ಪಚ್ಚನಾಡಿಯಲ್ಲಿ ಶೂಟೌಟ್‌: ಕುಖ್ಯಾತ ರೌಡಿ ಬಂಧನ

ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ದಾಳಿ

Team Udayavani, May 30, 2019, 10:35 AM IST

MLR-40

ಮಂಗಳೂರು: ಬಂಧಿಸಲು ಬಂದಿದ್ದ ಪೊಲೀಸರ ಮೇಲೆಯೇ ಕುಖ್ಯಾತ ರೌಡಿ ಶೀಟರ್‌ ಹಲ್ಲೆಗೆ ಮುಂದಾಗಿದ್ದು, ಬಳಿಕ ಪೊಲೀಸರು ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿ ಪಾತಕಿಯನ್ನು ಬಂಧಿಸಿದ ಘಟನೆ ನಗರದ ಪಚ್ಚನಾಡಿಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ಪ್ರಕರಣದ ವಿವರ
ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ಕೃಷ್ಣಾಪುರದ ನಿವಾಸಿ, ಕುಖ್ಯಾತ ರೌಡಿ ಹಾಗೂ ಟಾರ್ಗೆಟ್‌ ಗ್ರೂಪ್‌ನ ಉಮ್ಮರ್‌ ಫಾರೂಕ್‌(32) ಪಚ್ಚನಾಡಿ ಮಾರ್ಗದಲ್ಲಿ ಓಡಾಡುತ್ತಿದ್ದಾನೆ ಎಂಬ ಮಾಹಿತಿ ಆಧಾರದಲ್ಲಿ ಆತನನ್ನು ಬಂಧಿಸಲು ರಾತ್ರಿ ಸುಮಾರು 12.30ರ ವೇಳೆಗೆ ಕಂಕನಾಡಿ ನಗರ ಪೊಲೀಸರು ತೆರಳಿದ್ದರು. ಈ ಸಂದರ್ಭ ಆರೋಪಿಯು ಪೊಲೀಸರ ಮೇಲೆ ಹಲ್ಲೆ ನಡೆಸಿದ ಪರಿಣಾಮ ಕಾನ್‌ಸ್ಟೆಬಲ್‌ ಸಂದೀಪ್‌ (35) ಗಾಯಗೊಂಡರು. ಕೂಡಲೇ ಪ್ರತಿ ದಾಳಿಗೆ ಮುಂದಾದ ಪೊಲೀ ಸರು ಗುಂಡು ಹಾರಿಸಿದ್ದು, ಆಗ ಉಮ್ಮರ್‌ ಫಾರೂಕ್‌ಗೂ ಗಾಯವಾಗಿದೆ. ಗಾಯಗೊಂಡಿರುವ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಂಕನಾಡಿ ನಗರ ಠಾಣೆ ಎಸ್‌ಐ ಪ್ರದೀಪ್‌ ನೇತೃತ್ವದಲ್ಲಿ 7 ಮಂದಿಯ ತಂಡ ಪಚ್ಚ ನಾ ಡಿಗೆ ತೆರಳಿತ್ತು. ಉಮ್ಮರ್‌ ಹಲ್ಲೆಗೆ ಮುಂದಾದಾಗ ಎಸ್‌ಐ ಗುಂಡು ಹಾರಿಸಿದ್ದು, ಅದು ಉಮ್ಮರ್‌ನ ಕಾಲಿಗೆ ತಗುಲಿದೆ. ಸ್ಥಳಕ್ಕೆ ಆಯುಕ್ತ ಸಂದೀಪ್‌ ಪಾಟೀಲ್‌ ಸಹಿತ ಹಿರಿಯ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿದ್ದರು.

ಸಹಚರನೂ ವಶಕ್ಕೆ
ಇಲ್ಯಾಸ್‌ ಕೊಲೆ ಪ್ರಕರಣದ ಆರೋಪಿ ಸಮೀರ್‌ನ ಕೊಲೆಗೆ ಸ್ಕೆಚ್‌ ಹಾಕುತ್ತಿದ್ದ ಪ್ರಕರಣದ ಮತ್ತೋರ್ವ ಆರೋಪಿ ಉಳ್ಳಾಲದ ಟೊಮೆಟೋ ಫಾರೂಕ್‌ ಯಾನೆ ಎವರೆಸ್ಟ್‌ ಫಾರೂಕ್‌ ಎಂಬಾತನನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ. ಉಮ್ಮರ್‌ ಫಾರೂಕ್‌ ಹಾಗೂ ಈತ ಬೈಕ್‌ನಲ್ಲಿ ಮಂಗಳವಾರ ತಡರಾತ್ರಿ ಪಚ್ಚನಾಡಿಯಲ್ಲಿ ಬರುತ್ತಿದ್ದಾಗ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಬೈಕ್‌ ಸ್ಕಿಡ್‌ ಆಗಿ ಬಿದ್ದು ತಪ್ಪಿಸಿಕೊಳ್ಳುವ ಹಂತದಲ್ಲೇ ಉಮ್ಮರ್‌ ಫಾರೂಕ್‌ ಡ್ಯಾಗರ್‌ನಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ. ಆಗ ಆತನಿಗೆ ಶೂಟ್‌ ಮಾಡಲಾಗಿದೆ. ಈಗ ಇಬ್ಬರನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ತಿಂಗಳಲ್ಲಿ 2ನೇ ಪ್ರಕರಣ
ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ರೌಡಿಗಳು ದಾಳಿ ನಡೆಸಿರುವುದು ಒಂದು ತಿಂಗಳಲ್ಲಿ ಇದು ಎರಡನೇ ಪ್ರಕರಣವಾಗಿದೆ. ಮೇ 9ರಂದು ರೌಡಿ ಶೀಟರ್‌ ಗೌರೀಶನನ್ನು ಬಂಧಿಸಲು ಜಪ್ಪಿನಮೊಗರಿಗೆ ತೆರಳಿದ್ದ ಸಿಸಿಬಿ ಪೊಲೀಸರ ಮೇಲೆ ಆತ ಚಾಕುವಿನಿಂದ ಹಲ್ಲೆ ನಡೆಸಿದ್ದ. ಆಗ ಪೊಲೀಸರು ಪ್ರತಿ ದಾಳಿ ನಡೆಸಿ ರೌಡಿಯನ್ನು ಬಂಧಿಸಿದ್ದರು. ಆಗ ಗೌರೀಶ ಮತ್ತು ಸಿಸಿಬಿ ಪೊಲೀಸ್‌ ಸಿಬಂದಿ ಶೀನಪ್ಪ ಗಾಯ ಗೊಂಡಿದ್ದರು.

ಟಾರ್ಗೆಟ್‌ ಗ್ರೂಪ್‌ ಪುನಃಶ್ಚೇತನಕ್ಕೆ ಯತ್ನಿಸಿದ್ದ
ಉಮ್ಮರ್‌ ಫಾರೂಕ್‌ ಟಾರ್ಗೆಟ್‌ ಗ್ರೂಪಿನ ದಿ| ಇಲಿಯಾಸ್‌ನ ಭಾವನಾಗಿದ್ದಾನೆ. 2018ರಲ್ಲಿ ಇಲಿಯಾಸ್‌ ಕೊಲೆಯಾದ ಬಳಿಕ ಟಾರ್ಗೆಟ್‌ ಗ್ರೂಪ್‌ ಹೆಚ್ಚು ಸಕ್ರಿಯವಾಗಿರಲಿಲ್ಲ. ಆ ಗ್ರೂಪನ್ನು ಮತ್ತೆ ಸಂಘಟಿಸಲು ಉಮ್ಮರ್‌ ಯತ್ನಿಸುತ್ತಿದ್ದ ಎನ್ನಲಾಗಿದೆ. ಅಲ್ಲದೆ ಇಲಿಯಾಸ್‌ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿರುವ ಸಮೀರ್‌ನನ್ನು ಕೊಲ್ಲಲು ಉಮ್ಮರ್‌ ತನ್ನ ಸಹಚರ ಸುರ್ಮಾ ಇಮ್ರಾನ್‌ ಹಾಗೂ ಇತರರ ಜತೆಗೂಡಿ ಸಂಚು ರೂಪಿಸಿದ್ದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದಲ್ಲದೆ ಎಂ.ಎ. ಹಸನ್‌ ಬಾವ ಎಂಬವರಿಂದ ಬಲವಂತವಾಗಿ ಹಣ ವಸೂಲಿ ಮಾಡಿರುವ ಬಗ್ಗೆ ಎರಡು ವಾರಗಳ ಹಿಂದೆ ಉಮ್ಮರ್‌ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಎರಡು ಪ್ರಕರಣಗಳಿಗೆ ಸಂಬಂಧಿಸಿ ಆತ ನನ್ನು ಬಂಧಿ ಸಲು ಪೊಲೀಸ್‌ ತಂಡ ತೆರ ಳಿತ್ತು ಎಂದು ಆಯುಕ್ತ ಸಂದೀಪ್‌ ಪಾಟೀಲ್‌ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.

9 ಪ್ರಕರಣಗಳ ಹಳೆ ಆರೋಪಿ
ಉಮ್ಮರ್‌ ಫಾರೂಕ್‌ ಹಳೆ ಆರೋ ಪಿಯಾಗಿದ್ದು, ಆತನ ಮೇಲೆ ಈ ಹಿಂದೆ 9 ಪ್ರಕರಣಗಳು ದಾಖ ಲಾಗಿವೆ. ಟಾರ್ಗೆಟ್‌ ಗ್ರೂಪ್‌ನಲ್ಲಿ ಗುರುತಿಸಿಕೊಂಡಿದ್ದ ಆತ ಜನ ರನ್ನು ಹೆದರಿಸುವುದು, ಸುಲಿಗೆ ಮಾಡುವುದು ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿದ್ದ. ಆತನ ಮೇಲೆ ಕಠಿನ ಕಾನೂನು ಕ್ರಮ ಜರಗಿಸಲಾಗುವುದು. ಈ ನಿಟ್ಟಿ ನಲ್ಲಿ ತನಿಖೆ ಮುಂದುವರಿದಿದೆ. ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕಲು ಕಠಿನ ಕ್ರಮ ಕೈಗೊ ಳ್ಳ ಲಾ ಗು ತ್ತಿದೆ. ಆದ್ದರಿಂದ ಯಾರಾ ದರೂ ಬೆದರಿಕೆ ಅಥವಾ ಹಣಕ್ಕಾಗಿ ಒತ್ತಾಯಿಸಿದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಮಾಹಿತಿ ನೀಡುವವರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.

ಟಾಪ್ ನ್ಯೂಸ್

1-pale

Chikkodi; ಈದ್ ಮಿಲಾದ್ ಮೆರವಣಿಗೆಯಲ್ಲಿ ಹಾರಾಡಿದ ಪ್ಯಾಲೇಸ್ತೀನ್ ಧ್ವಜ

BSF (2)

Budgam; ಬಸ್ ಪ್ರಪಾತಕ್ಕೆ ಬಿದ್ದು 3 ಯೋಧರು ಮೃ*ತ್ಯು, 9 ಮಂದಿಗೆ ಗಂಭೀರ ಗಾಯ

1-asaaasa

Hindutva ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ: ದೇವರ ಹುಂಡಿಗೆ ಪತ್ರ!

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Vinay Kulakarni

BJP ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ‌: ಶಾಸಕ ವಿನಯ ಕುಲಕರ್ಣಿ ಆಕ್ರೋಶ

Yakshagana: ಶತಾವಧಾನಿ ಗಣೇಶ್ ರಿಗೆ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaccc

Mangaluru; ಕುಂಟಿಕಾನದಲ್ಲಿ ಅಪಘಾತ: ಕಾಲೇಜು ವಿದ್ಯಾರ್ಥಿ ಸಾ*ವು

Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ

Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

1-gttt

Politicians ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ: ತುಷಾರ್‌ ಗಾಂಧಿ

Hampankatta: ಪಾರ್ಕಿಂಗ್‌ ಸಮಸ್ಯೆಗೆ ‘ಮಲ್ಟಿ ಲೆವೆಲ್‌’ ಉತ್ತರ!

Hampankatta: ಪಾರ್ಕಿಂಗ್‌ ಸಮಸ್ಯೆಗೆ ‘ಮಲ್ಟಿ ಲೆವೆಲ್‌’ ಉತ್ತರ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-pale

Chikkodi; ಈದ್ ಮಿಲಾದ್ ಮೆರವಣಿಗೆಯಲ್ಲಿ ಹಾರಾಡಿದ ಪ್ಯಾಲೇಸ್ತೀನ್ ಧ್ವಜ

Untitled-1

Kasaragod ಅಪರಾಧ ಸುದ್ದಿಗಳು

BSF (2)

Budgam; ಬಸ್ ಪ್ರಪಾತಕ್ಕೆ ಬಿದ್ದು 3 ಯೋಧರು ಮೃ*ತ್ಯು, 9 ಮಂದಿಗೆ ಗಂಭೀರ ಗಾಯ

Suspend

MLA ಇ. ಚಂದ್ರಶೇಖರನ್‌ ವಿರುದ್ಧ ಫೇಸ್‌ಬುಕ್‌ ಪೋಸ್ಟ್‌; ಡೆಪ್ಯೂಟಿ ತಹಶೀಲ್ದಾರ್‌ ಅಮಾನತು

POlice

Kundapura: ನಿಂದನೆ, ಜೀವ ಬೆದರಿಕೆ: ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.