ಕ್ಯಾಲೋರಿ ಕರಗಿಸಲು ಸರಳ ಟಿಪ್ಸ್
Team Udayavani, May 28, 2019, 6:00 AM IST
ಬದಲಾದ ಜೀವನ ಕ್ರಮ ಮತ್ತು ಆಹಾರ ಪದ್ಧತಿಯಿಂದಾಗಿ ಕೊಬ್ಬು ಎನ್ನುವುದು ಸಾಮಾನ್ಯ ಸಮಸ್ಯೆ ಎನ್ನುವಂತಾಗಿದೆ. ಬೊಜ್ಜು ದೇಹ ಸೌಂದರ್ಯಕ್ಕೆ ಚ್ಯುತಿ ತರುವುದು ಮಾತ್ರವಲ್ಲ, ನಿರ್ಲಕ್ಷಿಸಿದರೆ ಮುಂದೆ ಗಂಭೀರ ಆರೋಗ್ಯ ಸಮಸ್ಯೆಗೂ ಕಾರಣವಾಗಬಹುದು. ಆದ್ದರಿಂದ ಬೊಜ್ಜು ಕರಗಿಸಲು ಆರಂಭದಲ್ಲೇ ಪ್ರಯತ್ನಿಸುವುದು ಒಳ್ಳೆಯದು.
1 ಹಗ್ಗದೊಂದಿಗೆ ಹಾರಾಟ
ಒಂದು ಉದ್ದದ ಹಗ್ಗವನ್ನು ಹಿಂದೆಯಿಂದ ಮುಂದಕ್ಕೆ ಬೀಸುತ್ತಾ ಅದನ್ನು ಸ್ಪರ್ಶಿಸದಂತೆ ಜಿಗಿಯುವುದು ಉತ್ತಮ ವ್ಯಾಯಾಮ. ಸಾಧಾರಣವಾಗಿ ಎಲ್ಲ ಆ್ಯತ್ಲೀಟ್‌ಗಳು ಈ ವಿಧಾನವನ್ನು ಅನುಸರಿಸುತ್ತಾರೆ. ಕಡಿಮೆ ಅವಧಿಯಲ್ಲಿ ಕ್ಯಾಲರಿಯನ್ನು ವೇಗವಾಗಿ ಕರಗಿಸಲು ಇದು ಅತ್ಯುತ್ತಮ ವಿಧಾನ. ಇದರಿಂದ ಪ್ರತಿ ಗಂಟೆಗೆ 1,074 ಕ್ಯಾಲರಿ ಕರಗುತ್ತದೆ.
2 ಈಜು
ಈಜು ಎನ್ನುವುದು ಒತ್ತಡ ಕಡಿಮೆ ಮಾಡುವುದು ಮಾತ್ರವಲ್ಲ ಉತ್ತಮ ವ್ಯಾಯಾಮವೂ ಹೌದು. ಫಿಟ್‌ನೆಸ್ ದಿನಚರಿಯಲ್ಲಿ ಈಜನ್ನು ಅಳವಡಿಸಿಕೊಳ್ಳಿ. ಒಂದು ಗಂಟೆಯ ಈಜು ಸುಮಾರು 892 ಕ್ಯಾಲರಿಯನ್ನು ನಾಶ ಮಾಡುತ್ತದೆ. ಮಾತ್ರವಲ್ಲದೆ ಈಜು ನಿಮ್ಮ ಮಾಂಸಖಂಡಗಳಿಗೆ ದೃಢಗೊಳಿಸುವ ಜತೆಗೆ ಸರ್ವಾಂಗೀಣ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
3 ಮೆಟ್ಟಿಲು ಹತ್ತಿ
ಮೆಟ್ಟಿಲು ಹತ್ತುವುದು ಮತ್ತು ಇಳಿಯುವುದೂ ಕೂಡ ಉತ್ತಮ ವ್ಯಾಯಾಮಗಳಲ್ಲಿ ಒಂದು. ಸುಮಾರು 90 ಕಿಲೋ ಹೊಂದಿರುವ ವ್ಯಕ್ತಿ ಮಟ್ಟಿಲಲ್ಲಿ ಓಡಾಡುತ್ತಿದ್ದರೆ ಸುಮಾರು 819 ಕ್ಯಾಲೋರಿ ಕರಗುತ್ತದೆ ಎನ್ನುತ್ತದೆ ಸಂಶೋದನೆ. ಹೀಗಾಗಿ ಬಹು ಮಹಡಿ ಕಟ್ಟಡ ಹತ್ತುವಾಗ ಲಿಫ್ಟ್ ಬಿಟ್ಟು ಆದಷ್ಟು ಮೆಟ್ಟಿಲನ್ನೇ ಬಳಸಿ. ಕ್ಯಾಲೋರಿ ಕರಗಲು ಹಾಗೂ ಆರೋಗ್ಯದ ಸುಸ್ಥಿತಿಗೆ ಸಹಕಾರಿ.
4 ಟೆನ್ನಿಸ್
ಜಿಮ್‌ನಲ್ಲಿ ವ್ಯಾಯಾಮ ಮಾಡಲು ಅಸಾಧ್ಯ ಎಂದಾದರೆ ಕ್ಯಾಲೋರಿ ಕರಗಿಸಲು ಟೆನ್ನಿಸ್ ಆಡಬಹುದು. ಪೂರ್ತಿ ಶರೀರ ಚಟುವಟಿಕೆಯಿಂದ ಕೂಡಿರುವುದರಿಂದ ಟೆನ್ನಿಸ್ ಉತ್ತಮ ವ್ಯಾಯಾಮ ಎನಿಸಿಕೊಂಡಿದೆ. ಒಂದು ಗಂಟೆ ಟೆನ್ನಿಸ್ ಆಡುವುದರಿಂದ ಸುಮಾರು 728 ಕ್ಯಾಲರಿಯನ್ನು ಇಲ್ಲದಾಗಿಸಬಹುದು.
5 ಬಾಸ್ಕೆಟ್ ಬಾಲ್
ಬಾಸ್ಕೆಟ್ ಬಾಲ್ ಆಡುವುದರಿಂದ ಕೊಬ್ಬು ಕರಗಿಸಬಹುದು ಎನ್ನುತ್ತಾರೆ ತಜ್ಞರು. ಬಾಸ್ಕೆಟ್ ಬಾಲ್ ಪ್ರತಿ ಗಂಟೆಗೆ ಸುಮಾರು 728 ಕ್ಯಾಲೋರಿ ಕರಗಿಸುವ ಶಕ್ತಿ ಹೊಂದಿದೆ.
6 ಎರೋಬಿಕ್ಸ್
ಎರೋಬಿಕ್ಸ್‌ನಿಂದ ಮಾನಸಿಕ ನೆಮ್ಮದಿ ಲಭಿಸುವ ಜತೆಗೆ ಕೊಬ್ಬು ಕರಗಿದಂತಾಗುತ್ತದೆ. ಇದರಿಂದ ಪ್ರತಿ ಗಂಟೆಗೆ ಸುಮಾರು 420 ಕ್ಯಾಲೋರಿ ನಷ್ಟವಾಗುತ್ತದೆ.
7 ಜಾಗಿಂಗ್
ಒಂದು ಗಂಟೆಯ ಜಾಗಿಂಗ್‌ನಿಂದ 755 ಕ್ಯಾಲೋರಿ ಇಲ್ಲವಾಗುತ್ತದೆ. ಜಾಗಿಂಗ್‌ನಿಂದ ಇಡೀ ಶರೀರಕ್ಕೆ ವ್ಯಾಯಾಮ, ಮಾಂಸಖಂಡ ಹಾಗೂ ಹೃದಯರಕ್ತನಾಳಕ್ಕೆ ಉತ್ತಮ.
– ರಮೇಶ್ ಬಳ್ಳಮೂಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.