ಭಕ್ತಿ ಆಂತರಾಳದ ಶಕ್ತಿಯಾಗಿರಬೇಕು -ಪೇಜಾವರ ಶ್ರೀ
Team Udayavani, May 28, 2019, 1:18 PM IST
ಬದಿಯಡ್ಕ: ಭಕ್ತಿ ಎನ್ನುವುದು ಕೇವಲ ತೋರಿಕೆಗೆ ಮಾತ್ರವಾಗದೆ ಆಂತರಾಳದ ಶಕ್ತಿಯಾಗಬೇಕು. ಆ ಮೂಲಕ ಆಂತಃಶಕ್ತಿ ಜಾಗೃತಗೊಂಡು ಪ್ರಜ್ಞಾವಂತ ಸಮಾಜ ಸೃಷ್ಠಿಯಾಗಬೇಕು. ಒಳ್ಳೆಯ ಆಲೋಚನೆಗಳು ನಮ್ಮ ಜೀವನದ ದಾರಿದೀಪವಾದಾಗ ನಮ್ಮ ಯುವಜನಾಂಗ ಈ ದೇಶದ ಆರ್ಥಪೂರ್ಣ ಆಸ್ತಿಯಾಗಲು ಸಾಧ್ಯ. ಆದು ದೇಶದ ಆಭಿವೃದ್ಧಿಯ ಸೂಚಕವೂ ಹೌದು. ಆದುದರಿಂದ ಭಯ ಭಕ್ತಿ ಜೀವನದಲ್ಲಿ ಸದಾ ಇರಬೇಕು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ನುಡಿದರು.
ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದ ದ್ರವ್ಯಕಲಶದಂಗವಾಗಿ ಜರುಗಿದ ಧಾಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಆವರು ಮಾತನಾಡುತ್ತಿದ್ದರು.
ಧಾರ್ಮಿಕ ಸಭೆಯಲ್ಲಿ ಮಲ್ಲ ಶ್ರೀ ಕ್ಷೇತ್ರದ ಮೊಕ್ತೇಸರರಾದ ವಿಷ್ಣು ಭಟ್ ಆನೆಮಜಲು ಅಧ್ಯಕ್ಷತೆ ವಹಿಸಿದರು. ಹಾಗೂ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಮಂಗಳೂರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಆರಿಕ್ಕಾಡಿ ವೇದಮೂರ್ತಿ ಶ್ರೀ ಚಕ್ರಪಾಣಿ ದೇವಪೂಜಿತ್ತಾಯ, ಬೆಂಗಳೂರು ದ್ವಾರಕಾ ಗ್ರೂಪ್ ಓಫ್ ಹೋಟೆಲ್ಸ್‌ನ ಎನ್.ರಾಘವೇಂದ್ರ ರಾವ್, ಬೆಂಗಳೂರಿನ ಉದ್ಯಮಿಗಳಾದ ಜೆ.ಎಸ್.ಪುತ್ತೂರು, ಶ್ರೀ ಕೇದಾರನಾಥ್‌ನ ಟ್ರಸ್ಟಿಗಳಾದ ಗಂಗಾಧರ ಕುಷ್ಟಗಿ, ಮುಂಡೋಳು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಟ್ರಸ್ಟಿ ರಘುರಾಮ ಬಲ್ಲಾಲ್ ಮೊದಲಾದವರು ಮುಖ್ಯ ಅತಿಥಗಳಾಗಿ ಉಪಸ್ಥಿತರಿದ್ದರು. ಬ್ರಹ್ಮ ಶ್ರೀ ರಾಘವೇಂದ್ರ ಭಟ್ ಉಡುಪುಮೂಲೆ ಸ್ವಾಗತಿಸಿ, ಮುರಳೀಕೃಷ್ಣ ವಂದಿಸಿದರು.
ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಜಯಕಮಲಾ ಪಾಂಡ್ಯನ್ ಚೆನ್ನೈ ಅವರ ಶಿಷ್ಯೆ ಸುಪ್ರಿಯಾ ಹೊಸಮನೆಯವರಿಂದ ಭರತನಾಟ್ಯ, ಕಣ್ಣೂರು ಅಳಿಕ್ಕೋಡ್ ನಟರಾಜ ಮಂಟಪಂ ಇವರಿಂದ ಮಲೆಯಾಳ ಪುರಾಣ ನೃತ್ಯ ಸಂಗೀತ ನಾಟಕ ಕಡಾಂಕೋಟ್ಟ್ ಮಾಕ್ಕಂ ಭಗವತಿ ಪ್ರದರ್ಶನಗೊಂಡಿತು.
ಭಕ್ತಿಮಾರ್ಗದಲ್ಲಿ ನಡೆದಾಗ ಬದುಕು ಸಾರ್ಥಕತೆಯನ್ನು ಹೊಂದುತ್ತದೆ. ಪರಸ್ಪರ ಪ್ರೀತಿ ಸೌಹಾರ್ಧತೆ ಮನಸುಗಳನ್ನು ಬೆಸೆದು ಸಮಾಜದಲ್ಲಿ ಶಾಂತಿ ಸಮಾಧಾನವನ್ನು ಉಂಟುಮಾಡುತ್ತದೆ. ಮಾನವನಲ್ಲಿ ಉತ್ತಮ ವಿಚಾರದಾರೆಗಳೊಂದಿಗೆ ಉನ್ನತವಾದ ಆಚಾರ ಮತ್ತು ಅಭಿರುಚಿ ಜಾಗತವಾದಾಗ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ. ಮುಂದಿನ ಜನಾಂಗವನ್ನು ಭಕ್ತಿ ಮತ್ತು ಸಂಸ್ಕೃತಿಯ ಗಟ್ಟಿತನವನ್ನು ಉಳಿಸಿಕೊಂಡು ಬೆಳೆಸಬೇಕು. ಮೋಹದ ಬಲೆಯಿಂದ ವಾಸ್ತವದ ಸತ್ಯದ ಅರಿವನ್ನು ಮೂಡಿಸುವ ಕಾರ್ಯವನ್ನು ಮಾಡಬೇಕು. ಭಗವಂತನ ಮೇಲಿನ ಭಕ್ತಿ ಮತ್ತು ಬಲವಾದ ನಂಬಿಕೆಯಿಂದ ಮಾಡುವ ಕಾರ್ಯ ಯಾವತ್ತೂ ಯಶಸ್ಸಿನೆಡೆಗೆ ಮುಖಮಾಡಿರುತ್ತದೆ.
ಪೇಜಾವರ ಮಠಾಧೀಶ ಶ್ರೀ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ
ಬಾಂಧವ್ಯದ ಸೆಲೆಯನ್ನು ಪ್ರೀತಿ ಮತ್ತು ಗೌರವದ ದಾರದಲಿ ಬಂಧಿಸಿ ವಿಶಾಲವಾದ ದೃಷ್ಟಿಕೋನದಿಂದ ಸಮಾಜವನ್ನು ನೋಡಿದಾಗ ಕಳೆದುಹೋಗುವ ಮತ್ತು ಪರಸ್ಪರ ಸಂಬಂಧಗಳು ಇಲ್ಲದೇ ಆಗುವ ಭಯವಿರುವುದಿಲ್ಲ. ಒಳ್ಳೆಯ ಸಂಸ್ಕಾರವನ್ನು, ಆಚಾರ ವಿಚಾರಗಳನ್ನು ಮಕ್ಕಳ ಮನಸಲ್ಲಿ ಬಿತ್ತಬೇಕು. ಅದಕ್ಕೆ ನಾವು ಅದನ್ನು ಅನುಸರಿಸಿ ಆ ದಾರಿಯಲ್ಲಿ ಅವರೂ ಮುನ್ನಡೆಯುವಂತೆ ಮಾಡಬೇಕು. ದೇವಸ್ಥಾನಗಳಿಗೆ ಆಗಾಗ ಭೇಟಿ ನೀಡುವುದು, ದೇವರ ದರ್ಶನ ಪಡೆದು ಪುನೀತರಾಗುವುದು ಕೇವಲ ಕೃತಕ ಭಕ್ತಿಯಾಗಬಾರದು. ಬದಲಾಗಿ ನಮ್ಮೊಳಗೆ ನವಚೆ„ತನ್ಯ ತುಂಬುವ ಮಾರ್ಗವಾಗಬೇಕು. ಒಗ್ಗಟ್ಟು ಮತ್ತು ಹೊಂದಾಣಿಕೆಯಿಂದ ಮಾಡುವ ಯಾವುದೇ ಕಾರ್ಯಕ್ಕೂ ಭಗವಂತನ ಆಶೀರ್ವಾದವಿರುತ್ತದೆ.
ಪ್ರದೀಪ್ ಕುಮಾರ್ ಕಲ್ಕೂರ, ಅಧ್ಯಕ್ಷರು, ಮಂಗಳೂರು ಕಲ್ಕೂರ ಪ್ರತಿಷ್ಠಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.