ಮದ್ಯ ಬಿಟ್ಟವರಿಗೆ ಮರು ಮದುವೆ!
•1340ನೇ ಮದ್ಯವರ್ಜನ ಶಿಬಿರ •ಮದ್ಯ ತ್ಯಜಿಸಿದ 80 ಜನರು •ಧರ್ಮಸ್ಥಳ ಸಂಸ್ಥೆಯಿಂದ ವಿನೂತನ ಕಾರ್ಯಕ್ರಮ
Team Udayavani, May 28, 2019, 7:00 AM IST
ಬಾಗಲಕೋಟೆ: ಮದ್ಯವ್ಯಸನದಿಂದ ಮುಕ್ತರಾಗಿ ಏಳು ದಿನ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಮರು ಮದುವೆ ಸಂಪ್ರದಾಯ ನೆರವೇರಿಸಿದ ಬಳಿಕ ಹೊಸ ಬದುಕಿಗೆ ಕಾಲಿಟ್ಟ ಜೋಡಿಗಳು.
ಬಾಗಲಕೋಟೆ: ನಿತ್ಯ ಮದ್ಯ ಕುಡಿದು, ಸಮಾಜದಲ್ಲಿ ಗೌರವ ಕಳೆದುಕೊಳ್ಳುವ ಜತೆಗೆ ಸಂಸರಾದಲ್ಲೂ ಬಿರುಕು ಮೂಡಿಸಿಕೊಂಡಿದ್ದ ಸುಮಾರು 80 ಜನರಿಗೆ ಮದ್ಯ ಸೇವನೆ ಬಿಡಿಸುವ ಜತೆಗೆ ಅವರ ಪತ್ನಿಯರನ್ನು ಕರೆಸಿ, ಮರು ಮದುವೆ ಮಾಡಿಸಿ, ಹೊಸ ಬಾಳು ನೆಮ್ಮದಿಯಿಂದ ಕೂಡಿರಲಿ ಎಂಬ ಹಾರೈಸಿದ ಪ್ರಸಂಗ ನಗರದಲ್ಲಿ ನಡೆಯಿತು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಹಲವು ವರ್ಷಗಳಿಂದ ಮದ್ಯವರ್ಜನ ಶಿಬಿರ ನಡೆಸಲಾಗುತ್ತಿದ್ದು, ಕಳೆದ ಏಳು ದಿನಗಳಿಂದ ವಿದ್ಯಾಗಿರಿಯ ನೀಲಕಂಠೇಶ್ವರ ಮಂಗಲ ಕಾರ್ಯಾಲಯದಲ್ಲಿ ಸುಮಾರು 80 ಜನರಿಗೆ ವಿಶೇಷ ಶಿಬಿರ ನಡೆಸಲಾಯಿತು.
ಈ ಶಿಬಿರದಲ್ಲಿ ಜಿಲ್ಲೆಯ ಜಮಖಂಡಿ, ಬಾಗಲಕೋಟೆ, ಬೀಳಗಿ, ಹುನಗುಂದ, ಬಾದಾಮಿ, ತೇರದಾಳ, ಮಹಾಲಿಂಗಪುರ, ಅಮೀನಗಡ, ಕೆರೂರ ಹೀಗೆ ವಿವಿಧ ನಗರ ಹಾಗೂ ಗ್ರಾಮೀಣ ಪ್ರದೇಶದಿಂದ 80 ಜನರು ಶಿಬಿರಾರ್ಥಿಗಳಾಗಿ ಪಾಲ್ಗೊಂಡಿದ್ದರು.
ಮರು ಮದುವೆ: ಮದ್ಯ ಬಿಟ್ಟಿರುವ ಶಿಬಿರಾರ್ಥಿಗಳಿಗೆ ಅವರ ಕುಟುಂಬದವರನ್ನು ಕರೆಯಿಸಿ, ನವ ವಧುವರರಂತೆ ಶೃಂಗಾರಗೊಳಿಸಿ, ಮತ್ತೂಮ್ಮೆ ಮರು ವಿವಾಹ ಮಾಡಿಸಿದ ವಿಶೇಷ ಪ್ರಸಂಗ ಶಿಬಿರದಲ್ಲಿ ನಡೆಸಲಾಯಿತು.
ಮದ್ಯ ವ್ಯಸನ ಶಿಬಿರಾರ್ಥಿಗಳು ಈ ಸಂಬಂಧ ತರಬೇತಿ ಪಡೆದು ಮದ್ಯ ವ್ಯಸನದಿಂದ ವಿಮುಕ್ತರಾಗಿದ್ದು, ಹೊಸ ಜೀವನಕ್ಕೆ ಅಣಿಯಾಗಿದ್ದು ಕಂಡು ಕುಟುಂಬದವರಲ್ಲಿ ಹರ್ಷ ತಂದಿತು.
ಮದ್ಯ ವ್ಯಸನ ಬಿಟ್ಟವರ ಕುಟುಂಬದವರನ್ನ ಕರೆಯಿಸಿ ಮರು ಮದುವೆ ಮಾಡಿಸಿ ಸುಗಮ ಬಾಳು ನಡೆಸಲು ಅವಕಾಶ ಕಲ್ಪಿಸಲಾಯಿತು. ಕುಡಿತದಿಂದ ತಮ್ಮ ಪತ್ನಿಯವರನ್ನು ನಿಂದನೆ ಮಾಡುವ ಪುರುಷರು ಹಾಗೂ ಬೇಸರವಾಗಿರುವ ಪತ್ನಿಯರಿಗೆ ಪರಸ್ಪರ ಹೊಸ ಸಂಬಂಧ-ಭಾಂದವ್ಯದ ಬೆಸುಗೆ ಬೇಸೆಯುವ ಮೂಲಕ ಗಮನ ಸೆಳೆಯಲಾಯಿತು.
ಗುಳೇದಗುಡ್ಡ-ಕೆಂದೂರ ಸಂಸ್ಥಾನ ಮಠದ ಒಪ್ಪತ್ತೇಶ್ವರ ಮಹಾಸ್ವಾಮಿಗಳು, ಮರು ಮದುವೆ ಆಗಿರುವ ವಧು ವರರಿಗೆ ಆಶೀರ್ವಚನ ನೀಡಿ, ಸಾಮೂಹಿಕ ವಿವಾಹ ಎಂಬಂತೆ ಭಾಸ ಆಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ಏಳು ದಿನಗಳ ವಿಶೇಷ ಶಿಬಿರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಸಿ ಟ್ರಸ್ಟ್, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ವಿವಿಧ ಸಂಸ್ಥೆಗಳ ಅಶ್ರಯದಲ್ಲಿ ನವನಗರದ ನೀಲಕಂಠೇಶ್ವರ ಸಾಂಸ್ಕೃತಿಕ ಭವನದಲ್ಲಿ ನಡೆದ 1340ನೇ ಮದ್ಯವರ್ಜನ ಶಿಬಿರದಲ್ಲಿ ವಿವಿಧ ತರಬೇತಿ ನೀಡಲಾಯಿತು.
ಜಿಲ್ಲೆಯ ವಿವಿಧ ಪ್ರದೇಶಗಳಿಂದ ಆಗಮಿಸಿದ ಸುಮಾರು 80ಕ್ಕೂ ಅಧಿಕ ಮದ್ಯವ್ಯಸನ ಶಿಬಿರಾರ್ಥಿಗಳಿಗೆ ಒಂದು ವಾರ ಕಾಲ ತರಬೇತಿ ನೀಡಿದ್ದು, ಬೆಳ್ಳಗೆ 5 ಗಂಟೆಯಿಂದ ರಾತ್ರಿಯವರೆಗೆ ಶಿಬಿರವನ್ನು ನಡೆಸಲಾಯಿತು. ವ್ಯಾಯಾಮ, ಯೋಗ, ವಠಾರ ಸ್ವಚ್ಛತೆ, ಶ್ರಮದಾನ, ಸಂಪನ್ಮೂಲ ವ್ಯಕ್ತಿಗಳ ಮಾಹಿತಿ ಹಾಗೂ ಕೌಟುಂಬಿಕ ಸಲಹೆ ಸೇರಿದಂತೆ ಕೆಲ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ವ್ಯಸನ ಮುಕ್ತರಾಗಲು ಶಿಬಿರಾರ್ಥಿಗಳಿಗೆ ಬೋಧಿಸಲಾಯಿತು.
ಕೊನೆಯ ದಿನವಾದ ಸೋಮವಾರ ಧರ್ಮಸ್ಥಳದ ಮಂಜುನಾಥ ದೇವರ ಮಂಗಳ್ಳೋತ್ಸವ, ಶಿಬಿರಾಗ್ನಿ ಸಮಾರಂಭ ಗಮನ ಸೆಳೆಯಿತು. ಮದ್ಯ ವ್ಯಸನ ಶಿಬಿರಾರ್ಥಿಗಳಿಗೆ ಮಂಜುನಾಥ ದೇವರ ಭಾವಚಿತ್ರವನ್ನು ಇಟ್ಟು ಅಲಂಕಾರ ಮಾಡಿ, ಪೂಜೆ ಪುನಸ್ಕಾರ ನೆರವೇರಿಸಿದರು. ಅಲ್ಲದೇ ಓಂಕಾರ, ಪ್ರಾರ್ಥನೆ ಸಲ್ಲಿಸುವ ಮೂಲಕ ನೂತನ ಜೀವನದ ಮಾರ್ಗದರ್ಶನ ನೀಡಲಾಯಿತು. ಶಿಬಿರಾಗ್ನಿ ಎಂದು ಸರಾಯಿ, ತಂಬಾಕು, ಸಿಗರೇಟು, ಗುಟಕಾದಿಂದ ಮಾಡಿದ್ದ ಕೃತಕ ಗೊಂಬೆಯನ್ನು ಇಟ್ಟು ಸುತ್ತಲೂ ಬೆಂಕಿಯ ಜ್ವಾಲೆಯಲ್ಲಿ ಹಿಡಿದು ಸುತ್ತು ಹಾಕುವ ಮೂಲಕ ತಮ್ಮಲ್ಲಿನ ದುಶ್ಚಟವನ್ನು ಬೆಂಕಿಯಿಂದ ಸುಟ್ಟು, ಹೊಸ ಜೀವನ ಪ್ರಾರಂಭಿಸುವುದಾಗಿ ಶಿಬಿರಾರ್ಥಿಗಳಿಂದ ಪ್ರತಿಜ್ಞೆ ಮಾಡಿಸಲಾಯಿತು.
ಒಟ್ಟಾರೆ ನಗರದಲ್ಲಿ ನಡೆದ ಮದ್ಯವ್ಯರ್ಜನ ಶಿಬಿರ ಈ ಬಾರಿ ಎಲ್ಲರ ಗಮನ ಸೆಳೆಯಿತು. ಧರ್ಮಸ್ಥಳ ಮಂಜುನಾಥ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರು. ವಿಧಾನಪರಿಷತ್ ಸದಸ್ಯ ಹನಮಂತ ನಿರಾಣಿ, ಮಾಜಿ ಶಾಸಕ ಪಿ.ಎಚ್. ಪೂಜಾರಿ, ಜಿ.ಪಂ. ಸದಸ್ಯ ಹೂವಪ್ಪ ರಾಠೊಡ ಸೇರಿದಂತೆ ಧರ್ಮಸ್ಥಳ ಮಂಜುನಾಥ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪದಾಧಿಕಾರಿಗಳು, ನಗರದ ಹಲವು ಪ್ರಮುಖರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kulageri Cross: ಹೂಳು ತುಂಬಿದ ಕಾಲುವೆ…ಪೋಲಾಗುತ್ತಿದೆ ಮಲಪ್ರಭಾ ಎಡದಂಡೆ ಕಾಲುವೆ ನೀರು…
New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.