ಶಾಸಕರ ಸಂಧಾನ: ಮತ ಬಹಿಷ್ಕಾರ ವಾಪಸ್
ಮತಪಟ್ಟಿಯಲ್ಲಿ ಹೆಸರಿಲ್ಲದ್ದಕ್ಕೆ ನಾಗರಿಕರಿಂದ ನಿರಂಜನ್‌ರಿಗೆ ದೂರು
Team Udayavani, May 27, 2019, 1:16 PM IST
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ 23 ನೇ ವಾರ್ಡ್ ವ್ಯಾಪ್ತಿಯ ಅಂಬೇಡ್ಕರ್ ಕಾಲೋನಿ ಜನರು ಮತದಾನ ಬಹಿಷ್ಕಾರದ ನಿರ್ಧಾರ ಕೈಬಿಡುವಂತೆ ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ಮನವೊಲಿಸಿದರು.
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ 23 ನೇ ವಾರ್ಡ್ ವ್ಯಾಪ್ತಿಯ ಅಂಬೇಡ್ಕರ್ ಕಾಲೋನಿಯ ಜನರು ಮತ ದಾನ ಬಹಿಷ್ಕಾರದ ನಿರ್ಧಾರ ಕೈಬಿಡುವಂತೆ ಮನವೊಲಿಸುವಲ್ಲಿ ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ಯಶಸ್ವಿಯಾದರು.
ಸ್ಥಳೀಯರ ದೂರು:ವಾರ್ಡ್‌ನ ಸಮುದಾಯ ಭವನದಲ್ಲಿ ಸಮಾವೇಶಗೊಂಡಿದ್ದ ವಾರ್ಡ್ ನಾಗರಿಕ ರೊಂದಿಗೆ ನಾವು ಪಟ್ಟಣದಲ್ಲಿ ವಾಸವಿದ್ದರೂ ಪುರಸಭೆ ಹೊರತು ಉಳಿದೆಲ್ಲಾ ಚುನಾವ ಣೆಗಳಲ್ಲಿ ವೀರನಪುರ ಗ್ರಾಮಕ್ಕೆ ತೆರಳಿ ನಮ್ಮ ಹಕ್ಕು ಚಲಾಯಿಸಬೇಕು. ಈಗ ಪುರಸಭೆ ಚುನಾ ವಣೆ ಬಂದಿದ್ದು, ವಾರ್ಡ್‌ನ 115 ಮಂದಿ ಹೆಸ ರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟಿರುವ ಕಾರಣ ನಾವು ಹಕ್ಕಿನಿಂದ ವಂಚಿತರಾಗಿದ್ದೇವೆ. ಹೀಗಾಗಿ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಅವಕಾಶ ಮಾಡಿಸಿಕೊಡಿ, ಇಲ್ಲವಾದರೆ ನಾವುಗಳು ಹಕ್ಕು ಚಲಾಯಿಸುವುದಿಲ್ಲ ಎಂದು ವಾದಿಸಿದರು.
ಮನವೊಲಿಕೆ:ಚುನಾವಣೆ ಹೊಸ್ತಿಲಲ್ಲಿ ಕೈ ಬಿಟ್ಟಿರುವ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವ ಅವಕಾಶವಿಲ್ಲ. ಹೀಗಾಗಿ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಮತದಾರರ ಪಟ್ಟಿಗೆ ಹೆಸರು ಸೇರಿಸುವ ಮತ್ತು ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲೂ ಪಟ್ಟಣದಲ್ಲೇ ಹಕ್ಕು ಚಲಾಯಿಸುವ ಅವಕಾಶ ಮಾಡಿಸುವ ಬಗ್ಗೆ ಶಾಸಕರು ಭರವಸೆ ನೀಡಿದ ನಂತರ ವಾರ್ಡ್ ನ ನಾಗರಿಕರು ಬಹಿಷ್ಕಾರದ ನಿರ್ಧಾರ ಕೈ ಬಿಡುವುದಾಗಿ ತಿಳಿಸಿದರು.
ಬೆಂಬಲಿಸಿ:ವೀಣಾಮಂಜುನಾಥ್ ವಾರ್ಡ್ ನಿಂದ ಸ್ಪರ್ಧಿಸಿದ್ದು, ಅವರ ಸೇವೆಗೆ ಅವಕಾಶ ಮಾಡಿ, ವಿಧಾನಸಭೆ, ಲೋಕಸಭೆ ಚುನಾವಣೆಯಂತೆ ಪುರಸಭೆ ಚುನಾವಣೆಗೂ ಬೆಂಬಲಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಮಂಡಲ ಅಧ್ಯಕ್ಷ ಎನ್.ಮಲ್ಲೇಶ್, ಪುರಸಭೆ ಮಾಜಿ ಅಧ್ಯಕ್ಷ ಪಿ.ಗಿರೀಶ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಟಿ.ಆರ್.ರಮೇಶ್‌ನಾಯಕ, ನಾಯಕ ಸಮುದಾಯದ ಮುಖಂಡರಾದ, ಬಂಗಾರನಾಯಕ, ಜಯರಾಜು, ಗೋಪಾಲ್, ವಾರ್ಡ್‌ನ ಮುಖಂಡರಾದ ಚಿಕ್ಕಣ್ಣ, ನಾಗೇಶ್, ಚಿನ್ನಯ್ಯ, ಶಿವಲಿಂಗ, ಮಾದೇಶ, ಪ್ರಸಾದ್, ರಾಜು ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
MUST WATCH
ಹೊಸ ಸೇರ್ಪಡೆ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.