ಅರಕಲಗೂಡಲ್ಲಿ ಶೇ.83, ಆಲೂರಿನಲ್ಲಿ ಶೇ.81 ಮತದಾನ
2 ಪಟ್ಟಣ ಪಂಚಾಯಿತಿಗಳಲ್ಲೂ ಚುನಾವಣೆ ಶಾಂತಿಯುತ: ಶುಕ್ರವಾರ ಮಧ್ಯಾಹ್ನ ಫಲಿತಾಂಶ ಘೋಷಣೆ
Team Udayavani, May 30, 2019, 4:41 PM IST
ಹಾಸನ ಜಿಲ್ಲೆಯ ಅರಕಲಗೂಡು ಮತ್ತು ಆಲೂರು ಪಟ್ಟಣ ಪಂಚಾಯಿತಿಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಮತದಾರರು ಉತ್ಸಾಹದಿಂದ ಮತ ಚಲಾವಣೆ ಮಾಡಿದರು.
ಹಾಸನ: ಜಿಲ್ಲೆಯ ಅರಕಲಗೂಡು ಹಾಗೂ ಆಲೂರು ಪಟ್ಟಣ ಪಂಚಾಯಿತಿಗಳಿಗೆ ಬುಧವಾರ ಶಾಂತಿಯುತ ಚುನಾವಣೆ ನಡೆದಿದ್ದು, ಅರಕಲಗೂಡು ಪಟ್ಟಣ ಪಂಚಾಯಿತಿಯಲ್ಲಿ ಶೇ.83.14 ಹಾಗೂ ಆಲೂರು ಪಟ್ಟಣ ಪಂಚಾಯಿತಿಯಲ್ಲಿ ಶೇ.81.44 ರಷ್ಟು ಮತದಾನವಾಗಿದೆ.
ಅರಕಲಗೂಡು ಪಟ್ಟಣ ಪಂಚಾಯಿತಿಯ 17ವಾರ್ಡ್‌ಗಳು ಹಾಗೂ ಆಲೂರಿನಲ್ಲಿ 11 ವಾರ್ಡ್ ಗಳು ಸೇರಿದಂತೆ ಒಟ್ಟು 28 ವಾರ್ಡ್‌ಗಳಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಮತದಾನ ನಡೆಯಿತು. ಮತದಾರರು ತಮ್ಮ ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಸಾರ್ವಜನಿಕರಿಗೆ ಹಾಗೂ ಮತದಾರರಿಗೆ ತೊಂದರೆ ಯಾಗದಂತೆ ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ದಿವ್ಯಾಂಗರು ಹಾಗೂ ಆಶಕ್ತ ಹಿರಿಯ ನಾಗರಿಕರಿಗೆ ವಿಶೇಷ ಗಾಲಿ ಕುರ್ಚಿ ವ್ಯವಸ್ಥೆ ಮಾಡಲಾಗಿತ್ತು.
ಮದುವೆ ಮಂಟಪದಿಂದ ನೇರ ಮತಗಟ್ಟೆಗೆ: ಅರಕಲಗೂಡು ಪಟ್ಟಣದ 10ನೇ ವಾರ್ಡ್‌ನ ಎ.ಸಿ. ಮಧು ಎಂಬುವರ ಮದುವೆ ಮಂಟಪದಿಂದ ನೇರವಾಗಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದು ಶೇಷವಾಗಿತ್ತು. ಅರಕಲಗೂಡು ಪಟ್ಟಣ ಪಂಚಾಯಿತಿಯ 17 ವಾರ್ಡ್‌ಗಳಲ್ಲಿ ಶೇ.83.14 ರಂದು ಮತದಾನವಾಗಿದೆ. ಒಟ್ಟು 13,141 ಮತದಾರರಿದ್ದು, 5,535 ಪುರುಷ 5,391 ಮಹಿಳಾ ಮತದಾರರು ಸೇರಿದಂತೆ ಒಟ್ಟು 10,926 ಮಂದಿ ಮತ ಚಲಾಯಿಸಿದ್ದಾರೆ.
ಅರಕಲಗೂಡು ಪಟ್ಟಣದ 10 ನೇ ವಾರ್ಡ್‌ನಲ್ಲಿ ಅತಿ ಹೆಚ್ಚು ಶೇ. 91.10 ಮತದಾನವಾಗಿದ್ದರೆ, 11ನೇ ವಾರ್ಡ್‌ನಲ್ಲಿ ಅತಿ ಕಡಿಮೆ ಶೇ.61.35 ರಷ್ಟು ಮತದಾನ ದಾಖಲಾಗಿದೆ. 1 ನೇ ವಾರ್ಡಿನಲ್ಲಿ ಶೇ.83.47, 2ನೇ ವಾರ್ಡಿನಲ್ಲಿ ಶೇ. 71.62 ರಷ್ಟು, 3ನ ವಾರ್ಡಿನಲ್ಲಿ 89.03 ರಷ್ಟು, 4 ನೇ ವಾರ್ಡಿನಲ್ಲಿ 88.26, 5ನೇ ವಾರ್ಡಿನಲ್ಲಿ ಶೇ.84.31, 6ನೇ ವಾರ್ಡ್ ನಲ್ಲಿ ಶೇ. 76.05 ರಷ್ಟು, 7 ನೇ ವಾಡ್‌ನಲ್ಲಿ 84.03, 8 ನೇ ವಾರ್ಡ್‌ನಲ್ಲಿ ಶೇ.88.21 ರಷ್ಟು, 9 ನೇ ವಾರ್ಡ್ ನಲ್ಲಿ 90.92, 10 ನೇ ವಾರ್ಡ್‌ನಲ್ಲಿ 91.10 ರಷ್ಟು ಮತದಾನವಾಗಿದ್ದರೆ, 11 ನೇ ವಾರ್ಡಿನಲ್ಲಿ 61.35 ರಷ್ಟು, 12ನೇ ವಾರ್ಡಿನಲ್ಲಿ 82.21, 13ನೇ ವಾರ್ಡಿನಲ್ಲಿ 85.35 ರಷ್ಟು, 14ನೇ ವಾರ್ಡಿನಲ್ಲಿ 81.39, 15ನೇ ವಾರ್ಡಿನಲ್ಲಿ 86.06 ರಷ್ಟು, 16ನೇ ವಾರ್ಡಿನಲ್ಲಿ 70.80 ರಷ್ಟು ಹಾಗೂ 17 ನೇ ವಾರ್ಡಿನಲ್ಲಿ 90.34 ರಷ್ಟು ಮತದಾನವಾಗಿದೆ.
ಆಲೂರು ಪಟ್ಟಣ ಪಂಚಾಯಿತಿಯ 11 ವಾರ್ಡ್ ಗಳಲ್ಲಿ ಶೇ.81.44 ಷ್ಟು ಮತದಾನವಾಗಿದ್ದು, ಒಟ್ಟು 5,318 ಮತದಾರರ ಪೈಕಿ 2,179 ಪುರುಷ ಹಾಗೂ 2,152 ಮಹಿಳಾ ಮತದಾರರು ಸೇರಿದಂತೆ 4,331 ಮತದಾರರು ಮತಚಲಾಯಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.