ಜನಪದ ಹಾಡಿನ ಮೋಡಿಗೆ ಬಿಸಿಲೂರಿಗರು ಫಿದಾ
Team Udayavani, May 27, 2019, 12:53 PM IST
ಕಲಬುರಗಿ: ಕನ್ನಡ ಭವನದ ಆವರಣದಲ್ಲಿ ಡಾ| ಕೆ. ರಾಮೇಶ್ವರಪ್ಪ ನೇತೃತ್ವದಲ್ಲಿ 'ಹೊನ್ನ ಬಿತ್ತೇವೂ ಹೊಲಕೆಲ್ಲಾ' ಜನಪದ ಮತ್ತು ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.
ಕಲಬುರಗಿ: ನಗರದ ಕನ್ನಡ ಭವನದ ಆವರಣದಲ್ಲಿ ರವಿವಾರದ ಇಳಿಸಂಜೆ ತಂಗಾಳಿಯೊಂದಿಗೆ ತೆರೆದುಕೊಂಡ ಜನಪದ ಸಂಗೀತ ಲೋಕ ಬಿಸಿಲೂರಿನ ಜನತೆಯ ಮನಸೂರೆಗೊಳಿಸಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಮೈಸೂರಿನ ಇನಿದನಿ ಮಣ್ಣ ಮಕ್ಕಳ ಹೊನ್ನ ಪದಗಳ ಬಳಗದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಹೊನ್ನ ಬಿತ್ತೇವೂ ಹೊಲಕೆಲ್ಲಾ’ ಜನಪದ ಮತ್ತು ಸುಗಮ ಸಂಗೀತ ಕಾರ್ಯಕ್ರಮ ನಗರವಾಸಿಗಳ ತನುಮನ ಮುಟ್ಟುವಲ್ಲಿ ಯಶಸ್ವಿಯಾಯಿತು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯ ಮೈಸೂರಿನ ಇನಿದನಿ ಮಣ್ಣ ಮಕ್ಕಳ ಹೊನ್ನಪದಗಳ ಬಳಗದ ಕಲಾವಿದರು ಪ್ರಸ್ತುತ ಪಡಿಸಿದ ಸುಮಧುರ ಗೀತೆಗಳು ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಹಿಡಿದಿಟ್ಟುಕೊಂಡವು. ಕಲಾವಿದರ ಕಂಚಿನ ಕಂಠದಿಂದ ಹೊರಹೊಮ್ಮಿದ ಜನಪದ ಹಾಡುಗಳಿಗೆ ಎಲ್ಲ ವರ್ಗದ ವಯಸ್ಸಿನವರು ಮಾರು ಹೋದರು. ಹಿರಿಯ ಮನಸುಗಳು, ಯುವ ಹೃದಯಗಳು, ಮಹಿಳೆಯರು ಕಲಾವಿದರ ಗಾಯನಕ್ಕೆ ತಲೆದೂಗಿ ನಲಿದು ಸಂಭ್ರಮಿಸಿದರು.
ಜಾನಪದ ಗಾರುಡಿ, ತಂಡದ ನಾಯಕ ಡಾ.ಕೆ.ರಾಮೇಶ್ವರಪ್ಪ ಅವರು ಕಂಡಾಯ ಹೊತ್ತು ಹೆಜ್ಜೆ ಹಾಕುತ್ತಲೇ ಭವನದ ಆವರಣದಲ್ಲಿ ಪ್ರವೇಶಿಸಿದರು. ಅವರು ಸುತ್ತ ಮುತ್ತ ಹಿಂದೆ ಸಹ ಕಲಾವಿದರೆಲ್ಲ ದೇಶಿ ಪದಗಳ ತಾಳಕ್ಕೆ ಹೆಜ್ಜೆ ಹಾಕಿದರು.
ವೇದಿಕೆ ಮೇಲೆ ಹುಮ್ಮಸ್ಸಿನಿಂದ ಕಡಕೋಳ ಮಹಾದೇವಪ್ಪನವರ ‘ಬಸವಣ್ಣನೇ ಗುರು, ಪ್ರಭುದೇವನೇ ಲಿಂಗ’, ‘ಬೆಳ್ಳನೆ ಎರಡೆತ್ತು, ಬೆಳ್ಳಿಯ ಬಾರಕೋಲು’, ‘ತಿಂಗಳು ಮುಳಗಿದವೋ, ರಂಗೋಲಿ ಬೆಳಗಿದವೋ’ ಹೀಗೆ ಒಂದರ ಹಿಂದೊಂದೆ ಹಾಡುಗಳು ಹೊರಹೊಮ್ಮಿದವು.
ನಾಯಕ ರಾಮೇಶ್ವರಪ್ಪನವರು ಏರು ದನಿಯಲ್ಲಿ ಹಾಡುತ್ತಾ, ಕುಣಿಯುತ್ತಿದ್ದರೆ, ಸಹ ಕಲಾವಿದರಾದ ಜನಪದ ಧೀರಧ್ವನಿ, ನರಸಿಂಗಮೂರ್ತಿ, ಜನಪದ ಜೀವಧಾರೆ ಬಿ.ಬಸವರಾಜ, ಜನಪದ ಸಿದ್ಧರೂಪ ನಟರಾಜ ಹರದನಹಳ್ಳಿ, ಜನಪದ ಜಾಣ ರವಿರಾಜ ಹಾಸು, ಜನಪದ ಜೀರುಂಡೆ ಅರುಣ ಕುಮಾರ ವೇದಿಕೆ ತುಂಬಾ ಓಡಾಡುತ್ತಾ ಪ್ರೇಕ್ಷಕರನ್ನು ಸೆಳೆದರು. ಗಾಯಕಿ ಸುಧಾರಾಣಿ ಸುಮಧುರವಾಗಿ ಹಾಡಿದರು. ಇವರ ನಡುವೆ ಜಾನಪದ ಮೋಡಿಕಾರ ಜಗ್ಗು ಜಾದುಗಾರ ತಮ್ಮ ಚಮತ್ಕಾರ ಪ್ರದರ್ಶಿಸಿದರು.
ಗುವಿವಿ ಕುಲಪತಿ ಪ್ರೊ| ಎಸ್.ಆರ್. ನಿರಂಜನ, ಮಹಾನಗರ ಪಾಲಿಕೆ ಆಯುಕ್ತೆ ಬಿ.ಫೌಜಿಯಾ ತರನ್ನುಮ್, ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ, ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ದೌಲತರಾಯ ಮಾಲಿ ಪಾಟೀಲ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.