ಸ್ಪಿನ್ ಖೆಡ್ಡಕ್ಕೆ ಬಿದ್ದ ಬಾಂಗ್ಲಾದೇಶ
Team Udayavani, May 30, 2019, 6:00 AM IST
ಕಾರ್ಡಿಫ್: ಬಾಂಗ್ಲಾದೇಶವನ್ನು ಸ್ಪಿನ್ ಖೆಡ್ಡಕ್ಕೆ ಬೀಳಿಸಿದ ಭಾರತ ದ್ವಿತೀಯ ಅಭ್ಯಾಸ ಪಂದ್ಯವನ್ನು 95 ರನ್ನುಗಳಿಂದ ಜಯಿಸಿದೆ.
ಮಂಗಳವಾರದ ಈ ಮಳೆಪೀಡಿತ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ 7 ವಿಕೆಟಿಗೆ 359 ರನ್ ಪೇರಿಸಿದರೆ, ಬಾಂಗ್ಲಾದೇಶ 49.3 ಓವರ್‌ಗಳಲ್ಲಿ 264ಕ್ಕೆ ಆಲೌಟ್ ಆಯಿತು. ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ತಲಾ 3 ವಿಕೆಟ್ ಹಾರಿಸಿ ಬಾಂಗ್ಲಾ ಕುಸಿತದಲ್ಲಿ ಪ್ರಮುಖ ಪಾತ್ರ ವಹಿಸಿದರು. 2 ವಿಕೆಟ್ ಜಸ್‌ಪ್ರೀತ್ ಬುಮ್ರಾ ಪಾಲಾದರೆ, ಒಂದನ್ನು ರವೀಂದ್ರ ಜಡೇಜ ಉರುಳಿಸಿದರು.
ದಾಸ್, ರಹೀಮ್ ಹೋರಾಟ
ಬಾಂಗ್ಲಾ ಸರದಿಯಲ್ಲಿ ಆರಂಭಕಾರ ಲಿಟನ್ ದಾಸ್ ಮತ್ತು ಮುಶ್ಫಿಕರ್ ರಹೀಮ್ ಉತ್ತಮ ಬ್ಯಾಟಿಂಗ್ ಹೋರಾಟ ಸಂಘಟಿಸಿದರು. ದಾಸ್ 73 ರನ್ ಹೊಡೆದರೆ (90 ಎಸೆತ, 10 ಬೌಂಡರಿ), ರಹೀಮ್ 90 ರನ್ ಬಾರಿಸಿದರು (94 ಎಸೆತ, 8 ಬೌಂಡರಿ, 2 ಸಿಕ್ಸರ್).
ಕೆಳ ಕ್ರಮಾಂಕದ ಆಟಗಾರರಾದ ಸೈಫುದ್ದೀನ್ (18) ಮತ್ತು ಮಿರಾಜ್ (27) ಇನ್ನಿಂಗ್ಸ್ ಬೆಳೆಸಿದ್ದರಿಂದ ಬಾಂಗ್ಲಾದ ಮೊತ್ತ 250ರ ಗಡಿ ದಾಟಿತು. ತಂಡದ 8 ವಿಕೆಟ್ 216 ರನ್ನಿಗೆ ಉರುಳಿತ್ತು.
ಭಾರತದ ಇನ್ನಿಂಗ್ಸ್ ಕೆ.ಎಲ್. ರಾಹುಲ್ (108) ಮತ್ತು ಮಹೇಂದ್ರ ಸಿಂಗ್ ಧೋನಿ (113) ಅವರ ಶತಕದಿಂದ ರಂಗೇರಿಸಿಕೊಂಡಿತ್ತು.
ಸಂಕ್ಷಿಪ್ತ ಸ್ಕೋರ್: ಭಾರತ-7 ವಿಕೆಟಿಗೆ 359. ಬಾಂಗ್ಲಾದೇಶ-49.3 ಓವರ್‌ಗಳಲ್ಲಿ 264 (ರಹೀಮ್ 90, ದಾಸ್ 73, ಮಿರಾಜ್ 27, ಕುಲದೀಪ್ 47ಕ್ಕೆ 3, ಚಾಹಲ್ 65ಕ್ಕೆ 3, ಬುಮ್ರಾ 25ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.