ತ್ರಿವಿಧ ದಾಸೋಹ ಕ್ಷೇತ್ರ ಶ್ರೀ ಅಂಕಲಿಮಠ

Team Udayavani, May 27, 2019, 5:46 PM IST

Udayavani Kannada Newspaper

ದೇವಪ್ಪ ರಾಠೊಡ
ಮುದಗಲ್ಲ:
ವಿಶಿಷ್ಟಾದ್ವೈತ ಸಿದ್ಧಾಂತದ ತಳಹದಿ ಮೇಲೆ ನಿರ್ಮಾಣಗೊಂಡ ತಲೆಕಟ್ಟು ಗ್ರಾಮದ ಶ್ರೀ ಅಂಕಲಿಮಠವು ರಾಜ್ಯ ಮತ್ತು ನೆರೆ ರಾಜ್ಯಗಳಲ್ಲಿ ಪ್ರಸಿದ್ದಿ ಪಡೆದಿದೆ. ಸುಮಾರು 300 ವರ್ಷಕ್ಕೂ ಹೆಚ್ಚು ಇತಿಹಾಸ ಇರುವ ಶ್ರೀಮಠದ ಮೂಲ ಪುರುಷರಾದ ಶ್ರೀ ನಿರುಪಾದಿಧೀಶ್ವರರು ತಮ್ಮ ಜೀವಿತಾವಧಿಯಲ್ಲಿಯೇ 12 ಮಠಗಳನ್ನು ಸ್ಥಾಪಿಸಿದರು.

ಅಂಕಲಿಮಠ (ತಲೆಕಟ್ಟು) ಮುದಗಲ್ಲ ಪಟ್ಟಣ ದಕ್ಷಿಣ ಭಾಗದಿಂದ 12 ಕಿ.ಮೀ. ದೂರದಲ್ಲಿದೆ. ಶ್ರೀಮಠವು ನಿತ್ಯ ತ್ರಿವಿಧ ದಾಸೋಹ ತಾಣವಾಗಿರುವದು ವಿಶೇಷ. ಜಾತಿ, ಧರ್ಮವನ್ನು ಮೀರಿ ಸರ್ವಜನಾಂಗದ ಭಕ್ತಿಯ ಮಠವಾಗಿರುವ ಶ್ರೀ ಅಂಕಲಿಮಠ ಇಂದು ಲಕ್ಷಾಂತರ ಭಕ್ತ ಸಮೂಹದ ಆರಾಧ್ಯ ಕ್ಷೇತ್ರವಾಗಿರುವುದು ವಿಶೇಷ.

ಹಿನ್ನೆಲೆ: ಗೋಕಾಕ ಜಿಲ್ಲೆಯ ಅಂಕಲಗಿ ಗ್ರಾಮದ ಶ್ರೀ ಅಡವಿ ಸಿದ್ದೇಶ್ವರರು ತಮ್ಮ ಪರಮ ಶಿಷ್ಯರಾಗಿದ್ದ ಶ್ರೀ ನಿರುಪಾದಿಧೀಶ್ವರರಿಗೆ ಅಂಕಲಿಮಠಕ್ಕೆ ಹೊರಡ‌ಲು ಅಪ್ಪಣೆ ನೀಡಿದರು. ಗುರುವಿನ ಮಾತಿನಂತೆ ಹೊರಟು ನಿಂತ ಶ್ರೀಗಳಿಗೆ ಅವರ ಗುರುಗಳು ವಿಭೂತಿ (ಭಸ್ಮ) ಕಟ್ಟಿ, ಅಕ್ಕಿ, ಕಾಯಿಯನ್ನು ಕೊಟ್ಟು ಕಳುಹಿಸಿದರು. ಶಿರಬಂದನಪುರ ಆಗಿದ್ದ ಇಗಿನ ಅಂಕಲಿಮಠಕ್ಕೆ ನಿರುಪಾದಿಧೀಶ್ವರು ಬಂದು ಮಠವನ್ನು ಸ್ಥಾಪಿಸಿದ್ದು ಇಂದಿಗೂ ತ್ರಿವಿಧ ದಾಸೋಹ ಕ್ಷೇತ್ರವಾಗಿ ಭಕ್ತರ ಮನದಲ್ಲಿ ಶ್ರೀಮಠ ಪೂಜ್ಯನೀಯ ಸ್ಥಾನ ಪಡೆದಿದೆ.

ಅಂದು ಮುಳ್ಳು ಕಂಟಿಗಳಿಂದ ಕೂಡಿದ್ದ ಈ ಸ್ಥಳದಲ್ಲಿ ದುಷ್ಟಶಕ್ತಿ ಪ್ರಭಾವದಲ್ಲಿತ್ತು. ಆದರೆ ದೇವಿ ವರಶಕ್ತಿ ಪಡೆದುಕೊಂಡಿದ್ದ ಶ್ರೀ ನಿರುಪಾದಿಧೀಶ್ವರರು ಈ ಸ್ಥಳವನ್ನು ತಮ್ಮ ಆರಾಧ್ಯದೇವಿ ಸ್ಥಾಪನೆಗೆ ಬಳಸಿಕೊಂಡು ಆ ಸ್ಥಳವನ್ನು ಸ್ವಚ್ಛಗೊಳಿಸಿ ಛಲಬಿಡದ ಹಠವಾದಿಯಂತೆ ಮಠ ಸ್ಥಾಪಿಸಿದರು. ತಮ್ಮ ಗುರುಗಳು ನೀಡಿದ ವಿಭೂತಿ ಗಟ್ಟಿಯನ್ನು ಪ್ರತಿಷ್ಠಾಪಿಸಿದರು. ಅಂದಿನಿಂದ ಇಂದಿನವರೆಗೆ ಅಂಕಲಿಮಠ ಸುಕ್ಷೇತ್ರ ವರ್ಷಪೂರ್ತಿ ಜ್ಞಾನ, ಭಕ್ತಿ ಹಾಗೂ ಅನ್ನಸಂತರ್ಪಣೆ ಮೂಲಕ ತ್ರಿವಿಧ ದಾಸೋಹ ಕ್ಷೇತ್ರವೆಂದೇ ಹೆಸರು ಪಡೆದಿದೆ. ಶ್ರೀ ನಿರುಪಾದೀಶ್ವರರು ಅನೇಕ ಪವಾಡಗಳನ್ನು ಮಾಡುತ್ತ ನಡೆದಾಡುವ ದೇವರು ಎನಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಶ್ರೀ ಮಠದ ಜಾತ್ರಾ ಮಹೋತ್ಸವ ಜರುಗಲಿದ್ದು ಲಕ್ಷಾಂತರ ಭಕ್ತ ಸಮೂಹ ಸಾಕ್ಷೀಕರಿಸಲಿದೆ.

ಟಾಪ್ ನ್ಯೂಸ್

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

7

Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.