ಚಿಗರಿ ನೆಗೆತಕ್ಕೆ ಕಾಮಗಾರಿ ಅಡ್ಡಿ
Team Udayavani, May 29, 2019, 9:09 AM IST
ಇನ್ನು ಬಿಆರ್‌ಟಿಎಸ್ ರಸ್ತೆಯಾದಾಗಿನಿಂದ ಪಕ್ಕದ ಕಾರಿಡಾರ್ ರಸ್ತೆಗಳಲ್ಲಿ ಕಾರು,ಲಾರಿ ಮತ್ತು ಬೈಕ್‌ಗಳ ಪಾರ್ಕಿಂಗ್ ಹಾವಳಿ ಮುಂದುವರಿದಿದೆ. ಆರಂಭದಲ್ಲಿಯೇ ಯೋಜಿಸಿದಂತೆ ಬಿಆರ್‌ಟಿಎಸ್‌ಗೆ ಸಮಾನಾಂತರವಾಗಿ ನಿರ್ಮಾಣಗೊಂಡ ಸಾಮಾನ್ಯ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಪಾರ್ಕಿಂಗ್‌ಗೆ ಅವಕಾಶ ನೀಡಲ್ಲ ಎಂದು ಜಿಲ್ಲಾಡಳಿತ ಮತ್ತು ಕಂಪನಿ ಹಲವು ಬಾರಿ ಹೇಳಿತ್ತು. ಆದರೆ ಧಾರವಾಡ,ಹುಬ್ಬಳ್ಳಿ ನಗರ ಮತ್ತು ನಗರ ಮಧ್ಯದಲ್ಲಿರುವ ಸಮಾನಾಂತರ ರಸ್ತೆಯಲ್ಲಿ ಎಲ್ಲೆಂದರೆಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದು ಸಮಾನಾಂತರ ರಸ್ತೆಗಳಲ್ಲಿನ ಸಂಚಾರ ವ್ಯತ್ಯಯಕ್ಕೆ ಕಾರಣವಾಗುತ್ತಿದೆ. ಧಾರವಾಡದ ಕೋರ್ಟ್ ವೃತ್ತದಿಂದ ಜ್ಯುಬಿಲಿ ವೃತ್ತದವರೆಗೆ, ಟೋಲ್ನಾಕಾದಿಂದ ಎನ್‌ಟಿಟಿಎಫ್ ವರೆಗೂ ಬಿಆರ್‌ಟಿಎಸ್ ಸಮಾನಾಂತರ ರಸ್ತೆಗಳಲ್ಲಿ ಪಾರ್ಕಿಂಗ್ ಹಾವಳಿ ಇದ್ದೇ ಇದೆ. ಅಷ್ಟೇಯಲ್ಲ, ಬಿಆರ್‌ಟಿಎಸ್ ರಸ್ತೆಯಲ್ಲೇ ಅನೇಕರೂ ಎಗ್ಗಿಲ್ಲದೇ ವಾಹನ ನುಗ್ಗಿಸಿಕೊಂಡು ಹೋಗುವ ಮತ್ತು ತಡೆಯಲು ಬಂದ ಅಧಿಕಾರಿಗೆ ಗುದ್ದಿ ಹೋದ ಪ್ರಕರಣಗಳು ನಡೆದಿವೆ.
ಸರ್ಕಾರಿ ಬಸ್‌ಗೇಕೆ ನೋ ಎಂಟ್ರಿ?
ಇನ್ನು ಬಿಆರ್‌ಟಿಎಸ್ ಬಸ್‌ಗಳು ನಿಗದಿತ ಕಾರಿಡಾರ್‌ನಲ್ಲಿಯೇ ಸಂಚರಿಸುತ್ತವೆ. ಆದರೆ ಈ ರಸ್ತೆಗೆ ಸಮಾನಾಂತರವಾಗಿ ಇರುವ ಎರಡೂ ರಸ್ತೆಗಳಲ್ಲಿ ಸರ್ಕಾರಿ ಅಂದರೆ ವಾಯವ್ಯ ಸಾರಿಗೆ ಬಸ್‌ಗಳು ಯಾಕೆ ಸಂಚರಿಸುತ್ತಿಲ್ಲ ? ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಅವಳಿ ನಗರ ಮಧ್ಯೆ ಸಂಚರಿಸಲು ಹೈಟೆಕ್ ಸಾರಿಗೆ ಇರುವಂತೆಯೇ ಸ್ಥಳೀಯವಾಗಿ ಓಡಾಡುವ ಪ್ರಯಾಣಿಕರಿಗೆ ಸರ್ವಿಸ್ ರಸ್ತೆಯಲ್ಲಿನ ಬಸ್ ಸೇವೆಯೂ ಅಷ್ಟೇ ಮುಖ್ಯವಾಗಿತ್ತು. ಅದೂ ಅಲ್ಲದೇ ಇದೇ ರಸ್ತೆಗೆ ಇದೀಗ ಖಾಸಗಿ ಸಂಸ್ಥೆ ಬೇಂದ್ರೆ ಬಸ್‌ಗಳನ್ನು ಓಡಿಸಲು ಯೋಜಿಸಲಾಗುತ್ತಿದೆ. ಇಲ್ಲಿ ಖಾಸಗಿ ಬಸ್‌ಗಳನ್ನು ಓಡಿಸುವ ಬದಲು ಸರ್ಕಾರಿ ಬಸ್ ಸೇವೆ ಇರಿಸಬಹುದು. ಇದ್ದಕ್ಕಿದ್ದಂತೆ ಸರ್ಕಾರಿ ಬಸ್ ಸೇವೆ ನಿಲ್ಲಿಸಿರುವುದು ಅನೇಕ ಊಹಾಪೋಹಳನ್ನು ಸೃಷ್ಟಿಸಿದೆ. ಅಷ್ಟೇಯಲ್ಲ, ಧಾರವಾಡದಿಂದ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ನೇರ ಬಸ್‌ಗಳಿಗೆ ಬೇಡಿಕೆ ಇದ್ದರೂ ಬಸ್ ಸೇವೆ ಇಲ್ಲವಾಗಿದೆ ಎನ್ನುವ ಆರೋಪ ಕೂಡ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
•ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.