ನಿರಾಶ್ರಿತರ ಮನರಂಜನಾ ಕೇಂದ್ರ ಎಸಿ ಕೋಚ್

|ನೈರುತ್ಯ ರೈಲ್ವೆ ವಿನೂತನ ಪ್ರಯೋಗ |ಅನಾಥರ-ನಿರ್ಗತಿಕರ ಆಶ್ರಯ ತಾಣ ರಾಣಿ ಚನ್ನಮ್ಮ ಅಂತ್ಯೋದಯ ವೆಲ್ನೆಸ್‌ ಸೆಂಟರ್‌

Team Udayavani, May 28, 2019, 9:57 AM IST

hubali-tdy-1..

ರಾಣಿ ಚನ್ನಮ್ಮ ಅಂತ್ಯೋದಯ ವೆಲ್ನೆಸ್‌ ಸೆಂಟರ್‌ ಉದ್ಯಾನ.

ಹುಬ್ಬಳ್ಳಿ: ರೈಲ್ವೆ ನಿಲ್ದಾಣ ಕೇವಲ ರೈಲುಗಳು ನಿಲ್ಲುವ ತಾಣವಲ್ಲ. ಅದು ನಿರಾಶ್ರಿತರ ತಾಣವೂ ಹೌದು. ಪ್ರತಿಯೊಂದು ರೈಲು ನಿಲ್ದಾಣದಲ್ಲಿ ನಿರಾಶ್ರಿತ ಮಕ್ಕಳು, ಮಕ್ಕಳಿಂದ ಕಡೆಗಣಿಸಲ್ಪಟ್ಟ ಹಿರಿಯರು ಇದ್ದೇ ಇರುತ್ತಾರೆ. ಅವರು ಇಲ್ಲಿ ಭಿಕ್ಷೆ ಬೇಡಿಕೊಂಡು ಜೀವನ ನಿರ್ವಹಣೆ ಮಾಡುತ್ತಾರೆ. ಇಂಥವರಿಗಾಗಿಯೇ ನೈರುತ್ಯ ರೈಲ್ವೆ ಮಾಡಿದ ವಿನೂತನ ಪ್ರಯೋಗ ಕೈಗೊಂಡಿದೆ.

ಹೌದು. ಆಶ್ರಯವಿಲ್ಲದ, ಅನಾಥ ಮಕ್ಕಳು ಹಾಗೂ ಪರಿತ್ಯಕ್ತ ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿಗಾಗಿಯೇ ರಾಣಿ ಚನ್ನಮ್ಮ ಅಂತ್ಯೋದಯ ವೆಲ್ನೆಸ್‌ ಸೆಂಟರ್‌ ರೂಪ ತಳೆದಿದೆ. ವೆಲ್ನೆಸ್‌ ಸೆಂಟರ್‌ ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರ ಕಾನ್ಸೆಪ್ಟ್ ಆಗಿದ್ದು, ಬಳಕೆಯಾಗದ ಕೋಚ್ ಈಗ ಮನರಂಜನಾ ಕೇಂದ್ರದ ರೂಪ ಪಡೆದಿದೆ.

ರೈಲ್ವೆ ನಿಲ್ದಾಣ ಆವರಣದಲ್ಲಿ ಮೆಕನೈಜ್ಡ್ ಲಾಂಡ್ರಿ ಎದುರಿನ ಉದ್ಯಾನದಲ್ಲಿ ಕೆಟ್ಟು ನಿಂತ ರೈಲು ಕೋಚನ್ನೇ ಆಶ್ರಯ ಧಾಮವನ್ನಾಗಿ ರೂಪಿಸಲಾಗಿದೆ. ಮಕ್ಕಳಿಗೆ ಹಾಗೂ ಹಿರಿಯರಿಗೆ ಇಲ್ಲಿ ಮಧ್ಯಾಹ್ನ ಊಟ, ಸಂಜೆ ಸ್ಯ್ನಾಕ್ಸ್‌ ನೀಡಲಾಗುತ್ತದೆ. ಅನಾಥರಿಗೆ ಕೇವಲ ಭೋಜನ ನೀಡಿದರೆ ಸಾಲದು, ಅವರಿಗೆ ಮನರಂಜನೆ ಬೇಕಾಗುತ್ತದೆ. ನೋವುಗಳನ್ನು ಮರೆಯಲು, ಮನಸ್ಸು ಪ್ರಫುಲ್ಲಗೊಳಿಸಿಕೊಳ್ಳಲು ಇಲ್ಲಿ ಟಿ ಅಳವಡಿಸಲಾಗಿದೆ.

ಇಲ್ಲಿರುವ ಸಿಬ್ಬಂದಿ ದೀಪಾ ಅವರು, ಮಕ್ಕಳಿಗೆೆ ಕಥೆ ಹೇಳುತ್ತಾರೆ. ಅವರ ನೋವುಗಳಿಗೆ ಸ್ಪಂದಿಸುತ್ತಾರೆ. ಶಿಕ್ಷಣದಿಂದಾಗುವ ಪ್ರಯೋಜನ ತಿಳಿಸಿ ಶಾಲೆಗೆ ಹೋಗುವಂತೆ ಪ್ರೇರೇಪಿಸುತ್ತಾರೆ. ಆದ್ದರಿಂದ ಅನಾಥ ಮಕ್ಕಳು ಬೆಳಗ್ಗೆಯಿಂದ ಸಂಜೆವರೆಗೆ ಇಲ್ಲಿರಲು ಬಯಸುತ್ತಾರೆ. ನಿಲ್ದಾಣಕ್ಕೆ ಬರುವ ಕಾರ್ಮಿಕರ ಮಕ್ಕಳು ಕೂಡ ಇಲ್ಲಿಗೆ ಬಂದು ಆಡುತ್ತಾರೆ.

ಬೆಳಗ್ಗೆ 9:00 ಗಂಟೆಯಿಂದ ಸಂಜೆ 5:00 ಗಂಟೆವರೆಗೆ ವೆಲ್ನೆಸ್‌ ಸೆಂಟರ್‌ ತೆರೆದಿರುತ್ತದೆ. ಉದ್ಯಾನದಲ್ಲಿ ಟಾಯ್ಲೆಟ್ ಹಾಗೂ ಬಾತ್‌ರೂಮ್‌ ವ್ಯವಸ್ಥೆ ಮಾಡಿರುವುದರಿಂದ ಮಕ್ಕಳು ಇಲ್ಲಿ ಸ್ನಾನ-ಶೌಚ ಮಾಡಿಕೊಂಡು ಸಂಜೆವರೆಗೂ ಇಲ್ಲಿ ನಿಶ್ಚಿಂತೆಯಿಂದ ಇರುತ್ತಾರೆ. ಪ್ರತಿ ನಿತ್ಯ ಕನಿಷ್ಟ 50 ಜನರು ಇಲ್ಲಿ ಬಂದು ಉಳಿದುಕೊಳ್ಳುತ್ತಾರೆ. ಕೋಚ್ನಿಂದ ಹೊರಗೆ ಬಂದರೆ ಉದ್ಯಾನದಲ್ಲಿ ಜೋಕಾಲಿ, ಜಾರುಬಂಡೆ ಆಡಬಹುದು.

ವೆಲ್ನೆಸ್‌ ಸೆಂಟರ್‌ನಲ್ಲಿ ಏನೆನಿದೆ: ವೆಲ್ನೆಸ್‌ ಸೆಂಟರ್‌ನಲ್ಲಿ ಎಸಿ ಹಾಗೂ ಫ್ಯಾನ್‌ಗಳ ವ್ಯವಸ್ಥೆಯಿರುವುದರಿಂದ ಮಕ್ಕಳು ಬಿರು ಬಿಸಿಲಿನಲ್ಲಿ ಆಡದೇ ಇಲ್ಲಿ ಬಂದು ಆನಂದದಿಂದ ಒಳಾಂಗಣ ಆಟ ಆಡುತ್ತಾರೆ. ಕೇರಂ, ಚೆಸ್‌, ರಿಂಗ್‌, ಬಾಲ್ ಹೀಗೆ ವಿವಿಧ ಆಟಗಳನ್ನು ಆಡಬಹುದಾಗಿದೆ. ಕುಷನ್‌ ಮೇಲೆ ಕುಳಿತು ಟಿವಿ ವೀಕ್ಷಿಸಬಹುದಾಗಿದೆ. ಇಲ್ಲಿ ಮನರಂಜನೆಗೆ ಹಾಗೂ ಜ್ಞಾನಾಭಿವೃದ್ಧಿಗೆ ಚಾರ್ಟ್‌ಗಳಿವೆ. ಕತೆಗಳು, ಹಣ್ಣುಗಳು, ಹೂವುಗಳು, ಕನ್ನಡ, ಇಂಗ್ಲಿಷ್‌ ಅಕ್ಷರಗಳು, ಗಣ್ಯರ ಭಾವಚಿತ್ರಗಳನ್ನು ತೂಗು ಹಾಕಲಾಗಿದ್ದು, ಅವುಗಳ ಕುರಿತು ವಿವರಣೆ ನೀಡಲಾಗುತ್ತದೆ.

ಕೋಚ್ ಹೊರ ಮೇಲ್ಮೈ ಮೇಲೆ ಮಕ್ಕಳು ಇಷ್ಟಪಡುವ ಛೋಟಾ ಭೀಮ್‌, ಮಿಕ್ಕಿಮೌಸ್‌ ಮೊದಲಾದ ಕಾರ್ಟೂನ್‌ ಚಿತ್ರ ಬಿಡಿಸಲಾಗಿದೆ. ಇಲ್ಲಿ ಮಕ್ಕಳಿಗೆ ಮಧ್ಯಾಹ್ನ ಭೋಜನ ನೀಡಲಾಗುತ್ತದೆ. ಸಂಜೆ ಬಿಸ್ಕತ್ತು, ಚಾಕ್ಲೇಟ್ ನೀಡಲಾಗುತ್ತದೆ. ಇದರ ಆಸೆಗಾಗಿಯೇ ಮಕ್ಕಳು ಪ್ರತಿದಿನ ಇಲ್ಲಿಗೆ ಬರುತ್ತಾರೆ. ಅನೇಕ ಹಿರಿಯರು ಕೆಲ ಹೊತ್ತು ಇಲ್ಲಿ ತಂಗಿ ವಿಶ್ರಾಂತಿ ಪಡೆಯುತ್ತಾರೆ. ಇಲ್ಲಿ ಯಾವುದೇ ಭೇದ ಭಾವ ಮಾಡಲ್ಲ. ಉದ್ದೇಶ ಈಡೇರಿಕೆಗಾಗಿ ವೆಲ್ನೆಸ್‌ ಸೆಂಟರ್‌ಗೆ ಬಂದಂಥವರಿಗೆಲ್ಲ ಇಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುತ್ತದೆ.

•ವಿಶ್ವನಾಥ ಕೋಟಿ

ಟಾಪ್ ನ್ಯೂಸ್

BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ

BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ

Maharashtra Elections: ವಿಪಕ್ಷ ನಾಯಕ ರಾಹುಲ್‌ ಛೋಟಾ ಪೋಪಟ್‌: ಬಿಜೆಪಿ ವಕ್ತಾರ ಲೇವಡಿ

Maharashtra Elections: ವಿಪಕ್ಷ ನಾಯಕ ರಾಹುಲ್‌ ಛೋಟಾ ಪೋಪಟ್‌: ಬಿಜೆಪಿ ವಕ್ತಾರ ಲೇವಡಿ

Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ

Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ

Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ

Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್‌ ಮತ್ತು ಬಾಬಾ ನಡುವಿನ ಹೋರಾಟ

Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್‌ ಮತ್ತು ಬಾಬಾ ನಡುವಿನ ಹೋರಾಟ

Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ

Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

Yathanaa

Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ಷೇಪ

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ

BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ

Maharashtra Elections: ವಿಪಕ್ಷ ನಾಯಕ ರಾಹುಲ್‌ ಛೋಟಾ ಪೋಪಟ್‌: ಬಿಜೆಪಿ ವಕ್ತಾರ ಲೇವಡಿ

Maharashtra Elections: ವಿಪಕ್ಷ ನಾಯಕ ರಾಹುಲ್‌ ಛೋಟಾ ಪೋಪಟ್‌: ಬಿಜೆಪಿ ವಕ್ತಾರ ಲೇವಡಿ

Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ

Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ

Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ

Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.