ಪಾಕ್ ನ ಪಂಜಾಬ್ ಪ್ರಾಂತ್ಯದಲ್ಲಿನ ಐತಿಹಾಸಿಕ ಗುರು ನಾನಕ್ ಅರಮನೆ ಧ್ವಂಸ
Team Udayavani, May 27, 2019, 6:35 PM IST
ನಾರೋವಾಲ್(ಪಾಕಿಸ್ತಾನ/ಪಂಜಾಬ್):ಹಲವು ಶತಮಾನಗಳಷ್ಟು ಹಳೆಯದಾದ ಐತಿಹಾಸಿಕ ಗುರುನಾನಕ್ ಅರಮನೆಯನ್ನು ಧ್ವಂಸಗೊಳಿಸಿದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಮಾಧ್ಯಮಗಳ ವರದಿ ಪ್ರಕಾರ, ಸಿಖ್ ಧರ್ಮದವರ ಪವಿತ್ರ ಸ್ಥಳವಾದ ನಾಲ್ಕು ಅಂತಸ್ತುಗಳ ಕಟ್ಟಡವನ್ನು ಕೆಲವು ಪ್ರಭಾವಿ ಸ್ಥಳೀಯರು ಭಾಗಶಃ ಧ್ವಂಸಗೊಳಿಸಿರುವುದಾಗಿ ತಿಳಿಸಿದೆ.
ಐತಿಹಾಸಿಕ ಸಿಖ್ ಅರಮನೆಯನ್ನು ಧ್ವಂಸಗೊಳಿಸಿದ ನಂತರ ಅರಮನೆಯಲ್ಲಿನ ಬೆಲೆಬಾಳುವ ಕಿಟಕಿಗಳು, ಬಾಗಿಲುಗಳು ಮತ್ತು ವೆಂಟಿಲೇಟರ್ ಗಳನ್ನು ಮಾರಾಟ ಮಾಡಿರುವುದಾಗಿ ವರದಿ ವಿವರಿಸಿದೆ. ಸಿಖ್ಖ್ ರ ಪವಿತ್ರ ಈ ಅರಮನೆಯನ್ನು ಸುಮಾರು ನಾಲ್ಕು ಶತಮಾನಕ್ಕಿಂತಲೂ ಹಿಂದೆಯೇ ನ್ಯೂ ಲಾಹೋರ್ ರಸ್ತೆಯ ಬಥನ್ ವಾಲಾ ಗ್ರಾಮದಲ್ಲಿ ಕಟ್ಟಲಾಗಿತ್ತು.
ಶತಮಾನಗಳಷ್ಟು ಹಳೆಯದಾದ ಈ ಕಟ್ಟಡವನ್ನು ಪ್ಯಾಲೇಸ್ ಆಫ್ ಬಾಬಾ ಗುರು ನಾನಕ್ “ ಎಂದೇ ಕರೆಯಲಾಗುತ್ತಿತ್ತು. ಭಾರತ ಸೇರಿದಂತೆ ವಿದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಸಿಖ್ಖ್ ರು ಇಲ್ಲಿಗೆ ಭೇಟಿ ನೀಡುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.