ಜೋಕ್ ಫಾಲ್ಸ್
Team Udayavani, May 29, 2019, 6:10 AM IST
ನಂಗಿಷ್ಟ ಇಲ್ಲ
ಗುಂಡ: ಮೊನ್ನೆ ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಹೋಗಿದ್ದೆ. ಆಪರೇಷನ್ ಮಾಡ್ಬೇಕು ಅಂದ್ರು ಡಾಕ್ಟರ್
ಪುಂಡ: ಅಯ್ಯೋ, ಹೌದಾ? ಮತ್ಯಾಕೆ ತಡ, ಇವತ್ತೇ ಹೋಗಿ ಅಡ್ಮಿಟ್ ಆಗಿಬಿಡು
ಗುಂಡ: ಇಲ್ಲ, ಆಪರೇಷನ್ ಮಾಡಿಸೋದಿಲ್ಲ ಅಂತ ತೀರ್ಮಾನಿಸಿದ್ದೀನಿ
ಪುಂಡ: ಯಾಕೆ?
ಗುಂಡ: ನರ್ಸ್ ತುಂಬಾ ಚೆನ್ನಾಗಿದ್ದಾಳೆ, ಅವಳನ್ನ ಸಿಸ್ಟರ್ ಅಂತ ಕರೆಯೋಕೆ ನಂಗೆ ಇಷ್ಟ ಇಲ್ಲ
ಎರಡರಲ್ಲಿ ಒಂದು…
ಸಂದರ್ಶಕ: ನಿನಗೆ ಹತ್ತು ಸುಲಭದ ಪ್ರಶ್ನೆ ಕೇಳಲೋ, ಒಂದು ಕಷ್ಟದ್ದು ಕೇಳಲೋ?
ಗುಂಡ: ಒಂದು ಕಷ್ಟದ ಪ್ರಶ್ನೆಯನ್ನೇ ಕೇಳಿ
ಸಂದರ್ಶಕ: ಹಗಲು ಮೊದಲೋ, ರಾತ್ರಿಯೋ
ಗುಂಡ: ಹಗಲು
ಸಂಸರ್ಶಕ: ಅದು ಹೇಗೆ
ಗುಂಡ: ಸಾರಿ ಸರ್, ನೀವು ಒಂದು ಪ್ರಶ್ನೆ ಮಾತ್ರ ಕೇಳಬಹುದು!
ನೀನ್ ಬಿಡಪ್ಪಾ…
ಮೈ ಉರಿಯುವಷ್ಟು ಸಿಟ್ಟು ಯಾವಾಗ ಬರುತ್ತೆ?
“ಅಯ್ಯೋ, ಜೀವನ ಯಾಕೋ ಹಳಿ ತಪ್ಪಿದ ರೈಲಿನ ಥರ ಆಗಿದೆಯಲ್ಲ’ ಅಂತ ದುಃಖ ಪಡುತ್ತಿರುವಾಗ, ಯಾವನೋ ಬಂದು- “ನೀನ್ ಬಿಡಪ್ಪಾ, ಎಷ್ಟು ಆರಾಮಾಗಿ ಇದ್ದೀಯ’ ಅಂತಾರಲ್ಲ, ಆವಾಗ!
ನೆನಪಿಡಿ
ಯಾರಾದರೂ ನಿಮ್ಮತ್ತ ಕಲ್ಲುಗಳನ್ನು ಎಸೆದರೆ, ಅವರತ್ತ ಹೂವುಗಳನ್ನು ಎಸೆಯಿರಿ; ಆದರೆ, ಹೂ ಕುಂಡದ ಜೊತೆಗೆ!
ಎಷ್ಟೊಂದು ಬಾಕಿ ಇದೆ
ಭಿಕ್ಷುಕ: ಸಾರ್, ಭಿಕ್ಷೆ ಹಾಕಿ.
ಗುಂಡ: ನಾಳೆ ಬಾರಪ್ಪ.
ಭಿಕ್ಷುಕ: ನಿಮ್ಮ ಏರಿಯಾದಲ್ಲಿ ಎಲ್ಲರೂ ನಾಳೆ, ನಾಳೆ ಅಂತ ಸಾವಿರಾರು ರೂಪಾಯಿ ಬಾಕಿ ಇಟ್ಕೊಂಡಿದ್ದಾರೆ
ಎರಡು ವಿಧಾನ
ಪರೀಕ್ಷೆಗೆ ಓದುವಾಗ ವಿದ್ಯಾರ್ಥಿಗಳು ಅನುಸರಿಸುವ ಎರಡು ವಿಧಾನಗಳು
– ಈ ಟಾಪಿಕ್ ತುಂಬಾ ಸುಲಭ ಇದೆ, ಹಾಗಾಗಿ ಓದೋ ಅಗತ್ಯ ಇಲ್ಲ
-ಈ ಟಾಪಿಕ್ ತುಂಬಾ ಕಷ್ಟ ಇದೆ, ಹಾಗಾಗಿ ಓದೋ ಅಗತ್ಯ ಇಲ್ಲ
ಎಂಥ ವಿಪರ್ಯಾಸ?
ಗುಂಡ: ಈ ಅಪ್ಪ-ಅಮ್ಮನ್ನ ಅರ್ಥ ಮಾಡ್ಕೊಳ್ಳೋಕೇ ಆಗಲ್ಲ.
ಪುಂಡ: ಯಾಕೆ?
ಗುಂಡ: ಸಣ್ಣವನಿದ್ದಾಗ ನಡೆಯೋಕೆ, ಮಾತಾಡೋಕೆ ಕಲಿಸಿದವರೇ ಈಗ, ಸುಮ್ನೆ ಇರು, ಸುಮ್ನೆ ಕೂತ್ಕೊà ಅಂತಾರೆ, ಏನ್ಮಾಡೋಣ ಹೇಳು?
-ಚೈತ್ರಾ ಗೌಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.