ಜವಾಬ್ದಾರಿ ಹೆಚ್ಚಿಸಿದ ಕ್ಷೇತ್ರದ ಜನ
•ಪ್ರಗತಿಯಲ್ಲಿದೆ ಗದಗ-ವಾಡಿ ರೈಲ್ವೆ ಯೋಜನೆ•ಕೊಪ್ಪಳದಲ್ಲಿ ಕೈ ಶಾಸಕರ ವಿರೋಧಿ ಅಲೆ
Team Udayavani, May 27, 2019, 3:36 PM IST
•ಸರ್ ನಮಸ್ತೆ, ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿ ಹ್ಯಾಟ್ರಿಕ್ ಸಾಧನೆ ಮಾಡಿದೆ. ಈ ಗೆಲುವನ್ನು ನೀವು ಹೇಗೆ ಸ್ವೀಕರಿಸುತ್ತೀರಿ?
-ಮೊದಲಿಗೆ ಕ್ಷೇತ್ರದ ಮತದಾರರಿಗೆ ಅಭಿನಂದನೆ ಸಲ್ಲಿಸುವೆ. ನನಗೆ 2ನೇ ಅವಧಿಗೆ ಅಧಿಕಾರ ಕೊಟ್ಟಿದ್ದಾರೆ ಎನ್ನುವುದಕ್ಕಿಂತ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಕ್ಷೇತ್ರದ ಸೇವೆ ಮಾಡಲು ಅಭೂತಪೂರ್ವ ಬೆಂಬಲ ನೀಡಿ ಆಯ್ಕೆ ಮಾಡಿ ದೆಹಲಿಗೆ ಕಳಿಸಿದ್ದಾರೆ. ಅವರ ಆಶೀರ್ವಾದಕ್ಕೆ ನಾನು ಚಿರಋಣಿ. ಇದು ಪ್ರತಿಯೊಬ್ಬ ಕಾರ್ಯಕರ್ತನಿಗೆ, ಪಕ್ಷದ ಮುಖಂಡರಿಗೆ, ಯುವಕರಿಗೆ ಮತದಾರರಿಗೆ ನನ್ನ ಗೆಲುವನ್ನು ಅರ್ಪಿಸುತ್ತಿದ್ದೇನೆ. ಪ್ರಧಾನಿ ಮೋದಿ ಅವರ ಅಲೆ, ದೂರದೃಷ್ಟಿ, ಕ್ಷೇತ್ರದ ಅಭಿವೃದ್ಧಿ ನನ್ನ ಗೆಲುವಿಗೆ ಆಸರೆಯಾಗಿದೆ.
•2ನೇ ಬಾರಿಗೆ ತಾವು ಗೆಲುವು ಸಾಧಿಸಿದ್ದೀರಿ.. ಕ್ಷೇತ್ರದ ಬಗೆಗಿನ ತಮ್ಮ ಮೊದಲ ಆದ್ಯತೆ ಏನು?
-ಕ್ಷೇತ್ರದ ಅಭಿವೃದ್ಧಿಯ ಕುರಿತು ಪಟ್ಟಿ ಮಾಡಿಟ್ಟುಕೊಂಡಿದ್ದೇನೆ. ಈಗಾಗಲೇ ನಡೆದ ಕಾಮಗಾರಿಗಳಿಗೆ ಒತ್ತು ನೀಡಲಿದ್ದೇನೆ. ಭಾನಾಪುರ ಬಳಿ ರೈಲ್ವೇ ಸೇತುವೆ, ಕುಷ್ಟಗಿ ರಸ್ತೆಗೆ ಸೇತುವೆ, ಗಿಣಗೇರಿ ಬಳಿ ರೈಲ್ವೇ ಸೇತುವೆ, ಮುನಿರಾಬಾದ್ ಬಳಿ ಸೇತುವೆ, ಅಗಡಿ ಅವರ ಮನೆ ಸಮೀಪದಲ್ಲಿ ಕೆಳ ಸೇತುವೆ ಮಂಜೂರಾಗಿದೆ. ಅದರ ಬಗ್ಗೆ ಅವುಗಳ ಸ್ಥಿತಿ ಏನಾಗಿದೆ ಎನ್ನುವ ಕುರಿತು ಪರಿಶೀಲನೆ ಮಾಡುವೆ.
•ಮುನಿರಾಬಾದ್-ಮೆಹಬೂಬನಗರ ರೈಲು ಓಡಿಸುವ ಯೋಜನೆ ಏಲ್ಲಿಗೆ ಬಂತು?
– ಬಹು ವರ್ಷಗಳ ಮುನಿರಾಬಾದ್-ಮಹೆಬೂಬ್ ನಗರ ಯೋಜನೆಗೆ ಹೆಚ್ಚು ಒತ್ತು ನೀಡಿದ್ದೇನೆ. ಗಂಗಾವತಿಗೆ ನಾವು ರೈಲು ಓಡಿಸಿದ್ದೇವೆ. ರಾಯಚೂರು ಎಂಪಿ ನಮ್ಮವರೆ ಗೆದ್ದಿದ್ದಾರೆ. ಅವರೊಂದಿಗೆ ಈ ವಿಷಯ ಚರ್ಚಿಸಿದ್ದೇನೆ. ಸಿಂಧನೂರು ವರೆಗೂ ರೈಲ್ವೆ ಕೆಲಸ ಮುಗಿಯುವ ಹಂತಕ್ಕೆ ಬಂದಿದೆ. ಒಂದೂವರೆ ವರ್ಷದಲ್ಲಿ ಸಿಂಧನೂರಿಗೆ ರೈಲು ಓಡಿಸುವ ನಿರೀಕ್ಷೆಯನ್ನಿಟ್ಟಿದ್ದೇವೆ. ಈ ಐದು ವರ್ಷಗಳಲ್ಲಿ ರಾಯಚೂರಿಗೂ ರೈಲು ಓಡಿಸುವ ಪ್ರಯತ್ನ ಮಾಡಲಾಗುವುದು.
•ಗದಗ-ವಾಡಿ ರೈಲ್ವೇ ಕಾಮಗಾರಿ ಯಾವ ಹಂತದಲ್ಲಿದೆ ?
– ಗದಗ-ವಾಡಿ ರೈಲ್ವೇ ಯೋಜನೆ ಪ್ರಗತಿಯಲ್ಲಿದೆ. ಕುಷ್ಟಗಿಯವರೆಗೂ ಕೆಲಸ ನಡೆದಿದೆ. ಮುಂದಿನ ಕಾಮಗಾರಿ ರಾಯಚೂರು ವ್ಯಾಪ್ತಿಗೆ ಬರಲಿದೆ. ಅದನ್ನೂ ರಾಯಚೂರು ಸಂಸದರ ಗಮನಕ್ಕೆ ತಂದಿದ್ದೇನೆ. ಕುಷ್ಟಗಿ ಹಂತದ ಕಾಮಗಾರಿ ವೇಗವಾಗಿ ನಡೆಸಿ ಮುಂದಿನ 2 ವರ್ಷದಲ್ಲಿ ಕುಷ್ಟಗಿಗೆ ರೈಲು ಓಡಿಸುವ ಯೋಜನೆಯಿದೆ.
•ಕ್ಷೇತ್ರ ವ್ಯಾಪ್ತಿಯಲ್ಲಿ ಹೊಸ ರೈಲು ಯೋಜನೆಯ ಪ್ರಸ್ತಾವನೆಗಳಿವೆಯಾ?
– ಹೌದು.. ಚಿತ್ರದುರ್ಗ-ಸೊಲ್ಲಾಪುರ ಹೊಸ ರೈಲು ಓಡಿಸುವ ಯೋಜನೆಯ ಪ್ರಸ್ತಾವನೆಯಿದೆ. ವಾಯಾ ಕೂಡ್ಲಗಿ-ಹೊಸಪೇಟೆ-ಕುಷ್ಟಗಿ-ಆಲಮಟ್ಟಿ ಸಂಚಾರ ನಡೆಯಲಿದೆ. ಅದು ಡಿಪಿಆರ್ ಆಗಿದ್ದು, ಅಧಿಕಾರಿಗಳು ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ. ಈ ಯೋಜನೆಯ ಸಾಧ್ಯತೆಗಳ ಕುರಿತು ವರದಿ ನೀಡಿದ ಬಳಿಕವೇ ಕೇಂದ್ರ ಯೋಜನೆ ಕೈಗೆತ್ತಿಕೊಳ್ಳಲಿದೆ. ಆ ಬಗ್ಗೆ ಕೇಂದ್ರದ ಗಮನ ಸೆಳೆಯುವೆ.
•ರಾಷ್ಟ್ರೀಯ ಹೆದ್ದಾರಿ ರಸ್ತೆಗಳ ಅಭಿವೃದ್ಧಿಗೆ ನಿಮ್ಮ ಆದ್ಯತೆ ಏನು?
– ಹೆದ್ದಾರಿಗಳ ನಿರ್ಮಾಣದಲ್ಲಿ ನಾವು ಹೆಚ್ಚಿನ ಪ್ರಗತಿ ಸಾಧಿಸುತ್ತಿದ್ದೇವೆ. ಅಲ್ಲದೇ ಕ್ಷೇತ್ರದಲ್ಲಿ ಈಗಾಗಲೇ ಮೂರು ಹೆದ್ದಾರಿಗಳಿವೆ. ಜೊತೆಗೆ ಗಿಣಗೇರಾ-ರಾಯಚೂರು, ಕೊಪ್ಪಳ-ಶಿಗ್ಗಾಂವಿ, ಗಜೇಂದ್ರಗಡ-ನರಗುಂದ ಹೊಸ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಕೇಂದ್ರ ಘೋಷಣೆ ಮಾಡಿದೆ. ಅವುಗಳ ಡಿಪಿಆರ್ ಮಾಡಲಾಗಿದೆ. ಹೆದ್ದಾರಿ ನಿರ್ಮಾಣಕ್ಕೆ ಭೂ ಸ್ವಾಧೀನದ ಪ್ರಸ್ತಾಪ ಬರುತ್ತೆ. ರಾಜ್ಯ ಸರ್ಕಾರ ಭೂ ಸ್ವಾಧೀನಕ್ಕೆ ಕಾಳಜಿ ವಹಿಸಬೇಕು. ಈ ಬಗ್ಗೆಯೂ ನಾನು ಗಮನಿಸುವೆ.
•ಜನತೆಗೆ ನೀರಾವರಿ ಯೋಜನೆಗಳ ಬಗ್ಗೆ ಭರವಸೆ ನೀಡಿದ್ದೀರಿ. ಈ ಬಗ್ಗೆ ತಮ್ಮ ನಿಲುವೇನು?
– ಕ್ಷೇತ್ರದಲ್ಲಿ ಹಲವು ನೀರಾವರಿ ಯೋಜನೆಗಳು ಜಾರಿಯಾಗಬೇಕಿದೆ. ಏಕೆಂದರೆ ನಮ್ಮ ಕ್ಷೇತ್ರ ಪದೇ ಪದೆ ಬರಕ್ಕೆ ತುತ್ತಾಗುತ್ತಿದೆ. ಇತ್ತೀಚಿನ ವರ್ಷದಲ್ಲಿ ಮಳೆಯ ಕೊರತೆ ಕಾಡುತ್ತಿದೆ. ಇದರಿಂದ ಜನತೆ ತುಂಬ ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ನೀರಾವರಿ ಸೌಲಭ್ಯ ಕಲ್ಪಿಸಿದರೆ ರೈತರ ಕೃಷಿ ಬದುಕು ಹಸನವಾಗಲಿದೆ. ಚುನಾವಣಾ ಪೂರ್ವದಲ್ಲಿ ಸಿಂಗಟಾಲೂರು, ಕೊಪ್ಪಳ ಏತ ನೀರಾವರಿ, ತುಂಗಭದ್ರಾ ಜಲಾಶಯದ ಬಳಿ ಸಮನಾಂತರ ಜಲಾಶಯದ ಬಗ್ಗೆ ಕ್ಷೇತ್ರದ ಮತದಾರಿಗೆ ಭರವಸೆ ನೀಡಿದ್ದೇನೆ. ಆದರೆ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದಿಂದ ನೇರ ನೀರಾವರಿಗೆ ಅನುದಾನ ನೀಡಲು ಬರುವುದಿಲ್ಲ. ರಾಜ್ಯ ಸರ್ಕಾರ ಕೇಂದ್ರಕ್ಕೆ ನೀರಾವರಿ ಯೋಜನೆಗಳ ಪ್ರಸ್ತಾವನೆ ಸಲ್ಲಿಸಿದರೆ, ಅನುದಾನ ಬರಲಿದೆ. ನಾವು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಲಿ ಪ್ರಸ್ತಾವನೆ ಸಲ್ಲಿಸುವಂತೆ ಮನವಿ ಮಾಡಲಿದ್ದೇವೆ. ನಮ್ಮ ಭಾಗದ ಎಲ್ಲ ಸಂಸದರು ಕೇಂದ್ರಕ್ಕೆ ಒತ್ತಾಯ ಮಾಡಿ ಅನುದಾನ ಬಿಡುಗಡೆಗೆೆ ಮನವಿ ಮಾಡಲಿದ್ದೇವೆ.
•ವರ್ಷಗಳ ಹಿಂದೆ ಮಂಜೂರಾದ ಇಎಸ್‌ಐ ಆಸ್ಪತ್ರೆ ನನೆಗುದಿಗೆ ಬಿದ್ದಿದೆಯಲ್ಲ?
– ಹೌದು.. ಇಎಸ್‌ಐ ಆಸ್ಪತ್ರೆ ಈ ವೇಳೆಗೆ ಆರಂಭವಾಗಬೇಕಿತ್ತು. ಜಿಲ್ಲಾಧಿಕಾರಿ ಅದನ್ನು ಮಾಡಬೇಕು. ನಾನೂ ಅವರಿಗೆ ಒತ್ತಡ ಹಾಕಿ ಕೇಂದ್ರಕ್ಕೆ ಪತ್ರ ಬರೆಯಲು ಹೇಳುವೆ. ಆಸ್ಪತ್ರೆಗೆ ಭೂಮಿ ಸಿಕ್ಕಿದೆ. ಆದರೆ ಕಾರ್ಮಿಕ ನೋಂದಣಿ ಮಾಡಿಸಲು ಸಾಧ್ಯವಾಗುತ್ತಿಲ್ಲ. ಕ್ಷೇತ್ರದಲ್ಲಿ ಹಲವು ಕಾರ್ಖಾನೆಗಳಿವೆ. ಜಿಲ್ಲಾಧಿಕಾರಿ ಈ ವಿಷಯದಲ್ಲಿ ಗಟ್ಟಿ ನಿಲುವು ತೆಗೆದುಕೊಂಡರೆ ಎಲ್ಲ ಕಾರ್ಖಾನೆಗಳು ಕಾರ್ಮಿಕರ ನೋಂದಣಿ ಮಾಡಿಸುತ್ತಾರೆ. ಆಗ ಆಸ್ಪತ್ರೆ ಸುಗಮವಾಗಿ ನಡೆಯಲಿದೆ. ಜಿಲ್ಲಾಧಿಕಾರಿ ಜೊತೆ ಈ ಕುರಿತು ಮಾತನಾಡುವೆ.
•ಜಿಲ್ಲೆಗೆ ಮಂಜೂರಾದ ಉಡಾನ್ ಯೋಜನೆಗೆ ಮಂಕು ಬಡಿದಿದೆಯಲ್ಲಾ?
– ನಮ್ಮ ಕ್ಷೇತ್ರಕ್ಕೆ ಉಡಾನ್ ಯೋಜನೆ ಘೋಷಣೆಯಾಗಿ ವರ್ಷಗಳೇ ಗತಿಸಿವೆ. ಈ ಯೋಜನೆ ಜಾರಿಗೆ ನಾನು ಈ ಹಿಂದೆಯೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಸಿಎಂ ಅವರನ್ನು ಭೇಟಿ ಮಾಡಿದ್ದೆ. ಆದರೆ ಈ ಬಗ್ಗೆ ಹೆಚ್ಚಿನ ಕಾಳಜಿ ಕೊಡುತ್ತಿಲ್ಲ. ಈಗ ಮೈತ್ರಿ ಸರ್ಕಾರವಿದೆ. ಮೊದಲು ವಿಮಾನ ನಿಲ್ದಾಣಕ್ಕೆ ಭೂಮಿ ಸೇರಿ ಅಗತ್ಯ ಸೌಕರ್ಯ ಕಲ್ಪಿಸಿ ಅನುದಾನ ಬಿಡುಗಡೆ ಮಾಡಬೇಕಿದೆ. ಆ ಬಳಿಕ ಕೇಂದ್ರ ಸರ್ಕಾರ ಆ ಹಣವನ್ನು ರಾಜ್ಯಕ್ಕೆ ಹಂಚಿಕೆ ಮಾಡಲಿದೆ. ಮೈತ್ರಿ ಸರ್ಕಾರಕ್ಕೆ ಮತ್ತೂಮ್ಮೆ ಒತ್ತಾಯ ಮಾಡಲಿದ್ದೇವೆ. ಜೊತೆಗೆ ಬಲ್ಡೋಟಾ ಕಂಪನಿಯ ಜೊತೆಗೂ ಮಾತುಕತೆ ನಡೆಸಿ ಯೋಜನೆ ಜಾರಿಗೆ ಶ್ರಮಿಸಲಿದ್ದೇವೆ. ಒಂದು ವೇಳೆ ಮೈತ್ರಿ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ನೀರಾವರಿ, ಉಡಾನ್ ಸೇರಿ ಎಲ್ಲ ಯೋಜನೆಗಳು ಕಾರ್ಯಗತವಾಗಲಿವೆ.
•ಶೈಕ್ಷಣಿಕವಾಗಿ ಏನಾದರೂ ಹೊಸ ಯೋಜನೆಗಳಿವೆಯಾ?
– ಹೌದು ಕಳೆದ ಬಾರಿ ಕನಕಗಿರಿ, ಮಸ್ಕಿ, ಸಿರಗುಪ್ಪಾ ಕ್ಷೇತ್ರದಲ್ಲಿ ಏಕಲವ್ಯ ಶಾಲೆಗಳನ್ನು ಆರಂಭಿಸಬೇಕೆಂಬ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ ರಾಜ್ಯ ಸರ್ಕಾರವೇ ನಮ್ಮ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಿಲ್ಲ. ಈಗ ಮತ್ತೂಮ್ಮೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ. ಕಳೆದ ಅವಗೆ ಗಂಗಾವತಿಯಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭಿಸಿದ್ದೇವೆ. ಈ ಬಾರಿ ಸಿಂಧನೂರು ಕ್ಷೇತ್ರಕ್ಕೆ ಕೇಂದ್ರೀಯ ವಿದ್ಯಾಲಯ ಮಂಜೂರಾತಿಗೆ ಪ್ರಯತ್ನ ಮಾಡುವೆ. ಜೊತೆಗೆ ಕೇಂದ್ರ ಕೃಷಿ ವಿಶ್ವವಿದ್ಯಾಲಯ ಆರಂಭಿಸಬೇಕೆಂದು ಕೇಂದ್ರಕ್ಕೆ ಮನವಿ ಮಾಡಲಾಗುವುದು.
•ತಮ್ಮ ಗೆಲುವಿಗೆ ಮೋದಿ ಅಲೆ ಕೈ ಹಿಡಿತಾ? ಅಥವಾ ತಮ್ಮ ಅಭಿವೃದ್ಧಿ ಕೆಲಸಗಳು ಕೈ ಹಿಡಿದವಾ?
– ಕ್ಷೇತ್ರದಲ್ಲಿ ಮೋದಿ ಅಲೆಯಿದೆ. ಇಡೀ ದೇಶದಲ್ಲೇ ಅವರ ಅಲೆಯಿತ್ತು. ಜೊತೆಗೆ ನಾನೂ ಜನರೊಂದಿಗೆ ಸಂಪರ್ಕದಲ್ಲಿದ್ದಿದ್ದು, ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನಾನು ಕೈಲಾದ ಮಟ್ಟಿಗೆ ಕೆಲಸ ಮಾಡಿದ್ದೇನೆ. ನಮ್ಮ ಪಕ್ಷದ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ರಾಜ್ಯದಲ್ಲಿ ಮೈತ್ರಿ ಸರ್ಕಾರದ ಆಡಳಿತ ವೈಫಲ್ಯ ನೋಡಿದ ಜನತೆ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
•ಎಂಟು ಕ್ಷೇತ್ರದಲ್ಲಿ ಏಳು ಕ್ಷೇತ್ರಗಳು ತಮಗೆ ಲೀಡ್ ಕೊಟ್ಟಿವೆ. ಇದ ಹಿಂದಿನ ರಾಜಕೀಯ ಲೆಕ್ಕಾಚಾರವೇನು?
– ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ, ದೇಶದ ರಕ್ಷಣೆ, ಭದ್ರತೆ, ದೂರದೃಷ್ಟಿಯಿಂದಾಗಿ ಯುವಕರು, ಜನತೆ ಪ್ರತಿಯೊಬ್ಬರೂ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೊಪ್ಪಳ ಕ್ಷೇತ್ರದಲ್ಲಿ ಕೈ ಶಾಸಕರ ವಿರೋಧಿ ಅಲೆ ನಮಗೆ ಪ್ಲಸ್ ಆಗಿದೆ.
•ತಮ್ಮ ಪುತ್ರನಿಗೆ ಹಿನ್ನಡೆ ಕೊಟ್ಟ ಕೊಪ್ಪಳ ಕ್ಷೇತ್ರದಲ್ಲಿ, ತಮಗೆ ಮುನ್ನಡೆ ಸಿಕ್ಕಿದೆಯಲ್ಲ?
– ವಿಧಾನಸಭಾ ಚುನಾವಣೆ ರಾಜ್ಯಮಟ್ಟದ ವಿಷಯದಡಿ ನಡೆಯುತ್ತದೆ. ಲೋಕಸಭಾ ಚುನಾವಣೆ ರಾಷ್ಟ್ರಮಟ್ಟದ ವಿಷಯದ ಮೇಲೆ ನಡೆಯುತ್ತದೆ. ಹಾಗಾಗಿ ಕೇಂದ್ರದಲ್ಲಿ ಒಬ್ಬ ಸಮರ್ಥ ನಾಯಕ ಅಧಿಕಾರಕ್ಕೆ ಬರಬೇಕು ಎಂಬ ದೃಷ್ಟಿಯಿಂದ ಜನತೆ ಮೋದಿ ಅವರು ಮತ್ತೂಮ್ಮೆ ಪ್ರಧಾನಿಯಾಗಬೇಕು ಎಂಬ ಉದ್ದೇಶವನ್ನಿಟ್ಟು ಪ್ರತಿಯೊಬ್ಬರು ಬೆಂಬಲಿಸಿದ್ದಾರೆ.
•ಜನತೆ ಗುಳೆ ಹೋಗುವುದನ್ನು ತಪ್ಪಿಸಲು ಪರ್ಯಾಯ ಯೋಜನೆ ಮಾಡಿರುವಿರಾ?
– ಜನರ ಗುಳೆ ತಪ್ಪಿಸಿ ಅವರಿಗೆ ಸ್ಥಳೀಯವಾಗಿಯೇ ಕೌಶಲ್ಯಭರಿತ ಕೆಲಸ ನೀಡಲು ಗಂಗಾವತಿಯಲ್ಲಿ ಕೌಶಲ್ಯ ಕೇಂದ್ರ ತೆರೆದಿದ್ದೇವೆ. ಅದು ನಡೆಯುತ್ತಿದೆ. ಅದು ಜಿಲ್ಲಾ ಕೇಂದ್ರಕ್ಕೆ ಮಂಜೂರಾಗಿತ್ತು. ಆದರೆ ಕಟ್ಟಡ ಸಿಗದ ಹಿನ್ನೆಲೆಯಲ್ಲಿ ಗಂಗಾವತಿಯಲ್ಲಿ ಆರಂಭಿಸಿದ್ದು, ಮುಂದಿನ ದಿನದಲ್ಲಿ ಜನತೆಗೆ ಕೌಶಲ್ಯಭರಿತ ಹೊಸ ಯೋಜನೆಗಳು ಘೋಷಣೆಯಾದರೆ ಅವುಗಳ ಅನುಷ್ಠಾನಕ್ಕೆ ಪ್ರಯತ್ನ ಮಾಡುವೆನು.
•ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.