ಎಲೆಕ್ಟ್ರಿಕ್ ಬಸ್ ಸಬ್ಸಿಡಿ: ಇಕ್ಕಟ್ಟಿಗೆ ಸಿಲುಕಿದ ಬಿಎಂಟಿಸಿ
ಎರಡನೇ ಹಂತದಲ್ಲಿ ಫೇಮ್-2 ಯೋಜನೆ ಜಾರಿಗೊಳಿಸಲು ಮುಂದಾದ ಕೇಂದ್ರ ಸರ್ಕಾರ
Team Udayavani, May 27, 2019, 10:12 AM IST
ಬೆಂಗಳೂರು: ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸುವ ಸಂಬಂಧ ಕೇಂದ್ರ ಸರ್ಕಾರ ಎರಡನೇ ಹಂತದಲ್ಲಿ ‘ಫೇಮ್-2’ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಆದರೆ, ಈ ಯೋಜನೆ ಅಡಿ ಸಬ್ಸಿಡಿ ಪಡೆಯುವ ಸಂಬಂಧ ಪ್ರಸ್ತಾವನೆ ಸಲ್ಲಿಸುವ ವಿಷಯದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಇಕ್ಕಟ್ಟಿಗೆ ಸಿಲುಕಿದೆ.
ಏಕೆಂದರೆ, ‘ಫೇಮ್-2’ರಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಅವಕಾಶ ಇಲ್ಲ. ಗುತ್ತಿಗೆ ರೂಪದಲ್ಲಿ ಪಡೆದ ವಾಹನಗಳಿಗೆ ಮಾತ್ರ ಸಬ್ಸಿಡಿ ನೀಡಲಾಗುವುದು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಉಲ್ಲೇಖೀಸಲಾಗಿದೆ. ಹಾಗೊಂದು ವೇಳೆ ಪ್ರಸ್ತಾವನೆ ಸಲ್ಲಿಸಿದರೆ, ಅದು ಮೊದಲಿನಿಂದಲೂ ಗುತ್ತಿಗೆ ರೂಪದಲ್ಲಿ ಬಸ್‌ಗಳನ್ನು ಪಡೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಸಾರಿಗೆ ಸಚಿವರ ಆಶಯಕ್ಕೆ ವಿರುದ್ಧವಾಗುತ್ತದೆ. ಹಾಗಂತ ಯೋಜನೆಯಿಂದ ದೂರ ಉಳಿದರೆ, ಅನಾಯಾಸವಾಗಿ ಕೋಟ್ಯಂತರ ರೂ. ಸಬ್ಸಿಡಿ ಕೈತಪ್ಪುತ್ತದೆ. ಜತೆಗೆ ಎಲೆಕ್ಟ್ರಿಕ್ ಬಸ್‌ಗಳ ಭಾಗ್ಯ ಕೂಡ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಅಧಿಕಾರಿಗಳು ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ.
‘ಫೇಮ್’ ಮೊದಲ ಹಂತದಲ್ಲಿ 80 ಎಲೆಕ್ಟ್ರಿಕ್ ಬಸ್‌ಗಳನ್ನು ನೀಡಲು ಕೇಂದ್ರ ಒಪ್ಪಿಗೆ ಸೂಚಿಸಿತ್ತು. ಮುಂಗಡವಾಗಿ ಹಣ ಕೂಡ ಬಿಡುಗಡೆ ಮಾಡಿತ್ತು. ಆದರೆ, ಖರೀದಿ ಅಥವಾ ಗುತ್ತಿಗೆ ಗುದ್ದಾಟದಲ್ಲಿಯೇ ಅದು ಬಳಕೆ ಆಗಲಿಲ್ಲ. ಕೊಟ್ಟ ಅನುದಾನ ಬಳಸಿಕೊಳ್ಳದ ಬಿಎಂಟಿಸಿಗೆ ಬಡ್ಡಿಸಹಿತ ಹಿಂಪಾವತಿಸುವಂತೆ ಕೇಂದ್ರ ಸರ್ಕಾರ ತಾಕೀತು ಕೂಡ ಮಾಡಿದೆ. ಈಗ ಆ ಹಣವನ್ನು ಉಳಿಸಿಕೊಳ್ಳುವ ಕಸರತ್ತು ನಡೆದಿದೆ. ಈ ಮಧ್ಯೆಯೇ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳಿಗಾಗಿ ಸಬ್ಸಿಡಿ ನೀಡಲು ಎರಡನೇ ಹಂತದಲ್ಲಿ ಈ ಯೋಜನೆ ಜಾರಿಗೆ ಬರುತ್ತಿದೆ.
‘ಫೇಮ್-2’ರಡಿ ಮುಂದಿನ ಎರಡು-ಮೂರು ವರ್ಷಗಳಲ್ಲಿ ಒಟ್ಟಾರೆ 3,500 ಕೋಟಿ ರೂ. ವೆಚ್ಚದಲ್ಲಿ ಏಳು ಸಾವಿರ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸಲು ಉದ್ದೇಶಿಸಲಾಗಿದೆ. ಈ ಮೊದಲು ಶೇ. 60ರಷ್ಟು ಸಬ್ಸಿಡಿ ನೀಡಲಾಗುತ್ತಿತ್ತು. ಖರೀದಿ ಅಥವಾ ಗುತ್ತಿಗೆ ರೂಪದಲ್ಲಿ ಪಡೆಯಲು ಆಯ್ಕೆಗಳಿದ್ದವು. ಆದರೆ, ಎರಡನೇ ಹಂತದಲ್ಲಿ ಸಬ್ಸಿಡಿ ಮೊತ್ತಕ್ಕೆ ಕತ್ತರಿ ಹಾಕಿದ್ದು, ಗರಿಷ್ಠ 50 ಲಕ್ಷದವರೆಗೆ ಮಾತ್ರ ನೀಡಲಾಗುತ್ತಿದೆ. ಜತೆಗೆ ಗುತ್ತಿಗೆ ರೂಪದಲ್ಲೇ ಪಡೆಯಬೇಕು ಎಂದು ಷರತ್ತು ವಿಧಿಸಲಾಗಿದೆ. ಪ್ರಸ್ತಾವನೆ ಸಲ್ಲಿಸಲು ಜುಲೈವರೆಗೆ ಅವಕಾಶ ಇದೆ.
100 ಬಸ್‌ಗಳ ಖರೀದಿಗೆ ಸಿದ್ಧತೆ?: ‘ಗೊಂದಲದ ನಡುವೆಯೇ ಬಿಎಂಟಿಸಿಯು ‘ಫೇಮ್-2’ಗೆ ಮೊದಲದ ಹಂತದಲ್ಲಿ ಸುಮಾರು 100ರಿಂದ 150 ಎಲೆಕ್ಟ್ರಿಕ್ ಬಸ್‌ಗಳಿಗೆ ಸಬ್ಸಿಡಿಗಾಗಿ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಿದೆ. ಮಾರ್ಗಸೂಚಿಗಳು ಬಂದ ನಂತರ ನಾವು ಪ್ರಸ್ತಾವನೆ ಸಲ್ಲಿಸುತ್ತೇವೆ. ಆಮೇಲೆ ‘ಫೇಮ್-2′ ತಂಡ ಶೀಘ್ರದಲ್ಲೇ ಭೇಟಿ ನೀಡಲಿದೆ. ಒಟ್ಟಾರೆ ವಾರದಲ್ಲಿ ಸ್ಪಷ್ಟ ಚಿತ್ರಣ ಹೊರಬೀಳಲಿದೆ’ ಎಂದು ಹೆಸರು ಹೇಳಲಿಚ್ಛಿಸದ ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.
‘ಬರುವ ನಿರ್ದೇಶಕರ ಮಂಡಳಿ ಸಭೆಯಲ್ಲಿ ಇದು ಚರ್ಚೆಗೆ ಬರಲಿದೆ. ಖರೀದಿಗೆ ಇದರಲ್ಲಿ ಅವಕಾಶ ಇಲ್ಲ ಎನ್ನುವುದನ್ನೂ ಸಭೆ ಗಮನಕ್ಕೆ ತರಲಾಗುವುದು. ಅಲ್ಲದೆ, ಸಾರಿಗೆ ಸಚಿವರು ಮತ್ತು ಅಧ್ಯಕ್ಷರೊಂದಿಗೂ ಚರ್ಚೆ ನಡೆಸಿ, ನಂತರ ತೀರ್ಮಾನಿಸಲಾಗುವುದು. ಸದ್ಯಕ್ಕೆ ಎಷ್ಟು ಬಸ್‌ಗಳ ಪೂರೈಕೆಗೆ ಪ್ರಸ್ತಾವನೆ ಸಲ್ಲಿಸಬೇಕು ಎಂಬುದು ಇನ್ನೂ ತೀರ್ಮಾನ ಆಗಿಲ್ಲ. ಇದನ್ನು ಸಚಿವರು ಅಥವಾ ಅಧ್ಯಕ್ಷರೇ ತಿಳಿಸಲಿದ್ದಾರೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಎನ್.ವಿ. ಪ್ರಸಾದ್ ‘ಉದಯವಾಣಿ’ಗೆ ಸ್ಪಷ್ಟಪಡಿಸಿದರು.
ಫೇಮ್-1ರ ಕತೆ:
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ
Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ
S.Korea: ರನ್ ವೇಯಲ್ಲಿ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.