ಶಹಾಪುರ ನಗರಸಭೆ ಚುನಾವಣೆ: ಶೇ. 61.69 ಮತದಾನ
Team Udayavani, May 30, 2019, 3:08 PM IST
ಶಹಾಪುರ: ಮತದಾನ ಮಾಡಲು ಸರದಿಯಲ್ಲಿ ನಿಂತ ಮಹಿಳೆಯರು.
ಶಹಾಪುರ: ಮೇ 29ರಂದು ಇಲ್ಲಿನ ನಗರಸಭೆಯ 31 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು ಶೇ. 61.69ರಷ್ಟು ಮತದಾನವಾಗಿದೆ ಎಂದು ತಹಶೀಲ್ದಾರ್ ಸಂಗಮೇಶ ಜಿಡಗೆ ತಿಳಿಸಿದರು.
ಒಟ್ಟು 48,031 ಮತದಾರರನ್ನು ಹೊಂದಿದ್ದ ಶಹಾಪುರ ನಗರ, ಅದರಲ್ಲಿ 24,000 ಪುರುಷರು ಮತ್ತು 24,023 ಮಹಿಳಾ ಮತದಾರರನ್ನು ಹೊಂದಿತ್ತು. ನಿನ್ನೆ ನಡೆದ ಮತದಾನದಲ್ಲಿ 15,263 ಪುರುಷರು ಮತದಾನ ಮಾಡಿದರೆ, 14,366 ಮಹಿಳೆಯರು ಮತದಾನ ಮಾಡಿದ್ದಾರೆ. ಉಳಿದಂತೆ ವಿಕಲಚೇತನ ಮತ್ತು ಇತರೆ ಕಾಲಂ ಅಡಿ ಬರುವ ಮತದಾರಾರರು ಬೆರಳಣಿಕೆಯಷ್ಟಿತ್ತು. ಅದರಲ್ಲಿ ಯಾರೊಬ್ಬರು ಮತದಾನ ಮಾಡದಿರುವ ಕುರಿತು ಮಾಹಿತಿ ದೊರೆತಿದೆ.
ಉಳಿದಂತೆ ಒಟ್ಟು 29,629 ಜನ ಮತದಾನ ಮಾಡಿದ್ದಾರೆ. ಒಟ್ಟು 51 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಮತದಾನ ವೇಳೆ ಯಾವುದೇ ಗಲಾಟೆ ಸಮಸ್ಯೆ ಉಂಟಾಗಿರುವುದು ಕಂಡು ಬರಲಿಲ್ಲ. ಮರು ಮತದಾನ ನಡೆಯುವಂತೆ ಯಾವುದೇ ಘಟನೆಗಳು ಜರುಗಲಿಲ್ಲ. ಪ್ರತಿ ಮತಗಟ್ಟೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಆರೋಪ: ನಗರದಲ್ಲಿ ನಡೆಯುತ್ತಿರುವ ಚುನಾವಣೆ ಹಿನ್ನೆಲೆಯಲ್ಲಿ ಆಯಾ ಶಾಲೆಯಲ್ಲಿ ಮತಗಟ್ಟೆಗಳನ್ನು ತೆರಯಲಾಗಿತ್ತು. ಬೇಕಾದ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಆದರೆ ಮತದಾರರನ್ನು ಸೆಳೆಯುವ ಯಾವುದೇ ವಿಶೇಷ ಮತಗಟ್ಟೆಗಳನ್ನು ತೆರೆದಿರುವುದು ಕಂಡು ಬರಲಿಲ್ಲ. ಮತದಾರರ ಸೆಳೆತಕ್ಕೆ ಜಿಲ್ಲಾಡಳಿತ ಯಾವುದೇ ಜಾಗೃತಿ, ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.