ಸರಕಾರಿ ಆಂಗ್ಲ ಮಾಧ್ಯಮ: ದಾಖಲಾತಿ ಪ್ರಾರಂಭ
ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್
Team Udayavani, May 28, 2019, 6:00 AM IST
ಬಡಗನ್ನೂರು: ಒಳಮೊಗ್ರು ಗ್ರಾಮ ವ್ಯಾಪ್ತಿಗೆ ಒಳಪಟ್ಟಿರುವ ಕುಂಬ್ರ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣ ಸಂಸ್ಥೆ ಇನ್ನು ಮುಂದೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಬದಲಾಗಲಿದೆ. ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರಿನಿಂದ 10 ಕಿ.ಮೀ. ದೂರದಲ್ಲಿರುವ ಕುಂಬ್ರ ಪೇಟೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಇದೆ. ಈ ಶೈಕ್ಷಣಿಕ ವರ್ಷದಿಂದಲೇ ಪೂರ್ವ ಪ್ರಾಥಮಿಕ ಶಿಕ್ಷಣದಡಿಯಲ್ಲಿ ಎಲ್.ಕೆ.ಜಿ. ಮತ್ತು 1ನೇ ತರಗತಿಯಲ್ಲಿ ಆಂಗ್ಲಮಾಧ್ಯಮ ವಿಭಾಗ ಆರಂಭಗೊಳ್ಳಲಿದೆ. ಆಂಗ್ಲ ಮಾಧ್ಯಮ ದಾಖಲಾತಿಗಳು ಆರಂಭ ಗೊಂಡಿದೆ.
ಶಿಕ್ಷಕರು ಬೇಕು
ಶಿಕ್ಷಕರನ್ನು ತರಬೇತಿಗೊಳಿಸಿ ಸಜ್ಜುಗೊಳಿಸಲಾಗಿದೆ. ಪೂರ್ವ ಪ್ರಾಥಮಿಕ ಎಲ್.ಕೆ.ಜಿ. ತರಗತಿ ನಡೆಸುವುದಕ್ಕಾಗಿ ಪಿಯುಸಿ ಮತ್ತು ಡಿಎಡ್ ಅಥವಾ ಪೂರ್ವ ಪ್ರಾಥಮಿಕ ತರಬೇತಿ ಹೊಂದಿದ ಅರ್ಹ ಅಭ್ಯರ್ಥಿಗಳು ಬೇಕು. ಆಸಕ್ತರು ಪ್ರಾಂಶುಪಾಲರಿಗೆ ಅರ್ಜಿ ಸಲ್ಲಿಸಬಹುದು. ಶಿಕ್ಷಣ ಇಲಾಖೆ ಮಟ್ಟದಲ್ಲಿ ಆಯ್ಕೆ ನಡೆಯಲಿದೆ.
ಸಮಸ್ಯೆಗಳತ್ತ ಗಮನ ಹರಿಸಿ
ಕುಂಬ್ರ ಪದವಿಪೂರ್ವ ಕಾಲೇಜು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತನೆ ಆಗುತ್ತಿದೆ. ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜು ಶಿಕ್ಷಣ ವ್ಯವಸ್ಥೆಯನ್ನು ಒಂದೇ ಸೂರಿನಡಿ ತರುವ ಚಿಂತನೆ ಇದು. ಶಾಲೆಯ ಮೂಲ ಸಮಸ್ಯೆಗಳ ಬಗ್ಗೆಯೂ ಶಿಕ್ಷಣ ಇಲಾಖೆ ಗಮನಹರಿಸಬೇಕಿದೆ. ನೀರು, ಕೊಠಡಿ, ಆಟದ ಮೈದಾನ, ಗ್ರಂಥಾಲಯ, ವಾಚನಾಲಯ ಇತ್ಯಾದಿ ವ್ಯವಸ್ಥೆಗಳ ಬಗ್ಗೆಯೂ ಇಲಾಖಾಧಿಕಾರಿಗಳು ಪರಿಶೀಲನೆ ಮಾಡಬೇಕಾಗಿದೆ. ಶಾಲೆ ಹೆಸರು ಬದಲಾದರೆ ಸಾಲದು. ಸೌಲಭ್ಯಗಳನ್ನೂ ಕಲ್ಪಿಸಬೇಕು ಎಂದು ಹೆತ್ತವರು ಆಗ್ರಹಿಸಿದ್ದಾರೆ.
ನೇರವಾಗಿ ಸಂಪರ್ಕಿಸಿ
ಸರಕಾರದ ಆದೇಶದಂತೆ ಈ ವರ್ಷದಿಂದಲೇ ಕುಂಬ್ರ ಪದವಿ ಪೂರ್ವ ಕಾಲೇಜು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತನೆಗೊಂಡಿದೆ. ಆಂಗ್ಲ ಭಾಷಾ ಮಾಧ್ಯಮದಲ್ಲಿ ಎಲ….ಕೆ.ಜಿ. ಮತ್ತು 1ನೇ ತರಗತಿ ಆರಂಭಗೊಳ್ಳಲಿದೆ. ಎಲ….ಕೆ.ಜಿ. ತರಗತಿ ನಡೆಸಲು ಸೂಕ್ತ ಶಿಕ್ಷಕರ ಆಯ್ಕೆಗಾಗಿ ಅರ್ಜಿಯನ್ನು ಕರೆಯಲಾಗಿದೆ. ತರಗತಿಗೆ ದಾಖಲಾತಿ ಬಯಸುವ ಮಕ್ಕಳು ನೇರವಾಗಿ ಶಾಲಾ ಮುಖ್ಯಗುರು, ಪ್ರಾಂಶುಪಾಲರನ್ನು ಸಂಪರ್ಕಿಸಬಹುದಾಗಿದೆ.
– ದುಗ್ಗಪ್ಪ, ಪ್ರಾಂಶುಪಾಲರು, ಪ.ಪೂ. ವಿಭಾಗ, ಕರ್ನಾಟಕ ಪಬ್ಲಿಕ್ ಸ್ಕೂಲ್
ದಾಖಲಾತಿ ಮಾಡಿಕೊಳ್ಳಿ
ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಎಲ್.ಕೆ.ಜಿ. ಮತ್ತು 1ನೇ ತರಗತಿಯನ್ನು ಉಚಿತವಾಗಿ ಆಂಗ್ಲ ಮಾಧ್ಯಮ ಶಿಕ್ಷಣವು ಈ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲಾಗುತ್ತಿದೆ. ಪ್ರವೇಶ ಬಯಸುವವರು ತಮ್ಮ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬಂದು ದಾಖಲಾತಿ ಮಾಡಿಕೊಳ್ಳಬಹುದಾಗಿದೆ.
– ಗೋದಾವರಿ, ಮುಖ್ಯ ಶಿಕ್ಷಕಿ, ಕರ್ನಾಟಕ ಪಬ್ಲಿಕ್ ಸ್ಕೂಲ್, ಕುಂಬ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KPTCL ಕಾಮಗಾರಿ ಅವಾಂತರ; ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣ ಬಳಿ ಅಪಾಯ
Udupi; ಬಜೆ ಡ್ಯಾಂ ಬಳಿ ಶಿಲಾಯುಗದ ನಿಲಿಸುಗಲ್ಲು ಪತ್ತೆ
US Result: ಡೊನಾಲ್ಡ್ Trumpಗೆ ಮತ್ತೊಮ್ಮೆ ಅಧ್ಯಕ್ಷ ಪಟ್ಟ; ಪ್ರಧಾನಿ ಮೋದಿ ಅಭಿನಂದನೆ
ಬಸ್- ಸ್ಕೂಟರ್ ಢಿಕ್ಕಿ ಪ್ರಕರಣ: ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ಸವಾರ ಕೂಡ ಮೃತ್ಯು
Hubli: ಮುಖ್ಯಮಂತ್ರಿ ನೀತಿ ಗೆಟ್ಟು ಲೋಕಾಯುಕ್ತ ತನಿಖೆಗೆ ಹೋಗುತ್ತಿರುವುದು ನಾಚಿಗೇಡಿನ ಸಂಗತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.