂಗಾಯತ ಸಮುದಾಯ ನಾಯಕರಾದ ರಾಜಶೇಖರ ಮೂರ್ತಿ, ಬೆಂಕಿ ಮಹದೇವು ಅವರು ಪರಸ್ಪರ ಎದುರಾಳಿಗ ಳಾಗುವ ಸನ್ನಿವೇಶ ನಿರ್ಮಾಣವಾವಾಗಿತ್ತು. ಹೀಗಾಗಿ ಲಿಂಗಾಯತ ಸಮುದಾಯ ಶ್ರೀನಿವಾಸ ಪ್ರಸಾದ್ ಮೇಲೂ ದಲಿತ ಸಮುದಾಯದ ರಾಜಶೇಖರಮೂರ್ತಿ, ಬೆಂಕಿ ಮಹದೇವು ಅವರ ಮೇಲೂ ಅಸಮಾಧಾನಿತರಾಗಿದ್ದರು.
ತಮ್ಮ ಸಮುದಾಯಕ್ಕೆ ಹೆಚ್ಚಿನ ಒತ್ತು ನೀಡಿದರು. ನಮ್ಮ ಸಮಾಜವನ್ನು ಕಡೆಗಣಿಸಿದರು ಎಂದು ಲಿಂಗಾಯತ ಸಮುದಾಯ ಹೇಳುತ್ತದೆ. ಆದರೆ ಇತ್ತ, ಬಿಜೆಪಿಗೆ ಯಾವತ್ತೂ ಹೋಗದ ದಲಿತ ಮತ ಗಳು ಶೇ.30 ರಿಂದ 40 ಬಿಜೆಪಿಗೆ ಹೋಗಿವೆ. ನನೆಗುದಿಗೆ ಬಿದ್ದಿದ್ದ ಬುದ್ಧ ವಿಹಾರವನ್ನು ಎಡಬೆಟ್ಟದ ಬಳಿಗೆ ತಂದು ಅದಕ್ಕೆ ಜಾಗ ಕೊಡಿಸಿ ಅನುದಾನ ಬಿಡುಗಡೆ ಮಾಡಿಸಿ ಶಂಕು ಸ್ಥಾಪನೆ ಮಾಡಲಾಗಿತ್ತು. ಸ್ನಾತಕೋತ್ತರ ಕೇಂದ್ರ ತಂದು ಅದಕ್ಕೆ ಡಾ.ಬಿ.ಆರ್.ಅಂಬೇ ಡ್ಕರ್ ಅವರ ಹೆಸರು ಇಡುವಲ್ಲಿ ಶ್ರಮಿಸಿದರು. ಜಿಲ್ಲೆಯ ಚಾಮರಾಜನಗರ, ಕೊಳ್ಳೇ ಗಾಲದಲ್ಲಿ ಬೃಹತ್ ಪ್ರಮಾಣದ ಅಂಬೇಡ್ಕರ್ ಭವನಗಳ ನಿರ್ಮಾಣಕ್ಕೆ ಆಸಕ್ತಿ ವಹಿಸಿ ಕೆಲಸ ಮಾಡಿದರೂ, ದಲಿತ ಸಮಾಜದ ಅನುಕೂಲಕ್ಕಾಗಿ ಅನೇಕ ಕೆಲಸ ಮಾಡಿದ್ದರೂ ಶೇ.30 ರಿಂದ 40 ದಲಿತ ಮತಗಳು ಧ್ರುವನಾರಾಯಣರನ್ನು ಕೈಬಿಟ್ಟವು. ಒಂದೆಡೆ, ಲಿಂಗಾಯತರ ಅಸಮಾಧಾನ, ಇನ್ನೊಂದೆಡೆ ತಮ್ಮದೇ ಸಮುದಾಯದ ನಿರ್ಲಕ್ಷ್ಯವನ್ನು ಅವರು ಎದುರಿಸಬೇಕಾಯಿತು.
ಏನಿದು ಬದನವಾಳು ಗಲಭೆ?:
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.