ಪೂರ್ಣವಾಗದ ಕಾಮಗಾರಿ, ಕೆಲವರಿಗೆ ಮಾತ್ರ ಪರಿಹಾರ


Team Udayavani, May 29, 2019, 6:00 AM IST

e-7

ಬಜಪೆ: ಕಳೆದ ವರ್ಷ ಮೇ 29ರಂದು ಸುರಿದ ಮಹಾಮಳೆಗೆ ಕರಂಬಾರು, ಬಜಪೆ, ವಿಟ್ಲಬೆಟ್ಟು ಪರಿಸರದಲ್ಲಿ ಅಪಾರ ಹಾನಿ ಸಂಭವಿಸಿದ್ದು, ಕೆಲವೆಡೆ ಕಾಮಗಾರಿ ಪರಿಸ್ಥಿತಿ ಸುಧಾರಣೆಯಾಗಿದೆ. ಇನ್ನೂ ಹಲವೆಡೆ ಕಾಮಗಾರಿ ನಡೆಯಬೇಕಿದೆ.

ಮಂಗಳೂರು ವಿಮಾನ ನಿಲ್ದಾಣದ ರನ್‌ ವೇ ಕಾಮಗಾರಿಯ ಟ್ಯಾಕ್ಸಿ ಬೇ ರಚನೆ ಕಾಮಗಾರಿಯ ಮಣ್ಣು ಕರಂಬಾರು ಪ್ರದೇಶದ ಕಳೆದ ವರ್ಷ ಸುರಿದ ಭಾರೀ ಮಳೆಯಿಂದಾಗಿ ಮಳೆ ನೀರು ತೋಡುಗಳಲ್ಲಿ ಹರಿದು ಅಪಾರ ಹಾನಿಯಾಗಿತ್ತು. ಮಳವೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಕೊಪ್ಪಳ, ಏರುಗುಡ್ಡೆ, ಪಂಚಕೋಟಿ, ಕೋರªಬು ದೈವಸ್ಥಾನದ ಬಳಿ, ಪಾದೆಬೆಟ್ಟು, ಬಗ್ಗಕೋಡಿ ಪ್ರದೇಶದ ಸುಮಾರು ಮನೆಗಳಿಗೆ ಹಾನಿಯಾಗಿ ಕೃಷಿ ತೋಟಗಳು ನಷ್ಟ ಅನುಭವಿಸಿದ್ದವು. ಗ್ರಾ. ಪಂ. 67 ಜಾಗಗಳನ್ನು ಗುರುತಿಸಿ 1.40 ಕೋಟಿ ನಷ್ಟದ ಬಗ್ಗೆ ವರದಿ ಸಲ್ಲಿಸಿತ್ತು. ಅದರಲ್ಲಿ 16 ಮಂದಿಗೆ ಪ್ರಕೃತಿ ವಿಕೋಪದಡಿ 2 ರಿಂದ 3 ಸಾವಿರ ರೂ. ಪರಿಹಾರ ಸಿಕ್ಕಿದ್ದು ಇನ್ನೂ ಕೆಲವರಿಗೆ ಬಿಡಿಗಾಸು ಸಿಕ್ಕಿಲ್ಲ. ಒಬ್ಬರಿಗೆ ಮಾತ್ರ 1ಲಕ್ಷ 20 ಸಾವಿರ ಪರಿಹಾರ ಸಿಕ್ಕಿದೆ.

ಕಾಲುವೆ ತಡೆಗೋಡೆ ಕಾಮಗಾರಿ ಅಪೂರ್ಣ
ಮಂಗಳೂರು ವಿಮಾನ ನಿಲ್ದಾಣದಿಂದ ಮಳವೂರು ಗ್ರಾ.ಪಂ. ನ ಕರಂಬಾರು ಪ್ರದೇಶದವರೆಗೆ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ 6.75ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಮಳೆನೀರು ಹರಿಯುವ ಕಾಲುವೆಯ ಕಾಮಗಾರಿ ಬಹುತೇಕ ಪೂರ್ಣ ಗೊಂಡಿದ್ದು, ಕೆಲವೆಡೆ ತಡೆಗೋಡೆ ಕಾಮಗಾರಿ ಪೂರ್ಣಗೊಳ್ಳಬೇಕಾಗಿದೆ.

ಮಹಾಮಳೆಗೆ ಕಂದಾವರ ಗ್ರಾ.ಪಂ. ವ್ಯಾಪ್ತಿಯ ಕೊಳಂಬೆಗ್ರಾಮ ವಿಟ್ಲಬೆಟ್ಟು ದೇವಸ್ಥಾನದ ಬಳಿ ಮಂಗಳೂರು ವಿಮಾನ ನಿಲ್ದಾಣದ ರನ್‌ ವೇ ಕಾಮ ಗಾ ರಿಯ ಟ್ಯಾಕ್ಸಿ ಬೇಗೆ ನೀರು ರಸ್ತೆಯಲ್ಲಿ ದೊಡ್ಡ ಕಂದಕ ನಿರ್ಮಾಣವಾಗಿ ರಸ್ತೆ ಡಾಮರೀಕರಣ ಈ ನೀರಿನಿಂದ ಕೊಚ್ಚಿ ಹೋಗಿ ಪರಿ ಸರದ ಮನೆ, ಬಾವಿ, ಕೆರೆ, ಕೃಷಿ ಪ್ರದೇ ಶ ಗ ಳಿಗೆ ಮಣ್ಣು ತುಂಬಿತ್ತು. ಶಿವರಾಮ ಕುಲಾಲ್‌ ಅವರ ಮನೆ ಅಡಿಪಾಯ, ಗೋಡೆಗಳಲ್ಲಿ ಬಿರುಕು ಬಿಟ್ಟಿತ್ತು. ವಾಸು ಮೂಲ್ಯ ಹಾಗೂ ದೇವಪ್ಪ ಮೂಲ್ಯ, ತಾರಾನಾಥ ಪೂಜಾರಿ, ದೇವಪ್ಪ ಪೂಜಾರಿ, ಲೀಲಾ ಪೂಜಾರಿ ಮನೆ, ಬಾವಿ, ಕೃಷಿ ಹಾಗೂ ಸೀತಾರಾಮ ಶೆಟ್ಟಿಯವರ ಅವರಣ ಗೋಡೆ, ಮನೆಗೆ ಮಣ್ಣು ತುಂಬಿ, ಬಾಲಕೃಷ್ಣ ಭಂಡಾರಿಯವರ ಕೆರೆ ಹಾಗೂ ಗದ್ದೆ, ಕೃಷಿ ಪ್ರದೇಶಗಳಿಗೆ ಅಪಾರ ಹಾನಿ ಸಂಭವಿಸಿತ್ತು. ಶಿವರಾಮ್‌ ಕುಲಾಲ್‌ ಅವರಿಗೆ 1,01,900 ರೂಪಾಯಿ ಪರಿಹಾರ ಸಿಕ್ಕಿದೆ. ಇತರರಿಗೆ ತಲಾ 5,200 ರೂಪಾಯಿ ಪರಿಹಾರ ನೀಡಲಾಗಿದೆ.

ಬಜಪೆ -ಸುರತ್ಕಲ್‌ ರಸ್ತೆಯ ಧೂಮವತಿ ಧಾಮಬಳಿಯ ಕಿರು ಸೇತುವೆಯ ಮಣ್ಣು ಕೊರೆದು ಸೇತುವೆಯಲ್ಲಿ ಬಿರುಕುಬಿಟ್ಟಿತ್ತು. ಅನುದಾನ ಬಿಡುಗೊಂಡಿದೆಯಾ ದರೂ ಯಾವುದೇ ಕಾಮಗಾರಿ ನಡೆದಿಲ್ಲ.

ಬಜಪೆ -ಮರವೂರು-ಮಂಗಳೂರು ರಾಜ್ಯ ಹೆದ್ದಾರಿ67ರ ಕರಂಬಾರಿನ ಮಸೀದಿ ಬಳಿ ಚರಂಡಿ ಸಮಸ್ಯೆಯಿಂದಾಗಿ ಮಳೆಯ ನೀರು ಹರಿಯದೆ ರಸ್ತೆಯಲ್ಲಿ ಶೇಖರಣೆಗೊಂಡು ಇಕ್ಕೆಲದಲ್ಲಿ ಹರಿದು ಮಣ್ಣು ಕೊರೆದ ಕಾರಣ ಹೆದ್ದಾರಿಯ ಬದಿಯ ಮಣ್ಣು ಕುಸಿದಿತ್ತು. ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಈಗ ತಡೆಗೋಡೆ ನಿರ್ಮಾಣವಾಗಿದೆ.  ಮಂಗಳವಾರ ಶಾಸಕ ಡಾ| ವೈ. ಭರತ್‌ ಶೆಟ್ಟಿ ವಿಟ್ಲಬೆಟ್ಟು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಅವರೊಂದಿಗೆ ತಾ. ಪಂ.ಸದಸ್ಯ ವಿಶ್ವನಾಥ ಶೆಟ್ಟಿ, ವಕೀಲ ಶೈಲೇಶ್‌ ಚೌಟ, ಸುಧಾಕರ ಕೊಳಂಬೆ ಉಪಸ್ಥಿತರಿದ್ದರು.

 ಕ್ರಮಕ್ಕೆ ಆಗ್ರಹ
ಮಳೆಹಾನಿಯಲ್ಲಿ ಈಗಾಗಲೇ ರಸ್ತೆಯ ತಡೆಗೋಡೆಗೆ ಸುಮಾರು 8 ಲಕ್ಷ ರೂ. ನಷ್ಟು ಅನುದಾನ ಇಡಲಾಗಿದೆ. ಜಿಲ್ಲಾ ಪಂಚಾಯತ್‌ ಎಂಜಿನಿಯರ್‌ರಲ್ಲಿ ಮಾತನಾಡಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು.
 - ಡಾ| ಭರತ್‌ ಶೆಟ್ಟಿ ವೈ., ಶಾಸಕ

ಚರಂಡಿ ವ್ಯವಸ್ಥೆ ಆಗಬೇಕಿದೆ
ಬಾವಿಯಲ್ಲಿ ಬಿದ್ದಿರುವ ಮಣ್ಣು ತೆಗೆಯುತ್ತೇನೆ ಎಂದು ಗುತ್ತಿಗೆದಾರ ಹೇಳುತ್ತಿದ್ದಾರೆ. ಮನೆಗೆ ಬರುವ ರಸ್ತೆಗೆ ತಾತ್ಕಾಲಿಕ ಪರಿಹಾರ ಕಂಡುಕೊಂಡಿದೆ. ಇದು ಮಳೆ ಬಂದರೆ ಕೊಚ್ಚಿ ಹೋಗಬಹುದು. ಮಳೆ ಬರುವ ಮುಂಚೆ ಚರಂಡಿ ವ್ಯವಸ್ಥೆ ಮುಖ್ಯವಾಗಿ ಆಗಬೇಕಿದೆ.
 - ಶಿವರಾಮ ಕುಲಾಲ್‌, ಸ್ಥಳೀಯ ನಿವಾಸಿ.

ಟಾಪ್ ನ್ಯೂಸ್

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

Essar Group: ಎಸ್ಸಾರ್ ಗ್ರೂಪ್ ನಿ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Hampankatte: ಸಿಟಿ ಮಾರ್ಕೆಟ್‌ ರಸ್ತೆಗೆ ಬೇಕಿದೆ ಕಾಯಕಲ್ಪ

7

Mangaluru: ಪಿ.ಎಂ. ರಾವ್‌ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ

4

ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್‌

3

Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

8

Hampankatte: ಸಿಟಿ ಮಾರ್ಕೆಟ್‌ ರಸ್ತೆಗೆ ಬೇಕಿದೆ ಕಾಯಕಲ್ಪ

7

Mangaluru: ಪಿ.ಎಂ. ರಾವ್‌ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

6(1

Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.