ಒಂದು ಬೋರು ಭಾಷಣ
Team Udayavani, May 28, 2019, 9:15 AM IST
ಅದು ಅಟ್ಲಾಂಟಾದ ಮೋರ್‌ಹೌಸ್ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ. ವಿದ್ಯಾರ್ಥಿಗಳೆಲ್ಲ ಸಂಭ್ರಮಾಚರಣೆಯ ಮೂಡ್‌ನಲ್ಲಿದ್ದರು. ಸಮಾರಂಭದಲ್ಲಿ ತಮ್ಮ ಮಕ್ಕಳು ಡಿಗ್ರಿ ಪದವಿ ಪಡೆಯುವುದನ್ನು ಕಣ್ತುಂಬಿಕೊಳ್ಳಲು ಪಾಲಕರೂ ಬಂದು ಆಸೀನರಾಗಿದ್ದರು.
ವಿದ್ಯಾರ್ಥಿಗಳೆಲ್ಲರೂ ಕಪ್ಪು ಗೌನು ತೊಟ್ಟು ತಮ್ಮ ಬಾರಿಗಾಗಿ ಸರದಿಯಲ್ಲಿ ನಿಂತಿದ್ದರು. ಪದವಿ ಪ್ರದಾನ ಮಾಡಲು ಮುಖ್ಯ ಅತಿಥಿಯೊಬ್ಬರನ್ನು ಕರೆಸಲಾಗಿತ್ತು. ಮೊದಲಿಗೆ ಅವರ ಭಾಷಣವಿತ್ತು. ನಂತರ ಪದವಿ ಪ್ರದಾನ. ವಿದ್ಯಾರ್ಥಿಗಳ ಸಹನೆ ಮೀರುತ್ತಿತ್ತು. ‘ಶಿವಪೂಜೆ ಸಮಯದಲ್ಲಿ ಕರಡಿ ಬಂದಂತೆ ಈ ಅತಿಥಿ ಬಂದಿದ್ದಾನೆ. ಈಗವನ ಭಾಷಣ ಬೇರೆ ಕೇಳಬೇಕಲ್ಲಪ್ಪಾ’ ಎಂದು ಅವರು ಗೊಣಗಿಕೊಂಡರು. ಉದ್ಯಮಿಯಾಗಿದ್ದ ಅತಿಥಿಯ ಭಾಷಣ ಶುರುವಾಯಿತು. ವಿದ್ಯಾರ್ಥಿಗಳು ತಮ್ಮದೇ ಲೋಕದಲ್ಲಿದ್ದರೂ ಭಾಷಣ ಕಿವಿಗೆ ಬೀಳುತ್ತಲೇ ಇತ್ತು. ಒಂದು ಸಮಯದಲ್ಲಿ ಅಲ್ಲಿ ನೆರೆದಿದ್ದವರು ಹಾ… ಎಂದು ಉದ್ಗರಿಸಿದರು.
ಅವರಿಗೆ ತಮ್ಮ ಕಿವಿಗಳನ್ನು ನಂಬಲು ಸಾಧ್ಯವಾಗಲಿಲ್ಲ. ಹತ್ತಿರದವರನ್ನು ಕೇಳಿ ತಾವು ಕೇಳಿಸಿಕೊಂಡಿದ್ದು ಸರಿ ಎಂಬುದನ್ನು ಖಚಿತಪಡಿಸಿಕೊಂಡರು. ಅಂದು ಅತಿಥಿಯಾಗಿ ಆಗಮಿಸಿದ್ದ ಕೋಟ್ಯಧಿಪತಿ ಉದ್ಯಮಿ ಆ ವರ್ಷ ಪದವಿ ಪಡೆಯಲಿದ್ದ ಅಷ್ಟೂ ಮಂದಿ ವಿದ್ಯಾರ್ಥಿಗಳ ಸ್ಟೂಡೆಂಟ್ ಲೋನನ್ನು ತಾನು ಭರಿಸುವುದಾಗಿ ಹೇಳಿದ್ದರು. ಅಲ್ಲಿಗೆ 4 ಕೋಟಿ ರು.ಗಳಷ್ಟು ವಿದ್ಯಾರ್ಥಿಸಾಲ ಒಂದು ಬೋರು ಭಾಷಣದಲ್ಲಿ ಮಾಫಿಯಾಗಿತ್ತು! ಅಲ್ಲಿ ನೆರೆದಿದ್ದವರ ಕಂಗಳಲ್ಲಿ ನೀರಾಡಿತು, ಆ ಮಹಾನುಭಾವ ಉದ್ಯಮಪತಿಯ ಕಡೆ ಕೈಮುಗಿದರು. ನಮ್ಮಲ್ಲೂ ಇಂಥವರಿರುತ್ತಿದ್ದರೆ…•
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.