ಹಿರಿಯರಿಗೂ ಬೇಕು ವ್ಯಾಯಾಮ

ಇಲ್ಲಿವೆ ಕೆಲವು ವ್ಯಾಯಾಮ

Team Udayavani, May 27, 2019, 6:00 AM IST

w-23

ಆಧುನಿಕ ಜೀವನ ಪದ್ಧತಿಯಲ್ಲಿ ಹಿರಿಯರು ವ್ಯಾಯಾಮಕ್ಕೂ ಆದ್ಯತೆ ನೀಡುವುದು ಅಗತ್ಯ. ಚಟುವಟಿಕೆ ರಹಿತ ಜೀವನದಿಂದ ದೇಹದಲ್ಲಿ ಶಕ್ತಿಯ ಕೊರತೆಯುಂಟಾಗಿ ನಿತ್ಯದ ಕೆಲಸಗಳನ್ನು ನಿರ್ವಹಿಸುವುದೂ ಕಷ್ಟವಾಗಬಹುದು. ಹಾಗಾಗಿ, ನಿತ್ಯ ಕೆಲವು ಸರಳ ವ್ಯಾಯಾಮವನ್ನು ಮಾಡುವುದು ಆರೋಗ್ಯಕ್ಕೆ ಪೂರಕ. ನಿಯಮಿತ ವ್ಯಾಯಾಮದಿಂದ ದೇಹವು ಸಮತೋಲನ ಕಾಯ್ದುಕೊಳ್ಳು ವುದಲ್ಲದೆ, ಮಾನಸಿಕ ಆರೋಗ್ಯವೂ ಲಭಿಸುತ್ತದೆ.

ವಾಕಿಂಗ್‌, ಜಾಗಿಂಗ್‌, ನಿಧಾನ ಓಟ: ಗಂಟುನೋವು, ಬ್ಯಾಲೆನ್ಸ್‌ ಸಮಸ್ಯೆ ಇರುವವರಿಗೆ ಸರಳ ನಡಿಗೆ ಒಂದು ಉತ್ತಮ ವ್ಯಾಯಾಮ. ವಾಕಿಂಗ್‌ನಿಂದ ಕೊಬ್ಬು ಕರಗುತ್ತದೆ. ಸ್ಥಿತಿಸ್ಥಾಪಕತ್ವ ಗುಣ (ಉಲ್ಲಾಸಶೀಲತೆ) ಹೆಚ್ಚಾಗುತ್ತದೆ. ಆರೋಗ್ಯವಾಗಿರಲು ಮುಂಜಾನೆ ಮತ್ತು ಸಂಜೆಯ ನಡಿಗೆ ರೂಢಿಸಿಕೊಳ್ಳುವುದು ಉತ್ತಮ. ಜಾಗಿಂಗ್‌, ನಿಧಾನ ಓಟ ಹೃದಯದ ಆರೋಗ್ಯಕ್ಕೆ ಪೂರಕವಾಗುತ್ತದೆ.

ಈಜು: ಬೇಸಗೆಯಲ್ಲಿ ಈಜು ಹಿತವಾಗಿರುತ್ತದೆ. ಅಷ್ಟೇ ಅಲ್ಲ, ಈಜಿನಿಂದ ಕೈಕಾಲುಗಳ ಚಲನೆ ಸುಲಲಿತವಾಗುತ್ತದೆ. ಮಾಂಸಖಂಡ, ಎಲುಬುಗಳು ಬಲಗೊಳ್ಳುತ್ತವೆ.
ಕುಳಿತು ಏಳುವ ವ್ಯಾಯಾಮ: ಕುರ್ಚಿಯ ಮೇಲೆ ಕುಳಿತು ತತ್‌ಕ್ಷಣ ಎದ್ದು ನಿಲ್ಲುವ ಪ್ರಕ್ರಿಯೆ ಇದು. ಸ್ಥಿರ (ಒಂದು ಹಂತದ) ವೇಗದೊಂದಿಗೆ ಆರಂಭಿಸಿ ಕ್ರಮೇಣ ನಿಮ್ಮ ಅನುಕೂಲಕ್ಕೆ ತಕ್ಕಂತೆ ವೇಗ ಹೆಚ್ಚಿಸಿ. ಹೀಗೆ ಸಾಕಷ್ಟು ಬಾರಿ ಮಾಡಿ. ಇದರಿಂದ ಕಾಲಿನ ಮಾಂಸಖಂಡಗಳು ಬಲಗೊಳ್ಳುತ್ತವೆ.

ಯೋಗ: ಉಸಿರಿನ ನಿಯಂತ್ರಣ ಮತ್ತು ವಿಶ್ರಾಂತಿಯ ಮೂಲಕ ಆರೋಗ್ಯ ವರ್ಧನೆಯ ಉದ್ದೇಶ ಹೊಂದಿರುವವರಿಗೆ ಯೋಗ, ಧ್ಯಾನ ಸಹಕಾರಿ. ದೇಹ ಮತ್ತು ಮನಸ್ಸಿನ ನಡುವೆ ಸಮತೋಲನ ಸಾಧಿಸಲು ಯೋಗ ನೆರವಾಗುತ್ತದೆ. ಒತ್ತಡ ದೂರವಾಗುತ್ತದೆ. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಪೃಷ್ಠ ವ್ಯಾಯಾಮ: ಪೃಷ್ಠದ ಮಾಂಸಖಂಡಗಳನ್ನು ಬಿಗಿಯಾಗಿ ಹಿಡಿದು ಬಿಡುವ ವ್ಯಾಯಾಮವನ್ನು ಸುಮಾರು 10 ಬಾರಿ ಮಾಡುಬಹುದು.

ನೃತ್ಯ: ಲೈವಿ ಆದ ವ್ಯಾಯಾಮ. ಇದಕ್ಕೆ ಪ್ರಚಂಡ ನೃತ್ಯಪಟುವಾಗಬೇಕಿಲ್ಲ. ಸಂಗೀತಕ್ಕೆ ಲಘುವಾಗಿ ನೃತ್ಯ ಮಾಡುವುದರಿಂದ ದೇಹ ಉಲ್ಲಸಿತವಾದೀತು. ಕ್ಯಾಲೊರಿ ಕರಗಲು ನೃತ್ಯ ಸಹಕಾರಿ.

ನಗು: ಎಲ್ಲ ರೀತಿಯ ಕಾಯಿಲೆ, ನೋವುಗಳಿಗೆ ನಗು ಒಂದು ಅತ್ಯುತ್ತಮ ಔಷಧದಂತೆ. ಲಾಫಿಂಗ್‌ ಕ್ಲಬ್‌ಗಳು ಈಗ ಪ್ರಸಿದ್ಧ. ಹಾಸ್ಯದ ಸನ್ನಿವೇಶಗಳಿರುವ ಡಿವಿಡಿ ಬಳಸಿ, ಸ್ಮಾರ್ಟ್‌ಫೋನ್‌ ಮೂಲಕ ಹಾಸ್ಯ, ವಿನೋದಾವಳಿಗಳನ್ನು ನೋಡುತ್ತ ಬಾಯ್ತುಂಬ ನಗುವುದು ಆರೋಗ್ಯಕ್ಕೆ ಉತ್ತಮ. ಒತ್ತಡ ನಿವಾರಣೆಯಾಗುತ್ತದೆ.

ಸೈಕ್ಲಿಂಗ್‌: ಸೈಕಲ್‌ ಸವಾರಿಯಿಂದ ಮಾಂಸಖಂಡಗಳು ಬಲಗೊಳ್ಳುತ್ತವೆ. ಹೃದಯಕ್ಕೂ ಉತ್ತಮ. ಮಾನಸಿಕ ಆರೋಗ್ಯಕ್ಕೂ ಪೂರಕ. ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

– ಎಸ್ಕೆ

ಟಾಪ್ ನ್ಯೂಸ್

MNG-hosp

Mangaluru: ವೆನ್ಲಾಕ್‌ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್‌

Jameer

Illegal Property Case: ಸಚಿವ ಜಮೀರ್‌ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್‌

Gsat20

Space Science: ಸ್ಪೇಸ್‌ಎಕ್ಸ್‌ನಿಂದ ಮೊದಲ ಬಾರಿ ಇಸ್ರೋ ಉಪಗ್ರಹ ನಭಕ್ಕೆ!

Yathanaa

Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ಷೇಪ

1-jenu

GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!

GTD

Court Judgement: ತಪ್ಪಿತಸ್ಥ ಎಂದಾದರೆ ಮಾತ್ರ ರಾಜೀನಾಮೆ ನೀಡಬೇಕು: ಜಿ.ಟಿ.ದೇವೇಗೌಡ

Horoscope

Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Jameer

Illegal Property Case: ಸಚಿವ ಜಮೀರ್‌ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್‌

MNG-hosp

Mangaluru: ವೆನ್ಲಾಕ್‌ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್‌

Gsat20

Space Science: ಸ್ಪೇಸ್‌ಎಕ್ಸ್‌ನಿಂದ ಮೊದಲ ಬಾರಿ ಇಸ್ರೋ ಉಪಗ್ರಹ ನಭಕ್ಕೆ!

Yathanaa

Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ಷೇಪ

1-jenu

GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.