ರಾಹುಲ್ ಮನವೊಲಿಕೆಗೆ ಪಕ್ಷದ ನಾಯಕರ ಯತ್ನ
Team Udayavani, May 29, 2019, 6:12 AM IST
ಹೊಸದಿಲ್ಲಿ: ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಪಟ್ಟು ಹಿಡಿದು ಕುಳಿತಿರುವುದು ಪಕ್ಷದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿ ಮಾಡಿದೆ. ಪಕ್ಷದ ಅಸ್ತಿತ್ವದ ಪ್ರಶ್ನೆ ಕಾಡುತ್ತಿರುವ ನಡುವೆಯೇ, ಹೊಸದಿಲ್ಲಿಯಲ್ಲಿರುವ ರಾಹುಲ್ ನಿವಾಸದಲ್ಲಿ ಮಂಗಳವಾರ ರಾಜಕೀಯ ಚಟುವಟಿಕೆಗೆ ತೀವ್ರಗೊಂಡಿದ್ದು, ಬೆಳಗ್ಗಿನಿಂದಲೇ ಅನೇಕ ನಾಯಕರು ರಾಹುಲ್ ಮನೆಗೆ ಆಗಮಿಸಿ, ಅವರನ್ನು ಮನವೊಲಿಸಲು ಯತ್ನಿಸಿ ವಿಫಲರಾಗಿದ್ದಾರೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರೂ ರಾಹುಲ್ ನಿವಾಸಕ್ಕೆ ಧಾವಿಸಿ, ಸಹೋದರನ ಜತೆ ಮಾತುಕತೆ ನಡೆಸಿದ್ದಾರೆ. ಅವರ ಜೊತೆಗೆ ರಾಜಸ್ಥಾನ ಸಿಎಂ ಅಶೋಕ್ ಗೆಹೊÉàಟ್, ಡಿಸಿಎಂ ಸಚಿನ್ ಪೈಲಟ್, ಕಾಂಗ್ರೆಸ್ ವಕ್ತಾರ ರಣದೀಪ್ ಸುಜೇìವಾಲಾ ಕೂಡ ಪಕ್ಷದ ಅಧ್ಯಕ್ಷರನ್ನು ಭೇಟಿಯಾಗಿ, ಸದ್ಯಕ್ಕೆ ತಲೆದೋರಿರುವ ನಾಯಕತ್ವ ವಿವಾದದ ಕುರಿಚು ಚರ್ಚಿಸಿದ್ದಾರೆ. ರಾಹುಲ್ ಅವರು ರಾಜೀನಾಮೆ ಕುರಿತು ತಮ್ಮ ನಿರ್ಧಾರಕ್ಕೆ ಅಂಟಿಕೊಂಡಿದ್ದಾರೆ. ಆದರೆ, ಲೋಕಸಭೆಯಲ್ಲಿ ಪಕ್ಷದ ನೇತೃತ್ವ ವಹಿಸಲು ಒಪ್ಪಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.
ರಾಜೀನಾಮೆ “ಆತ್ಮಾಹುತಿ’ಯಂಥ ನಿರ್ಧಾರ: “ರಾಹುಲ್ ರಾಜೀ ನಾಮೆಗೆ ನಿರ್ಧರಿಸಿರುವುದು ಆತ್ಮಾಹುತಿ ಮಾಡಿ ಕೊಂಡಂತೆ’ ಎಂದು ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ. “ರಾಹುಲ್ ಏನಾದರೂ ಗಾಂಧಿ ಕುಟುಂ ಬದ ಹೊರತಾದ ನಾಯಕನನ್ನು ಅಧ್ಯಕ್ಷ ಸ್ಥಾನ ಕ್ಕೇರಿಸಿದರೆ, ಆ ನಾಯಕನನ್ನು “ಗಾಂಧಿ ಕುಟುಂಬದ ಕೈಗೊಂಬೆ’ ಎಂದು ಮೋದಿ-ಅಮಿತ್ ಶಾ ಬ್ರಿಗೇಡ್ ಆಡಿಕೊಳ್ಳಲು ಶುರು ಮಾಡುತ್ತದೆ. ರಾಜಕೀಯ ವೈರಿಗಳಿಗೆ ಅಂಥದ್ದೊಂದು ಅವಕಾಶವನ್ನು ಏಕೆ ನೀಡುತ್ತೀರಿ? ಬಿಜೆಪಿ ಹೂಡಿರುವ ಖೆಡ್ಡಾದೊಳಕ್ಕೆ ಏಕೆ ಬೀಳುತ್ತೀರಿ ಎಂದೂ ಪ್ರಶ್ನಿಸಿದ್ದಾರೆ.
ರಾಜಸ್ಥಾನದಲ್ಲಿ ಮತ್ತಿಬ್ಬರು ನಾಯಕರ ಅಸಮಾಧಾನ ಸ್ಫೋಟ
ರಾಜಸ್ಥಾನ ಸರಕಾರದಲ್ಲಿ ಬಿಕ್ಕಟ್ಟು ಮುಂದುವರಿದಿದ್ದು, ಮಂಗಳವಾರ ಮತ್ತಿಬ್ಬರು ನಾಯಕರು ಅಸಮಾಧಾನ ಹೊರಹಾಕಿದ್ದಾರೆ. ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಸುಶೀಲ್ ಅಸೋಪಾ ಮತ್ತು ಜೈಪುರ ಮಾಜಿ ಮೇಯರ್ ಜ್ಯೋತಿ ಖಂಡೇಲ್‌ವಾಲ್ ನಾಯಕತ್ವ ಬದಲಾವಣೆಗೆ ಆಗ್ರಹಿಸಿದ್ದಾರೆ. ಸಚಿನ್ ಪೈಲಟ್‌ಗೆà ಮುಖ್ಯ ಮಂತ್ರಿ ಹುದ್ದೆ ನೀಡಬೇಕಿತ್ತು ಎಂದಿರುವ ಸುಶೀಲ್ ಅಸೋಪಾ, “5 ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದ ಸಚಿನ್ ಪೈಲಟ್‌ರನ್ನು ಸಿಎಂ ಹುದ್ದೆಗೇರಿಸಿದ್ದಲ್ಲಿ ಎಲ್ಲವೂ ಸರಿಯಾಗಿರುತ್ತಿತ್ತು’ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಈ ನಡುವೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಮಂಗಳವಾರ ಸಿಎಂ ಅಶೋಕ್ ಗೆಹೊÉàಟ್ ಹಾಗೂ ಡಿಸಿಎಂ ಪೈಲಟ್ ಜತೆ ಪ್ರತ್ಯೇಕವಾಗಿ ಚರ್ಚಿಸಿದ್ದಾರೆ. ಇನ್ನೊಂದೆಡೆ, “20-25 ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡಿದ್ದಾರೆ’ ಎಂದು ಬಿಜೆಪಿ ಹೇಳಿ ದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.