ಜೂಜಾಟಕ್ಕೆ ಪೊಲೀಸರದ್ದೇ ಸಾಥ್?
|ಹುಬ್ಬಳ್ಳಿಯಹೋಟೆಲ್ವೊಂದರ ಕೋಣೆಯೇ ಅಡ್ಡಾ |ಎಲೆ ತಟ್ಟುವ ಕೆಲಸದಲ್ಲಿ ಕೆಲ ಸಿಬ್ಬಂದಿ ಭಾಗಿ
Team Udayavani, May 27, 2019, 2:07 PM IST
ಸಾಂದರ್ಭಿಕ ಚಿತ್ರ.
ಹುಬ್ಬಳ್ಳಿ: ನಗರದ ಹೋಟೆಲ್ವೊಂದರಲ್ಲಿ ಇಸ್ಪೀಟ್ ಜೂಜಾಟ ಕೇಂದ್ರವೊಂದು ನಡೆಯುತ್ತಿದ್ದು, ವಿಚಿತ್ರವೆಂದರೆ ಇದನ್ನು ತಡೆಯಬೇಕಾದ ಪೊಲೀಸ್ ಸಿಬ್ಬಂದಿಯೇ ಇದರ ಸಕ್ರಿಯ ಸದಸ್ಯರಾಗಿದ್ದಾರೆ!
ನಗರದ ಸಿದ್ದಪ್ಪ ಕಂಬಳಿ ಮಾರ್ಗದಲ್ಲಿನ ಹೋಟೆಲ್ವೊಂದರ ಕೋಣೆಯನ್ನೇ ತಮ್ಮ ಜೂಜಾಟದ ಅಡ್ಡೆ ಮಾಡಿಕೊಂಡಿದ್ದು, ಅನೇಕ ಪೊಲೀಸ್ ಸಿಬ್ಬಂದಿ ಪ್ರತಿದಿನ ಬೆಳಗ್ಗೆಯಿಂದಲೇ ಈ ಕೇಂದ್ರದಲ್ಲಿ ಎಲೆ ತಟ್ಟುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಈ ಇಸ್ಪೀಟ್ ಜೂಜಾಟಕ್ಕೆ ಸಿಲುಕಿದ ಪೊಲೀಸ್ ಸಿಬ್ಬಂದಿಯಲ್ಲಿ ಅನೇಕರು ಹಣ ಕಳೆದುಕೊಂಡಿದ್ದು, ಇದರಿಂದ ಅವರ ಕುಟುಂಬ ತೀವ್ರ ಸಂಕಷ್ಟ ಪಡುವಂತಾಗಿದೆ.
ಪೊಲೀಸ್ ಇಲಾಖೆಯ ಎಸ್‌ಬಿ (ವಿಶೇಷ ವಿಭಾಗ) ಡ್ಯೂಟಿ ಮಾಡುವವರು, ರಾತ್ರಿ ಗಸ್ತು ತಿರುಗುವವರು, ಕ್ರೈಂ ಸಿಬ್ಬಂದಿ, ವಾಹನಗಳ ಚಾಲಕರು ಜೂಜಾಟದಲ್ಲಿ ತೊಡಗುತ್ತಿದ್ದಾರೆಂದು ಹೇಳಲಾಗುತ್ತಿದೆ. ನಗರದಲ್ಲಿ ನಡೆಯುವ ಮಟ್ಕಾ, ಜೂಜಾಟದಂತಹ ಅಕ್ರಮ ದಂಧೆಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುವವರೇ ನಾವು. ನಮ್ಮ ಮಾಹಿತಿ ಅವರಿಗೆ ಹೇಗೆ ಹೋಗಲಿದೆ ಎಂಬ ಮನೋಭಾವ ಇವರದ್ದಾಗಿದೆ ಎನ್ನಲಾಗಿದೆ.
ಜೂಜಾಟಕ್ಕೆ ಸಿಲುಕಿ ಹಣ ಕಳೆದುಕೊಂಡ ಅನೇಕರು ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕ್‌ಗಳು ಸೇರಿದಂತೆ ಖಾಸಗಿಯವರಿಂದ ಹೆಚ್ಚಿನ ಬಡ್ಡಿಗೆ ಸಾಲ ಪಡೆದು ಸಾಲ-ಬಡ್ಡಿ ಪಾವತಿಸಲಾಗದೆ ಪರದಾಡುತ್ತಿದ್ದಾರೆ. ಇಸ್ಪೀಟ್, ಜೂಜಾಟ ಇನ್ನಿತರ ಅಕ್ರಮ ದಂಧೆಗಳಲ್ಲಿ ತೊಡಗಿದವರನ್ನು ವಶಕ್ಕೆ ಪಡೆಯುವ ಇಲ್ಲವೆ ಬಂಧಿಸುವ ಕಾರ್ಯ ಮಾಡುವ ಪೊಲೀಸರೇ ಈ ಕಾರ್ಯಗಳಲ್ಲಿ ತೊಡಗಿದ್ದು, ಕ್ರಮ ಕೈಗೊಳ್ಳುವವರು ಯಾರು ಎಂಬುದು ಸಾರ್ವಜನಿಕರ ಪ್ರಶ್ನೆ. ಅಧಿಕಾರಿಗಳು ಇದನ್ನು ತಡೆಗಟ್ಟದಿದ್ದರೆ ಇಲಾಖೆಯ ಮರ್ಯಾದೆ ಹಾಳಾಗುವುದರಲ್ಲಿ ಸಂಶಯವಿಲ್ಲವೆಂದು ಹೆಸರು ಹೇಳಲಿಚ್ಚಿಸದ ಓರ್ವರು ‘ಉದಯವಾಣಿ’ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.