ಎಡರಂಗಕ್ಕೆ ಶಬರಿಮಲೆ ವಿವಾದ ಮುಳುವಾಯಿತೇ?

ಐಕ್ಯರಂಗ  -ಬಿಜೆಪಿಗೆ ಪಾಠ ಕಲಿಸಲು ಹೊರಟು ಎಡವಟ್ಟು

Team Udayavani, May 27, 2019, 10:36 AM IST

ks1

ಕುಂಬಳೆ: ಭಾರೀ ಗೆಲುವಿನ ಭರವಸೆಯಲ್ಲಿದ್ದ ಆಡಳಿತ ಪಕ್ಷವಾದ ಎಡರಂಗ ಕೇವಲ ಒಂದು ಸ್ಥಾನದಲ್ಲಿ ತೃಪ್ತಿ ಪಡುವಂತಾಗಿದೆ. ಹೀನಾಯ ಸೋಲು ಅನುಭವಿಸಲು ಶಬರಿಮಲೆ ಅಯ್ಯಪ್ಪನ ಶಾಪವೆಂಬ ಆಭಿಪ್ರಾಯ ಒಂದು ವರ್ಗದ ಮತದಾರರದು.

ಸರ್ವೋತ್ಛ ನ್ಯಾಯಾಲಯವು ಎಲ್ಲಾ ವಯೋಮಾನದ ಸ್ತ್ರೀಯರಿಗೂ ಶಬರಿಮಲೆ ದರ್ಶನ ನಡೆಸಬಹುದೆಂಬ ತೀರ್ಪನ್ನು ರಾಜಕೀಯ ಲಾಭ ಪಡೆಯಲು ಮುಂದಾಗಿ ಚುನಾವಣೆಯಲ್ಲಿ ಭಂಗಕ್ಕೀಡಾಗಬೇಕಾ ಯಿತು. ಸರ್ವೋತ್ಛ ನ್ಯಾಯಾಲಯದ ಆದೇಶವನ್ನು ಪ್ರತಿಭಟಿಸಿದ ಐಕ್ಯರಂಗ ಮತ್ತು ಬಿ.ಜೆ.ಪಿ.ಗೆ ಪಾಠ ಕಲಿಸಲು ಎಡರಂಗ ಸರಕಾರ ಹೊರಟು ನಾಸ್ತಿಕ ಯುವತಿಯರನ್ನು ಕ್ಷೇತ್ರ ಪ್ರವೇಶಿಸಲು ಅನುಮತಿ ನೀಡಿ ಜೇನುಗೂಡಿಗೆ ಕಲ್ಲೆಸದಂತಾಗಿದೆ.  ಯುವತಿಯರ ಪ್ರವೇಶವನ್ನು ತಡೆಯುವ ಬಿಜೆಪಿ ನಿಲುವನ್ನು ವಿರೋಧಿಸಿ ಶಬರಿಮಲೆ ಆಚಾರ ಸಂಹಿತೆಗೆ ಭಂಗ ತರಲು ಯತ್ನಿಸಿಚುನಾವಣೆಯಲ್ಲಿ ಮುಗ್ಗರಿ ಬೇಕಾಯಿತು ಎನ್ನುತ್ತಾರೆ ಮತದಾರರು.

ಸ್ವಪಕ್ಷೀಯರಿಂದಲೇ ವಿರೋಧ ಮುಜರಾಯಿ ಸಚಿವರ ಸಹಿತ ಅನೇಕ ಸಿಪಿಎಂನಾಯಕರು ಶಬರಿಮಲೆ ನಿಲುವಿನಿಂದ ಚುನಾವಣೆಯಲ್ಲಿ ಎಡ ವಟ್ಟಾಗಿರುವುದಾಗಿ ಎಚ್ಚರಿಸಿರಿದ್ದಾರೆ ಆದರೆ ಇದನ್ನು ಮುಖ್ಯಮಂತ್ರಿ ಹಾಗೂ ಸಿಪಿಎಃ ರಾಜ್ಯ ಕಾರ್ಯದರ್ಶಿ ಒಪ್ಪಲು ತಯಾರಿಲ್ಲ . ಸಿಪಿಎಂ ಗೆ ಸೆರಿದ ಸಹಸ್ರಾರು ಭಕ್ತರು ಅದೆಷೋr ಮಂದಿ ಪ್ರತಿವರ್ಷ ಅಯ್ಯಪ್ಪನ ಭಕ್ತರಾಗಿ ಮಾಲೆಧರಿಸಿ ವ್ರತಾಧಾರಿಗಳಾಗಿ ಕ್ಷೇತ್ರ ದರ್ಶನ ನಡೆಸತ್ತಿದ್ದಾರೆ.

ನಾಸ್ತಿಕ ಪಕ್ಷದ ಆಸ್ತಿಕರಾದ ಇವರ ಮನಸ್ಸಿಗೂ ಸರಕಾರದ ನಿಲುವಿ ನಿಂದ ಬೇಸರಗೊಂಡಿದ್ದರು. ಹೋರಾಟದ ಲಾಭ ಐಕ್ಯರಂಗಕ್ಕೆ ಬಿಜೆಪಿ ನಾಯಕರು ಪಕ್ಷದ ಕಾರ್ಯಕರ್ತರ ತಂಡದೊಂದಿಗೆ ಯುವತಿಯರ ಪ್ರವೇಶದ ವಿರುದ್ಧ ವ್ಯವಸ್ಥಿತವಾಗಿ ಬಾರೀ ಹೋರಾಟ ನಡೆಸಿದರು

ಕ್ಷೇತ್ರ ಪರಿಸರದಲ್ಲಿ ಪಕ್ಷದ ಮತ್ತು ಅನೇಕ ಅಯ್ಯಪ್ಪ ಭಕ್ತ ಕಾರ್ಯಕರ್ತರು ಸರಕಾರದ ನಿಲುವನ್ನು ಪ್ರತಿಭಟಿಸಿ ಜೈಲುವಾಸ ಅನುಭವಿಸ ಬೇಕಾಯಿತು. ಪ್ರತಿಭಟನೆಯೊಂದಿಗೆ ಕ್ಷೇತ್ರ ದರ್ಶನ ಮಾಡಲು ಹೊರಟ ಮಾಲೆ ಧರಿಸಿ ಇರುಮುಡಿ ಹೊತ್ತು ಸಾಗಿದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್‌ ಅವರನ್ನು ಪೊಲೀಸರು ದಾರಿ ಮಧ್ಯದಲ್ಲಿ ತಡೆದು ಕೇಸು ದಾಖಲಿಸಿ ತಿಂಗಳ ಕಾಲ ಸೆರೆಮನೆಯಲ್ಲಿ ಇರಿಸಲಾಯಿತು. ಮಾತ್ರವಲ್ಲದೆ ಶಬರಿಮಲೆ ಪ್ರತಿಭಟನೆಯ ನೆಪದಲ್ಲಿ ಇವರ ಮೇಲೆ ಸುಮಾರು 250 ರಷ್ಟು ಕೇಸುಗಳನ್ನು ದಾಖಲಿಸಲಾಯಿತು. ಇದು ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭವಾಗಬಹುದೆಂಬ ಪಕ್ಷದ ನಿಲುವು ಬದಲಾಗಿ ಇದರ ಲಾಭ ಐಕ್ಯರಂಗದ ಪಾಲಾಗಿದೆ

ಸಿಪಿಎಂ - ಸಿಎಂ ನಿಲುವು ಬದಲಾಯಿಸಬೇಕಾಗಿದೆ
ತತ್ವಸಿದ್ಧಾಂತ ಪಕ್ಷವಾದ ಸಿಪಿಎಂ ಪಕ್ಷದ ಮತಗಳು ಅನ್ಯಪಾಲಾಗಿದೆ.ಮೋದಿ ವಿರುದ್ಧದ ಅಲ್ಪಸಂಖ್ಯಾತರ ಮತ ಕೋಡೀಕರಣವಾಗಿದೆ .ಬಿಜೆಪಿ ಮತಗಳು ಬಲ್ಕ್ ಆಗಿ ಐಕ್ಯರಂಗ ಪಾಲಾಗಿದೆ ಎಂಬುದಾಗಿ ಸಿಪಿಎಂ ಸಮರ್ಥಿಸಿ ಪಕ್ಷದ ಅಸಮರ್ಥನೆಗೆ ಅಡಿಗೆ ಬಿದ್ದರೂ ಮೂಗು ಮೇಲೆನ್ನುತ್ತಿದೆ.ಆದರೂ ಇದೀಗ ಹಠಮಾರಿತನ ಬಿಡದ ಸಿಎಂ ಸೋತರೂ ತನ್ನ ನಿಲುವು ಬದಲಾಯಿಸುವುದಿಲ್ಲ ವೆಂಬುದಾಗಿ ಸಾರಿದ್ದಾರೆ. ನಿಲುವು ಬದಲಾಯಿಸದರಿ ಇದರಿಂದ ನಮ್ಮ ಪಕ್ಷಕ್ಕೆ ಇನ್ನೂ ಲಾಭವಾಗಲಿದೆ ಎಂಬುದಾಗಿ ಪ್ರತಿಪಕ್ಷದ ನಾಯಕರು ಸವಾಲೊಡ್ಡಿದ್ದಾರೆ. ಲಕ್ಷಾನುಗಟ್ಟಲೆ ಅಯ್ಯಪ್ಪ ಭಕ್ತರ ಭಾವನಗೆ ಧಕ್ಕೆಯಾದ ಆಚಾರ ಸಂಹಿತೆ ಉಲ್ಲಘನೆಯಿಂದ ಪಕ್ಷಕ್ಕೆ ಹಿನ್ನಡೆಯಾಗಿರುವುದಾಗಿಯೂ ಇದನ್ನು ತಿದ್ದಿಕೊಳ್ಳದಿದ್ದಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಇನ್ನಷ್ಟು ಹೊಡೆತವಾಗಲಿದೆ ಎಂಬುದಾಗಿ ಎಡಪಕ್ಷದ ಅಯ್ಯಪ್ಪ ಭಕ್ತರ ಅನಿಸಿಕೆಯಾಗಿದೆ. ಆದುದರಿಂದ ಸಿ.ಪಿ.ಎಂ. ಮತ್ತು ಸಿಎಂ ನಿಲುವು ಬದಲಾಯಿಸಬೇಕಾಗಿದೆ.ರಾಜ್ಯ ಸಿಎಂ ಶಬರಿಮಲೈ ಆಚಾರ ಉಲ್ಲಂಘನೆಗೆ ಪ್ರಾಯಶ್ಚಿತವಾಗಿ ಮಾಲೆ ಧರಿಸಿ 40 ದಿನ ವ್ರತಾಚರಣೆ ಆಚರಿಸಿ ಶ್ರೀ ಶಬರಿಮಲೆ ಯಾತ್ರೆ ಕೈಗೋಡು ಪಾಪ ಪರಿಹಾರ ಮಾಡಿಕೊಳ್ಳಬೇಕೆಂಬುದಾಗಿ ಐಕ್ಯರಂಗದ ನಾಯಕರು ಛೇಡಿಸುತ್ತಿರುವರು. ಅಂತೂ ಶಬರಿಮಲೆ ವಿಚಾರದಲ್ಲಿ ರಾಜ್ಯದ ರಾಜಕೀಯ ನಿಲುವು ಬದಲಾಗಿ ಎಡರಂಗಕ್ಕೆ ಮೈನಸ್‌ ಆಗಿ ಐಕ್ಯರಂಗಕ್ಕೆ ಪ್ಲಸ್‌ ಆಗಿರುವುದಂತೂ ಸತ್ಯವಾಗಿದೆ.

ಬಿಜೆಪಿಗೆ ನಾಯಕರ ಹೇಳಿಕೆಯಿಂದ ಪಕ್ಷಕ್ಕೆ ಹಿನ್ನಡೆ
ಸವೋತ್ಛ ನ್ಯಾಯಾಲಯದ ತೀರ್ಪನ್ನು ಆರಂಭದಲ್ಲಿ ಸ್ತ್ರೀ ಸ್ವಾತಂತ್ರ್ಯದ ನೆಪದಲ್ಲಿ ಬಿಜೆಪಿಯ ಕೆಲವು ನಾಯಕರು ಸ್ವಾಗತಿಸಿರುವುದೂ ಈ ಪಕ್ಷಕ್ಕೆ ಚುನಾವಣೆಯಲ್ಲಿ ಮುಳುವಾಯಿತು.ಮುಂದಿನ ಶಬರಿಮಲೆ ಪ್ರತಿಭಟನೆಯಲ್ಲಿ ಇದನ್ನು ಪ್ಯಾಚಪ್‌ ಮಾಡುವಲ್ಲಿ ಪಕ್ಷ ವಿಫಲವಾಯಿತು.ಎಂಬ ಅನಿಸಿಯೂ ಸ್ವಪಕ್ಷೀಯರದ ಬಿ.ಜೆ.ಪಿ. ಪಕ್ಷ ದ ಅಭ್ಯರ್ಥಿಗಳು ರಾಜ್ಯದಲ್ಲಿ ಗೆಲ್ಲುವುದಿಲ್ಲ.ಆದ ಕಾರಣ ಗೆಲುವಿನ ಐಕ್ಯರಂಗದ ಅಭ್ಯರ್ಥಿಗಳಿಗೆ ಬಿಜೆಪಿಯ ಅಯ್ಯಪ್ಪ ಭಕ್ತರು ಮತಹಾಕಿ ಎಡರಂಗದ ಮೇಲಿನ ರಾಜಕೀಯ ಸೇಡು ತೀರಿಸಿಕೊಂಡರು. ಮಾತ್ರವಲ್ಲದೆ ಕೆಲವೊಂದು ಅಯ್ಯಪ್ಪ ಸಿಪಿಎಂ ಭಕ್ತರೂ ಅಡ್ಡ ಮತ ಚಲಾಯಿಸಿದರು.ಇದು ಐಕ್ಯರಂಗಕ್ಕೆ ಲಾಭವಾಯಿತು.

ಟಾಪ್ ನ್ಯೂಸ್

police crime

Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Shabarimala

Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು

1-eng

Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್‌ ತಂಡ ಪ್ರಕಟ

PM Modi

PM Modi;ಇಂದು 71000ಕ್ಕೂ ಅಧಿಕ ಮಂದಿಗೆ ಉದ್ಯೋಗ ಪತ್ರ ವಿತರಣೆ

naksal (2)

Chhattisgarh; ನಕ್ಸಲ್‌ ವ್ಯಾಪ್ತಿ 9500 ಚ.ಕಿ.ಮೀ.ಗೆ ಇಳಿಕೆ

ISRO 2

ISRO; ಬಾಹ್ಯಾಕಾಶದಲ್ಲಿ ಅಲಸಂಡೆ, ಪಾಲಕ್‌ ಬೆಳೆಯಲು ಪ್ಲಾನ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

police crime

Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Shabarimala

Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು

1-eng

Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್‌ ತಂಡ ಪ್ರಕಟ

PM Modi

PM Modi;ಇಂದು 71000ಕ್ಕೂ ಅಧಿಕ ಮಂದಿಗೆ ಉದ್ಯೋಗ ಪತ್ರ ವಿತರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.