ಮುಕ್ಕೂರು: ಅಂಚೆ ಕಚೇರಿ ದಿಢೀರ್ ಸ್ಥಳಾಂತರ
ಗ್ರಾಹಕರಿಗೆ ತೊಂದರೆ; ಸ್ಥಳಾಂತರಕ್ಕೆ ಜನರ ಆಕ್ಷೇಪ
Team Udayavani, May 30, 2019, 6:00 AM IST
ಸವಣೂರು: ಅರ್ಧ ಶತಮಾನಕ್ಕೂ ಅಧಿಕ ಕಾಲದಿಂದ ಪೆರುವಾಜೆ ಗ್ರಾಮದ ಮುಕ್ಕೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಚೆ ಕಚೇರಿಯನ್ನು ಯಾವುದೇ ಸೂಚನೆ ನೀಡದೆ ಏಕಾಏಕಿ ಪೆರುವಾಜೆ ಗ್ರಾ.ಪಂ. ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಇದರಿಂದ ಅಂಚೆ ಕಚೇರಿಯಲ್ಲಿ ವ್ಯವಹಾರ ಹೊಂದಿದ್ದ ನೂರಾರು ಜನರಿಗೆ ತೊಂದರೆ ಉಂಟಾಗಿದೆ.
ಮೇ 22ರ ಅನಂತರ ಅಂಚೆ ಕಚೇರಿ ವ್ಯವಹಾರಕ್ಕೆಂದು ಬಂದವರಿಗೆ ಕಚೇರಿ ಬಾಗಿಲಿಗೆ ಅಂಟಿಸಲಾದ ಸ್ಥಳಾಂತರದ ನೋಟಿಸ್ ಕಂಡು ವಿಷಯ ಗೊತ್ತಾಗಿದೆ. ಸ್ಥಳಾಂತರಿಸುವ ಬಗ್ಗೆ ಗ್ರಾಹಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಜನರಿಗೆ ಅನುಕೂಲಕರವಾಗಿದ್ದ ಅಂಚೆ ಕಚೇರಿ ದಿಢೀರ್ ವರ್ಗಾವಣೆ ಖಂಡಿಸಿ ಹೋರಾಟಕ್ಕಿಳಿಯಲು ನಿರ್ಧರಿಸಲಾಗಿದೆ.
ಅರ್ಧ ಶತಮಾನ ಕಾರ್ಯ
ಬೆಳ್ಳಾರೆ ಅಂಚೆ ವಿಭಾಗಕ್ಕೆ ಒಳಪಟ್ಟ ಪೆರುವಾಜೆ ಗ್ರಾಮದ ಮುಕ್ಕೂರಿನಲ್ಲಿ ಸರಿ ಸುಮಾರು 55 ವರ್ಷಗಳ ಹಿಂದೆ ಅಂಚೆ ಕಚೇರಿ ತೆರೆಯಲಾಗಿತ್ತು. ಖಾಸಗಿ ಕಟ್ಟಡವೊಂದರಲ್ಲಿ ಕಚೇರಿ ಕಾರ್ಯನಿರ್ವಹಿಸುತಿತ್ತು. ಈ ಅಂಚೆ ಕಚೇರಿ ಪೆರುವಾಜೆ ಗ್ರಾಮದಲ್ಲೆ ಅತಿ ಹೆಚ್ಚು ಗ್ರಾಹಕರನ್ನು ಮುಕ್ಕೂರಿನಲ್ಲಿ ಹೊಂದಿತ್ತು. ಮೇ 22ರಿಂದ ಹಿಂದೆ ಅಂಚೆ ಕಚೇರಿಗೆ ಬೀಗ ಜಡಿದು, ಇಲ್ಲಿನ ಎರಡು ಕಿ.ಮೀ. ದೂರದ ಪೆರುವಾಜೆ ಗ್ರಾ.ಪಂ.ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ಗ್ರಾಹಕರ ಆಕ್ಷೇಪ
ಮುಕ್ಕೂರು ಪರಿಸರದಲ್ಲಿ 250ಕ್ಕೂ ಅಧಿಕ ಮಂದಿ ಆರ್‌ಡಿ ಸೌಲಭ್ಯ ಹೊಂದಿದ್ದರು. ಎಫ್‌ಡಿ, ಇನ್ಸೂರೆನ್ಸ್ ಅಕೌಂಟ್ದಾರರು ಇದ್ದಾರೆ. ನೂರಾರು ಮಂದಿಗೆ ಪತ್ರ ವ್ಯವಹಾರಕ್ಕೂ ಅನುಕೂಲವಾಗಿತ್ತು. ಆದರೆ ದಿಢೀರ್ ಸ್ಥಳಾಂತರದ ಪರಿಣಾಮ ಗ್ರಾಹಕರು ತೊಂದರೆಗೀಡಾಗಿದ್ದಾರೆ. ಹಣ ಕಟ್ಟಲು ಬಂದವರು ಮರಳಿ ಮನೆ ತೆರಳುವ ಸ್ಥಿತಿ ಉಂಟಾಗಿದೆ. ತಾವು ಹೊಂದಿರುವ ಸೌಲಭ್ಯಗಳು ಏನಾಗಬಹುದು ಎನ್ನುವ ಆತಂಕವೂ ಇದೆ. ಅಂಚೆ ಕಚೇರಿ ಮುಚ್ಚಿದೆಯೇ ಅಥವಾ ಸ್ಥಳಾಂತರವಾಗಿದೆಯೇ ಎನ್ನುವ ಗೊಂದಲ ಜನರಿಗೆ ಉಂಟಾಗಿದೆ ಎನ್ನುತ್ತಾರೆ ಗ್ರಾಹಕರು.
ಅಕೌಂಟ್ ಸ್ಥಗಿತಕ್ಕೆ ನಿರ್ಧಾರ?
ವಯಸ್ಕರು ಸಹಿತ ಹೆಚ್ಚಿನವರು ಇಲ್ಲಿ ಆರ್‌ಡಿ, ಎಫ್‌ಡಿ, ಇನ್ಸೂರೆನ್ಸ್ ಖಾತೆ ಹೊಂದಿದ್ದು, ದಿಢೀರ್ ಸ್ಥಳಾಂತರದ ಪರಿಣಾಮ ತಾವು ಹೂಡಿದ ಹಣವನ್ನು ಹಿಂಪಡೆದು ಅಕೌಂಟ್ ಸ್ಥಗಿತಗೊಳಿಸಲು ಈ ಭಾಗದ ಗ್ರಾಹಕರು ನಿರ್ಧರಿಸಿದ್ದಾರೆ. ಬೆಳ್ಳಾರೆ-ಸವಣೂರು ರಸ್ತೆಯಲ್ಲಿ ಪೆರು ವಾಜೆ ಸೀಮಿತ ಬಸ್ ಓಡಾಟವಿದೆ. ವಾರಕ್ಕೊಮ್ಮೆ 50, 100 ರೂ. ಪಾವತಿಸುವವರು ಪೆರುವಾಜೆ ತನಕ ತೆರಳಬೇಕಾದರೆ ಅರ್ಧ ದಿನ ವ್ಯಯಿಸಬೇಕು. ಹೀಗಾಗಿ ಎಲ್ಲಾ ಸೌಲಭ್ಯ ಮೊಟಕುಗೊಳಿಸಿ ಅಂಚೆ ವ್ಯವಹಾರದಿಂದ ದೂರ ಸರಿಯಲು ಗ್ರಾಹಕರು ನಿರ್ಧರಿಸಿರುವುದಾಗಿ ಹಲವರು ಪ್ರತಿಕ್ರಿಯಿಸಿದ್ದಾರೆ.
ಶಿಥಿಲ ಕಟ್ಟಡ, ನೆಟ್ವರ್ಕ್ ಸಮಸ್ಯೆ
ಹಾಲಿ ಕಟ್ಟಡ ಶಿಥಿಲ ಗೊಂಡಿರುವುದು, ನೆಟ್ವರ್ಕ್ ಸಮಸ್ಯೆ, ಗ್ರಾ.ಪಂ. ಕಟ್ಟಡದಲ್ಲೇ ಕಾರ್ಯ ನಿರ್ವಹಿಸಬೇಕು ಎನ್ನುವ ಕೇಂದ್ರ ಸರಕಾರದ ಆದೇಶದಿಂದ ಮುಕ್ಕೂರು ಅಂಚೆ ಕಚೇರಿ ಸ್ಥಳಾಂತರಿಸಲಾಗಿದೆ ಎಂದು ಅಂಚೆ ಇಲಾಖೆ ತಿಳಿಸಿದೆ. ಹಾಲಿ ಕಟ್ಟಡದ ಛಾವಣಿ ಶಿಥಿಲಾವಸ್ಥೆಗೆ ತಲುಪಿರುವುದು ತುರ್ತು ಸ್ಥಳಾಂತರಕ್ಕಿರುವ ಪ್ರಮುಖ ಕಾರಣ. ಮುಖ್ಯವಾಗಿ ಕೇಂದ್ರ ಸರಕಾರ ಇಂಡಿಯಾ ಪೋಸ್ಟ್ ಪೇಮಂಟ್ ಬ್ಯಾಂಕ್ ಜಾರಿ ಮಾಡಿದ್ದು, ಈ ಮೂಲಕ ಶಾಲಾ ಮಕ್ಕಳಿಗೆ ಸ್ಕಾಲರ್‌ಶಿಪ್ ನೀಡಬೇಕಿದೆ. ಮಕ್ಕಳ ಅಕೌಂಟ್ ಮೊಬೈಲ್ ಮೂಲಕವೇ ಆಗಬೇಕಿದೆ. ಇದಕ್ಕೆ ಚಾಲನೆ ನೀಡಬೇಕಾದರೆ ನೆಟ್ವರ್ಕ್ ಅಗತ್ಯವಿದೆ. ಇಲ್ಲಿ ನೆಟ್ವರ್ಕ್ ಸಮಸ್ಯೆ ಇದೆ. ಈ ಮೂರು ಕಾರಣಗಳಿಂದ ಸ್ಥಳಾಂತರಗೊಳಿಸಲಾಗಿದೆ ಎನ್ನುವುದು ಅಂಚೆ ಇಲಾಖೆಯ ಮಾತು.
ಏಕಾಏಕಿ ನಿರ್ಧಾರ ಸರಿಯಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.