ಸಂಸತ್ ಪ್ರವೇಶಿಸಿದ ಸೊಲ್ಲಾಪುರದ ಸಾಧು
•ಮಹಾರಾಷ್ಟ್ರ ಮಾಜಿ ಸಿಎಂ ಸುಶೀಲಕುಮಾರ ಶಿಂಧೆಗೆ ಸೋಲಿನ ರುಚಿ ತೋರಿಸಿದ ಜಯಸಿದ್ಧೇಶ್ವರ ಸ್ವಾಮೀಜಿ
Team Udayavani, May 27, 2019, 11:18 AM IST
ಸೊಲ್ಲಾಪುರ: ಸೊಲ್ಲಾಪುರ ಲೋಕಸಭೆ ಕ್ಷೇತ್ರದ ನೂತನ ಸಂಸದರಾಗಿ ಆಯ್ಕೆಯಾದ ಡಾ| ಜಯಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಅಭಿಮಾನಿಗಳು ಸನ್ಮಾನಿಸಿದರು.
ಸೊಲ್ಲಾಪುರ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಸುಶೀಲಕುಮಾರ ಶಿಂಧೆ ಸತತ ಎರಡನೇ ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದು ಅವರ ದೀರ್ಘ ರಾಜಕೀಯ ಜೀವನಕ್ಕೆ ತಡೆಯೊಡ್ಡಿದಂತಾಗಿದ್ದು, ರಾಜಕೀಯ ಭವಿಷ್ಯಕ್ಕೆ ಮಾರಕವಾದಂತಾಗಿದೆ.
ಸೊಲ್ಲಾಪುರ ಲೋಕಸಭೆ ಚುನಾವಣೆಯಲ್ಲಿ 1.50 ಲಕ್ಷ ಮತಗಳ ಅಂತರದಿಂದ ಹೀನಾಯವಾಗಿ ಸೋಲುಂಡ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸುಶೀಲಕುಮಾರ ಶಿಂಧೆ ಗೆಲುವಿಗಾಗಿ ಹರಸಾಹಸ ಪಟ್ಟಿದ್ದು ಸುಳ್ಳಲ್ಲ. ಸುಶೀಲಕುಮಾರ ಶಿಂಧೆ ಅವರು 3,54,994 ಮತಗಳನ್ನು ಪಡೆದರೆ, ಬಿಜೆಪಿಯ ಕನ್ನಡಿಗ ಡಾ| ಜಯಸಿದ್ಧೇಶ್ವರ ಸ್ವಾಮೀಜಿ 5,05,132 ಮತಗಳನ್ನು ಪಡೆಯುವ ಮೂಲಕ 1,50,138 ಮತಗಳ ಅಂತರದಿಂದ ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿದ್ದಾರೆ.
ಸೊಲ್ಲಾಪುರ ಮೀಸಲು ಮತಕ್ಷೇತ್ರದಿಂದ ಸ್ಪರ್ಧಿಸಿದ ವಂಚಿತ ಬಹುಜನ ಆಘಾಡಿ ಪಕ್ಷದ ಅಭ್ಯರ್ಥಿ ಪ್ರಕಾಶ ಅಂಬೇಡ್ಕರ್ ಅವರು 1,63,870 ಮತಗಳನ್ನು ಪಡೆದುಕೊಂಡಿದ್ದರಿಂದ ಸುಶೀಲಕುಮಾರ ಶಿಂಧೆ ಸೋಲಲು ಕಾರಣವಾಯಿತು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಬಹುತೇಕವಾಗಿ ದಲಿತ ಮತ್ತು ಮುಸ್ಲಿಂ ಸಮುದಾಯವನ್ನು ಮತ ಬ್ಯಾಂಕ್‌ನ್ನಾಗಿ ಪರಿವರ್ತಿಸಿಕೊಂಡ ಕಾಂಗ್ರೆಸ್‌ಗೆ ಪ್ರಕಾಶ ಅಂಬೇಡ್ಕರ್ ವಿರುದ್ಧವಾಗಿ ನಿಂತಿದ್ದರಿಂದ ಸುಶೀಲಕುಮಾರ ಶಿಂಧೆ ರಾಜಕೀಯ ಭವಿಷ್ಯಕ್ಕೆ ಎಳ್ಳು ನೀರು ಬಿಟ್ಟಂತಾಗಿದೆ.
ಬಿಜೆಪಿ, ಕಾಂಗ್ರೆಸ್ ಮತ್ತು ವಂಚಿತ ಬಹುಜನ ಆಘಾಡಿ ಪಕ್ಷ ಸೇರಿದಂತೆ ಮೂವರು ಅಭ್ಯರ್ಥಿಗಳ ಮಧ್ಯೆ ಪೈಪೋಟಿ ಹೆಚ್ಚಿತ್ತು. ಜಾತಿ ಲೆಕ್ಕಾಚಾರದ ಮೇಲೆ ಚುನಾವಣೆ ರಂಗೇರಿತ್ತು. 2014ರ ಸೋಲಿನಿಂದ ಪಾಠ ಕಲಿತಿದ್ದ ಸುಶೀಲಕುಮಾರ ಶಿಂಧೆ ಹಲವಾರು ಸವಾಲುಗಳನ್ನು ಎದುರಿಸಿ ಹಣಬಲ ಮತ್ತು ಜನಬಲದಿಂದ ಪ್ರತಿ ಮತದಾರರನ್ನು ತಲುಪಲು ಪ್ರಯತ್ನಿಸಿದ್ದರು.
ಶಿಂಧೆ ಅವರು ಸೊಲ್ಲಾಪುರ ಮತಕ್ಷೇತ್ರದಲ್ಲಿ ಸುಮಾರು 27 ಸಾವಿರ ಕೋಟಿ ರೂ. ವೆಚ್ಚದಲ್ಲಿ ಎನ್‌ಟಿಪಿಸಿ, ಪಾವರ್ ಗ್ರೇಡ್ ಹಾಗೂ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಈ ಕಾರ್ಯಗಳನ್ನು ಮುಂದಿಟ್ಟುಕೊಂಡು ಶಿಂಧೆ ಪ್ರಚಾರ ಕಾರ್ಯ ಕೈಗೊಂಡಿದ್ದರು. ಶಿಂಧೆ ಸೋಲಿನ ಭಯದಿಂದ ಪ್ರಚಾರ ಸಭೆಗಳಲ್ಲಿ ಪದೆ ಪದೇ ಇದು ತಮ್ಮ ಕೊನೆ ಚುನಾವಣೆಯಾಗಿದೆ ಎಂದು ಹೇಳುತ್ತಿದ್ದರು.
ಲಿಂಗಾಯತ ಸಮುದಾಯದಿಂದ ಬಂದ ಡಾ| ಜಯಸಿದ್ಧೇಶ್ವರ ಸ್ವಾಮೀಜಿ ಅವರನ್ನು ಕಣಕ್ಕಿಳಿಸುವುದರ ಮೂಲಕ ಬಿಜೆಪಿ ಶಿಂಧೆ ವಿರುದ್ಧ ಪ್ರಬಲವಾದ ಸವಾಲನ್ನು ಹುಟ್ಟುಹಾಕಿತ್ತು. ಸುಮಾರು 63 ವಯಸ್ಸಿನ ಡಾ| ಜಯಸಿದ್ಧೇಶ್ವರ ಶಿವಾಚಾರ್ಯರು ಮಠಗಳನ್ನು ನಡೆಸುತ್ತಿದ್ದಾರೆ. ಈ ಮಠಗಳಿಗೆ ಲಿಂಗಾಯತರು ದೊಡ್ಡ ಆಸ್ತಿ ಇದ್ದಂತೆ. ಅಲ್ಲದೇ ಈ ಭಾಗದಲ್ಲಿ ಪ್ರವಚನಗಳ ಮೂಲಕ ಜನರ ಮನಸ್ಸು ಸೆಳೆದಿದ್ದಾರೆ. ಇದೀಗ ಅಧ್ಯಾತ್ಮಿಕದಿಂದ ರಾಜಕೀಯ ಕ್ಷೇತ್ರದ ಕಡೆಗೆ ಬಂದು ಗೆಲುವು ಸಾಧಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಲಿಂಗಾಯತ ಸಮುದಾಯದ ನಾಯಕ ವಿಜಯಕುಮಾರ ದೇಶಮುಖ ಮತ್ತು ಸಹಕಾರ ಸಚಿವ, ಮರಾಠಾ ಸಮುದಾಯದ ನಾಯಕ ಸುಭಾಷ್ ದೇಶಮುಖ ತಮ್ಮ ಆಂತರಿಕ ಮತ ಭೇದ ಮರೆತು ಸಕ್ರಿಯವಾಗಿ ಮತ ಬೇಟೆಯಲ್ಲಿ ತೊಡಗಿ ಲಿಂಗಾಯತ ಮತ್ತು ಮರಾಠಾ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಡಾ| ಶಿವಾಚಾರ್ಯರು ಮತ್ತು ಅಂಬೇಡ್ಕರ್ ಪ್ರವೇಶದೊಂದಿಗೆ ಹಿಂದುಳಿದ ಮತಗಳನ್ನು ಸೆಳೆಯುವ ಬೆಳವಣಿಗೆಯ ವಿಷಯಗಳ ನಡುವೆಯೂ ಸ್ಪರ್ಧೆ ಏರ್ಪಟ್ಟಿತ್ತು. ಇಡಿ ಚುನಾವಣೆಯು ನಿಜವಾದ ವಿಷಯಗಳಿಗಿಂತ ಜಾತಿ-ಧರ್ಮಗಳ ಮೇಲೆ ಹೋರಾಟ ನಡೆಸಿರುವುದು ಸುಳ್ಳಲ್ಲ ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ. ಇವೆಲ್ಲ ಬೆಳವಣಿಗೆಯು ಕಾಂಗ್ರೆಸ್ ಹಿರಿಯ ನಾಯಕ ಸುಶೀಲಕುಮಾರ ಶಿಂಧೆ ಅವರ ರಾಜಕೀಯ ಭವಿಷ್ಯಕ್ಕೆ ತಡೆಯೊಡ್ಡಿದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.