ರೈಲು ನಿಲ್ದಾಣದಲ್ಲಿ ಪಾರ್ಕಿಂಗ್ ಇಲ್ಲದೇ ಪರದಾಟ
ರೈಲ್ವೆ ಪೊಲೀಸ್ ಠಾಣೆ ಮುಂದೆ ವಾಹನ ನಿಲ್ಲಿಸುವವರಿಂದ ದಂಡ ವಸೂಲಿ ••ರಶೀದಿ ನೀಡದೇ ವಂಚನೆ: ಆರೋಪ
Team Udayavani, May 28, 2019, 12:53 PM IST
ಅರಸೀಕೆರೆ: ಹಾಸನ ಜಿಲ್ಲೆಯಲ್ಲಿಯೇ ಅರಸೀಕೆರೆ ನಗರದ ರೈಲ್ವೆ ನಿಲ್ದಾಣ ಪ್ರಮುಖ ಜಂಕ್ಷನ್ ಕೇಂದ್ರವಾಗಿದ್ದು, ಪ್ರತಿನಿತ್ಯ ನೂರಕ್ಕೂ ಹೆಚ್ಚಿನ ರೈಲುಗಾಡಿಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಸಾವಿರಾರು ಪ್ರಯಾಣಿಕರು ಇಲ್ಲಿಂದ ಬೇರೆ ಬೇರೆ ಊರುಗಳಿಗೆ ಸಂಚರಿಸುತ್ತಾರೆ. ಆದರೆ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಪ್ರಯಾಣಿಕರಿಗೆ ಸೂಕ್ತವಾದ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ತೀವ್ರ ಸಮಸ್ಯೆ ಉಂಟಾಗಿದೆ.
ಆರ್‌ಪಿಎಫ್ ಕಿರುಕುಳ: ನಿಲ್ದಾಣದ ಮುಂದೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ರೈಲ್ವೆ ಸುರಕ್ಷಾ ದಳ (ಆರ್‌ಪಿಎಫ್) ದ ಕೆಲವು ಅಧಿಕಾರಿಗಳು ಕಾನೂನು ಪರಿ ಪಾಲನೆ ಹೆಸರಿನಲ್ಲಿ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ವಾಹನಗಳು ಒಳಭಾಗಕ್ಕೆ ಹೋಗದಂತೆ ಸಿಮೆಂಟ್ ಕಟ್ಟೆಯನ್ನು ಕಟ್ಟಿ ನೋ ಪಾರ್ಕಿಂಗ್ ಎಂಬ ನಾಮಫಲಕವನ್ನು ಹಾಕಿದ್ದಾರೆ.
ರೈಲ್ವೆ ಪೊಲೀಸ್ ಠಾಣೆಯ ಬಳಿಯಿರುವ ಸಿಮೆಂಟ್ ಕಟ್ಟೆಯ ಮುಂಭಾಗದಲ್ಲಿ ಆರ್‌ಪಿಎಫ್ ಸಿಬ್ಬಂದಿ ಬೈಕ್‌ಗಳು ನಿಂತಿರುತ್ತವೆ. ಇದನ್ನು ನೋಡಿದ ಸಾರ್ವಜನಿಕರು ತಮ್ಮ ದ್ವಿಚಕ್ರ ವಾಹನಗಳನ್ನು ತಾತ್ಕಾಲಿ ಕವಾಗಿ ನಿಲ್ಲಿಸಿ ಊರಿಗೆ ಕಳುಹಿಸುವ ಪ್ರಯಾಣಿಕರನ್ನು ರೈಲು ನಿಲ್ದಾಣಕ್ಕೆ ಬಿಟ್ಟು ಬರುವ ಐದು ನಿಮಿಷದೊಳಗೆ ರೈಲ್ವೆ ಸುರಕ್ಷಾ ದಳದ ಕೆಲವು ಅಧಿಕಾರಿಗಳು ಕೆಲವು ದ್ವಿಚಕ್ರ ವಾಹನಗಳಿಗೆ ಕಬ್ಬಿಣದ ಸರಪಳಿಯಿಂದ ಬೀಗ ಹಾಕಿ ತಮ್ಮ ಠಾಣೆಗೆ ಬಂದು ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದಕ್ಕೆ ದಂಡ ಕಟ್ಟುವಂತೆ ಹೇಳಿ ಹೋಗು ತ್ತಾರೆ. ಇದರಿಂದ ಮಾನಸಿಕ ತೊಂದರೆಗೆ ಒಳಗಾಗುವ ವ್ಯಕ್ತಿಗಳು ಹಾಗೂ ಪ್ರಯಾಣಿಕರು ಟಿಕೆಟ್ ಪಡೆದಿ ದ್ದರೂ. ತಮ್ಮ ಪ್ರಯಾಣವನ್ನು ಮುಂದುವರಿಸಲು ಸಾಧ್ಯವಾಗದೇ ರೈಲ್ವೆ ಸುರಕ್ಷಾ ದಳದ ಕಚೇರಿ ತೆರಳಿ ಅಲ್ಲಿ ಅಧಿಕಾರಿಗಳು ಕೇಳುವ ದಂಡದ ಮೊತ್ತವನ್ನು ನೀಡಿ ತಮ್ಮ ದ್ವಿಚಕ್ರ ವಾಹನವನ್ನು ಬಂಧ ಮುಕ್ತಗೊಳಿಸಿ ಕೊಳ್ಳುವ ವೇಳೆಗೆ ರೈಲು ನಿಲ್ದಾಣ ಬಿಟ್ಟಿರುತ್ತದೆ.ಇದರಿಂದ ನೋ ಪಾರ್ಕಿಂಗ್ ಕಾರಣ ದಂಡ ಕಟ್ಟಿದ ವ್ಯಕ್ತಿಯು ಹಣವೂ ವ್ಯರ್ಥ ವಾಗುತ್ತದೆ. ಅಲ್ಲದೇ ಪ್ರಯಾಣಿಕರು ಖರೀದಿಸಿದ್ದ ಟಿಕೆಟ್ ಹಣವೂ ವ್ಯರ್ಥ ವಾಗುತ್ತದೆ. ದಂಡ ಪಡೆದ ಮೊತ್ತಕ್ಕೆ ರೈಲ್ವೆ ಇಲಾಖೆ ಅಧಿಕಾರಿಗಳು ರಶೀದಿ ನೀಡದೇ ವಂಚಿಸುತ್ತಿದ್ದಾರೆಂದು ಸಾರ್ವಜನಿಕರು ಆಪಾದಿಸಿದ್ದಾರೆ.
ಸಂಬಂಧಪಟ್ಟ ರೈಲ್ವೆ ಇಲಾಖೆ ಉನ್ನತಮಟ್ಟದ ಅಧಿಕಾರಿಗಳು ಗಂಭೀರವಾದ ಸಮಸ್ಯೆಯನ್ನು ಬಗೆ ಹರಿಸುವ ನಿಟ್ಟಿನಲ್ಲಿ ನಿಲ್ದಾಣದ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕಾಗಿದೆ.
ಆರ್‌ಪಿಎಫ್ ಅಧಿಕಾರಿಗಳಿಂದ ಬೆದರಿಕೆ:
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.