ಹಬ್ಬದ ಮಾದರಿಯಲ್ಲಿ ಮಕ್ಕಳಿಗೆ ಸ್ವಾಗತ
ಮರಳಿ ಶಾಲೆಗೆ ಬಂದ ಮಕ್ಕಳಿಗೆ ಸಿಹಿಯೊಂದಿಗೆ ಸ್ವಾಗತ • ಹೊಸ ಸಮವಸ್ತ್ರ, ಪಠ್ಯ ಪುಸ್ತಕ ವಿತರಣೆ
Team Udayavani, May 30, 2019, 1:01 PM IST
ತುಮಕೂರು ನಗರದ ಮರಳೂರಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಬುಧವಾರ ಶಾಲೆಗಳು ಪ್ರಾರಂಭದ ಹಿನ್ನೆಲೆಯಲ್ಲಿ ಮಕ್ಕಳಿಗೆ ಸಮವಸ್ತ್ರ, ಪುಸ್ತಕಗಳನ್ನು ನೀಡಿದರು
ತುಮಕೂರು: ಕಲ್ಪತರು ನಾಡಿನ ಶಾಲೆಗಳಲ್ಲಿ ಮಕ್ಕಳ ಕಲರವ ಕಳೆದ ಎರಡು ತಿಂಗಳಿನಿಂದ ಬೇಸಿಗೆಯ ರಜೆ ಮುಗಿಸಿಕೊಂಡು, ಮೋಡ ಮುಸುಕಿದ ವಾತಾವರಣ ಜೊತೆಗೆ ಕೆಲವು ಕಡೆ ಸುಡುಬಿಸಿಲಿನ ವಾತಾವರಣದಲ್ಲಿ ಪುಟ್ಟ ಪುಟ್ಟ ಮಕ್ಕಳು ಮಂದಹಾಸದಿಂದ ಹೆಗಲ ಮೇಲೆ ಶಾಲಾ ಬ್ಯಾಗ್ ಹಾಕಿ ಕೊಂಡು ಮನೆಯಿಂದ ಶಾಲೆಯತ್ತ ಪುಟ್ಟ ಪುಟ್ಟ ಹೆಜ್ಜೆ ಹಾಕಿದರು. ಮಕ್ಕಳು ಶಾಲೆಗೆ ಬರುತ್ತಲೇ ಶಾಲಾ ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರಿಂದ ಮಕ್ಕಳಿಗೆ ಭವ್ಯ ಸ್ವಾಗತ ದೊರೆ ಯಿತು. ಮಕ್ಕಳಲ್ಲಿ ಸಂತಸ ಸಂಭಮ ಕಂಡು ಬಂತು.
ಇವೆಲ್ಲಾ ನಡೆದಿರುವುದು ಬುಧವಾರ ತುಮ ಕೂರು ಶೈಕ್ಷಣಿಕ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಶಾಲಾ ಪ್ರಾರಂಭವಾಗುವ ದಿನ ಎಲ್ಲಾ ಶಾಲೆಗಳು ಬಾಳೆ ಕಂದು, ಮಾವಿನ ಸೊಪ್ಪು, ಬಣ್ಣ ಬಣ್ಣದ ಕಾಗದಗಳಿಂದ ಸಿಂಗಾರ ಗೊಂಡು ಮಕ್ಕಳನ್ನು ಸ್ವಾಗತಿಸಿದವು.
ಏಪ್ರಿಲ್-ಮೇ ತಿಂಗಳಲ್ಲಿ ರಜೆಯನ್ನು ಸಂಭ್ರಮಿಸಿ, ಬುಧವಾರ ಶಾಲೆಗೆ ಮರಳಿ ಬರುವ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಿ, ಸಿಹಿ ನೀಡಿದರು. ಮಕ್ಕಳು ರಜೆಯ ಮೂಡ್ ನಿಂದ ಹೊರಬಂದು ಶಾಲಾ ವಾತಾವರಣದಲ್ಲಿ ಸಂತಸ ಪಟ್ಟರು. ಶಾಲಾ ಪ್ರಾರಂಭೋತ್ಸವದಲ್ಲಿ ಸ್ಥಳೀಯ ಜನ ಪ್ರತಿನಿಧಿಗಳು, ಎಸ್‌ಡಿಎಂಸಿ ಸದಸ್ಯರು, ಪೋಷಕರು, ಅಧಿಕಾರಿಗಳು ಭಾಗವಹಿಸಿ ಮಕ್ಕಳಿಗೆ ಹೊಸ ಸಮವಸ್ತ್ರ, ಪಠ್ಯ ಪುಸ್ತಕಗಳನ್ನು ವಿತರಿಸಿದರು.
ಜಿಲ್ಲೆಯಲ್ಲಿರುವ ಶಾಲೆಗಳು ಆರಂಭ: ಜಿಲ್ಲೆಯಲ್ಲಿರುವ 1ರಿಂದ 7ನೇ ತರಗತಿವರೆಗಿನ 2051 ಸರ್ಕಾರಿ ಪ್ರಾಥಮಿಕ ಶಾಲೆ, 133 ಸರ್ಕಾರಿ ಪ್ರೌಢಶಾಲೆ ಗಳು, 56 ಅನುದಾನಿತ ಪ್ರಾಥಮಿಕ ಹಾಗೂ 202 ಪ್ರೌಢಶಾಲೆಗಳು; 289 ಅನುದಾನ ರಹಿತ ಪ್ರಾಥಮಿಕ ಹಾಗೂ 131 ಪ್ರೌಢಶಾಲೆಗಳು ಪ್ರಾರಂಭವಾದವು. ಇದರ ಜೊತೆಗೆ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ 11 ಮೊರಾರ್ಜಿ ದೇಸಾಯಿ, 5 ಕಿತ್ತೂರು ರಾಣಿ ಚೆನ್ನಮ್ಮ, 7 ಅಂಬೇಡ್ಕರ್ 4 ಇಂದಿರಾ ವಸತಿ ಶಾಲೆ ಹಾಗೂ 6 ಮೌಲನಾ ಅಜಾದ್ ಶಾಲೆಗಳೂ ಸಹ ಆರಂಭವಾದವು.
ಮಕ್ಕಳಿಗೆ ಪಾಯಸದ ಊಟ: ಶಾಲಾ ಪ್ರಾರಂಭೋ ತ್ಸವಕ್ಕಾಗಿ ಶಾಲಾ ಆವರಣ, ಕೊಠಡಿಗಳನ್ನು ಸ್ವಚ್ಛ ಗೊಳಿಸಲಾಗಿತ್ತು. ಶುದ್ಧ ಕುಡಿಯುವ ನೀರು ವ್ಯವಸ್ಧೆ, ಶೌಚಗೃಹಗಳ ಸ್ವಚ್ಛತೆ, ಬಿಸಿಯೂಟದ ವ್ಯವಸ್ಥೆ ಹಾಗೂ ಶಾಲೆಯನ್ನು ಮಾಡಲಾಗಿತ್ತು. ಎಲ್ಲಾ ಮಕ್ಕಳಿಗೆ ಪಾಯಸದ ಸಿಹಿಯೂಟ ನೀಡಲಾಯಿತು. ಇದರ ಜೊತೆಗೆ 1, 6 ಹಾಗೂ 8ನೇ ತರಗತಿಗೆ ಸೇರುವ ವಿದ್ಯಾರ್ಥಿಗಳಿಗೆ ಶಾಲಾ ಪ್ರಾರಂಭದ ದಿನ ಆಹ್ಲಾದಕರ ಸಂದರ್ಭವಾಗಿತ್ತು. ಕೆಲವು ಶಾಲೆಗಳಲ್ಲಿ ಅಧ್ಯಾಪಕರು ಮಕ್ಕಳಿಗೆ ಸಂತಸದ ಮಾತುಗಳನ್ನು ಆಡಿ ಬರ ಮಾಡಿಕೊಂಡರು.
ಮಕ್ಕಳಿಗೆ ಹೂ ಗುಚ್ಚ ನೀಡಿ ಸ್ವಾಗತ: ತುಮಕೂರು ನಗರದ ಮರಳೂರಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಬುಧವಾರ ಶಾಲೆಗಳು ಪ್ರಾರಂಭದ ಹಿನ್ನಲೆಯಲ್ಲಿ ಮಕ್ಕಳಿಗೆ ಹೂ ಗುಚ್ಚು ನೀಡಿ ಸ್ವಾಗತಿಸಲಾಗಿತ್ತು. ಬಾಳೆ ಕಂದು, ಮಾವಿನ ತೋರಣ ದೊಂದಿಗೆ ಶುಂಗಾರಗೊಳಿಸಿ ಮಕ್ಕಳನ್ನು ಬರಮಾಡಿ ಕೊಂಡರು.
ನಂತರ ಸಮವಸ್ತ್ರ, ಪುಸ್ತಕಗಳು ನೀಡಿ, ಮರಳೂರಿನ ರಸ್ತೆಯಲ್ಲಿ ಮೆರವಣಿಗೆ ಮೂಲಕ ಇತರೆ ಮಕ್ಕಳಿಗೆ ಶಾಲೆಗೆ ಸೇರಿಸಲು ಪ್ರಚಾರ ನಡೆಸಿದರು. ಮದ್ಯಾಹ್ನದ ಬಿಸಿಯೂಟಕ್ಕೆ ಪಾಯಸ ವ್ಯವಸ್ಥೆ ಮಾಡಲಾಗಿತು.
ಲವಲವಿಕೆಯಿಂದ ವ್ಯಾಸಂಗಕ್ಕೆ ಪ್ರೇರಣೆ: ಇಲ್ಲಿಯ ಶ್ರೀರಾಮ ನಗರದ ಸರ್ಕಾರಿ ಶಾಲೆಯಲ್ಲಿ ಪ್ರಾರಂಭೋ ತ್ಸವ ಅಂಗವಾಗಿ ಶಾಲೆಗೆ ಬಾಳೆ ಕಂದು, ಮಾವಿನ ತೋರಣದೊಂದಿಗೆ ಶುಂಗಾರಗೊಳಿಸಿ ಮಕ್ಕಳನ್ನು ಬರಮಾಡಿಕೊಂಡರು. ಈ ರೀತಿಯ ವಾತಾವರಣ ಮಕ್ಕಳ ವ್ಯಾಸಂಗದ ಅವಧಿಯಲ್ಲಿ ಲವಲವಿಕೆಯಿಂದ ಕಳೆಯಲು ಪ್ರೇರಣೆ ನೀಡುವ ವಾತಾವರಣ ಮಾಡಿ ದ್ದರು. ಇದರ ಜೊತೆಗೆ ಕೆಲವು ಕಡೆ ಬುಧವಾರವೂ ಶಾಲಾ ದಾಖಲಾತಿ ಆಂದೋಲನ ನಡೆಸಿದರು.
ಜಿಲ್ಲಾದ್ಯಂತ ಮಂಗಳವಾರದಿಂದ ಮಿಂಚು ಸಂಚಾರ ಆರಂಭವಾಗಿತು. ಇದು ಜೂನ್ 8ರ ವರೆಗೆ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಕೆ.ಆರ್.ಕಾಮಾಕ್ಷಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರಿಗೆ ಅಗತ್ಯ ಮಾರ್ಗದರ್ಶನ ನೀಡಲಾಗುವುದು ಹಾಗೂ ಶಾಲೆಗಳಲ್ಲಿ ಕೈಗೊಂಡಿ ರುವ ಪೂರ್ವ ಸಿದ್ಧತಾ ಶೈಕ್ಷಣಿಕ ಚಟುವಟಿಕೆಗಳ ಅನುಷ್ಠಾನ ಪ್ರಕ್ರಿಯೆ ಯನ್ನು ಖಾತ್ರಿ ಪಡಿಸಿಕೊಳ್ಳ ಲಾಗುವುದು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.