ತಾಲೂಕಿನ ಎಳನೀರಿಗೆ ಹೆಚ್ಚಿದ ಬೇಡಿಕೆ
ಮೈಸೂರು, ಬೆಂಗಳೂರು, ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಗೋವಾಕ್ಕೆ ರವಾನೆ
Team Udayavani, May 27, 2019, 1:29 PM IST
ಚನ್ನರಾಯಪಟ್ಟಣ ತಾಲೂಕು ಅಡಗೂರು ಗೇಟಿನಲ್ಲಿ ರೈತರಿಂದ ಕೊಂಡ ಎಳನೀರನ್ನು ಮಹರಾಷ್ಟ್ರ ರಾಜ್ಯಕ್ಕೆ ರವಾನಿಸಲು ಲಾರಿಗೆ ತುಂಬಲಾಗುತ್ತಿದೆ.
ಚನ್ನರಾಯಪಟ್ಟಣ: ಮುಂಗಾರು ಪ್ರಾರಂಭವಾದರೂ ಬಿಸಿಲ ಬೇಗೆ ದಿನೇ ದಿನೇ ಹೆಚ್ಚುತ್ತಿರುವು ದರಿಂದ ತಾಲೂಕಿನ ಎಳನೀರಿಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಕ್ಕೆ ರವಾನಿಸಲಾಗುತ್ತಿದೆ.
ರಾಜ್ಯದ ಮೈಸೂರು, ಬೆಂಗಳೂರಲ್ಲದೇ ದೇಶದ ರಾಜ್ಯದಾನಿ ದೆಹಲಿ ಸೇರಿದಂತೆ ಹೊರ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಗೋವಾ ರಾಜ್ಯಕ್ಕೆ ಚನ್ನರಾಯಪಟ್ಟಣದ ರೈತರು ಬೆಳೆದಿರುವ ಲಕ್ಷಾಂತರ ಎಳನೀರು ನಿತ್ಯ ಹತ್ತಾರು ಲಾರಿಯಲ್ಲಿ ರಫ್ತಾಗುತ್ತಿದೆ, ಇದರಿಂದ ಉತ್ತಮ ಎಳನೀರು ಬಿಡುವ ತೆಂಗಿನ ತೋಟದ ಮಾಲೀಕರ ಮೊಗದಲ್ಲಿ ಕೊಂಚ ಸಂತಸ ಕಾಣಲಾರಂಭಿಸಿದೆ.
ಮುಂಗಾರಿನಲ್ಲೂ ಬಿಸಿಲ ಬೇಗೆ: ಬಡವರ ಊಟಿ ಎಂದೇ ಖ್ಯಾತಿ ಪಡೆದಿರುವ ಹಾಸನ ಜಿಲ್ಲೆಯಲ್ಲಿ 38 ಡಿಗ್ರಿಗೂ ಹೆಚ್ಚಿನ ತಾಪಮಾನ ಇರುವುದರಿಂದ ಜಿಲ್ಲೆಯಲ್ಲಿ ತಾಲೂಕಿನ ಎಳನೀರಿಗೆ ಬಹಳ ಬೇಡಿಕೆ ಇದೆ. ತಾಲೂಕು ಅರೆಮಲೆನಾಡು ಪ್ರದೇಶ ಆಗಿರುವುದರಿಂದ ಎಳನೀರು ಕುಡಿಯಲು ತುಂಬಾ ಸವಿಯಾಗಿದ್ದು ದಣಿವಾರಿಸುವಲ್ಲಿ ನೈಸರ್ಗಿಕ ಪಾನೀಯದಲ್ಲಿ ಮೊದಲನೇ ಸ್ಥಾನದಲ್ಲಿದೆ.
ಕುಸಿದ ಅಂತರ್ಜಲ: ಬರಗಾಲ ಆವರಿಸಿರುವುದರಿಂದ ಅಂತರ್ಜಲ ಕುಸಿದಿದ್ದು, ಕೊಳವೆ ಬಾವಿಯಲ್ಲಿ ನೀರಿಲ್ಲದೇ ರೈತರು ತರಕಾರಿ ಹಾಗೂ ಇತರ ಬೆಳೆ ಬೆಳೆಯಲು ಸಾಧ್ಯವಾಗದೇ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಈ ವೆಳೆಯಲ್ಲಿ ತೆಂಗಿನ ತೋಟ ಹೊಂದಿರುವ ರೈತರು ತೆಂಗಿನ ಕಾಯಿ ಹಾಗೂ ಕೊಬ್ಬರಿಯಿಂದ ಹಣಗಳಿಸಿ ಕುಟುಂಬ ನಿರ್ವಹಣೆ ಮಾಡೋಣ ಎಂದರೆ ಬೆಲೆ ಸಲ್ಪಮಟ್ಟಿಗೆ ಕುಸಿದಿದೆ.
ತೋಟಕ್ಕೆ ಹೋಗಿ ಖರೀದಿ: ಈಗಾಗಲೇ ತೆಂಗಿನ ಮರದಲ್ಲಿನ ಕಾಯಿ ಕಿತ್ತು ಕೊಬ್ಬರಿಗಾಗಿ ಶೇಖರಣೆ ಮಾಡಿರುವ ರೈತರ ಸ್ಥಿತಿ ಹೇಳತೀರದು. ರೈತರು ಕುಟುಂಬ ನಿರ್ವಹಣೆ ಮಾಡಲು ಹಣ ಇಲ್ಲದೇ ತೆಂಗಿನ ಮರದಲ್ಲಿನ ಎಳನೀರು ಮಾರಾಟ ಮಾಡುತ್ತಿದ್ದಾರೆ. ಬೇಸಿಗೆ ರೀತಿ ಬಿಸಿಲಿನ ತಾಪ ಇರುವುದರಿಂದ ಎಳನೀರಿಗೆ ಬಂಪರ್ ಬೆಲೆ ಸಿಕ್ಕಿದೆ ಒಂದು ಎಳನೀರಿಗೆ ತೋಟದಲ್ಲಿಯೇ 13ರಿಂದ 15ರೂ. ನೀಡಿ ವರ್ತಕರು ಖರೀದಿಸುತ್ತಾರೆ.
ಕಲ್ಪತರು ತಾಲೂಕಿನಲ್ಲಿಯೇ ಒಂದು ಎಳನೀರಿಗೆ ಮಾರುಕಟ್ಟೆಯಲ್ಲಿ 25 ರಿಂದ 30 ರೂ. ಕೊಟ್ಟು ಸಾರ್ವಜನಿಕರು ದಾಹ ನೀಗಿಸಿಕೊಳ್ಳುತ್ತಿದ್ದಾರೆ. ಸ್ಥಳೀಯ ಮಾರುಕಟ್ಟೆಯಲ್ಲಿನ ಬೆಲೆ ಹಾಗೂ ಬಿಸಿಲಿನ ಝಳವನ್ನು ಮನಗಂಡಿರುವ ರೈತರು ತಮ್ಮ ತೋಟಕ್ಕೆ ಬಂದು ಎಳನೀರು ಖರೀದಿ ಮಾಡುವ ವರ್ತಕರಿಗೆ ಹೆಚ್ಚು ಹಣ ನೀಡುವಂತೆ ಬೇಡಿಕೆ ಇಡುತ್ತಿದ್ದಾರೆ. ಇದೇ ರೀತಿ ಬಿಸಿಲ ತಾಪಮಾನ ಹೆಚ್ಚಿದರೆ ತೋಟದಲ್ಲಿಯೇ 20 ರೂ. ನೀಡಿ ಎಳನೀರು ಕೊಳ್ಳುವ ಪರಿಸ್ಥಿತಿ ವರ್ತಕರದ್ದಾಗಿರುತ್ತದೆ.
● ಶಾಮಸುಂದರ್ ಕೆ. ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.