ಕದ್ರಿ ಪಾರ್ಕ್: ಮಾವಿನ ಮೇಳಕ್ಕೆ ಸಂಭ್ರಮದ ತೆರೆ
Team Udayavani, May 27, 2019, 11:19 AM IST
ಮಹಾನಗರ: ತೋಟಗಾರಿಕೆ ಇಲಾಖೆ ದ.ಕ., ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಮಂಡಳಿ ಸಹಯೋಗದಲ್ಲಿ ಕದ್ರಿ ಉದ್ಯಾನವನದಲ್ಲಿ ಶುಕ್ರವಾರದಿಂದ ಆರಂಭವಾದ ಬೆಳೆಗಾರಿಂದ ಬಳಕೆದಾರರಿಗೆ ನೇರ ಮಾವು ಮಾರಾಟ ಮೇಳಕ್ಕೆ ರವಿವಾರ ಸಂಭ್ರಮದ ತೆರೆ ಬಿದ್ದಿದೆ.
ಮೇಳದಲ್ಲಿ ಮಲ್ಗೊವಾ, ದಶಹರಿ, ಸಕ್ಕರೆಗುತ್ತಿ, ಪೈರಿ, ಮುಂಡಾ, ಬೇಗನ್‌ಪಲ್ಲಿ, ಸಿಂಧೂರ, ಶುಗರ್ ಬೇಬಿ, ಕೇಸರ್, ಆಪೂಸ್, ಹಿಮಾಯತ್, ಮಲ್ಲಿಕಾ, ರಸಪೂರಿ, ಬಾದಾಮಿ, ಸೇಂದೂರು, ಸೋತಾಪುರಿ, ಸುವರ್ಣರೇಖ ಸೇರಿದಂತೆ 10ರಿಂದ 15ಕ್ಕೂ ಅಧಿಕ ವೈವಿಧ್ಯಮಯ ತಳಿಯ ಮಾವುಗಳನ್ನು ಗ್ರಾಹಕರು ಖರೀದಿಸಿ ಮಾವಿನ ರುಚಿ ಸವಿದರು. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಮಾವು ಬೆಳೆಗಾರರಿಗೆ ಉತ್ತಮ ಬೆಲೆ ನೀಡುವ ಉದ್ದೇಶದಿಂದ, ಮಾವು ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ಕಾರಣದಿಂದ ಹಾಗೂ ನೈಸರ್ಗಿಕವಾಗಿ ಮಾಗಿಸಿದ ಮಾವುಗಳನ್ನು ಗ್ರಾಹಕರಿಗೆ ನೀಡುವ ಉದ್ದೇಶದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮಾವು ಮೇಳಗಳನ್ನು ಆಯೋಜಿಸಲಾಗುತ್ತಿದೆ.
ರಜಾದಿನ ಮೇಳಕ್ಕೆ ಉತ್ತಮ ಸ್ಪಂದನೆ
ರವಿವಾರ ರಜಾದಿನವಾದ್ದರಿಂದ ಮಾವು ಮೇಳಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಮುಂಜಾನೆಯಿಂದಲೇ ಮಾವು ಮೇಳದತ್ತ ಆಗಮಿಸಿದ ಜನರು ತಮಗೆ ಇಷ್ಟವಾದ ತಳಿಯ ಮಾವುಗಳನ್ನು ಖರೀದಿಸಿದರು. ಕಳೆದ ಎರಡು ದಿನಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದ ಮೇಳಕ್ಕೆ ರವಿವಾರ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.