ತೋಡು,ಚರಂಡಿಗಳಲ್ಲಿ ತುಂಬಿದೆ ಪ್ಲಾಸ್ಟಿಕ್ ತ್ಯಾಜ್ಯ
ಗ್ರಾ.ಪಂ.ಗಳಿಗೆ ತ್ಯಾಜ್ಯ ನಿರ್ವಹಣೆಯೇ ಸವಾಲು
Team Udayavani, May 28, 2019, 6:00 AM IST
ಬಜಪೆ: ಮಳವೂರು, ಪಡುಪೆರಾರ, ಕಂದಾವರ,ಬಜಪೆ ಗ್ರಾ.ಪಂ. ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ತ್ಯಾಜ್ಯದ ರಾಶಿ, ತೋಡು, ಚರಂಡಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ತುಂಬಿದ್ದು,ಮಳೆ ಆರಂಭವಾದರೆ ನೀರು ಹರಿಯಲು ಅಡ್ಡಿ ಯುಂಟಾಗುವ ಸಾಧ್ಯತೆ ಹೆಚ್ಚಾಗಿದೆ.
ಸ್ವತ್ಛತೆಗೆ ಗ್ರಾಮ ಪಂಚಾಯತ್ ಗಳು ಎಷ್ಟೇ ಕ್ರಮ ಕೈಗೊಂಡರೂ ರಸ್ತೆ ಬದಿ ತ್ಯಾಜ್ಯ ಬಿಸಾಡುವುದರಿಂದ ತ್ಯಾಜ್ಯ ನಿರ್ವಹಣೆಯೇ ಗ್ರಾ.ಪಂ.ಗಳಿಗೆ ಬಹು ದೊಡ್ಡ ಸವಾ ಲಾಗಿ ಪರಿಣಮಿಸಿದೆ.
ಕೃಷಿ ಗದ್ದೆಗಳಿಗೆ ಪ್ಲಾಸ್ಟಿಕ್ ತ್ಯಾಜ್ಯ
ಮಳವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೊರ್ಕೋಡಿ ದ್ವಾರದಿಂದ ಅಂಥೋನಿ ಕಟ್ಟೆ ರಾಜ್ಯ ಹೆದ್ದಾರಿ 67ರ ರಸ್ತೆ ಬದಿಯಲ್ಲಿ ಮೂಟೆಮೂಟೆಗಳಲ್ಲಿ ತ್ಯಾಜ್ಯಗಳು ಬಿದ್ದಿದ್ದು, ದಿನ ದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮಳೆ ಬಂದರೆ ಈ ತ್ಯಾಜ್ಯಗಳು ಪೊರ್ಕೋಡಿ ಪ್ರದೇಶದ ಕೃಷಿ ಗದ್ದೆಗಳಿಗೆ ಹರಿದು ಹೋಗಲಿದ್ದು, ಕೃಷಿ ಚಟುವಟಿಕೆಗೆ ತೊಂದರೆಯಾಗಲಿದೆ ಎನ್ನುತ್ತಾರೆ ಇಲ್ಲಿನ ಕೃಷಿಕರು.
ಪಡುಪೆರಾರ ಗ್ರಾ.ಪಂ. ವ್ಯಾಪ್ತಿಯ ಅಂಬಿಕಾ ನಗರದ ಸಮೀಪ ರಾಜ್ಯ ಹೆದ್ದಾರಿ 101ರಲ್ಲಿಯೂ ರಸ್ತೆ ಬದಿ ಮಳೆ ನೀರು ಹರಿಯುವ ತೋಡಿನಲ್ಲಿ ತಾಜ್ಯ ರಾಶಿ ಬಿದ್ದಿವೆ. ಈ ತ್ಯಾಜ್ಯ ಕೆಳಗೆ ಪುಚ್ಚಳ ಪ್ರದೇಶ ಗದ್ದೆಗಳಿಗೆ ಹರಡಲಿವೆ.
ಮಳವೂರು, ಪಡುಪೆರಾರ ಗ್ರಾ.ಪಂ. ಗಳು ಈ ಪ್ರದೇಶದಲ್ಲಿ ತ್ಯಾಜ್ಯ ಬಿಸಾಡುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಫಲಕ ಹಾಕಿದರೂ ಪ್ರಯೋಜನವಾಗಿಲ್ಲ. ಮಳವೂರು ಗ್ರಾ.ಪಂ. ತಾಜ್ಯವನ್ನು ಕೂಡ ಹಲವಾರು ಬಾರಿ ತೆಗೆಸಿದೆ. ಕೆಲವೆಡೆ ನೆಟ್‌ಗಳನ್ನು ಕೂಡ ಹಾಕಿದೆ.ಅದರೆ ತ್ಯಾಜ್ಯ ತಂದು ಹಾಕುತ್ತಿರುವುದು ಮಾತ್ರ ಎಂದಿ ನಂತೆ ಮುಂದುವರಿದಿದೆ.
ಬಜಪೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ, ಅಂಗಡಿಗಳಿಂದ ಕಸ ಸಂಗ್ರಹ ಮಾಡುತ್ತಿದ್ದು, ಇದರಿಂದ ಇಲ್ಲಿ ಕಸದ ತೊಟ್ಟಿಯ ಅಗತ್ಯ ಇಲ್ಲದಾಗಿದೆ. ಈ ಹಿಂದೆ ಬಜಪೆ ಪೇಟೆ, ವಿಜಯ ವಿಠಲ ಭಜನ ಮಂದಿರ, ಪ್ರಟೋಲ್ ಪಂಪ್ ಹಿಂದುಗಡೆ, ಕ್ವಾನೆಂಟ್ ರೋಡ್‌ನಲ್ಲಿ ಕಸದ ತೊಟ್ಟಿ ಇಡಲಾಗಿತ್ತು. ಮನೆಮನೆ ಕಸ ಸಂಗ್ರಹವಾದ ಮೇಲೆ ತೊಟ್ಟಿಯ ಅಗತ್ಯತೆ ಇಲ್ಲವೆಂದು ಅದನ್ನು ತೆಗೆಯಲಾಗಿದೆ. ಆದರೆ ವಾಹನಗಳಲ್ಲಿ ಬಂದು ಕೆಲವರು ಈ ಭಾಗದಲ್ಲಿ ಕಸ ಬಿಸಾಡಿ ಹೋಗುವ ಪದ್ಧತಿ ಈಗಲೂ ಮುಂದುವರಿದಿದೆ.
2 ಪ್ರಕರಣ ದಾಖಲು
ಸಾರ್ವಜನಿಕರು ದೂರು ನೀಡಲು ಹಿಂಜರಿಯುತ್ತಿರುವುದ ರಿಂದ ಈ ಭಾಗದಲ್ಲಿ ಕಸ ತಂದು ಬಿಸಾಡುವವರ ವಿರುದ್ಧ 2 ಪ್ರಕ ರಣ ಮಾತ್ರ ದಾಖಲಾಗಿದೆ. ಹೀಗಾಗಿ ಕಸ ತಂದು ಬಿಸಾ ಡು ವವರ ವಿರುದ್ಧ ಕ್ರಮ ಕೈಗೊಳ್ಳಲು ಪಡುಪೆರಾರ, ಕಂದಾವರ ಹಾಗೂ ಮಳವೂರು ಗ್ರಾಮ ಪಂಚಾಯತ್‌ಗಳು ಜಾಗೃತರಾಗಬೇಕಾಗಿದೆ. ವಾಹನದಲ್ಲಿ ಬಂದು ತ್ಯಾಜ್ಯ ಬಿಸಾಡದಂತೆ ಶಿಸ್ತು ಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲದೇ ಫ್ಲ್ಯಾಟ್‌ಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಯಾವ ಕ್ರಮ ಕೈ ಗೊ ಳ್ಳಲಾಗಿದೆ ಎಂಬುದನ್ನು ಪರಿಶೀಲಿಸಬೇಕು. ಈ ಬಗ್ಗೆ ಕಟ್ಟುನಿ ಟ್ಟಿನ ಕ್ರಮಕೈಗೊಳ್ಳಬೇಕು.
ಸಿಸಿ ಕೆಮರಾ ಅಳವಡಿಸಲು ಚಿಂತನೆ
ಮಳವೂರು ಗ್ರಾಮ ಪಂಚಾಯತ್ ಕಸ ಬಿಸಾಡುವ ಕಡೆಗಳಲ್ಲಿ ಕಸಗಳನ್ನು ತೆಗೆಸಿ, ಫಲಕ, ಕೆಲವೆಡೆ ನೆಟ್‌ಗಳನ್ನು ಹಾಕಲಾಗಿದೆ. ಈಗಾಗಲೇ ಕಸ ವಿಲೇವಾರಿಗಾಗಿ ಟೆಂಡರ್ ಕರೆಯಲಾಗಿದೆ. ಚುನಾವಣೆ ನೀತಿ ಸಂಹಿತೆಯಿಂದಾಗಿ ಸಭೆ ಕರೆದಿಲ್ಲ. ಸದ್ಯದಲ್ಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗು ವುದು. ಇದಕ್ಕೆ ಸಾರ್ವಜನಿಕರ ಸಹಕಾರವೂ ಬೇಕು. ಮನೆ ಇಲ್ಲದೇ ನಿರ್ಜನ ಪ್ರದೇಶಗಳಲ್ಲಿ ಕಸ ತಂದು ಹಾಕು ವುದು ಹೆಚ್ಚಾಗಿದೆ. ಹೀಗಾಗಿ ಇಲ್ಲಿ ಸಿಸಿ ಕೆಮರಾ ಅಳವಡಿಸಲು ಚಿಂತನೆ ನಡೆಸಲಾಗಿದೆ.
- ಗಣೇಶ್ ಅರ್ಬಿ,
ಅಧ್ಯಕ್ಷ, ಮಳ ವೂರು ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.