ಕಾಪು ತಾ| ಕಡಲ ತೀರದಲ್ಲಿ ಡಾಮರು ತ್ಯಾಜ್ಯ
Team Udayavani, May 28, 2019, 6:11 AM IST
ಪಡುಬಿದ್ರಿ: ಬಡಾ ಗ್ರಾಮ ಉಚ್ಚಿಲದ ಕಡಲ ತೀರದಲ್ಲಿಯೂ ರವಿವಾರ ರಾತ್ರಿಯಿಂದ ಡಾಂಬರು ತ್ಯಾಜ್ಯ ಸಂಗ್ರಹವಾಗುತ್ತಿದ್ದು, ತೀರ ಪ್ರದೇಶವಿಡೀ ಮಲಿನಗೊಂಡಿದೆ. ಇದರ ಮೇಲೆ ಕಾಲಿರಿಸಿದಲ್ಲಿ ಕಾಲಿಗೂ ಈ ತ್ಯಾಜ್ಯ ಅಂಟಿಕೊಳ್ಳುತ್ತಿದೆ.
ಕಳೆದ ರಾತ್ರಿಯಿಂದಲೇ ಹೆಜಮಾಡಿ, ಪಡುಬಿದ್ರಿ, ಎರ್ಮಾಳು ತೆಂಕ, ಬಡಾ ಹಾಗೂ ಮೂಳೂರು ಕಡಲ ಕಿನಾರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡಾಮರು ತ್ಯಾಜ್ಯ ಸೇರುತ್ತಿದೆ ಎಂದು ತೀರವಾಸಿಗಳು ತಿಳಿಸಿದ್ದಾರೆ. ಇದು ಕಡಲತೀರದ ಅಂದಗೆಡಿಸಿದೆ. ತೀರ ಸೇರಿದ ಡಾಂಬರು ಬಿಸಿಲಿಗೆ ಕರಗುತ್ತಿರುವುದರಿಂದ ಪರಿಸರ ವೆಲ್ಲ ಎಣ್ಣೆಯ ವಾಸನೆ ಬೀರುತ್ತಿದೆ.
ಈ ಕುರಿತಾಗಿ ಉಡುಪಿ ಜಿಲ್ಲಾ ಪರಿಸರ ಇಲಾಖೆಯ ಅಧಿಕಾರಿಗಳು, ಕಾಪು ತಹಶೀಲ್ದಾರ್ ಕೂಡಾ ಸಮುದ್ರ ತೀರ ಪ್ರದೇಶಕ್ಕೆ ಭೇಟಿ ನೀಡಿ ಜಿಲ್ಲಾಡಳಿತಕ್ಕೆ ವರದಿ ನೀಡುವರೆಂದೂ ತಿಳಿದು ಬಂದಿದೆ.
ಮೀನುಗಾರಿಕಾ ಋತು ಪೂರ್ಣ ಗೊಳಿಸಿದ ಬಳಿಕ ಅಂದರೆ ಮೇ, ಜೂನ್ ತಿಂಗಳಿನಲ್ಲಿ ಬೃಹತ್ ಗಾತ್ರದ ಮೀನುಗಾರಿಕಾ ಬೋಟುಗಳಲ್ಲಿನ ಬಳಸಿದ ಆಯಿಲನ್ನು ಸಮುದ್ರದಲ್ಲಿ ಎಲ್ಲೆಂದರಲ್ಲಿ ವಿಸರ್ಜಿಸುತ್ತಿರುವುದರಿಂದ ಈ ರೀತಿಯಾಗುತ್ತಿದೆ. ಕಳೆದ ಕೆಲ ವರ್ಷಗಳಿಂದ ಇಂತಹ ಸಮಸ್ಯೆಗಳು ಕಂಡು ಬರುತ್ತಿವೆ. ಈ ಬಗ್ಗೆ ಮೀನುಗಾರರು ಯೋಚಿಸಬೇಕು ಎಂದು ಮೀನುಗಾರ ಮುಖಂಡರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.