ಕೊಲ್ಲೂರಿನಲ್ಲಿ ತೀವ್ರಗೊಂಡ ಜಲಕ್ಷಾಮ
Team Udayavani, May 29, 2019, 6:10 AM IST
ಕೊಲ್ಲೂರು: ಸೌಪರ್ಣಿಕಾ ನದಿ ನೀರು ಬತ್ತಿ ಹೋದ ಪ್ರಯುಕ್ತ ಈ ಭಾಗದ ಬಹುತೇಕ ಕಡೆಗಳಲ್ಲಿ ನೀರಿನ ಕ್ಷಾಮ ಮತ್ತಷ್ಟು ಬಿಗಡಾಯಿಸಿದ್ದು, ದುಬಾರಿ ಬೆಲೆಗೆ ನೀರು ಖರೀದಿಸಬೇಕಾಗಿದೆ.
2000 ಲೀ. ನೀರಿಗೆ ರೂ. 600
ಹಲವಾರು ವಸತಿಗೃಹಗಳು, ಹೊಟೇಲುಗಳಿಗೆ ಈಗ ಟ್ಯಾಂಕರ್ ನೀರೇ ಗತಿ. ಹೊಟೇಲ್ಲೊಂದಕ್ಕೆ ಪ್ರತಿದಿನ ಕನಿಷ್ಠ 2000 ಲೀ. ನೀರು ಬೇಕಾಗಿದ್ದು, ಖಾಸಗಿಯವರಿಂದ ತರಿಸಿಕೊಳ್ಳುತ್ತಿದ್ದಾರೆ.
64 ವಿಧದ ಔಷಧೀಯ ಗಿಡ ಹಾನಿ
ಕೊಡಚಾದ್ರಿ ಬೆಟ್ಟದಲ್ಲಿರುವ ನಾನಾ ರೀತಿಯ ಔಷಧೀಯ ಗಿಡಗಳು ನೀರಿಲ್ಲದೇ ನಾಶವಾಗುತ್ತಿದೆ. ಇದರೊಂದಿಗೆ ಅಭಯಾರಣ್ಯ ಸಹಿತ ಈ ಭಾಗದ ಅರಣ್ಯ ಪ್ರದೇಶಗಳಲ್ಲಿ ವಾಸವಾಗಿರುವ ನಾನಾ ರೀತಿಯ ಪ್ರಾಣಿಗಳು, ಪಕ್ಷಿಗಳು, ಜಲಚರಗಳು ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ. ನದಿ ತಟ ಹಾಗೂ ಹಳ್ಳ ಹೊಂಡಗಳಲ್ಲಿರುವ ಹಾವು, ಮೀನು, ಜಲಚರಗಳು ನೀರಿನ ಅಭಾವದಿಂದ ಸಾವನ್ನಪ್ಪುತ್ತಿವೆ.
ಅತಿಥಿಗೃಹಗಳಿಗೆ ನೀರಿನ ಬರದ ಬಿಸಿ
ಶ್ರೀ ಮೂಕಾಂಬಿಕಾ ದೇಗುಲ ಸಹಿತ ಇಲ್ಲಿನ ಸುಮಾರು 45 ಖಾಸಗಿ ವಸತಿಗೃಹಗಳಿಗೆ ನೀರಿಲ್ಲ. ಕೆಲವೊಂದು ಮನೆಗಳಿಂದ ದುಬಾರಿ ಬೆಲೆ ತೆತ್ತು ನೀರು ಸಂಗ್ರಹಿಸಬೇಕಾದ ಅನಿವಾರ್ಯ ಸ್ಥಿತಿ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.