ಮೋದಿಯ ಎರಡನೇ ವಿಜಯ, ಶುರು ನವ ಭಾರತದ ಅಧ್ಯಾಯ


Team Udayavani, May 30, 2019, 10:29 AM IST

6-b

ಮೋದಿ ಭಾರತ ಪರ್ವ ಶುರುವಾಗುತ್ತಿದೆ. ಹೊಸತಾಗಿ ಹೀಗೆ ಕರೆಯಬೇಕೆ, ಹಿಂದಿನ ಅವಧಿಗೂ ಮೋದಿಯೇ ಇದ್ದರಲ್ಲ ಅಂತ ತಟ್ಟನೇ ಕೇಳಿಯಾರು ಯಾರಾದರೂ. ಆದರೆ, ಈ ಬಾರಿಯ ವಿಜಯದೊಂದಿಗೆ ಭಾರತದಲ್ಲಿ ಮೋದಿ ಪರ್ವ ಪಕ್ಕಾ ಆಗಿದೆ. 2014ರಲ್ಲಿ ಬಹುಮತದೊಂದಿಗೆ ಸಾಧಿಸಿದ ಗೆಲುವನ್ನು ವಿಶ್ಲೇಷಿಸುವಾಗಲೆಲ್ಲ, “ಇದು ಕಾಂಗ್ರೆಸ್ಸಿನ ಭ್ರಷ್ಟಾಚಾರದ ವಿರುದ್ಧ ಸಿಕ್ಕ ಜನಾದೇಶ, ಮೋದಿಗೆ ವರವಾಯಿತು’ ಅಂತಲೋ “ಇದು ಅಪರೂಪಕ್ಕೊಮ್ಮೆ ಘಟಿಸುವಂಥದ್ದು, ಪುನರಾ ವರ್ತನೆ ಕಷ್ಟ’ ಎಂದೋ ವಾದಿಸುವುದಕ್ಕೆ ಅವಕಾಶಗಳಿದ್ದವು. ಆದರೀಗ, ಕೇವಲ ಕಾಂಗ್ರೆಸ್ಸಷ್ಟೇ ಅಲ್ಲದೇ ಪ್ರತಿಪಕ್ಷಗಳೆಲ್ಲ ಹೆಚ್ಚಾ ಕಡಿಮೆ ಒಟ್ಟಾಗಿ ಸೆಣೆಸಿದರೂ, ತಮ್ಮ ಅಸ್ತ್ರಗಳನ್ನೆಲ್ಲ ಸಾಲಾಗಿ ಪ್ರಯೋಗಿಸಿದರೂ ಮೋದಿ-ಶಾ ಮುಂಚೂಣಿಯ ವಿಜಯ ಯಾತ್ರೆಯನ್ನು ತಡೆಯಲಾಗಲಿಲ್ಲ, ಅಷ್ಟೆ ಅಲ್ಲ, ಬಿಜೆಪಿಯ ಸಂಖ್ಯಾಬಲ ಹೆಚ್ಚಾಗಿದೆ. ಅಲ್ಲಿಗೆ ರಾಜಕೀಯ ವಿರೋಧಿಗಳು,ಅವರ ಪರ ಬೌದ್ಧಿಕ ವಲಯದಲ್ಲಿ ವಕಾಲತ್ತು ವಹಿಸುತ್ತಿದ್ದವರೆಲ್ಲ ಮನದಟ್ಟು ಮಾಡಿಕೊಂಡಿ¨ªಾರೆ, ಇದು ಕೇವಲ ಈ ಅವಧಿಯ ವಿಜಯವಲ್ಲ, ಕನಿಷ್ಠ ಪಕ್ಷ ಮುಂದಿನ ದಶಕವೊಂದಕ್ಕೆ ಮೋದಿ ಪರ್ವ ಪಕ್ಕಾ ಅಂತ. ಮುಖ್ಯವಾಗಿ ಬಿಜೆಪಿ ಕಾರ್ಯಕರ್ತರು ಮತ್ತು ಬಲಪಂಥೀಯ ಬೌದ್ಧಿಕ ವಲಯದ ಪರವಾಗಿ ಮೋದಿ ಬಹುದೊಡ್ಡ ಸೈಕಾಲಜಿಕಲ್‌ ಯುದ್ಧವೊಂದನ್ನು ಗೆದ್ದುಬಿಟ್ಟಿ¨ªಾರೆ. ಈ ಹಿಂದೆ, ಐದು ವರ್ಷಗಳ ಅವಧಿ ಬಳಿಕ ವಾಜಪೇಯಿ ಅವರು ಉತ್ತಮ ಅಭಿವೃದ್ಧಿಗಾಥೆಯ ಹೊರತಾ ಗಿಯೂ ಸೋತಿದ್ದರಿಂದ “ನಾವು ರಾಷ್ಟ್ರಮಟ್ಟದಲ್ಲಿ ನಿರಂತರ ಅಧಿಕಾರದಲ್ಲಿ ಇಲಾರೆವೇನೋ’ ಎಂದು ಈ ವರ್ಗದ ಎದೆಯೊಳಗೆ ಸ್ಥಾಪಿತವಾಗಿದ್ದ ಕಳವಳ ವೊಂದನ್ನು ಮೋದಿ ಕಿತ್ತು ಬಿಸುಟಿ¨ªಾರೆ. ಕಾಂಗ್ರೆಸ್‌ ಪ್ರಣೀತ ತುಷ್ಟೀಕರಣ, ಭಾರತೀಯತೆ ಮತ್ತು ನಮ್ಮತನಗಳ ಬಗ್ಗೆ ಹೇರಲಾಗಿದ್ದ ಕೀಳರಿಮೆಯನ್ನೆಲ್ಲ ಪಕ್ಕಕ್ಕೆ ಸರಿಸಿ “ಹೊಸ ಭಾರತ’ದ ಅಧ್ಯಾಯಗಳನ್ನು ಕಡೆದಿಡುವುದಕ್ಕೆ ಬೇಕಾಗಿದ್ದ ನೆಲವನ್ನು ಮೋದಿ ಸಂಶಯಕ್ಕೆಡೆಯಿಲ್ಲದಂತೆ ಹಸನುಗೊಳಿಸಿಟ್ಟಿ¨ªಾರೆ. ಖುದ್ದು ಪ್ರಧಾನಿ, ಈ ದೇಶದ ಅಸಂಖ್ಯ ಶ್ರದ್ಧಾಳುಗಳ ಭಾವಬಿಂದುವಾದ ಕಾಶಿಯನ್ನು ಪ್ರತಿನಿಧಿಸುತ್ತಿರುವುದು, ಅಲ್ಲೀಗ, ದಶಕಗಳ ಮಾಲಿನ್ಯದಿಂದ ಮುಕ್ತಗೊಳ್ಳುತ್ತ ಗಂಗೆ ಬಹುತೇಕ ಶುದ್ಧವಾಗುತ್ತಿರುವುದು, ಗಂಗೆಯ ಮೇಲೆ ರೂಪುಗೊಂಡ ಜಲಮಾರ್ಗದಲ್ಲಿ ನಾವೆಗಳು ಓಡಾಡುತ್ತಿರುವ ದೃಶ್ಯವು ದೇಶದ ನಾಗರೀಕತೆಯ ಮೌಲ್ಯಗಳ ಅಡಿಪಾಯದಲ್ಲಿ ಭವ್ಯ ನಾಳೆಗಳು ತೆರೆದುಕೊಳ್ಳುತ್ತಿರುವ ಕತೆಯನ್ನು ಹೇಳುತ್ತಿದೆ.

ಹೊಸ ಭಾರತಕ್ಕೆ ಬೇಕಾಗುವ ಕತೆಯನ್ನು ಮೋದಿ ಹೇಳುತ್ತಿದ್ದಾರೆ ಹಾಗೂ ಅಂಥ ಕತೆಯ ನಾಯಕ ರಾಗಿದ್ದಾ ರೆ ಎಂಬ ಅಂಶವೇ ಅವರ ವಿಜಯಕ್ಕೆ ಹಾಗೂ ಮುಂದಿನ ದಶಕಗಳ ಕಾಲ ಮೋದಿ ಭಾರತ ಪರ್ವ ಪಕ್ಕಾ ಅಂತ ಮನದಟ್ಟು ಮಾಡಿಕೊಳ್ಳುವುದಕ್ಕೆ ಕಾರಣ ಒದಗಿಸುತ್ತದೆ. ಕಾಂಗ್ರೆಸ್‌ ಆಗಲೀ ಮಹಾಘಟಬಂಧನವೆಂದು ಬಿಂಬಿಸಿಕೊಂಡ ಪ್ರತಿಪಕ್ಷವಾಗಲೀ 2019ರ ಚುನಾವಣೆಯ ಫ‌ಲಿತಾಂಶವನ್ನು ತಾತ್ಕಾಲಿಕ ಹಿನ್ನಡೆ ಅಂತ ಸಮಾಧಾನಿಸಿ ಕೊಳ್ಳುವ ಸ್ಥಿತಿಯÇÉೇ ಇಲ್ಲ. ಏಕೆಂದರೆ ಇವರೆಲ್ಲ ಯಾವ ಹಳೆಕತೆಗಳನ್ನು ಹೇಳಿಕೊಂಡು ಚುನಾವಣೆಗೆ ಹೋಗುತ್ತಿದ್ದರೋ ಆ ಕತೆಗಳನ್ನೇ ಮೋದಿ ಅಪ್ರಸ್ತುತವಾಗಿಸಿದ್ದಾ ರೆ. ಅತಿಹೆಚ್ಚು ಸಂಸದರನ್ನು ಕಳುಹಿಸಿಕೊಡುವ ಉ.ಪ್ರದೇಶ ಹಾಗೂ ಅದರ ಜತೆಗೂಡಿ ದೇಶದ ಚುಕ್ಕಾಣಿ ಯಾರಿಗೆಂದು ಹೆಚ್ಚು- ಕಡಿಮೆ ನಿರ್ಧರಿಸುತ್ತಿದ್ದ ಬಿಹಾರಗಳ ಕತೆಯನ್ನು ಗಮನಿಸಿದರೆ ಇದು ಸ್ಪಷ್ಟ. ಜಾತಿ ಸಮೀಕರಣವನ್ನೇ ನೆಚ್ಚಿಕೊಂಡಿದ್ದ ಪ್ರಾದೇಶಿಕ ಶಕ್ತಿಗಳಾದ ಎಸ್ಪಿ, ಬಿಎಸ್ಪಿ, ಆರ್‌ಜೆಡಿಗ ಳೆಲ್ಲವನ್ನೂ ಕಾಂಗ್ರೆಸ್ಸಿನ ಜತೆಗೆ ಹೊಡೆದು ಮಲಗಿಸಿರುವ ಬಿಜೆಪಿಯು ಹೊಸ ಭಾರತದ ಬಹುದೊಡ್ಡ ವ್ಯಾಖ್ಯಾನವನ್ನು ಅಲ್ಲಿಯೇ ಬರೆದಿದೆ. ವಿಜಯದ ನಂತರದ ಪ್ರಧಾನಿ ಮಾತುಗಳÇÉೇ ಜಾತಿ ಸಮೀಕರಣ ವನ್ನು ಹೊಡೆದು ಮಲಗಿಸಿರುವ ಹೊಸ ಸಮೀಕರಣದ ಪರಿಚಯ ಸ್ಪಷ್ಟವಾಗಿದೆ. “ಇನ್ನು ನಮ್ಮ ಮುಂದಿರುವ ಜಾತಿಗಳು ಎರಡೇ. ಒಂದು ಬಡವರದ್ದು, ಇನ್ನೊಂದು, ಬಡತನ ಹೋಗಲಾಡಿಸುವುದಕ್ಕೆ ತಮ್ಮಿಂ ದಾದ ಸಹಾಯ ಮಾಡುತ್ತೇವೆ ಎನ್ನುವವರದ್ದು.’ ಅಂದರು ಮೋದಿ.

ಅÇÉಾಗಿದ್ದು ಅದೇ. ಕೇವಲ ಮತಬ್ಯಾಂಕ್‌ ಆಗಿದ್ದ ನಾನಾ ಜಾತಿಗಳ ಬಡವರ ಬದುಕಲ್ಲಿ ದಿನವೂ ಫ‌ಳಫ‌ಳವೆನ್ನಬಹುದಾದ ಕತೆಗಳನ್ನು ಮೋದಿ ಸರ್ಕಾರ ಬರೆಯಿತು. ಶೌಚಾಲಯ, ಮನೆ, ಉಜ್ವಲಾದ ಗ್ಯಾಸ್‌ ಸಿಲಿಂಡರ್‌, ವಿದ್ಯುತ್‌ ಸಂಪರ್ಕ ಇವೆಲ್ಲ ಬದುಕನ್ನು ದೈನಂದಿನ ಸ್ಪರ್ಶಿಸುವ ಸಂಗತಿಗಳು. ನೀವು ವ್ಯಕ್ತಿಯೊಬ್ಬನಿಗೆ ಹಣ ಹಂಚಿದರೆ ಅದು ಏನಕ್ಕೋ ಖರ್ಚಾಗಿ ಮರೆಯುವ ಸಂಭವ ಹೆಚ್ಚು. ಅದೇ ಒಂದು ವಿದ್ಯುತ್‌ ಸಂಪರ್ಕ ಹಾಗೂ ಎಲ್‌ಇಡಿ ಬಲುº, ಸ್ವಿಚ್ಚನ್ನು ಅದುಮಿದಾಗಲೆಲ್ಲ ಮೋದಿ ಸರ್ಕಾರವನ್ನು ನೆನಪಿಸುತ್ತದೆ. ಬಡ ಮಹಿಳೆಯ ಪಾಲಿಗೆ ಶೌಚಾಲಯವೆಂಬುದು ಕೇವಲ ಒಂದು ಹೆಚ್ಚುವರಿ ಸೌಲಭ್ಯವಲ್ಲ, ಬದಲಿಗೆ ಕತ್ತಲಾಗುವುದಕ್ಕೆ ಕಾಯುವಂತೆ ಮಾಡಿ ನಂತರವಷ್ಟೇ ಶೌಚಕ್ಕೆ ಹೋಗಬೇಕಿದ್ದ, ಪ್ರಾಣಿಗಳು-ಪುಂಡರಿಗೆ ಅಂಜಿಕೊಂಡಿರಬೇಕಿದ್ದ ಪರಿಸ್ಥಿತಿಯನ್ನೇ ಬದಲಾಯಿಸಿ ಬದುಕಿಗೆ ಘನತೆ ತಂದುಕೊಟ್ಟ ಮಹತ್ತರ ಬದಲಾವಣೆ. ಇಡೀ ದಿನ ಉರುವಲು ಸಂಗ್ರಹಕ್ಕೆ ಸಮಯ ವ್ಯಯಿಸುತ್ತಿ¨ªಾಕೆಗೆ ಉಜ್ವಲಾದಡಿ ದೊರಕಿದ ಗ್ಯಾಸ್‌ ಸಂಪರ್ಕವು ಹೊಗೆಮುಕ್ತ ಜೀವನ ಕೊಟ್ಟಿದ್ದಲ್ಲದೇ ಅಗಾಧ ಸಮಯವನ್ನು ಆಕೆಗಾಗಿ ಉಳಿಸುತ್ತದೆ. ಆ ಸಮಯದಲ್ಲಿ ಆಕೆ ನೇಯ್ಗೆಯÇÉೋ ಇನ್ಯಾವುದೋ ಕೆಲಸದÇÉೋ ತೊಡಗಿಸಿಕೊಳ್ಳುತ್ತಾಳಾದ್ದರಿಂದ ಬದುಕಿನ ಪಥವೇ ಹೊಳೆಯತೊಡಗುತ್ತದೆ. ಇವೆಲ್ಲ ಜಾತಿ-ಮತಗಳನ್ನು ಮೀರಿ ಬಡವರ ಬದುಕನ್ನು ತಟ್ಟಿದ ನಡೆಗಳು. ಮಹಾಘಟಬಂಧನದ ಸೋಲು ಈ ದೇಶದಲ್ಲಿ ಒಳ್ಳೆಯ ಕೆಲಸಗಳಿಗೆ ಬೆಲೆಯಿದೆ ಎಂಬುದನ್ನು ಖಾತ್ರಿ ಮಾಡಿಕೊಟ್ಟಿದೆ. ಇಂಥದೆಲ್ಲ ಕೆಲಸಗಳನ್ನು ಜನರಿಗೆ ಅವರದ್ದೇ ಭಾಷೆಯಲ್ಲಿ ವಿವರಿಸುವುದರಲ್ಲಂತೂ ಮೋದಿ ಎತ್ತಿದ ಕೈ. ಏಕೆಂದರೆ ಮೋದಿ ರಾಜಕೀಯ ಜನರ ಮಧ್ಯದಿಂದ ರೂಪುಗೊಂಡಿದ್ದೇ ಹೊರತು ವಂಶಸ್ಥರು ಅದಾಗಲೇ ಕಟ್ಟಿಸಿಟ್ಟಿದ್ದ ದಂತಗೋಪುರದಲ್ಲಲ್ಲ. ಬಿಹಾರದ ಪ್ರಚಾರದಲ್ಲಿ ಮೋದಿ ಭಾಷಣದ ಹೀಗಿತ್ತು- “”ಕಾರಿಗೆ ಕೆಂಪು ದೀಪ ಹೊತ್ತಿಸಿಕೊಂಡು ಅಹಂಕಾರ ಮಾಡುತ್ತಿದ್ದವರನ್ನು ಕಂಡಿದ್ದೀರಿ. ನಾನು ಆ ಕೆಂಪು ದೀಪ ಕಿತ್ತುಹಾಕಿಸಿ, ನಿಮ್ಮ ಮನೆಗಳಲ್ಲಿ ಬಿಳಿ ದೀಪ (ವಿದ್ಯುತ್‌) ಖಾತ್ರಿಪಡಿಸಿದ್ದೇನೆ. ಅಧಿಕಾರಸ್ಥರ ಮನೆ ಬಾಗಿಲವರೆಗೆ ಟಾರು ರಸ್ತೆ ಆಗುತ್ತಿದ್ದಿದ್ದನ್ನಷ್ಟೇ ನೀವು ಕಂಡಿದ್ದೀರಿ. ನಮ್ಮ ಅವಧಿಯಲ್ಲಿ ಪ್ರತಿ ಹಳ್ಳಿಗಳಿಗೆ ರಸ್ತೆಗಳಾಗಿ ಜನಸಾಮಾನ್ಯರ ಬದುಕನ್ನು ತಟ್ಟಿವೆ.”

ಹೀಗೆ ಅಭಿವೃದ್ಧಿ ಕಥಾನಕದಲ್ಲಿ ಜನ ಜಾತಿ ಮರೆತು ಒಟ್ಟಾಗುವಂತೆ ಮಾಡಿದ ಮೋದಿಗೆ, ಅವರು ಕೈಗೊಂಡ ಬಾಲಾಕೋಟ್‌ ದಾಳಿ, ಉಪಗ್ರಹ ನಾಶಕ ಕ್ಷಿಪಣಿ ಪರೀಕ್ಷೆ, ವಿಶ್ವ ನಾಯಕರೊಂದಿಗೆ ಸರಿಸಮವಾಗಿ ಬೆರೆಯುತ್ತಿದ್ದ ರೀತಿ ಇವೆಲ್ಲವೂ ಜನಾಭಿಪ್ರಾಯವನ್ನು ಮತ್ತಷ್ಟು ಗಟ್ಟಿಗೊಳಿಸಿದವು. ಇದಕ್ಕೆ ವಿರುದ್ಧವಾಗಿ ಉಳಿದ ಪಕ್ಷಗಳು ಹೇಳಿದ್ದು ಏನನ್ನು? ಸಂವಿಧಾನ ಸಂಸ್ಥೆಗಳ ಮೇಲೆ ದಾಳಿ, ಅಸಹಿಷ್ಣುತೆ ಇತ್ಯಾದಿ. ಇವುಗಳ ಬಗ್ಗೆ ಉದ್ದುದ್ದದ ಲೇಖನ ಬರೆದು ಜೆಎಎನ್‌ಯು ಪಂಡಿತರಿಂದ ಅಹುದಹುದೆನ್ನಿಸಿಕೊಳ್ಳಬಹುದಾಗಲೀ, ಜನರನ್ನು ತಟ್ಟುವ ಯಾವುದಾದರೂ ಕತೆಗಳು ಇಲ್ಲಿವೆಯೇ? ಚುನಾವಣೆಯ ನಡುವೊಮ್ಮೆ ರಾಹುಲ್‌ ಟ್ವೀಟಿಸಿದ್ದರು- “ನಾವು ಅಧಿಕಾರಕ್ಕೆ ಬರುತ್ತಲೇ ನೀತಿ ಆಯೋಗ ಕಿತ್ತೆಸೆದು, ಯೋಜನಾ ಆಯೋಗ ಮರುಸ್ಥಾಪಿಸುತ್ತೇವೆ.’ ನಾಲ್ಕು ಮಂದಿ ಬುದ್ಧಿಜೀವಿಗಳು ಇಂಥವಕ್ಕೆಲ್ಲ ಭೇಷ್‌ ಎನ್ನಬಹುದೇ ಹೊರತು ಜನರಿಗೆ ಇವೆಲ್ಲ ವೋಟು ನಿರ್ಧರಿಸುವ ವಿಷಯಗಳು ಎನ್ನಿಸಿಕೊಳ್ಳುವುದಕ್ಕೆ ಅವಕಾಶವಿದೆಯೇ?

ಬಹಳ ಮುಖ್ಯವಾಗಿ, ಎಡಪಂಥ ರಾಜಕಾರಣವೀಗ ಎಲ್ಲಿದೆ ಅಂತ ಹುಡುಕಬೇಕಾದ ಸ್ಥಿತಿ. ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟರದ್ದು ಶೂನ್ಯ ಸಾಧನೆ. ಕೇರಳದಲ್ಲಿ ಒಂದು ಸೀಟು. ತಮಿಳ್ನಾಡಿನಲ್ಲಿ ಡಿಎಂಕೆ ಬೆನ್ನೇರಿ ನಾಲ್ಕು ಸೀಟು. ಇದು ಕೇವಲ ಸಂಖ್ಯೆ ಮಾತಲ್ಲ. ಯಾವತ್ತೋ ಹಿನ್ನೆಲೆಗೆ ಸರಿಯಬಹುದಿದ್ದ ಎಡಪಂಥಕ್ಕೆ ಆಮ್ಲಜನಕ ಕೊಟ್ಟುಕೊಂಡಿದ್ದದ್ದು ಕಾಂಗ್ರೆಸ್‌. ಉಗ್ರ ಅಫ‌jಲನ ಸಾವಿನ ದಿನವನ್ನು ಆಚರಿಸುತ್ತಿದ್ದ ತುಕೆx ಗ್ಯಾಂಗ್‌ ಜತೆ ನಿಂತಿದ್ದು ಇದೇ ರಾಹುಲ್‌ರ ಕಾಂಗ್ರೆಸ್‌. ಈ ಹಿಂದೆ ಸೋನಿಯಾರ ರಾಷ್ಟ್ರೀಯ ಸಲಹಾ ಸಮಿತಿಯಲ್ಲಿ ತುಂಬಿಕೊಂಡಿದ್ದವರು ಕಮ್ಯುನಿÓr… ಬುದ್ಧಿಜೀವಿಗಳೇ. ಆದರೆ ಈಗ ಕಾಂಗ್ರೆಸ್‌ ಹಾಗೂ ಮಹಾಘಟಬಂಧನಗಳು ತಿಂದಿರುವ ಹೊಡೆತ ಹೇಗಿದೆ ಎಂದರೆ, ಕಮ್ಯುನಿÓr… ಹೆಸರಲ್ಲಿ ದೇಶ ಛಿದ್ರವಾಗಿಸುವ ಯೋಚನೆಗಳನ್ನು ಅಭಿವ್ಯಕ್ತಿ ಸ್ವಾತಂತ್ರÂದ ಹೆಸರಲ್ಲಿ ಬೆಂಬಲಿಸು ವುದಕ್ಕೆ ಯಾವುದೇ ರಾಜಕೀಯ ಪಕ್ಷಗಳು ಹೆದರುವ ಸ್ಥಿತಿ ಇದೆ. ಈ ಎಡಬಿಡಂಗಿ ವಿಚಾರದ ಪ್ರತಿನಿಧಿ ಕನ್ಹಯ್ಯನನ್ನು ಸಿಪಿಐ ಬಿಹಾರದ ಬೇಗುಸರೈನಲ್ಲಿ ಕಣಕ್ಕಿಳಿಸಿತ್ತು. ಭಾರತೀಯತೆಯನ್ನು ಗೊಡ್ಡು ಸಂಪ್ರದಾಯವೆಂದು ಹಳಿಯುವ ಮನಸ್ಥಿತಿಯ ಕನ್ಹಯ್ಯನಿಗೆ “ಯುವ ನೇತಾರ’ನೆಂದು ಮಾಧ್ಯಮ ಕೊಟ್ಟ ಪ್ರಚಾರ ಅಷ್ಟಿಷ್ಟಲ್ಲ. ಅಷ್ಟಾಗಿಯೂ ಫ‌ಲಿತಾಂಶ ಬಂದಾಗ ಈತ 4 ಲಕ್ಷಕ್ಕೂ ಅಧಿಕ ಮತಗಳಿಂದ ಸೋತಿದ್ದರೆ, ಇತ್ತ ನಮ್ಮ ಕರ್ನಾಟಕದಲ್ಲಿ, ಸನಾತನ ಶ್ರದ್ಧೆ ಮತ್ತು ಆಧುನಿಕತೆಯೆರಡನ್ನೂ ಹಿಂಜರಿಕೆಯಿಲ್ಲದೇ ಪ್ರತಿನಿಧಿಸುವ ತೇಜಸ್ವಿ ಸೂರ್ಯ 3 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದು ಬಂದರು. ಇಂಥದೇ ಹಲವು ಕಾರಣಗಳಿಂದಾಗಿ, 2019ರ ಮೋದಿ ವಿಜಯ ಕೇವಲ ಸಂಖ್ಯಾಬಲ, ಅಧಿಕಾರ ಮುಂದುವರಿಕೆಯ ಕತೆಯಾಗಿರದೇ ಸೈದ್ಧಾಂತಿಕ ವಿಜಯವೊಂದನ್ನು ಸಾರುತ್ತಿದೆ. “ನೀವು ಒಬ್ಬ ಅಫ‌jಲನನ್ನು ಕೊಂದರೇನಂತೆ, ಪ್ರತಿ ಮನೆಯಿಂದ ಅಫ‌jಲರು ಬರುತ್ತಾರೆ’ ಎಂಬ ಮನಸ್ಥಿತಿಯನ್ನು ಭಾರತೀಯರು ತಿರಸ್ಕರಿಸಿ, “ಪ್ರತಿ ಮನೆಯಲ್ಲೂ ಚೌಕಿದಾರ’ ಎಂಬ ಸಂಕಲ್ಪವೊಂದಕ್ಕೆ ನೀರೆರೆದಿ¨ªಾರೆ. ಪೃಥ್ವಿರಾಜ ಚೌಹಾಣ, ಭಾರತದ ಮೇಲೆ ದಂಡೆತ್ತಿ ಬಂದ ಮುಸ್ಲಿಂ ಆಕ್ರಮಣಕಾರರನ್ನು ಪ್ರಾರಂಭದಲ್ಲಿ ಯಶಸ್ವಿಯಾಗಿ ಹಿಮ್ಮೆಟ್ಟಿಸಿದ. 1191ರ ಮೊದಲ ತರೈನ್‌ ಸಮರ ಆ ಪೈಕಿ ಪ್ರಮುಖ. ಆದರೆ, 1192ರಲ್ಲಿ ಮತ್ತೆ ಬಂದ ಇಸ್ಲಾಮಿಕ್‌ ಆಕ್ರಮಣಕಾರರ ಪಡೆ 2ನೇ ಪ್ರಮುಖ ಯುದ್ಧದಲ್ಲಿ ಗೆಲುವು ಸಾಧಿಸುವುದರೊಂದಿಗೆ ಈ ದೇಶ ಮೊಘಲರ ಪದಾಘಾತಕ್ಕೆ ಸಿಲುಕಿತು ಎನ್ನುತ್ತದೆ ಇತಿಹಾಸ. ಇಲ್ಲೀಗ, ವಿಭಜಕ ಸಿದ್ಧಾಂತವೊಂದಕ್ಕೆ ನೀರೆರೆಯುವುದಕ್ಕೆ ರಾಜಿಯಾಗಿದ್ದ ನಮ್ಮವರದ್ದೇ ಆಂತರಿಕ ಪಡೆಯೊಂದನ್ನು ಮೋದಿ ಮತ್ತೂಮ್ಮೆ ನಿರ್ಣಾಯಕವಾಗಿ ಹಣಿದಿ¨ªಾರೆ. ತಕ್ಷಣದ ಗೆಲುವಿನಲ್ಲಿ ವಿಶ್ರಮಿಸದೇ, ಎದುರಾಳಿಯ ಅಸ್ತಿತ್ವವನ್ನು ಬೇರು ಸಹಿತ ಜಾಲಾಡುವುದೇ ಈ ಮನುಷ್ಯನ ಜಾಯಮಾನ ಅಂತ ಮೋದಿಯ ಟ್ರಾÂಕ್‌ ರೆಕಾರ್ಡ್‌ ಹೇಳುತ್ತದೆ. ಅಲ್ಲಿಗೆ, ಲೇಖನದ ಪ್ರಾರಂಭದಲ್ಲಿ ಉದಾಹರಿಸಿದ್ದ ಸೈಕಾಲಜಿಕಲ್‌ ಗೆಲುವಿಗೂ ಮೀರಿದ, ನಾಗರಿಕತೆಯ ವ್ಯಾಪ್ತಿಯ ಮನೋಯುದ್ಧವೊಂದನ್ನು ಭಾರತೀಯ ಚರಿತ್ರೆಯ ಪಾಲಿಗೆ ಮೋದಿ ಗೆದ್ದಂತೆ ಭಾಸವಾಗುತ್ತಿದೆ.

ರಾಜಾಭಿಷೇಕಕ್ಕೆ ಆಗಲಿ ತಯಾರಿ. ಬಂದಿಲ್ಲಿ ನಿಂತಿಹನು ಭಗವಾಧಾರಿ!

ಚೈತನ್ಯ ಹೆಗಡೆ, ದೆಹಲಿ

ಟಾಪ್ ನ್ಯೂಸ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-koo

Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.