ಕಚ್ಚಾ ತೈಲ: ಸ್ವದೇಶಿ ತಂತ್ರಜ್ಞಾನ
ಮದ್ರಾಸ್ ಐಐಟಿ ವಿಜ್ಞಾನಿಗಳಿಂದ ಮಹತ್ವದ ಕಾರ್ಯ
Team Udayavani, May 28, 2019, 6:00 AM IST
ಹೊಸದಿಲ್ಲಿ: ಭಾರತದ ಕರಾವಳಿ ತೀರಗಳಲ್ಲಿರುವ ಸಂಪದ್ಭರಿತ ತೈಲ ಬಾವಿಗಳಿಂದ ತೈಲವನ್ನು ಹೊರತಗೆಯುವ ಹೊಸ ದೇಶೀಯ ತಂತ್ರಜ್ಞಾನವೊಂದನ್ನು ಮದ್ರಾಸ್‌ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ) ಸಂಶೋಧಕರು ಅಭಿವೃದ್ಧಿಪಡಿಸುತ್ತಿದ್ದಾರೆ. ಆಸ್ಟ್ರೇಲಿಯಾದ ಪ್ರಯೋಗಾಲಯವೊಂದರ ಸಹಾಯದಿಂದ “ಲೋ-ಸ್ಯಾಲಿನಿಟಿ ಎನ್‌ಹ್ಯಾನ್ಸ್ ಆಯಿಲ್ ರಿಕವರಿ’ (ಎಲ್‌ಎಸ್‌ಇಒಆರ್) ಎಂಬ ಹೆಸರನ್ನಿಡಲಾಗಿದೆ.
ಈ ಕುರಿತಂತೆ ವಿವರಣೆ ನೀಡಿರುವ ಮದ್ರಾಸ್ ಐಐಟಿ ಪ್ರಾಧ್ಯಾಪಕರಾದ ಜಿತೇಂದ್ರ ಸಂಗವಾಯ್, ಸದ್ಯದ ಮಟ್ಟಿಗೆ ಭಾರತದಲ್ಲಿ ರುವ ಕಚ್ಚಾ ತೈಲೋತ್ಪನ್ನ ತಂತ್ರಜ್ಞಾನವು ದೇಶದ ತೈಲ ಬೇಡಿಕೆಯನ್ನು ಸಮರ್ಥವಾಗಿ ಪೂರೈಸುತ್ತಿಲ್ಲ. ಹಾಗಾಗಿ, ತೈಲ ನಿಕ್ಷೇಪಗಳಿಂದ ತೈಲ ಹೊರತಗೆಯುವಂಥ ಹೊಸ ಹೊಸ ದೇಶೀಯ ತಂತ್ರಜ್ಞಾನಗಳು ಅಭಿವೃದ್ಧಿಗೊಳ್ಳ ಬೇಕಿದೆ. ಈ ನಿಟ್ಟಿನಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೊರೇಷನ್ (ಒಎನ್‌ಜಿಸಿ) ಸಹ ಹಲವಾರು ಅನ್ವೇಷಣೆಗಳತ್ತ ಕೈ ಹಾಕಿದೆ. ನಾವು ಅಭಿವೃದ್ಧಿಪಡಿಸುತ್ತಿರುವ ಎಲ್‌ಎಸ್‌ಇಒಆರ್ ತಂತ್ರಜ್ಞಾನವು, ಒಎನ್‌ಜಿಸಿಯ ಅನ್ವೇಷಣೆಗಳಿಗೆ ಪೂರಕವಾಗಬಲ್ಲದು ಎಂದಿದ್ದಾರೆ. ಭೂಮಿಯೊಳಗೆ ಸುಣ್ಣದ ಕಲ್ಲು ಹಾಗೂ ಮರಳಿನ ಕಲ್ಲುಗಳಲ್ಲಿ ಇರುವ ತೈಲವನ್ನು ಹೊರತಗೆಯಲು ಸದ್ಯಕ್ಕೆ ವಾಟರ್ ಇಂಜೆಕ್ಷನ್ ಮಾದರಿಯ ತಂತ್ರಜ್ಞಾನವನ್ನು ಬಳಸಲಾ ಗುತ್ತಿದೆ. ಆದರೆ, ಕೆಲವೊಮ್ಮೆ ಈ ತಂತ್ರಜ್ಞಾನದಲ್ಲಿ ಆಗುವ ಹಿನ್ನಡೆಗಳನ್ನು ಎಲ್‌ಎಸ್‌ಇಒಆರ್ ತಂತ್ರಜ್ಞಾನ ಮೆಟ್ಟಿ ನಿಲ್ಲುತ್ತದೆ ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.